12 ಸ್ಥಾಯಿ ಸಮಿತಿ ಅಧ್ಯಕ್ಷರ ಅವಿರೋಧ ಆಯ್ಕೆ
Team Udayavani, Nov 17, 2017, 11:29 AM IST
ಬೆಂಗಳೂರು: ಬಿಬಿಎಂಪಿಯ 12 ಸ್ಥಾಯಿ ಸಮಿತಿಗಳ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಎಲ್ಲ ಸಮಿತಿಗಳ ಅಧ್ಯಕ್ಷರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಗುರುವಾರ ಮೇಯರ್ ಆರ್.ಸಂಪತ್‌ರಾಜ್ ಅವರು ಸ್ಥಾಯಿ ಸಮಿತಿಗಳ ಅಧ್ಯಕ್ಷರ ಚುನಾವಣೆ ಪ್ರಕ್ರಿಯೆ ನಡೆಸಿದರು. ಈ ಹಿಂದೆಯೇ ಅಧ್ಯಕ್ಷರು ಯಾರಾಗುತ್ತಾರೆ ಎಂಬುದು ನಿಗದಿಯಾಗಿದ್ದ ಹಿನ್ನೆಲೆಯಲ್ಲಿ ಯಾವುದೇ ಗೊಂದಲವಿಲ್ಲದೆ ಎಲ್ಲ 12 ಸಮಿತಿಗಳಿಗೆ ಅಧ್ಯಕ್ಷರು ಅವಿರೋಧವಾಗಿ ಆಯ್ಕೆಯಾದರು.
ಕಾಂಗ್ರೆಸ್‌ನ ಐದು ಸದಸ್ಯರು, ಜೆಡಿಎಸ್‌ನ 4 ಸದಸ್ಯರು ಹಾಗೂ ಮೂವರು ಪಕ್ಷೇತರರು ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಬೆಳಗ್ಗೆ 12.12ಕ್ಕೆ ಚುನಾವಣಾ ಪ್ರಕ್ರಿಯೆ ಆರಂಭಿಸಿದ ಮೇಯರ್ ಸಂಪತ್‌ರಾಜ್ ಕೇವಲ 20 ನಿಮಿಷಗಳಲ್ಲಿ ಎಲ್ಲ ಸಮಿತಿಗಳ ಚುನಾವಣಾ ಪ್ರಕ್ರಿಯೆ ಮುಗಿಸಿದರು.
ಯಾವ ಸಮಿತಿಗೆ ಯಾರಿಗೆ
ಕಾಂಗ್ರೆಸ್
-ನಗರ ಯೋಜನೆ ಸ್ಥಾಯಿ ಸಮಿತಿ – ಶಕೀಲ್ ಅಹಮದ್ (ಭಾರತಿನಗರ)
-ಬೃಹತ್ ಸಾರ್ವಜನಿಕ ಕಾಮಗಾರಿ ಸ್ಥಾಯಿ ಸಮಿತಿ – ಗೋವಿಂದರಾಜು (ಸುಭಾಷ್‌ನಗರ)
-ಅಪೀಲು ಸ್ಥಾಯಿ ಸಮಿತಿ – ಕೋಕಿಲ ಚಂದ್ರಶೇಖರ್ (ಚಾಮರಾಜಪೇಟೆ)
-ಮಾರುಕಟ್ಟೆ ಸ್ಥಾಯಿ ಸಮಿತಿ – ಜಿ.ಮಂಜುನಾಥ್ (ಸುದ್ದಗುಂಟೆಪಾಳ್ಯ)
-ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ – ಅಬ್ದುಲ್ ರಕೀಬ್ ಝಾಕೀರ್ (ಪುಲಿಕೇಶಿನಗರ)
ಜೆಡಿಎಸ್
-ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ – ಎಂ.ಮಹದೇವ (ಮಾರಪ್ಪನಪಾಳ್ಯ)
-ತೋಟಗಾರಿಗೆ ಸ್ಥಾಯಿ ಸಮಿತಿ – ಉಮ್ಮೇ ಸಲ್ಮಾ (ಕುಶಾಲನಗರ)
-ವಾರ್ಡ್‌ಮಟ್ಟದ ಕಾಮಗಾರಿ ಸ್ಥಾಯಿ ಸಮಿತಿ – ಇಮ್ರಾನ್ ಪಾಷಾ (ಪಾದರಾಯನಪುರ)
-ಶಿಕ್ಷಣ ಸ್ಥಾಯಿ ಸಮಿತಿ – ಗಂಗಮ್ಮ (ಶಕ್ತಿಗಣಪತಿನಗರ)
ಪಕ್ಷೇತರರು
-ಲೆಕ್ಕಪತ್ರ ಸ್ಥಾಯಿ ಸಮಿತಿ – ಎನ್.ರಮೇಶ್ (ಮಾರತಹಳ್ಳಿ)
-ಆರೋಗ್ಯ ಸ್ಥಾಯಿ ಸಮಿತಿ – ಮುಜಾಹಿದ್ ಪಾಷಾ (ಸಿದ್ದಾಪುರ)
-ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಸ್ಥಾಯಿ ಸಮಿತಿ – ಸಿ.ಆರ್.ಲಕ್ಷ್ಮೀನಾರಾಯಣ್ (ದೊಮ್ಮಲೂರು)
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Maharashtra: ಮುಖ್ಯಮಂತ್ರಿ ಸ್ಥಾನಕ್ಕೆ ಏಕನಾಥ್ ಶಿಂದೆ ರಾಜೀನಾಮೆ… ಮುಂದಿನ ಸಿಎಂ ಯಾರು?
Mohini Dey: ಎಆರ್ ರೆಹಮಾನ್ ಜತೆ ಸಂಬಂಧ.. ಅವರು ನನಗೆ ತಂದೆ ಸಮಾನ ಎಂದ ಮೋಹಿನಿ
Tiger: ಬೆಂಗಳೂರಿನಿಂದ ತಿರುಪತಿ ಮೃಗಾಲಯಕ್ಕೆ ತಂದಿದ್ದ ರಾಯಲ್ ಬೆಂಗಾಲ್ ಟೈಗರ್ ‘ಮಧು’ ಸಾ*ವು
Mohammed Siraj: ಬಿಟೌನ್‌ನ ಈ ಹಾಟ್ ಬೆಡಗಿ ಜತೆ ಕ್ರಿಕೆಟಿಗ ಸಿರಾಜ್ ಡೇಟಿಂಗ್?
Vijayapura: ಮಹಾನಗರ ಪಾಲಿಕೆ ಉಪ ಚುನಾವಣೆ… ವಾರ್ಡ್ ನಂ.29ರಲ್ಲಿ ಬಿಜೆಪಿ ಗೆಲುವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.