14 ಸಾವಿರ ಕಿ.ಮೀ.ಉದ್ದದ ರಸ್ತೆಗಳಲ್ಲಿ ಗುಂಡಿ; ಕಳಪೆ ಕಾಮಗಾರಿಗೆ ಜನ ಹೈರಾಣ
ಗುಂಡಿ ಮುಚ್ಚುವುದಕ್ಕಾಗಿ ಪ್ರತಿ ವಾರ್ಡ್ ವಾರ್ಷಿಕ 30 ಲಕ್ಷ ರೂ. ನೀಡಲಾಗುತ್ತದೆ.
Team Udayavani, Sep 9, 2022, 12:27 PM IST
ಬೆಂಗಳೂರು: ಒಂದೆಡೆ ಮಳೆಯಿಂದಾಗಿ ನಗರದ ಮಹದೇವಪುರ, ಬೊಮ್ಮನಹಳ್ಳಿ, ಪೂರ್ವ ವಲಯದ 50ಕ್ಕೂ ಹೆಚ್ಚಿನ ಬಡಾವಣೆಗಳು ಜಲಾವೃತವಾಗಿ ಸಮಸ್ಯೆ ಉಂಟಾಗಿದೆ. ಅದರ ಜತೆಗೆ ಇದೀಗ ಮಳೆಯ ಪರಿಣಾಮ ನಗರದ 14 ಸಾವಿರ ಕಿ.ಮೀ. ಉದ್ದದ ರಸ್ತೆಗಳಲ್ಲಿ ಗುಂಡಿ ಕಾಣಿಸಿಕೊಂಡಿದ್ದು, ಅವು ಗಳನ್ನು ಮುಚ್ಚುವುದು ಬಿಬಿಎಂಪಿಗೆ ಸವಾಲಾಗಿದೆ.
ಪ್ರತಿ ರಸ್ತೆಯಲ್ಲೂ ಗುಂಡಿ ಸೃಷ್ಟಿ: ಬಿಬಿಎಂಪಿ ವ್ಯಾಪ್ತಿ ಯಲ್ಲಿ ಒಟ್ಟು 14 ಸಾವಿರ ಕಿಮೀ ಉದ್ದದ ರಸ್ತೆಗಳಿವೆ.ಅದರಲ್ಲಿ 4 ಸಾವಿರ ಕಿ.ಮೀ. ಮುಖ್ಯ ಮತ್ತು ಉಪಮುಖ್ಯ ರಸ್ತೆಗಳಾಗಿವೆ. ಅವುಗಳಲ್ಲಿ ಕಳೆದ ಮೇ ತಿಂಗಳಿಂದ ಸೆಪ್ಟೆಂಬರ್ ಆರಂಭದವರೆಗೆ 18 ಸಾವಿರ ರಸ್ತೆಗುಂಡಿಗಳನ್ನು ಪತ್ತೆ ಮಾಡಿ ಮುಚ್ಚಲಾಗಿದೆ. ಆದರೆ, ಕಳೆದೊಂದು ವಾರದಿಂದ ಸುರಿದ ಮಳೆಗೆ ಈಗಾಗಲೆ ಮುಚ್ಚಲಾಗಿರುವ ರಸ್ತೆಗುಂಡಿಗಳ ಜತೆಗೆ ಹೊಸದಾಗಿ ಗುಂಡಿಗಳು ಸೃಷ್ಟಿಯಾಗಿವೆ. ಅದರಂತೆ ನಗರದೆಲ್ಲೆಡೆ ಮುಖ್ಯ, ಉಪಮುಖ್ಯ ಹಾಗೂ ವಾರ್ಡ್ ರಸ್ತೆಗಳಲ್ಲಿ 15 ಸಾವಿರಕ್ಕೂ ಹೆಚ್ಚಿನ ಗುಂಡಿಗಳು ಸೃಷ್ಟಿಯಾಗಿರುವ ಕುರಿತು ಅಂದಾಜಿಸಲಾಗಿದೆ.
60 ಕೋಟಿ ರೂ. ನೀರು ಪಾಲು: ರಸ್ತೆ ನಿರ್ವಹಣೆ, ಗುಂಡಿ ಮುಚ್ಚುವುದಕ್ಕಾಗಿ ಪ್ರತಿ ವಾರ್ಡ್ ವಾರ್ಷಿಕ 30 ಲಕ್ಷ ರೂ. ನೀಡಲಾಗುತ್ತದೆ. ಅದರಲ್ಲಿ ಬಹುತೇಕ ವಾರ್ಡ್‌ಗಳಲ್ಲಿ ಶೇ. 70ಕ್ಕೂ ಹೆಚ್ಚಿನ ಮೊತ್ತವನ್ನು ಬಳಸಲಾಗಿದೆ. ಅದರ ಜತೆಗೆ ಮುಖ್ಯ ಮತ್ತು ಉಪಮುಖ್ಯ ರಸ್ತೆಗಳ ದುರಸ್ತಿಗಾಗಿ ಬಿಬಿಎಂಪಿ 40 ಕೋಟಿ ರೂ.ಗೂ ಹೆಚ್ಚಿನ ಮೊತ್ತವನ್ನು ವ್ಯಯಿಸಿದೆ. ಅದನ್ನು ಗಮನಿಸಿದರೆ ಬಿಬಿಎಂಪಿ ಕಳೆದ ಐದಾರು ತಿಂಗಳಲ್ಲಿ ರಸ್ತೆ ದುರಸ್ತಿಗಾಗಿ 60 ಕೋಟಿ ರೂ.ಗೂ ಹೆಚ್ಚಿನ ಮೊತ್ತವನ್ನು ವ್ಯಯಿಸಿದೆ. ಈಗ ಆ ಮೊತ್ತವೆಲ್ಲವೂ ನೀರು ಪಾಲಾಗುವಂತಾಗಿದೆ.
30 ಕೋಟಿ ರೂ. ಅಗತ್ಯ?: ಕಳೆದೊಂದು ವಾರ ಸುರಿದ ಮಳೆಯಿಂದಾಗಿ 14 ಸಾವಿರ ಕಿ.ಮೀ ಉದ್ದದ ರಸ್ತೆಯಲ್ಲಿ ಶೇ. 60 ಭಾಗದ ರಸ್ತೆಗಳಲ್ಲಿ ಗುಂಡಿಗಳು ಕಾಣಿಸಿಕೊಂಡಿವೆ. ಅದರಲ್ಲೂ ಕೆಲ ರಸ್ತೆಗಳು ಸಂಪೂರ್ಣವಾಗಿ ಕೊಚ್ಚಿ ಹೋಗಿವೆ. ಹೀಗಾಗಿ ಈ ರಸ್ತೆ ದುರಸ್ತಿಗಾಗಿ ಬಿಬಿಎಂಪಿಗೆ ಕನಿಷ್ಠ 30 ಕೋಟಿ ರೂ. ಅವಶ್ಯಕತೆಯಿದೆ.
ಇತರ ಇಲಾಖೆಗಳ ಕಾಮಗಾರಿಯಿಂದ ಸಮಸ್ಯೆ ಬೆಂಗಳೂರು ವ್ಯಾಪ್ತಿಯಲ್ಲಿ ಜಲಮಂಡಳಿ, ಬೆಸ್ಕಾಂ, ಟೆಲಿಕಾಂ ಸಂಸ್ಥೆಗಳು ಸೇರಿ ಇನ್ನಿತ ಇಲಾಖೆಗಳು ರಸ್ತೆ ಅಗೆಯುವ ಮೂಲಕ ಸಮಸ್ಯೆ ಸೃಷ್ಟಿಯಾಗುವಂತೆ ಮಾಡಿವೆ. ಹೀಗೆ ರಸ್ತೆ ಅಗೆಯುವ ಇಲಾಖೆಗಳು ಅದನ್ನು ಸಮರ್ಪಕವಾಗಿ ಮುಚ್ಚದೆ ಮಣ್ಣನ್ನು ತುಂಬಿ ಮುಚ್ಚಿ ಬಿಡಲಾಗಿತ್ತು. ಅಂತಹ ರಸ್ತೆ ಅಗೆತಗಳು ಇದೀಗ ದೊಡ್ಡದಾಗಿದ್ದು, ವಾಹನ ಸಂಚಾರವೇ ಮಾಡದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಕಳಪೆ ಕಾಮಗಾರಿಗೆ ಜನ ಹೈರಾಣ
ಬೆಂಗಳೂರಿನ ಮಟ್ಟಿಗೆ ಪ್ರತಿ ಮಳೆಗಾಲದಲ್ಲೂ ರಸ್ತೆ ಗುಂಡಿ ಸಮಸ್ಯೆ ಹೆಚ್ಚಾಗುತ್ತದೆ. ಪ್ರತಿವರ್ಷ ಗುಂಡಿ ಮುಚ್ಚಲು 50 ಕೋಟಿ ರೂ.ಗೂ ಹೆಚ್ಚಿನ ಹಣವನ್ನು ಬಿಬಿಎಂಪಿ ವ್ಯಯಿಸುತ್ತದೆ. ಆದರೆ, ಇದು ಗುಣಮಟ್ಟದ ಕಾಮಗಾರಿ ಆಗಿರದ ಕಾರಣ, ರಸ್ತೆ ಗುಂಡಿಗಳು ಪದೇಪದೆ ಉದ್ಭವವಾಗಿ ಜನರು ಸಮಸ್ಯೆ ಅನುಭವಿಸುವಂತಾಗುತ್ತದೆ. ಈ ಬಾರಿ ಮಳೆಯ ಪ್ರಮಾಣ ಹೆಚ್ಚಾಗಿರುವ ಕಾರಣ ಈ ಸಮಸ್ಯೆ ದೊಡ್ಡಮಟ್ಟದಲ್ಲಿ ಕಾಣುವಂತಾಗಿದೆ.
*ಗಿರೀಶ್ ಗರಗ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Adalat: ಲೋಕ್ ಅದಾಲತ್‌ನಲ್ಲಿ 38.8 ಲಕ್ಷ ವ್ಯಾಜ್ಯ ಇತ್ಯರ್ಥ
Bengaluru: ಒಬಾಮಾ ಭೇಟಿ ವೇಳೆ ಸ್ಫೋಟ ಸಂಚು: ಡಿ.23ಕ್ಕೆ ಶಿಕ್ಷೆ ಪ್ರಕಟ
Fraud: ಸಿಬಿಐ ಸೋಗಿನಲ್ಲಿ ವೃದ್ಧೆಗೆ 1.24 ಕೋಟಿ ರೂ. ವಂಚನೆ
BSY: ಬಿಎಸ್‌ವೈ ತಪ್ಪೊಪ್ಪಿಕೊಂಡಿರುವುದಾಗಿ ಸಂತ್ರಸ್ತೆ ಹೇಳಿಕೆ ದಾಖಲು: ಎಸ್‌ಪಿಪಿ
IPS officer D. Roopa: ಸಿಂಧೂರಿ ಮೇಲೆ ಮಾನನಷ್ಟ ಪ್ರಕರಣ ದಾಖಲಿಸಿದ ರೂಪಾ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Sandalwood: ಸ್ಟಾರ್ ಸಿನಿಮಾ ಹೆಚ್ಚು ಬಂದರೆ ಚಿತ್ರರಂಗಕ್ಕೆ ಪೂರಕ: ಎನ್. ನರಸಿಂಹಲು
Udupi: ಗೀತಾರ್ಥ ಚಿಂತನೆ-130: “ನಂದಲ್ಲ, ನಂದಲ್ಲ’ ಎಂಬ ನಿರಂತರ ಅನುಸಂಧಾನ ಮುಖ್ಯ
Buntakal Technical College: ಅಂತಾರಾಷ್ಟ್ರೀಯ ಸಮ್ಮೇಳನ ;ವಿದ್ಯಾರ್ಥಿ ವಿಚಾರ ಸಂಕಿರಣ
Mandya:ಟಿಪ್ಪು ಆಳ್ವಿಕೆ- ಪ್ರವಾಸಿಗರ ಕಣ್ಮನ ಸೆಳೆಯುವ ಜಾಮೀಯಾ ಮಸೀದಿ, ಬೇಸಿಗೆ ಅರಮನೆ
BGT 2024: ಉಳಿದೆರಡು ಪಂದ್ಯಗಳಿಗೆ ಆಸೀಸ್ ತಂಡ ಪ್ರಕಟ: ಮೂರು ಬದಲಾವಣೆ ಮಾಡಿದ ಆಸ್ಟ್ರೇಲಿಯಾ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.