ಕೋವಿಡ್: ರಾಜ್ಯದಲ್ಲಿಂದು 1159 ಪ್ರಕರಣ ಪತ್ತೆ| 1112 ಸೋಂಕಿತರು ಗುಣಮುಖ
Team Udayavani, Sep 1, 2021, 6:41 PM IST
ಬೆಂಗಳೂರು: ರಾಜ್ಯದಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ ಹೊಸದಾಗಿ 1159 ಕೋವಿಡ್ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, 21 ಜನರು ಸೋಂಕಿನಿಂದ ಸಾವನ್ನಪ್ಪಿದ್ದಾರೆ ಎಂದು ಕರ್ನಾಟಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇಂದು (ಸೆ.01) ಸಂಜೆ ಬಿಡುಗಡೆ ಮಾಡಿರುವ ವರದಿಗಳು ತಿಳಿಸಿವೆ.
ವರದಿಗಳ ಪ್ರಕಾರ 1112 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಇದುವರೆಗೆ ಸೋಂಕಿನಿಂದ ಗುಣಮುಖರಾದವರ ಸಂಖ್ಯೆ 2894827ಕ್ಕೆ ತಲುಪಿದೆ.
ಇನ್ನುಳಿದಂತೆ ರಾಜ್ಯದಲ್ಲಿಂದು 18412 ಸಕ್ರಿಯ ಪ್ರಕರಣಗಳಿವೆ. ಪಾಸಿಟಿವಿಟಿ ದರ 0.66 % ಹಾಗೂ ಡೆತ್ ರೇಟ್ 1.81 % ಇದೆ.
ಜಿಲ್ಲಾವಾರು ಪ್ರಕರಣಗಳ ಸಂಖ್ಯೆ :
ಬಾಗಲಕೋಟೆ-2, ಬಳ್ಳಾರಿ-6, ಬೆಳಗಾವಿ-1, ಬೆಂಗಳೂರು ಗ್ರಾಮಾಂತರ-359, ಬೀದರ್-0, ಚಾಮರಾಜನಗರ-9, ಚಿಕ್ಕಬಳ್ಳಾಪುರ-2, ಚಿಕ್ಕಮಗಳೂರು-48, ಚಿತ್ರದುರ್ಗ-7, ದಕ್ಷಿಣ ಕನ್ನಡ-191, ದಾವಣಗೆರೆ-8, ಧಾರವಾಡ-8, ಗದಗ-4, ಹಾಸನ-81, ಹಾವೇರಿ-0, ಕಲಬುರಗಿ-5, ಕೊಡಗು-95, ಕೋಲಾರ-32, ಕೊಪ್ಪಳ-3, ಮಂಡ್ಯ-20, ಮೈಸೂರು-91, ರಾಯಚೂರು-0, ರಾಮನಗರ-1, ಶಿವಮೊಗ್ಗ-11, ತುಮಕೂರು-34, ಉಡುಪಿ-91, ಉತ್ತರ ಕನ್ನಡ-37, ವಿಜಯಪುರ-4, ಯಾದಗಿರಿ-0.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.