Chicken burger: ಚಿಕನ್ ಬರ್ಗರ್ ನೀಡಿದ್ದಕ್ಕೆ 15 ಸಾವಿರ ದಂಡ!
Team Udayavani, Sep 5, 2023, 4:14 PM IST
ಸಾಂದರ್ಭಿಕ ಚಿತ್ರ
ಬೆಂಗಳೂರು: ಸಸ್ಯಹಾರಿ ವ್ಯಕ್ತಿಗೆ ಚಿಕನ್ ಬರ್ಗರ್ ನೀಡಿ ಧಾರ್ಮಿಕ ಆಚರಣೆಗೆ ಧಕ್ಕೆ ತಂದು ಅನಾರೋಗ್ಯಕ್ಕೆ ಕಾರಣವಾದ ಹೊಟೇಲ್‌ವೊಂದಕ್ಕೆ ಗ್ರಾಹಕ ನ್ಯಾಯಾಲಯ 15 ಸಾವಿರ ದಂಡ ಪರಿಹಾರ ನೀಡುವಂತೆ ತೀರ್ಪು ಹೊರಡಿಸಿದೆ.
ದೊಡ್ಡಬಳ್ಳಾಪುರದ 62 ವರ್ಷದ ವ್ಯಕ್ತಿಯು ತನ್ನ ಮಗನ ಪರವಾಗಿ ಗ್ರಾಹಕ ನ್ಯಾಯಾಲಯಕ್ಕೆ ದೂರು ದಾಖಲಿಸಿದ್ದಾರೆ. ತನ್ನ ಮಗ ನಗರದ ಖಾಸಗಿ ಹೊಟೇಲ್ ಒಂದರಲ್ಲಿ ಕೊಠಡಿಯನ್ನು ಬುಕ್ ಮಾಡಿ ವಾಸ್ತವ್ಯ ಹೂಡಿದ್ದರು. ಈ ವೇಳೆ ವೆಜ್ ಬರ್ಗರ್ ಆರ್ಡಾರ್ ಮಾಡಿದ್ದಾರೆ. ಈ ವೇಳೆ ಹೊಟೇಲ್‌ನವರು ವೆಜ್ ಬರ್ಗರ್ ಬದಲಾಗಿ ಚಿಕನ್ ಬರ್ಗರ್ ನೀಡಿದ್ದಾರೆ. ಈ ಮಾಹಿತಿ ಗೊತ್ತಿಲ್ಲ ಮಗ ಬರ್ಗರ್ ಸೇವಿಸಿದ್ದಾರೆ. ಮಾಂಸಹಾರವನ್ನೇ ಮುಟ್ಟದವರು ಚಿಕನ್ ಬರ್ಗರ್ ಸೇವಿಸಿರುವುದು ಅಘಾತ ಉಂಟು ಮಾಡಿದೆ. ಈ ವೇಳೆ ಆರೋಗ್ಯದಲ್ಲಿ ಏರುಪೇರಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖೀಸಿದ್ದಾರೆ. ಗ್ರಾಹಕ ಸೇವೆಯಲ್ಲಿ ವ್ಯತ್ಯಯದ ಬಗ್ಗೆ ಹೊಟೇಲ್ ಮಾಲೀಕರ ಗಮನಕ್ಕೆ ತರಲಾಗಿದೆ.
ಹೊಟೇಲ್‌ನಲ್ಲಿ ಆಗಿರುವ ತೊಂದರೆ ಬಗ್ಗೆ ಉಲ್ಲೇಖಿಸಿ, ಹೊಟೇಲ್ ಬಿಲ್ ಮೊತ್ತವನ್ನು ಮರುಕಳಿಸುವಂತೆ ಮನವಿ ಮಾಡಿದರೂ, ಯಾವುದೇ ಪ್ರಯೋಜನವಾಗಿಲ್ಲ. ಈ ವೇಳೆ ಹೊಟೇಲ್ ಮಾಲೀಕ ಪರಿಹಾರವಾಗಿ ಉಚಿತ ತಿಂಡಿ, ಊಟ ವ್ಯವಸ್ಥೆ ನೀಡುವುದಾಗಿ ತಿಳಿಸಿದ್ದಾರೆ. ಇದರಿಂದ ಬೇಸತ್ತ ಗ್ರಾಹಕ ನ್ಯಾಯಾಲಯಕ್ಕೆ ದೂರು ನೀಡಿದ್ದಾರೆ. ಎರಡು ಕಡೆಯ ವಾದ ವಿವಾದವನ್ನು ಆಲಿಸಿದ ನ್ಯಾಯಾಧೀಶರು, ಸಸ್ಯಹಾರಿಗೆ ಚಿಕನ್ ಬರ್ಗರ್ ನೀಡಿದ ಹೊಟೇಲ್ 15 ಸಾವಿರ ರೂ. ಪರಿಹಾರ ನೀಡುವಂತೆ ಆದೇಶ ಹೊರಡಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Harapanahalli: ಪ್ರತಿಷ್ಠೆಯ ಕಣವಾದ ಬಿ90 ಸೊಸೈಟಿ ಚುನಾವಣೆ
Nagpur: ʼಪುಷ್ಪ-2ʼ ನೋಡುತ್ತಿದ್ದಾಗಲೇ ಥಿಯೇಟರ್‌ಗೆ ಪೊಲೀಸರ ಎಂಟ್ರಿ; ಸ್ಮಗ್ಲರ್ ಬಂಧನ
Hysteroscopy: ಸಂತಾನಹೀನತೆಯ ಪತ್ತೆ ಮತ್ತು ಚಿಕಿತ್ಸೆಗೆ ಒಂದು ಅತ್ಯವಶ್ಯಕ ಕಾರ್ಯವಿಧಾನ
ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಬಗ್ಗೆ ಅವಹೇಳನಕಾರಿ ಪದಬಳಕೆ: ಪ್ರಸಾದ್ ರಾಜ್ ಕಾಂಚನ್ ಖಂಡನೆ
Puttur: ತೆಂಕಿಲದಲ್ಲಿ ರಿಕ್ಷಾ ಅಪಘಾತ: ಚಾಲಕ ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.