ಸಾರಿಗೆ ಸಂಸ್ಥೆಗಳಿಂದ 1.95 ಕೋಟಿ ದಂಡ ಬಾಕಿ

ಬಿಎಂಟಿಸಿ, ಕೆಎಸ್ಸಾರ್ಟಿಸಿಯಿಂದ ಸಂಚಾರ ನಿಯಮ ಉಲ್ಲಂಘನೆ  2021ರಲ್ಲೇ ಕೋಟ್ಯಂತರ ರೂ. ದಂಡ

Team Udayavani, Nov 10, 2021, 9:53 AM IST

nove 10

Representative Image used

ಬೆಂಗಳೂರು: ಅತೀ ವೇಗ ಚಾಲನೆಯಿಂದ ಅಪ ಘಾತ ಸಂಭವಿಸಿ ಅಮಾಯಕರ ಪ್ರಾಣ ತೆಗೆದು “ಕಿಲ್ಲರ್‌’ ಎಂಬ ಅಪಖ್ಯಾತಿಗೆ ಗುರಿಯಾಗಿರುವ ಬಿಎಂಟಿಸಿ ಮತ್ತು ಕೆಎಸ್‌ಆರ್‌ಟಿಸಿ ಬಸ್‌ಗಳು ಸಂಚಾರ ನಿಯಮಗಳನ್ನು ಉಲ್ಲಂ ಸಿ ದೊಡ್ಡ ಮೊತ್ತದ ದಂಡ ಕಟ್ಟುವಲ್ಲಿಯೂ ಹಿಂದೆ ಬಿದ್ದಿಲ್ಲ.

ಸಿಲಿಕಾನ್‌ ಸಿಟಿಯ ಹಾಳಾದ ರಸ್ತೆಗಳಲ್ಲಿ ಅಡ್ಡಾ ದಿಡ್ಡಿ ಚಾಲನೆ ಮಾಡುವುದಲ್ಲದೆ, ಪ್ರತಿ ವರ್ಷ ಐದಾರು ಮಂದಿ ಅಮಾಯಕರನ್ನು ಬ ಲಿ  ಪಡೆಯುತ್ತಿರುವ ಬಿಎಂಟಿಸಿ ಮತ್ತು ಕೆಎಸ್‌ಆರ್‌ಟಿಸಿ ಬಸ್‌ ಚಾಲಕರು, ಇದರೊಂದಿಗೆ ಅತೀ ವೇಗ ಹಾಗೂ ನಿರ್ಲಕ್ಷ್ಯ ಚಾಲನೆ, ಸಿಗ್ನಲ್‌ ಜಂಪ್‌, ನೋ ಪಾರ್ಕಿಂಗ್‌, ಎಲ್ಲೆಂದರಲ್ಲಿ ಬಸ್‌ಗಳ ನಿಲ್ಲಿಸುವ ಮೂಲಕ ಸಂಚಾರ ನಿಯಮ ಉಲ್ಲಂಘನೆ ಮಾಡಿ ಸಂಚಾರ ಪೊಲೀಸ್‌ ವಿಭಾಗಕ್ಕೆ ಪ್ರತಿ ವರ್ಷ ಕೋಟ್ಯಂತರ ರೂ. ದಂಡ ಪಾವತಿಸುವ ಹಂತ ತಲುಪಿದ್ದಾರೆ. ಸಂಚಾರ ಪೊಲೀಸ್‌ ವಿಭಾಗದ ಮೂರು ವರ್ಷಗಳ ಅಂಕಿ-ಅಂಶಗಳು ಅದಕ್ಕೆ ಪುಷ್ಟಿ ನೀಡುತ್ತಿದ್ದು, ಪ್ರಸ್ತುತ 35,048 ಪ್ರಕರಣಗಳ 1,94,83,200 ರೂ. ಬಾಕಿ ಉಳಿಸಿಕೊಂಡಿದ್ದಾರೆ.

ಯಾವೆಲ್ಲ ಸಂಚಾರ ನಿಯಮ ಉಲ್ಲಂಘನೆಗಳು: ಅಂಕಿ-ಅಂಶಗಳ ಪ್ರಕಾರ ಬಿಎಂಟಿಸಿ ಮತ್ತು ಕೆಎಸ್ಸಾರ್ಟಿಸಿ ಬಸ್‌ಗಳು ಹೆಚ್ಚಾಗಿ ಸಿಗ್ನಲ್‌ ಜಂಪ್‌ ಮಾಡುವುದು, ನೋ ಪಾರ್ಕಿಂಗ್‌ ಸ್ಥಳದಲ್ಲಿ ಬಸ್‌ ನಿಲ್ಲಿಸಿ ಪ್ರಯಾಣಿಕರ ಹತ್ತಿಸಿಕೊಳ್ಳುವುದು, ಅತೀವೇಗ ಚಾಲನೆ, ಬಸ್‌ ಬೇ ಹೊರತು ಪಡಿಸಿ ಬೇರೆಡೆ ಬಸ್‌ ನಿಲ್ಲಿಸುವುದು, ರಸ್ತೆ ಅಪಘಾತ ಹೀಗೆ ನಾನಾ ರೀತಿಯಲ್ಲಿ ಸಂಚಾರ ನಿಯಮ ಉಲ್ಲಂ ಸುತ್ತಾರೆ. ರಸ್ತೆ ಅಪಘಾತ ಅಥವಾ ಗಂಭೀರ ಸ್ವರೂಪ( ಅಪಘಾತದಲ್ಲಿ ಮರಣ) ದಂತಹ ಪ್ರಕರಣಗಳಲ್ಲಿ ವಾಹನಗಳ ಜಪ್ತಿ ಮಾಡಿ ನೇರವಾಗಿ ಪ್ರಕರಣ ನೋಂದಾಯಿಸುತ್ತೇವೆ.

ಇದನ್ನೂ ಓದಿ;- ಕ್ಲೋರಿನ್ ಅನಿಲ ಸೋರಿಕೆಯಿಂದ ಅಗ್ನಿಶಾಮಕ ದಳ‌ದ 6 ಮಂದಿ ಅಸ್ವಸ್ಥ

ಇನ್ನುಳಿದಂತೆ ಕೃತಕ ಬುದ್ಧಿಮತೆ ವ್ಯವಸ್ಥೆ ಹೊಂದಿರುವ ಕ್ಯಾಮೆರಾ ಮತ್ತು ಸ್ಥಳದಲ್ಲಿರುವ ಸಂಚಾರ ಪೊಲೀಸ್‌ ಸಿಬ್ಬಂದಿ ಉಲ್ಲಂಘನೆ ಕುರಿತು ತೆಗೆದಿರುವ ಫೋಟೋ ಸಂಗ್ರ ಹಿಸಿ ದಂಡ ವಿಧಿಸಲಾಗಿದೆ. ಒಂದು ವೇಳೆ ಬಸ್‌ಗಳನ್ನು ತಡೆದು ಅವುಗಳ ದಾಖಲಾತಿಗಳು ಹಾಗೂ ವಿಮೆ ದಾಖಲೆಗಳ ಪರಿಶೀಲಿಸಿದರೆ ಇನ್ನಷ್ಟು ದಂಡ ಹೆಚ್ಚಾಗುವ ಸಾಧ್ಯತೆಯಿದೆ. ಆದರೆ, ಏಕಾಏಕಿ ಬಸ್‌ ತಡೆ ತಪಾಸಣೆ ನಡೆಸುವುದರಿಂದ ಪ್ರಯಾಣಿಕರಿಗೆ ತೊಂದರೆಯಾಗುತ್ತದೆ ಎಂಬ ಕಾರಣಕ್ಕೆ ಬಸ್‌ಗಳ ತಡೆಯುವುದಿಲ್ಲ ಎಂದು ಸಂಚಾರ ಪೊಲೀಸ್‌ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

“ಬಿಎಂಟಿಸಿ ಮತ್ತು ಕೆಎಸ್‌ಆರ್‌ಟಿಸಿ ಬಸ್‌ಗಳ ಸಂಚಾರ ನಿಯಮ ಉಲ್ಲಂಘನೆ ಕುರಿತು ಆಗಿಂದಾಗ್ಗೆ ಬಸ್‌ಗಳ ನಂಬರ್‌  ಉಲ್ಲೇಖೀಸಿ ಸಾರಿಗೆಸಂಸ್ಥೆಗಳಿಗೆ ನೋಟಿಸ್‌ ಕೊಡಲಾಗುತ್ತದೆ. ಪ್ರಸ್ತುತ ಒಂದು ಕೋಟಿ ಮೀರಿದ್ದು, ಅದನ್ನು ಗಂಭೀರವಾಗಿ ಪರಿಗಣಿಸಲಾಗುತ್ತದೆ.” ಡಾ ಬಿ.ಆರ್‌. ರವಿಕಾಂತೇಗೌಡ, ಸಂಚಾರ ವಿಭಾಗ ಜಂಟಿ ಪೊಲೀಸ್‌ ಆಯುಕ್ತ.

ಬಸ್‌ ಚಾಲಕನ ಕಿಸೆಯಿಂದಲೇ ದಂಡ ಪಾವತಿ?

ದಂಡವನ್ನು ಸಾರಿಗೆ ಸಂಸ್ಥೆಗಳು ಪಾವತಿಸುವುದಿಲ್ಲ. ನಿರ್ದಿಷ್ಟ ವಾಹನಗಳ ನಂಬರ್‌ಗಳ ಮೇಲೆ ದಂಡ ವಿಧಿಸಲಾಗುತ್ತದೆ. ಆಯಾ ತಿಂಗಳು ಆಗುವ ಉಲ್ಲಂಘನೆಗಳ ಕುರಿತು ಸ್ಥಳ, ಸಮಯ, ದಿನಾಂಕ ಉಲ್ಲೇಖೀಸಿ ಎರಡು ಸಾರಿಗೆ ಸಂಸ್ಥೆಗಳಿಗೂ ನೋಟಿಸ್‌ ಬರುತ್ತದೆ. ನಂತರ ಬಸ್‌ ಚಾಲಕನ ಹೆಸರು ಉಲ್ಲೇಖೀಸಿ ಸಂಬಂಧಿಸಿದ ಡಿಪೋಗೆ ಕಳುಹಿಸಲಾಗುತ್ತಿ ದ್ದು, ನಂತರ ಡಿಪೋ ವ್ಯವಸ್ಥಾಪಕರು ಚಾಲಕನೇ ದಂಡ ಪಾವತಿಸಲು ಸೂಚಿಸುತ್ತಾರೆ. ಒಂದು ವೇಳೆ ಆತ ನಿರ್ಲಕ್ಷಿಸಿದರೆ, ಆತನ ವೇತನದಿಂದಲೇ ಹಣ ಹಿಡಿದು ದಂಡ ಪಾವತಿ ಸಲಾಗುತ್ತದೆ ಎಂದು ಸಾರಿಗೆ ಸಂಸ್ಥೆಗಳ ಅಧಿಕಾರಿಗಳು ಮಾಹಿತಿ ನೀಡಿದರು.

  • – ಮೋಹನ್‌ ಭದ್ರಾವತಿ

ಟಾಪ್ ನ್ಯೂಸ್

Bhairathi Ranagal Trailer: ʼರೋಣಪುರʼದ ರಣ ಬೇಟೆಗಾರ ಈ ʼಭೈರತಿ ರಣಗಲ್ʼ; ಟ್ರೇಲರ್‌ ಔಟ್

Bhairathi Ranagal Trailer: ʼರೋಣಪುರʼದ ರಣ ಬೇಟೆಗಾರ ಈ ʼಭೈರತಿ ರಣಗಲ್ʼ; ಟ್ರೇಲರ್‌ ಔಟ್

ADGP V/s HDK: ಕೇಂದ್ರ ಸಚಿವ ಕುಮಾರಸ್ವಾಮಿ ವಿರುದ್ಧ ಎಫ್‌ ಐಆರ್‌ ದಾಖಲು-HDK ಎ1

ADGP V/s HDK: ಕೇಂದ್ರ ಸಚಿವ ಕುಮಾರಸ್ವಾಮಿ ವಿರುದ್ಧ ಎಫ್‌ ಐಆರ್‌ ದಾಖಲು-HDK ಎ1

Belagavi: ಕರ್ನಾಟಕ ಮತ್ತು ಮಹಾರಾಷ್ಟ್ರ ಗಡಿ ವಿವಾದ ಮುಗಿದ ಅಧ್ಯಾಯ: ಸಚಿವ ಎಚ್.ಕೆ. ಪಾಟೀಲ್

Belagavi: ಕರ್ನಾಟಕ ಮತ್ತು ಮಹಾರಾಷ್ಟ್ರ ಗಡಿ ವಿವಾದ ಮುಗಿದ ಅಧ್ಯಾಯ: ಸಚಿವ ಎಚ್.ಕೆ. ಪಾಟೀಲ್

MUDA Case: ಸಿಬಿಐ ತನಿಖೆ ಕೋರಿದ್ದ ಅರ್ಜಿ ವಿಚಾರಣೆ ನ.26ಕ್ಕೆ ಮುಂದೂಡಿದ ಹೈಕೋರ್ಟ್

MUDA Case: ಸಿಬಿಐ ತನಿಖೆ ಕೋರಿದ್ದ ಅರ್ಜಿ ವಿಚಾರಣೆ ನ.26ಕ್ಕೆ ಮುಂದೂಡಿದ ಹೈಕೋರ್ಟ್

Belagavi: ತಹಶೀಲ್ದಾರ್ ಕೊಠಡಿಯಲ್ಲೇ ಸಿಬ್ಬಂದಿ ನೇಣಿಗೆ ಶರಣು, ಸ್ಥಳದಲ್ಲಿ ಡೆತ್ ನೋಟ್ ಪತ್ತೆ

Belagavi: ತಹಶೀಲ್ದಾರ್ ಕೊಠಡಿಯಲ್ಲೇ ಸಿಬ್ಬಂದಿ ನೇಣಿಗೆ ಶರಣು, ಸ್ಥಳದಲ್ಲಿ ಡೆತ್ ನೋಟ್ ಪತ್ತೆ

MUDA Case: ಮಾಧ್ಯಮಗಳಿಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಸಿಎಂ ಸಿದ್ದರಾಮಯ್ಯ

MUDA Case: ಲೋಕಾಯುಕ್ತ ನೋಟಿಸ್ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಸಿಎಂ

Canada: ಹಿಂದೂ ದೇಗುಲದ ಮೇಲೆ ದಾಳಿ-ಖಲಿಸ್ತಾನಿಗಳ ವಿರುದ್ಧ ಸಾವಿರಾರು ಭಾರತೀಯರ  ಪ್ರತಿಭಟನೆ

Canada: ಹಿಂದೂ ದೇಗುಲದ ಮೇಲೆ ದಾಳಿ-ಖಲಿಸ್ತಾನಿಗಳ ವಿರುದ್ಧ ಸಾವಿರಾರು ಭಾರತೀಯರ ಪ್ರತಿಭಟನೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bengaluru: ನಿಲ್ಲದ ಪಟಾಕಿ ಅವಘಡ: ಮತ್ತೆ 10 ಮಂದಿ ಕಣ್ಣಿಗೆ ತೊಂದರೆ

Bengaluru: ನಿಲ್ಲದ ಪಟಾಕಿ ಅವಘಡ: ಮತ್ತೆ 10 ಮಂದಿ ಕಣ್ಣಿಗೆ ತೊಂದರೆ

1-qqeqwe

Bengaluru; ಪಟಾಕಿ ಬಾಕ್ಸ್ ಮೇಲೆ ಕುಳ್ಳಿರಿಸಿ ಸ್ನೇಹಿತರ ಹುಚ್ಚಾಟ: ಯುವಕ ಸಾ*ವು

ತಂದೆ, ಮಗು ಸಾವು: ಬೆಸ್ಕಾಂ ಎಂಜಿನಿಯರ್‌ ವಿರುದ್ಧದ ಕೇಸು ರದ್ದತಿಗೆ ಹೈಕೋರ್ಟ್‌ ನಕಾರ

ತಂದೆ, ಮಗು ಸಾವು: ಬೆಸ್ಕಾಂ ಎಂಜಿನಿಯರ್‌ ವಿರುದ್ಧದ ಕೇಸು ರದ್ದತಿಗೆ ಹೈಕೋರ್ಟ್‌ ನಕಾರ

Arrested: ರಾಜಸ್ಥಾನದಿಂದ ಫ್ಲೈಟ್‌ನಲ್ಲಿ ಬಂದು ಕಾರು ಕದಿಯುತ್ತಿದ್ದವನ ಸೆರೆ; ಆರೋಪಿ ಬಂಧನ

Arrested: ರಾಜಸ್ಥಾನದಿಂದ ಫ್ಲೈಟ್‌ನಲ್ಲಿ ಬಂದು ಕಾರು ಕದಿಯುತ್ತಿದ್ದವನ ಸೆರೆ; ಆರೋಪಿ ಬಂಧನ

Bengaluru: ಅತಿ ವೇಗವಾಗಿ ಬಂದ ಕಾರು ಬೈಕ್‌ಗೆ ಡಿಕ್ಕಿ: ಫುಡ್‌ ಡೆಲಿವರಿ ಬಾಯ್‌ ಸಾವು

Bengaluru: ಅತಿ ವೇಗವಾಗಿ ಬಂದ ಕಾರು ಬೈಕ್‌ಗೆ ಡಿಕ್ಕಿ: ಫುಡ್‌ ಡೆಲಿವರಿ ಬಾಯ್‌ ಸಾವು

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

Bengaluru: ನಿಲ್ಲದ ಪಟಾಕಿ ಅವಘಡ: ಮತ್ತೆ 10 ಮಂದಿ ಕಣ್ಣಿಗೆ ತೊಂದರೆ

Bengaluru: ನಿಲ್ಲದ ಪಟಾಕಿ ಅವಘಡ: ಮತ್ತೆ 10 ಮಂದಿ ಕಣ್ಣಿಗೆ ತೊಂದರೆ

Sandalwood: ಕರಾವಳಿ ಸಂಸ್ಕೃತಿ ಸುತ್ತ ದಿಂಸೋಲ್‌

Sandalwood: ಕರಾವಳಿ ಸಂಸ್ಕೃತಿ ಸುತ್ತ ದಿಂಸೋಲ್‌

2(1)

Puttur: ವಿದ್ಯುತ್‌ ಕಂಬ ಏರುವ ತರಬೇತಿ!; ಪವರ್‌ಮನ್‌ ಉದ್ಯೋಗಕ್ಕೆ ಸ್ಥಳೀಯರಿಗೆ ಪ್ರೋತ್ಸಾಹ

1(1)

Belthangady: ಗ್ರಾಮೀಣ ರಸ್ತೆಗಳಲ್ಲೂ ಗುಂಡಿ

Bhairathi Ranagal Trailer: ʼರೋಣಪುರʼದ ರಣ ಬೇಟೆಗಾರ ಈ ʼಭೈರತಿ ರಣಗಲ್ʼ; ಟ್ರೇಲರ್‌ ಔಟ್

Bhairathi Ranagal Trailer: ʼರೋಣಪುರʼದ ರಣ ಬೇಟೆಗಾರ ಈ ʼಭೈರತಿ ರಣಗಲ್ʼ; ಟ್ರೇಲರ್‌ ಔಟ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.