ಕಾಲ್‌ಸೆಂಟರ್ ಆರಂಭಿಸಲು 15 ದಿನ ಗಡುವು
Team Udayavani, Jun 10, 2017, 12:41 PM IST
ಬೆಂಗಳೂರು: ನಾಗರಿಕ ಸೇವೆಗೆ ಸಂಬಂಧಿಸಿದ ಜನರ ದೂರು ದುಮ್ಮಾನಗಳನ್ನು ಒಂದೇ ಸೂರಿನಡಿ ಆಲಿಸಿ, ಪರಿಹಾರ ಒದಗಿಸಲೆಂದು ಪಾಲಿಕೆ ಸ್ಥಾಪಿಸಲು ಉದ್ದೇಶಿಸಿರುವ ಕಾಲ್‌ಸೆಂಟರ್ ವಿಳಂಬವಾಗುತ್ತಿರುವುದಕ್ಕೆ ಮೇಯರ್ ಜಿ ಪದ್ಮಾವತಿ ಅವರು ತೀವ್ರ ಅತೃಪ್ತಿ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಇನ್ನು 15 ದಿನಗಳ ಒಳಗಾಗಿ ಕಾಲ್ ಸೆಂಟರ್‌ಅನ್ನು ನಾಗರಿಕರ ಸೇವೆಗೆ ಸನ್ನದ್ಧಗೊಳಿಸುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದ್ದಾರೆ.
ಬಿಬಿಎಂಪಿ, ಬೆಸ್ಕಾಂ, ಜಲಮಂಡಳಿ, ಬಿಡಿಎ ಸೇರಿದಂತೆ ವಿವಿಧ ಇಲಾಖೆಗಳಿಗೆ ಸಂಬಂಧಿಸಿದ ದೂರುಗಳನ್ನು ಒಂದೇ ಕಡೆ ಸ್ವೀಕರಿಸಿ ಬಗೆಹರಿಸುವುದು ಈ ಕಾಲ್‌ಸೆಂಟರ್‌ನ ಉದ್ದೇಶ. ಆದರೆ, ಮಹತ್ವಾಕಾಂಕ್ಷಿ ಉದ್ದೇಶದ ಅನುಷ್ಠಾನದಲ್ಲಿಯೂ ಅಧಿಕಾರಿಗಳು ವಿಳಂಬ ನೀತಿ ಅನುಸರಿಸುತ್ತಿರುವ ಬಗ್ಗೆ ಮೇಯರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಶುಕ್ರವಾರ ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಮೇಯರ್ ಎಲ್ಲರನ್ನೂ ತರಾಟೆಗೆ ತೆಗೆದುಕೊಂಡಿದ್ದಾರೆ.
ಇದಕ್ಕೆ ಉತ್ತರಿಸಿರುವ ಅಧಿಕಾರಿಗಳು, “ಕಾಲ್‌ಸೆಂಟರ್‌ಗೆ ಒಟ್ಟು 5.80 ಕೋಟಿ ರೂ. ವೆಚ್ಚವಾಗುತ್ತದೆ. ಅದಕ್ಕೆ ಸರ್ಕಾರದ ಅನುಮತಿ ಪಡೆಯಬೇಕಿದೆ. ಸರ್ಕಾರಕ್ಕೆ ಕಡತ ಕಳುಹಿಸಿ ಎರಡು ತಿಂಗಳಾದರೂ ಅನುಮತಿ ಸಿಕ್ಕಿಲ್ಲ,’ ಎಂದು ಸಮಜಾಯಿಷಿ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಪಾಲಿಕೆಯ ವಿಶೇಷ ಆಯುಕ್ತ ವಿಜಯ್ ಶಂಕರ್ ಅವರಿಗೆ ಕೂಡಲೇ ಸರ್ಕಾರದಿಂದ ಅನುಮತಿ ಪಡೆಯುವಂತೆ ಮೇಯರ್ ಸೂಚಿಸಿದ್ದಾರೆ.
ನಂತರ ಸುದ್ದಿಗಾರರ ಜತೆ ಮಾತನಾಡಿದ ಮೇಯರ್ ಅವರು, “ನಾಗರಿಕರಿಗೆ ಉತ್ತಮ ಸೇವೆ ನೀಡುವ ಉದ್ದೇಶದಿಂದ ಪಾಲಿಕೆ ಕೇಂದ್ರ ಕಚೇರಿ ಕಟ್ಟಡಕ್ಕೆ ಹೊಂದಿಕೊಂಡಂತಿರುವ ಕಟ್ಟಡದ 6ನೇ ಮಹಡಿಯಲ್ಲಿ ಕಾಲ್‌ಸೆಂಟರ್ ಸಿದ್ಧಪಡಿಸಲಾಗುತ್ತಿದೆ. ಆದರೆ ಸರ್ಕಾರದಿಂದ ಅನುಮತಿ ಸಿಗಿದಿದ್ದರಿಂದ ಕಾಲ್ ಸೆಂಟರ್ ಆರಂಭವಾಗಿಲ್ಲ. ಕಡತ ಪರಿಶೀಲನೆ ನಡೆಸಿ ಕೂಡಲೇ ಅನುಮತಿ ಪಡೆಯುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ,’ ಎಂದಿದ್ದಾರೆ.
ಸಾಫ್ಟ್ವೇರ್ ಅಳವಡಿಕೆ ವಿಳಂಬ!: ಕಾಲ್‌ಸೆಂಟರ್ ನಿರ್ವಹಣೆಯನ್ನು ಹೊರಗುತ್ತಿಗೆ ನೀಡಲು ಪಾಲಿಕೆ ತೀರ್ಮಾನಿಸಿದೆ. ಅದಕ್ಕಾಗಿ ಟೆಂಡರ್ ಪ್ರಕ್ರಿಯೆ ನಡೆಸಲು ಪೂರ್ವ ಸಿದ್ಧತೆ ನಡೆಸಿದೆ. ಆದರೆ, ಕಾಲ್‌ಸೆಂಟರ್ ಸೇವೆಗೆ ಅಗತ್ಯವಾದ ಸಾಫ್ಟ್ವೇರ್ ಅಳವಡಿಕೆ ಕಾರ್ಯಕ್ಕೆ ಸಂಬಂಧಿಸಿದಂತೆ ಸರ್ಕಾರದಿಂದ ಒಪ್ಪಿಗೆ ದೊರೆತಿಲ್ಲ. ಹೀಗಾಗಿ ಸೇವೆ ವಿಳಂಬವಾಗುತ್ತಿದೆ ಎನ್ನುತ್ತವೆ ಪಾಲಿಕೆ ಮೂಲಗಳು
ಕಾಲ್‌ಸೆಂಟರ್ ಕಾರ್ಯನಿರ್ವಹಣೆಗೆ ಹೇಗೆ?: ಬಿಬಿಎಂಪಿ, ಜಲಮಂಡಳಿ, ಬೆಸ್ಕಾಂ, ಬಿಡಿಎ ಹೀಗೆ ವಿವಿಧ ಇಲಾಖೆಗಳಿಗೆ ಸಂಬಂಧಿಸಿದ ಕುಂದು ಕೊರತೆಗಳನ್ನು ಸದ್ಯ ಜನರು ಆಯಾ ಇಲಾಖೆಯ ನಿಯಂತ್ರಣ ಕೊಠಡಿಗೆ ಕರೆ ಮಾಡಿ ದೂರು ನೀಡುತ್ತಿದ್ದಾರೆ. ಆದರೆ, ಪಾಲಿಕೆ ಕಾಲ್ ಸೆಂಟರ್ ಆರಂಭವಾದರೆ, ನಾಗರಿಕರ ದೂರುಗಳನ್ನು ಒಂದೇ ಕಡೆ ಆಲಿಸಿ, ಪರಿಹಾರ ಒದಗಿಸಲಾಗುತ್ತದೆ.
ನಿರ್ವಹಣಾ ಕೊಠಡಿಗಳು ರದ್ದು!?: ಕಾಲ್ ಸೆಂಟರ್ ಕಾರ್ಯಾರಂಭದ ನಂತರ ಪಾಲಿಕೆಯ 8 ವಲಯಗಳಲ್ಲಿನ ನಿರ್ವಹಣಾ ಕೊಠಡಿಗಳು ರದ್ದಾಗಲಿವೆ. ಪಾಲಿಕೆಯ ಎಲ್ಲ 198 ವಾರ್ಡ್‌ಗಳ ಸಮಸ್ಯೆಗಳನ್ನು ಹೊಸ ಕಾಲ್‌ಸೆಂಟರ್‌ನಿಂದಲೇ ಆಲಿಸುವ ವ್ಯವಸ್ಥೆ ಜಾರಿಗೆ ಬರಲಿದೆ.
ಕಾಲ್‌ಸೆಂಟರ್ ಶೀಘ್ರ ಆರಂಭವಾಗುವುದರಿಂದ ಮಳೆಗಾಲದಲ್ಲಿ ಎದುರಾಗುವ ಅನಾಹುತಗಳನ್ನು ನಿಭಾಯಿಸುವುದು ಸುಲಭವಾಗಲಿದೆ. ಈಗಾಗಲೇ ಎರಡು ಭಾರಿ ಕಾಲ್‌ಸೆಂಟರ್‌ಗೆ ಭೇಟಿ ನೀಡಿ ಪರಿಶೀಲಿಸಿದ್ದೇನೆ. 15 ದಿನಗಳೊಳಗೆ ಕಾಲ್‌ಸೆಂಟರ್ ಕಾರ್ಯ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ.
– ಜಿ.ಪದ್ಮಾವತಿ, ಮೇಯರ್
ಉದಯವಾಣಿ ವರದಿ ಮಾಡಿತ್ತು!: ಬಿಬಿಎಂಪಿಯ ಉದ್ದೇಶಿತ ಕಾಲ್‌ಸೆಂಟರ್ ಸ್ಥಾಪನೆ ಕಾರ್ಯ ವಿಳಂಬವಾಗುತ್ತಿರುವ ಬಗ್ಗೆ “ಉದಯವಾಣಿ’ ಜೂನ್ 1ರಂದು “ವರ್ಷವಾದರೂ ಸೇವೆಗೆ ಸಿಗದ ಕಾಲ್ ಸೆಂಟರ್’ ಎಂಬ ಶೀರ್ಷಿಕೆಯಡಿಯಲ್ಲಿ ವರದಿ ಪ್ರಕಟಿಸಿತ್ತು. ಅದನ್ನು ಗಂಭೀರವಾಗಿ ಪರಿಗಣಿಸಿದ ಮೇಯರ್ ಪದ್ಮಾವತಿ ಅವರು ಎರಡು ಬಾರಿ ಕಾಲ್‌ಸೆಂಟರ್ ಪರಿಶೀಲನೆ ನಡೆಸಿ, 15 ದಿನಗಳೊಳಗೆ ಕಾರ್ಯಾರಂಭ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Suspended: ಕರ್ತವ್ಯಲೋಪ… ಚಿಕ್ಕಮಗಳೂರು ನಗರ ಪೊಲೀಸ್ ಠಾಣೆ ಇನ್ಸ್ ಪೆಕ್ಟರ್ ಅಮಾನತು
Chintamani: ಭೀಕರ ಅಪಘಾತ; ಬಸ್ ಚಕ್ರದ ಕೆಳಗೆ ಬೈಕ್ ಸಿಲುಕಿ ದಂಪತಿ ಸಾವು
Bangladeshದಲ್ಲಿ ಇಸ್ಕಾನ್ ನಿಷೇಧಿಸಬೇಕು: ಹೈಕೋರ್ಟ್ ಗೆ ಬಾಂಗ್ಲಾದೇಶ ಸರ್ಕಾರ ಅರ್ಜಿ!
Monkey disease: ಶೀಘ್ರ ಶಿರಸಿಗೆ ಮಂಗನ ಕಾಯಿಲೆ ತಪಾಸಣಾ ಲ್ಯಾಬ್: ಭೀಮಣ್ಣ
Viduthalai Part 2 Trailer: ದಟ್ಟ ಕಾಡಿನಲ್ಲಿ ಸದ್ದು ಮಾಡುವ ಬಂದೂಕು – ದಮನಿತರ ಬದುಕು..
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.