ಶಿಥಿಲ ಕಟ್ಟಡ ಸ್ವಯಂ ಪರೀಕ್ಷೆ ಮಾಡಿಬಿಡಿ
ಸರಳವಾಗಿ ಕಟ್ಟಡದ ಶಿಥಿಲತೆ ಪರೀಕ್ಷೆ ಸಾಧ್ಯ ಯಾರೆಲ್ಲಾ ಪರೀಕ್ಷೆ ಮಾಡಿಸಬೇಕು, ಶಿಥಿಲ ಲಕ್ಷಣಗಳೇನು?
Team Udayavani, Oct 21, 2021, 4:57 PM IST
ಬೆಂಗಳೂರು: ನಿಮ್ಮ ಕಟ್ಟಡಕ್ಕೆ 30 ವರ್ಷ ತುಂಬಿದೆಯೇ? ನೀರು ತೊಟ್ಟಿಕ್ಕುತ್ತಿದೆ, ಗೋಡೆ ಬಿರುಕಾಗಿದೆಯೇ? ಅಥವಾ ಅನುಮತಿಗಿಂತ ಅಧಿಕ ಅಂತಸ್ತು ನಿರ್ಮಿಸಿ ದ್ದೀರಾ? ಹಾಗಿದ್ದರೆ, ಯಾವ ಸ್ಥಿಯಲ್ಲಿದೆ ಎಂಬುದನ್ನು ಪರೀಕ್ಷಿಸಿಕೊಳ್ಳಿ ಎನ್ನುತ್ತಾರೆ ತಜ್ಞರು. – ಇನ್ನು ಶಿಥಿಲ ಪರೀಕ್ಷೆ ವಿಧಾನ ಕೂಡಾ ತುಂಬಾ ಸರಳವಾಗಿದೆ ಎಂದೂ ಸ್ಪಷ್ಟಪಡಿಸುತ್ತಾರೆ.
ನಗರದಲ್ಲಿ ಸಾಲು ಸಾಲಾಗಿ ಕುಸಿತ ಕಾಣುತ್ತಿರುವ ಕಟ್ಟಡಗಳಲ್ಲಿ ಬಹುತೇಕ ಶಿಥಿಲಗೊಂಡ ಕಟ್ಟಗಳೇ ಆಗಿವೆ. ಈ ಹಿನ್ನೆಲೆ ಬಿಬಿಎಂಪಿಯೂ ಶಿಥಿಲ ಕಟ್ಟಡಗಳ ಸಮೀಕ್ಷೆ ನಡೆಸುತ್ತಿದೆ. ಆದರೆ, ಈ ಸಮೀಕ್ಷೆಯು ಕೇವಲ ಕಾಗದ ಪತ್ರ ದಾಖಲಾತಿ, ಬಾಹ್ಯನೋಟಕ್ಕೆ ಸೀಮಿತವಾಗಿದೆ. ಹೀಗಾಗಿಯೇ, ಎರಡು ವರ್ಷಗಳ ಹಿಂದೆ ನಡೆಸಿದ್ದ ಸಮೀಕ್ಷೆಯ ವರದಿಯಲ್ಲಿಲ್ಲದ ಕಟ್ಟಡಗಳು ಕುಸಿಯುತ್ತಿವೆ.
ಅಲ್ಲದೆ, ಅನುಮತಿಗಿಂತ ಅಧಿಕ ಅಂತಸ್ತು ನಿರ್ಮಿಸಿದ 5000ಕ್ಕೂ ಅಧಿಕ ಕಟ್ಟಡಗಳು ನಗರದಲ್ಲಿವೆ. ಇದು ಕೂಡಾ ಕುಸಿತಕ್ಕೆ ಪ್ರಮುಖ ಕಾರಣವಾಗಿವೆ. ಈ ಹಿನ್ನೆಲೆ ಮುಂಜಾಗ್ರತಾ ಕ್ರಮವಾಗಿ ಕಟ್ಟಡ ಮಾಲೀಕರು, ನಿವಾಸಿಗಳೇ ತಮ್ಮ ಕಟ್ಟಡಗಳನ್ನು ಶಿಥಿಲ ಲಕ್ಷಣಗಳನ್ನು ಹೊಂದಿವೆಯೇ ಎಂದು ಪರೀಕ್ಷಿಸಿಕೊಳ್ಳಬಹುದಾಗಿದೆ. ಒಂದು ವೇಳೆ ಭಾಗಶಃ ಶಿಥಿಲಗೊಂಡಿದ್ದರೆ ದುರಸ್ತಿ ಮಾಡಿಸಬಹುದು.
ಪೂರ್ಣ ಪ್ರಮಾಣದಲ್ಲಿ ಶಿಥಿಲವಾಗಿದ್ದರೆ ಮಾತ್ರ ನೆಲಸಮ ಅನಿವಾರ್ಯವಾಗುತ್ತದೆ. ಸಾಮಾನ್ಯವಾಗಿ ಕಟ್ಟಡ ಶಿಥಿಲ ಪತ್ತೆಗೆ ಆರ್ಕಿಟೆಕ್ಚರ್, ಎಂಜಿನಿಯರ್‌ಗಳ ಮೊರೆಹೋಗಬೇಕಾಗುತ್ತದೆ. ಅಲ್ಲದೆ, ನಗರದಲ್ಲಿ ಹಲವು ಕಡೆ ಕಟ್ಟಡ ಸಾಮರ್ಥ್ಯ ಪರೀಕ್ಷಾ ಕೇಂದ್ರಗಳಿವೆ. ಜತೆಗೆ ಖಾಸಗಿ ಪ್ರಯೋಗಾಲಯಗಳಿವೆ. ಇಲ್ಲಿ ಕಟ್ಟಡ ನಿರ್ಮಾಣ ಸಂದರ್ಭದಲ್ಲಿ ಮಣ್ಣಿನ ಸಾಮರ್ಥ್ಯ ಪರೀಕ್ಷೆ ನಡೆಸಲಾಗುತ್ತದೆ.
ಇದನ್ನೂ ಓದಿ;– ಹಾವು ಕಡಿದು ಯುವಕ ಸಾವು
ಕಟ್ಟಡ ನಿರ್ಮಾಣವಾಗಿದ್ದರೆ ಅದರ ಗೋಡೆಯ ಹೊಡೆದು ಅಲ್ಲಿನ ಮಣ್ಣು, ಸಿಮೆಂಟ್ ಪರೀಕ್ಷೆಗೊಳಪಡಿಸಲಾಗುತ್ತದೆ. ಭಾರೀ ಪ್ರಮಾಣದಲ್ಲಿ ಶಿಥಿಲಗೊಂಡ ಕಟ್ಟಡಗಳಿಗೆ ಲೋಡ್ ಬೇರಿಂಗ್ ಟೆಸ್ಟ್ ಮಾಡಲಿದ್ದು, ಅಧಿಕ ಭಾರವನ್ನು ಕಟ್ಟಡದ ಮೇಲ್ಭಾಗದಲ್ಲಿ ಹಾಕಿ ಸಾಮರ್ಥ್ಯ ಅಳೆಯವಾಗುತ್ತದೆ. ಇವುಗಳ ಹೊರತಾಗಿಗೂ ಸಾಮಾನ್ಯ ಮಾನದಂಡಗಳಿಂದ, ಯಾವುದೇ ಖರ್ಚು ಇಲ್ಲದೆ ಶಿಥಿಲ ಪತ್ತೆ ಮಾಡಿಕೊಳ್ಳಬಹುದಾಗಿದೆ.
ಯಾವ ಕಟ್ಟಡಗಳನ್ನು ಪರೀಕ್ಷೆ ಮಾಡಿಸಬೇಕು?: ಪ್ರಮುಖವಾಗಿ ಕಟ್ಟಡವು 30 ವರ್ಷ ಮೇಲ್ಪಟ್ಟಿದ್ದರೆ ಸುರಕ್ಷತೆ ದೃಷ್ಟಿಯಿಂದ ಒಮ್ಮೆ ಪರೀಕ್ಷೆ ಮಾಡಿಸಿಕೊಳ್ಳುವುದು ಉತ್ತಮ. ಮಣ್ಣಿನ ಕಟ್ಟಡವಾಗಿದ್ದರೆ, ಅನುಮತಿ ಪಡೆದ್ದಕ್ಕಿಂತ ಹೆಚ್ಚುವರಿ ಅಂತಸು§ ನಿರ್ಮಾಣವಾದ ಕಟ್ಟಡ, ರಾಜಕಾಲುವೆ, ಕರೆಯ ಆಸುಪಾಸಿನಲ್ಲಿರುವ ಕಟ್ಟಡ, 8-10 ವರ್ಷದಿಂದ ಸೂಕ್ತ ನಿರ್ವಹಣೆ ಇಲ್ಲದ ಕಟ್ಟಡ, ಇತ್ತೀಚೆಗೆ ಧರೆಗುರುಳಿದ ಕಟ್ಟಡದ ಆಸುಪಾಸಿನ ಕಟ್ಟಡ, ನೆರೆಯ ಕಾಮಗಾರಿಗಳಿಂದ ಹಾನಿಗೊಳಗಾಗಿರುವ ಕಟ್ಟಡಗಳು, ನೀರು ತೊಟ್ಟಿಕ್ಕುವ, ಗೋಡೆ ಬಿರುಕು ಬಿಟ್ಟಿರುವ ಕಟ್ಟಡಗಳು.
ಕಣ್ಣಳತೆಯೆ ಪರೀಕ್ಷೆಗೆ ಸೀಮಿತವಾಯಿಯೇ ಬಿಬಿಎಂಪಿ?: ಸದ್ಯ ಬಿಬಿಎಂಪಿ ಅಧಿಕಾರಿಗಳು ಶಿಥಿಲ ಕಟ್ಟಡ ಸಮೀಕ್ಷೆ ನಡೆಸುತ್ತಿದ್ದು, ಈಗಾಗಲೇ ಪ್ರಾಥಮಿಕ ಸಮೀಕ್ಷೆ ಮುಗಿದು 500ಕ್ಕೂ ಅಧಿಕ ಕಟ್ಟಡಗಳಿಗೆ ನೋಟಿಸ್ ನೀಡಲಾಗುತ್ತಿದೆ. ಆದರೆ, ಕೇವಲ ಕಟ್ಟಡ ನಿರ್ಮಾಣವಾಗಿರುವ ವರ್ಷ, ಅನುಮತಿಗಿಂತ ಅಧಿಕ ಅಂತಸ್ತು ನಿರ್ಮಿಸಿರುವ ಕಟ್ಟಡಗಳನ್ನು ತಪಾಸಣೆ ನಡೆಸುತ್ತಿದ್ದಾರೆ. ಅಲ್ಲದೆ, ಕಟ್ಟಡ ಸಾಮರ್ಥ್ಯ ಪರೀಕ್ಷೆಗೆ ಲೋಡ್ ಬೇರಿಂಗ್ ಟೆಸ್ಟ್ ಸೇರಿದಂತೆ ಇತರೆ ಪರೀಕ್ಷಾ ವಿಧಾನವನ್ನು ಅನುಸರಿಸುತ್ತಿಲ್ಲ. ಹೀಗಾಗಿಯೇ, ಕಳೆದ ಎರಡು ವರ್ಷದ ಹಿಂದಿನ ಸಮೀಕ್ಷೆಯಲ್ಲಿರದ ಕಟ್ಟಡಗಳು ಕುಸಿಯುತ್ತಿವೆ ಎಂದು ಆರೋಪ ಕೇಳಿಬಂದಿವೆ.
ಶಿಥಿಲಗೊಂಡ ಲಕ್ಷಣಗಳು-ಸ್ವಯಂ ಪರೀಕ್ಷೆ:-
ಪ್ರಾಥಮಿಕವಾಗಿ ಮಳೆಬಂದಾಗ ಅಥವಾ ಮಹಡಿ ಮೇಲೆ ನೀರು ನಿಂತಾಗ ಕಟ್ಟಡದ ಗೋಡೆ ಅಥವಾ ಸೀಲಿಂಗ್‌ನಿಂದ ನೀರು ತೊಟ್ಟಿಕ್ಕುತ್ತಿರುವುದು, ಗೋಡೆಗಳು ಬಿರುಕು ಬಿಟ್ಟಿರುವುದು, ಗೋಡೆ ವಾಲಿರುವುದು, ಫೌಂಡೇಷನ್ ಸುತ್ತ ಮಣ್ಣು ಎದ್ದಿರುವದು ಅಥವಾ ನೆಲ ಬಿರುಕಾಗಿರುವುದು, ಭಾರೀ ತೂಕದ ಸಾಮಗ್ರಿಯನ್ನು ಕಟ್ಟಡದ ಮೇಲೆ ಅಥವಾ ಒಳಗೆ ಇಟ್ಟಾಗ ಕಂಪನದ ಅನುಭವಾಗುವುದು ಶಿಥಿಲಗೊಳ್ಳುತ್ತಿರುವ ಸೂಚನೆಯಾಗಿವೆ. ಇಂತಹ ಸಮಸ್ಯೆಗಳು ಕಂಡುಬಂದರೆ ಕೂಡಲೇ ಸ್ಥಳೀಯ ಎಂಜಿನಿಯರ್ ಕರೆಸಿ ಹೆಚ್ಚುವರಿಗೆ ಪರೀಕ್ಷೆ ಅಥವಾ ದುರಸ್ತಿಗೆ ಮುಂದಾಗಬೇಕು ಎನ್ನುತ್ತಾರೆ ಬಿಬಿಎಂಪಿ ನಿವೃತ್ತ ಎಂಜಿನಿಯರ್ ಮತ್ತು ನಗರ ಯೋಜನೆ ತಜ್ಞರು.
ಅನುಮತಿ ಪಡೆದದ್ದಕ್ಕಿಂತ ಅಧಿಕ ಅಂತಸ್ತು ನಿರ್ಮಿಸಿರುತ್ತಾರೆ. ಆದರೆ, ಅಡಿಪಾಯ ಮಾತ್ರ ಒಂದು ಅಥವಾ ಎರಡು ಮಹಡಿ ಸಾಮರ್ಥಯ ಹೊಂದಿರುತ್ತದೆ. ಇಂತಹ ಕಟ್ಟಡಗಳು ಹಾನಿಗೊಳಗಾಗುತ್ತಿವೆ. ಇಂತಹ ಕಟ್ಟಡಗಳ ಮಾಲೀಕರು ಕಟ್ಟಡ ಸಾಮರ್ಥಯ ಪರೀಕ್ಷೆ ಮಾಡಿಸಿ ಅಗತ್ಯ ಕ್ರಮಕೈಗೊಳ್ಳಬೇಕು. – ಅಂಜನ್ ಸಾಯಿಪ್ರಸಾದ್, ಸ್ಟ್ರಕ್ಚರ್ ಎಂಜಿನಿಯ್, ಖಾಸಗಿ ಕಂಪನಿ
ಮುಂಜಾಗ್ರತಾ ಕ್ರಮವಾಗಿ ಮೂರ್ನಾಲ್ಕು ದಶಕದ ಹಳೆಯ ಕಟ್ಟಡಗಳು, ಶಿಥಿಲ ಲಕ್ಷಣಗಳನ್ನು ಹೊಂದಿರುವ ಕಟ್ಟಡಗಳು, ನಿರ್ವಹಣೆ ಇಲ್ಲದ ಕಟ್ಟಡಗಳು ಸ್ವಯಂ ಪರೀಕ್ಷೆ ಮಾಡಿಸಿಕೊಳ್ಳುವುದು ಉತ್ತಮ. ಅನುಮಾನ/ ಅಗತ್ಯವಿದ್ದರೆ ಹೆಚ್ಚುವರಿ ಪರೀಕ್ಷೆ, ದುರಸ್ತಿಗೆ ಮುಂದಾಗಬಹುದು.
– ಹನುಮಂತೇ ಗೌಡ, ಪಾಲಿಕೆ ನಿವೃತ್ತ ಎಂಜಿನಿಯರ್/ ನಗರ ಯೋಜನೆ ತಜ್ಞರು
– ●ಜಯಪ್ರಕಾಶ್ ಬಿರಾದಾರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ಪಾಲುದಾರನ ಕಿರುಕುಳ: ಉದ್ಯಮಿ ಆತ್ಮಹತ್ಯೆ
Atul Subhash Case: ಮೊಮ್ಮಗನನ್ನು ಟೆಕಿ ಅತುಲ್ ತಾಯಿಯ ಸುಪರ್ದಿಗೆ ವಹಿಸಲು ಸುಪ್ರೀಂ ನಕಾರ
illegal Investigation: ಬಿಬಿಎಂಪಿ ಮುಖ್ಯ ಎಂಜಿನಿಯರ್ ಕಚೇರಿ ಮೇಲೆ ಇ.ಡಿ. ದಾಳಿ
Sangeetha Mobiles: ಜಯನಗರದಲ್ಲಿ ಸಂಗೀತಾ ಗ್ಯಾಜೆಟ್ಸ್ ನೂತನ ಮಳಿಗೆ ಲೋಕಾರ್ಪಣೆ
Bengaluru: ಎಂಬಿಎ ವಿದ್ಯಾರ್ಥಿ 3ನೇ ಮಹಡಿಯಿಂದ ಬಿದ್ದು ಸಾವು
MUST WATCH
ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !
ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ
ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಹೊಸ ಸೇರ್ಪಡೆ
ISRO ಮುಂದೆ ಪ್ರಮುಖ ಕಾರ್ಯ ಯೋಜನೆಗಳಿವೆ: ನೂತನ ಅಧ್ಯಕ್ಷ ವಿ.ನಾರಾಯಣನ್
Mollywood: ನಟಿ ಹನಿ ರೋಸ್ ವಿರುದ್ಧ ಅಶ್ಲೀಲ ಪದ ಬಳಕೆ; ಖ್ಯಾತ ಉದ್ಯಮಿ ಪೊಲೀಸ್ ವಶಕ್ಕೆ
OnePlus 13 ಮತ್ತು 13R ಬಿಡುಗಡೆ: ಹೊಸ ವೈಶಿಷ್ಟ್ಯಗಳ ಪವರ್ ಹೌಸ್ ಫೋನ್
Fraud: ಸಿಬಿಐ ಹೆಸರಲ್ಲಿ ಕಾರ್ಕಳದ ಮಹಿಳೆಗೆ 24 ಲಕ್ಷ ರೂ. ವಂಚನೆ
Caught On Cam!;ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ: Video
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.