ನವೆಂಬರ್‌ನಲ್ಲೇ 150 ಐಟಿಐ ಉನ್ನತೀಕರಣ


Team Udayavani, Oct 22, 2021, 11:06 AM IST

ನವೆಂಬರ್‌ನಲ್ಲೇ 150 ಐಟಿಐ ಉನ್ನತೀಕರಣ

ಬೆಂಗಳೂರು : ಟಾಟಾ ಟೆಕ್ನಾಲಜಿಸ್‌ ಸಹಯೋಗದಲ್ಲಿ ರಾಜ್ಯದ 150 ಐಟಿಐ ಕೇಂದ್ರಗಳನ್ನು 4636 ಕೋಟಿ ರೂ. ವೆಚ್ಚದಲ್ಲಿ ಉನ್ನತೀಕರಿಸಲಾಗುತ್ತಿದ್ದು, ನವೆಂಬರ್‌ 1ರಿಂದಲೇ ಹೊಸ ಕೋರ್ಸ್‌ಗಳ ಲಭ್ಯತೆ ಜತೆಗೆ ಏಕರೂಪದಲ್ಲಿ ಉನ್ನತೀಕರಣವೂ ಆಗಲಿದೆ ಎಂದು ಕೌಶಾಲಾಭಿವೃದ್ಧಿ ಸಚಿವ ಡಾ.ಸಿ.ಎನ್‌.ಅಶ್ವತ್ಥ ನಾರಾಯಣ ಹೇಳಿದರು.

ಪೀಣ್ಯದಲ್ಲಿ ಮೇಲ್ದರ್ಜೆಗೇರಿಸಿರುವ ಸರ್ಕಾರಿ ಐಟಿಐ ಕೇಂದ್ರವನ್ನು ಗುರುವಾರ ಪರಿಶೀಲಿಸಿ ನಂತರ ಮಾತನಾಡಿದ ಅವರು, ವಿದ್ಯಾರ್ಥಿಗಳ ಉದ್ಯೋಗಾ ವಕಾಶಕ್ಕೆ ಪೂರಕವಾಗುವಂತೆ ಹೊಸ ಕೋರ್ಸ್‌ಗಳನ್ನು ಟಾಟಾ ಟೆಕ್ನಾಲಜಿಸ್‌ ಜತೆ ಸೇರಿ ಆರಂಭಿಸುತ್ತಿದ್ದೇವೆ.

ಇದಕ್ಕೆ ಅಗತ್ಯವಿರುವ ಅತ್ಯಾಧುನಿಕ ಉಪಕರಣಗಳನ್ನು ಐಟಿಐ ಕೇಂದ್ರಗಳಿಗೆ ನೀಡಲಾಗುವುದು. ಇಂದಿನ ಅವಶ್ಯಕತೆಗೆ ತಕ್ಕುದಾದ ಅಲ್ಪವಧಿ ಹಾಗೂ ದೀರ್ಘಾವಧಿ ಕೋರ್ಸ್‌ಗಳನ್ನು 150 ಐಟಿಐಗಳಲ್ಲಿ ಆರಂಭಿಸುತ್ತಿದ್ದೇವೆ ಎಂದು ಹೇಳಿದರು. ಕೈಗಾರಿಕೆ, ಉದ್ಯಮ ಬೆಳೆಯಲು ವಕ್‌ ìಫೋರ್ಸ್‌ ಬಹಳ ಮುಖ್ಯ. ಬದಲಾಗುತ್ತಿರುವ ತಂತ್ರಜ್ಞಾನದ ಹಿನ್ನೆಲೆಯಲ್ಲಿ ಕೌಶಲತೆಯೂ ಅಗತ್ಯವಿದೆ.

ಇದಕ್ಕೆ ಅನುಗುಣವಾಗಿ ಐಟಿಐ ಕೇಂದ್ರಗಳನ್ನು ಇಂಡಸ್ಟ್ರಿ 4.0 ಅಪ್‌ಗೆÅàಡ್‌ ಮಾಡುತ್ತಿದ್ದೇವೆ. ಐಒಟಿ, ಡಿಸೈನ್‌, ಕೃತಕ ಬುದ್ಧಿಮತ್ತೆ, ಮೆಷಿನ್‌ ಲರ್ನಿಂಗ್‌ ಇತ್ಯಾದಿ ಕಲಿಸಲಿದ್ದೇವೆ. ಇಂಡಸ್ಟ್ರಿಗೆ ಬೇಕಾದ ಕೌಶಲ್ಯಾಧಾರಿತ ಮಾನವ ಸಂಪನ್ಮೂಲ ಸಜ್ಜುಗೊಳಿಸುತ್ತಿದ್ದೇವೆ. 270 ಐಟಿಐ ಕೇಂದ್ರದಲ್ಲಿ 150 ಐಟಿಐ ಕೇಂದ್ರಗಳನ್ನು ಉನ್ನತೀಕರಿಸಲಿದ್ದೇವೆ.

ಸುಮಾರು 200 ಕೋಟಿ ರೂ.ಗಳನ್ನು ಕಟ್ಟಡ ಇತ್ಯಾದಿ ಮೂಲಸೌಕರ್ಯಕ್ಕೆ ವ್ಯಯಿಸಲಿದ್ದೇವೆ. ಟಾಟಾ ಟೆಕ್ನಾಲಜಿಸ್‌ಗೆ 700 ಕೋಟಿ ರೂ.ಗಳನ್ನು ವರ್ಗಾಯಿಸಿದ್ದೇವೆ. 4,636 ಕೋಟಿ ಯೋಜನಾ ವೆಚ್ಚದಲ್ಲಿ ಸರ್ಕಾರ ಶೇ.12ರಷ್ಟು ಹಾಗೂ ಟಾಟಾ ಟೆಕ್ನಾಲಜಿಸ್‌ ಶೇ.88ರಷ್ಟು ಭರಿಸಲಿದೆ. ಐಟಿಐ ಉದ್ಯೋಗ ಕಾರ್ಯಕ್ರಮದಡಿ ಉನ್ನತೀಕರಣ ವಾಗಲಿದೆ ಎಂದು ವಿವರ ನೀಡಿದರು.

 ಹೊಸ ಕೋರ್ಸ್‌ಗಳು: ಪ್ರತಿ ಕೋರ್ಸ್‌ನಲ್ಲೂ 20 ಇನ್‌ಟೇಕ್‌ (ದಾಖಲಾತಿ)ಇರಲಿದೆ. ಒಂದು ವರ್ಷದ ಕೋರ್ಸ್‌ಗಳಾದ ಗಣಕಯಂತ್ರ ಉಪಕೃತ ಉತ್ಪಾದನೆ, ಉತ್ಪಾದನಾ ಪ್ರಕ್ರಿಯೆ ನಿಯಂತ್ರಣ ಹಾಗೂ ಸ್ವಯಂ ಚಾಲನೆ, ಮೂಲ ವಿನ್ಯಾಸ ಹಾಗೂ ಆಡಿಟೀವ್‌ ಉತ್ಪಾದನೆ, ಕೈಗಾರಿಕ ರೋಬೋಟಿಕ್ಸ್‌ ಹಾಗೂ ಡಿಜಿಟಲ್‌ ಉತ್ಪಾದನೆ, ಅತ್ಯಾಧುನಿಕ ಪ್ಲಂಬಿಂಗ್‌ ಹಾಗೂ ಅತ್ಯಾಧುನಿಕ ಉಪಕರಣಗಳಿಂದ ಕಾಲಕೃತಿಯ ಜತೆಗೆ 2 ವರ್ಷದ ಅತ್ಯಾಧುನಿಕ ವಾಹನ ಅಭಿಯಂತ್ರಣ, ಬ್ಯಾಟರಿಚಾಲಿತ ವಾಹನಗಳು, ಮೂಲಭೂತ ವಿನ್ಯಾಸ ಹಾಗೂ ಕಾರ್ಯತಃ ಪರಿಶೀಲನೆ, ಇಂಟರ್‌ನೆಟ್‌ ಆಫ್ ಥಿಂಗ್ಸ್‌, ಅತ್ಯಾಧುನಿಕ ಉತ್ಪಾದನಾ ಪ್ರಕ್ರಿಯೆ ಕೋಸ್‌ ìಗಳು ವಿದ್ಯಾರ್ಥಿಗಳಿಗೆ ಲಭ್ಯವಿದೆ.

ಹಾಗೆಯೇ 23 ಅಲ್ಪವಧಿಯ ಕೋರ್ಸ್‌ಗಳು ಇವೆ. ಕೆಲವು ಐಟಿಐಗಳಲ್ಲಿ ನ.1ರಿಂದ ಮತ್ತು ಇನ್ನು ಕೆಲವು ಐಟಿಐಗಳಲ್ಲಿ ನ.15ರಿಂದ ಕೋರ್ಸ್‌ಗಳು ಆರಂಭವಾಗಲಿದೆ ಎಂದು ಹೇಳಿದರು. ಉದ್ಯೋಗ ಮತ್ತು ತರಬೇತಿ ಇಲಾಖೆ ಆಯುಕ್ತ ಹರೀಶ ಕುಮಾರ ಇದ್ದರು. ಪೀಣ್ಯದಲ್ಲಿ ಮೇಲ್ದರ್ಜೆಗೇರಿಸಿರುವ ಸರ್ಕಾರಿ ಐಟಿಐ ಕೇಂದ್ರ ಪರಿಶೀಲಿಸಿದ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಕೌಶಲ್ಯಾಧಾರಿತ ಬೋಧನಾ ವರ್ಗ ಟಾಟಾ ಟೆಕ್ನಾಲಜಿಸ್‌ನಿಂದ 300ಪೂರ್ಣ ಪ್ರಮಾಣದ ತರಬೇತಿ ಪಡೆದಿರುವ ಸಿಬ್ಬಂದಿ ನೀಡಲಿದ್ದಾರೆ.

ಇವರು ನಮ್ಮಲ್ಲಿರುವ ಶಿಕ್ಷಕರಿಗೆ ತರಬೇತಿ ನೀಡುತ್ತಿದ್ದಾರೆ. ಅಲ್ಲದೆ, ಈ 300 ಸಿಬ್ಬಂದಿ ಮೂರು ವರ್ಷ ನಮ್ಮ ಐಟಿಐಕೇಂದ್ರ ದಲ್ಲೇ ಇರಲಿದೆ. ಕಲಿಕಾ ಗುಣಮಟ್ಟ, ಪಠ್ಯಕ್ರಮದ ಅರಿಯಲು ಕೆಪಿಎಂಜಿಯವರು ನಮ್ಮೊಂದಿಗಿದ್ದಾರೆ.

ಹಾಗೆಯೇ 1500 ಸಿಬ್ಬಂದಿ ಕೆಪಿಎಸ್‌ಇ ಮೂಲಕ ನೇಮಕವಾಗಲಿದೆ. ಪ್ರತಿ ವರ್ಷ ಶೇ.60ರಿಂದ ಶೇ.70ರಷ್ಟು ಐಟಿಐನಲ್ಲಿ ದಾಖಲಾತಿ ಆಗುತ್ತಿದ್ದು, ಪ್ರಸಕ್ತ ಸಾಲಿನಲ್ಲಿ ಶೇ.85ರಷ್ಟು ದಾಖಲಾತಿ ಪ್ರಕ್ರಿಯೆ ಈಗಾಗಲೇ ಪೂರ್ಣಗೊಂಡಿದೆ. ಶೇ.100ರಷ್ಟು ದಾಖಲಾತಿ ಪ್ರಕ್ರಿಯೆಯಾಗಲಿದೆ ಎಂದರು.

ಯಂತ್ರೋಪಕರಣ ಪರಿಶೀಲಿಸಿದ ಸಚಿವರು

 ಬೆಂಗಳೂರು: ಐಟಿಐ ಕೇಂದ್ರದಲ್ಲಿ ಟಾಟಾ ಟೆಕ್ನಾಲಜಿಸ್‌ ಸಹಯೋಗದಲ್ಲಿ ಮತ್ತು ಸರ್ಕಾರದ ವತಿಯಿಂದ ಹೊಸದಾಗಿ ಸ್ಥಾಪಿಸಿರುವ ಪ್ರಯೋಗಾಲ ಯಗಳನ್ನು ಕೇಂದ್ರಕ್ಕೆ ಕೌಶಾಲಾಭಿವೃದ್ಧಿ ಸಚಿವ ಡಾ.ಸಿ.ಎನ್‌.ಅಶ್ವತ್ಥ ನಾರಾಯಣ ವೀಕ್ಷಿಸಿದರು.

ಎಲೆಕ್ಟ್ರಿಕ್‌ ವಾಹನ ಪರಿಶೀಲನೆಯ ಜತೆಗೆ ಅದರಲ್ಲೇ ಕುಳಿತು ತಾವೇ ಚಾಲನೆಯನ್ನು ಮಾಡಿ, ಆವರಣ ದಲ್ಲೇ ಸುತ್ತುಹಾಕಿದರು. ಆಧುನಿಕ ವೆಲ್ಡಿಂಗ್‌ ವಿಧಾ ನದ ಬಗ್ಗೆ ಮಾಹಿತಿ ಪಡೆದು, ಶಿಕ್ಷಕರು, ವಿದ್ಯಾರ್ಥಿಗಳು ಮತ್ತು ಉದ್ಯಮಿಗಳ ಜತೆ ಸಂವಾದ ನಡೆಸಿದರು.

ಐಟಿಐ ವಿದ್ಯಾರ್ಥಿಗಳಿಗೆ ಕೌಶಲ್ಯದ ಜತೆಗೆ ಉದ್ಯೋಗಾವಕಾಶಕ್ಕೆ ಪೂರಕವಾದ ಉದ್ಯಮ ಕೇಂದ್ರೀತ ಪಠ್ಯಕ್ರಮ, ತರಬೇತಿಗೆ ಪೂರಕವಾದ ಮೂಲಸೌಕರ್ಯ, ನವೀನ ತಂತ್ರಜ್ಞಾನದ ಪ್ರಯೋಗಶಾಲೆ, ಉನ್ನತೀಕರಿಸಿದ ಪ್ರಯೋಗಶಾಲೆ, ತಾಂತ್ರಿಕ ಉನ್ನತೀಕರಣಕ್ಕಾಗಿ ಅಳವಡಿಸಿರುವ ಆಧುನಿಕ ಸಿಎನ್‌ಸಿ ಯಂತ್ರ, ಲೇಸರ್‌ ಕಟಿಂಗ್‌ ಯಂತ್ರ, ಆಡಿಟೀವ್‌ ಮ್ಯಾನುಫ್ಯಾಕ್ಟರಿಂಗ್‌, 3 ಡಿ ಪ್ರಿಂಟಿಂಗ್‌ ಮಷೀನ್‌, ಕೈಗಾರಿಕಾ ರೊಬೋಟ್‌ ಇತ್ಯಾದಿ ಪರಿಶೀಲಿಸಿದರು. ನಂತರ ಮಾತನಾಡಿದ ಸಚಿವರು, ಉದ್ಯಮಗಳ ಈಗಿನ ಬೇಡಿಕೆಗೆ ತಕ್ಕಂತೆ ಹೊಸ ಪಠ್ಯಕ್ರಮ ರೂಪಿಸಲಾಗಿದೆ.

ಅಡ್ವಾನ್ಸ್‌ಡ್ ಸಿ.ಎನ್‌.ಸಿ. ಮಷೀನಿಂಗ್‌, ಬೇಸಿಕ್ಸ್‌ ಆಫ್ ಡಿಜೈನ್‌ ಅಂಡ್‌ ವರ್ಚುವಲ್ ವೆರಿಫಿಕೇಷನ್‌, ಆರ್ಟಿಸಾನ್‌ ಯೂಸಿಂಗ್‌ ಅಡ್ವಾನ್ಸ್‌ಡ್ ಟೂಲ್ಸ್‌, ಇಂಡಸ್ಟ್ರಿಯಲ್‌ ರೊಬೊಟಿಕ್ಸ್‌ ಆ್ಯಂಡ್‌ ಡಿಜಿಟಲ್‌ ಮ್ಯಾನುಫ್ಯಾಕ್ಚರಿಂಗ್‌, ಮ್ಯಾನುಫ್ಯಾಕ್ಚರಿಂಗ್‌ ಪ್ರೊಸೆಸ್‌ ಕಂಟ್ರೋಲ್‌ ಅಂಡ್‌ ಆಟೋಮೇಷನ್‌ ಮತ್ತು ಮೆಕ್ಯಾನಿಕ್‌ ಎಲೆಕ್ಟ್ರಿಕ್‌ ವೆಹಿಕಲ್‌ ಮೊದಲಾದ ಹೊಸ ತಂತ್ರಜ್ಞಾನದ ಕಲಿಕೆ ಐಟಿಐ ವಿದ್ಯಾರ್ಥಿಗಳಿಗೆ ಸಿಗಲಿದೆ ಎಂದರು.

ಈ ಸಂಸ್ಥೆಗಳಲ್ಲಿ ಜೆಟಿಒಗಳಿಗೆ ಹೊಸ ತಾಂತ್ರಿಕತೆಗಳಲ್ಲಿ ತರಬೇತಿ ನೀಡಲಾಗುತ್ತದೆ. ಇದರಿಂದ ಪ್ರತಿವರ್ಷ 20,000 ಜೆಟಿಒ ಗಳಿಗೆ ಅನುಕೂಲವಾಗುತ್ತದೆ. ಹಾಗೆಯೇ ಐಟಿಐ, ಪಾಲಿಟೆಕ್ನಿಕ್‌ ಮತ್ತು ಎಂಜಿನಿಯರಿಂಗ್‌ ಕಾಲೇಜುಗಳ ಸುಮಾರು 1 ಲಕ್ಷ ವಿದ್ಯಾರ್ಥಿಗಳಿಗೆ ಪ್ರತಿ ವರ್ಷ ಪ್ರಯೋಜನವಾಗುತ್ತದೆ. ಟಾಟಾ ಟೆಕ್ನಾಲಜಿಸ್‌ ನೊಂದಿಗೆ ದೀರ್ಘಾವಧಿ ಸಹಭಾಗಿತ್ವ ಹೊಂದುವ ಉದ್ದೇಶವಿದ್ದು ಮೊದಲ ಎರಡು ವರ್ಷಗಳಿಗಾಗಿ 300 ಹಾಗೂ ಮೂರನೇ ವರ್ಷಕ್ಕಾಗಿ 150 ವಿಷಯ ಪರಿಣತರನ್ನು ನಿಯೋಜಿಸಲಾಗುತ್ತದೆ.

ಇದನ್ನೂ ಓದಿ;- 100 ಕೋಟಿ ಜನರಿಗೆ ಲಭಿಸಿದೆ ಲಸಿಕೆ ಲಾಭ

ಇದರಿಂದ ಜೆಟಿಒ ಗಳಿಗೆ ಹಾಗೂ ಐಟಿಐ ಬೋಧಕ ಸಿಬ್ಬಂದಿಗೆ ಹೊಸ ರೀತಿಯ ತರಬೇತಿಗಳ ಬಗ್ಗೆ ಮಾರ್ಗದರ್ಶನವೂ ಸಿಗಲಿದೆ ಎಂದು ಹೇಳಿದರು. ಯಂತ್ರೋಪಕರಣಗಳನ್ನು ಸುಸಜ್ಜಿತ ಸ್ಥಿತಿಯಲ್ಲಿ ಇರಿಸುವುದಕ್ಕಾಗಿ 5 ವರ್ಷಗಳ ನಿರ್ವಹಣಾ ಒಪ್ಪಂದವನ್ನು ಮಾಡಿಕೊಂಡಿದ್ದೇವೆ. ಅಗತ್ಯಬಿದ್ದರೆ ಇದನ್ನು ಇನ್ನೂ 5 ವರ್ಷಗಳಿಗೆ ಹೆಚ್ಚಿಸಲಾಗುತ್ತದೆ.

ಹಾಗೆಯೇ 150 ಐಟಿಐ ಸಂಸ್ಥೆಗಳಿಗೆ ಅಳವಡಿಸಿರುವ 11 ದೀರ್ಘಾವಧಿ ತರಬೇತಿ ಹಾಗೂ 23 ಅಲ್ಪಾವಧಿ ತರಬೇತಿ ಕೋರ್ಸ್‌ಗಳನ್ನು ಕ್ರಮೇಣ ಎಲ್ಲ ಐಟಿಐಗಳಿಗೆ ವಿಸ್ತರಿಸಲಾಗುತ್ತದೆ ಎಂದರು. ಉದ್ಯೋಗ ಮತ್ತು ತರಬೇತಿ ಇಲಾಖೆ ಆಯುಕ್ತ ಹರೀಶ ಕುಮಾರ, ಟಾಟಾ ಟೆಕ್ನಾಲಜಿಸ್‌ನ ಪ್ರತಿನಿಧಿಗಳು, ಐಟಿಐ ಪ್ರಾಂಶುಪಾಲರು, ಬೋಧಕ, ಬೋಧಕೇತರ ವರ್ಗ, ವಿದ್ಯಾರ್ಥಿಗಳು ಇದ್ದರು.

ಟಾಪ್ ನ್ಯೂಸ್

UV-Navaroopa

Manipal: ಗ್ರಾಮೀಣ ಓದುಗರ ಸ್ಪಂದನೆಯೇ ಯಶಸ್ಸು: ಎಂಡಿ, ಸಿಇಒ ವಿನೋದ್‌ ಕುಮಾರ್‌

uppunda1

Uppunda: ಶ್ರೀದುರ್ಗಾಪರಮೇಶ್ವರಿ ಅಮ್ಮನವರ ಸಂಭ್ರಮದ ಮನ್ಮಹಾರಥೋತ್ಸವ

Govinda-pai-Book

Udupi: ಗೋವಿಂದ ಪೈಗಳ ಸಂಶೋಧನ ಬರಹಗಳು ಸಮಗ್ರತೆಯ ಹೂರಣ: ಡಾ.ವಿವೇಕ್‌ ರೈ

DK SHI NEW

MLAs 50 ಕೋಟಿ ರೂ.; ಸಾಕ್ಷಿ ಕೊಡುವ ಹೊಣೆ ಯತ್ನಾಳ್‌ದು: ಡಿಕೆಶಿ

Patla-yakshadruva

Mangaluru: ಎಲ್ಲ ವರ್ಗದ ಜನರ ಸಹಕಾರದಿಂದ ಸಾಮಾಜಿಕ ಸಾಧನೆ: ಕನ್ಯಾನ ಸದಾಶಿವ ಶೆಟ್ಟಿ

Vijayendra (2)

Congress 40 ಪರ್ಸೆಂಟ್‌ ಕಮಿಷನ್‌ ಆರೋಪ ಸುಳ್ಳೆಂದು ಸಾಬೀತು: ಬಿಜೆಪಿ

police

Belgavi; ವೇಶ್ಯಾವಾಟಿಕೆ ಆರೋಪ: ತಾಯಿ, ಮಗಳನ್ನು ರಸ್ತೆಗೆ ಎಳೆದು ಹಲ್ಲೆ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

14-darshan

Actor Darshan ವಿರುದ್ದ ಸುಪ್ರೀಂನಲ್ಲಿ ಮೇಲ್ಮನವಿ: ಬೆಂಗ್ಳೂರು ಕಮೀಷನರ್‌

11-KEA-exam

Bengaluru: 54 ಎಂಜಿನಿಯರಿಂಗ್‌ ಸೀಟ್‌ ಬ್ಲಾಕ್‌: ಕೆಇಎ ಶಂಕೆ

6

Bengaluru: ಕಸವನ್ನು ಗೊಬ್ಬರವಾಗಿಸುವ “ಕಪ್ಪು ಸೈನಿಕ ನೊಣ’!

3-beehive

Bengaluru: ಇನ್ಮುಂದೆ ಜೇನುಗೂಡು ಕಟ್ಟಬೇಕಿಲ್ಲ; 3ಡಿ ಗೂಡು ಆವಿಷ್ಕಾರ!

4-cock

Bengaluru: ಮಾಂಸದ ನಾಟಿ ಕೋಳಿಗೆ ಭರ್ಜರಿ ಡಿಮ್ಯಾಂಡ್‌!

MUST WATCH

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

ಹೊಸ ಸೇರ್ಪಡೆ

UV-Navaroopa

Manipal: ಗ್ರಾಮೀಣ ಓದುಗರ ಸ್ಪಂದನೆಯೇ ಯಶಸ್ಸು: ಎಂಡಿ, ಸಿಇಒ ವಿನೋದ್‌ ಕುಮಾರ್‌

puttige-4

Udupi; ಗೀತಾರ್ಥ ಚಿಂತನೆ 96 : ವ್ಯಾಮೋಹ ಜಾಲ vs ಜಾಗೃತಾತ್ಮ

uppunda1

Uppunda: ಶ್ರೀದುರ್ಗಾಪರಮೇಶ್ವರಿ ಅಮ್ಮನವರ ಸಂಭ್ರಮದ ಮನ್ಮಹಾರಥೋತ್ಸವ

Govinda-pai-Book

Udupi: ಗೋವಿಂದ ಪೈಗಳ ಸಂಶೋಧನ ಬರಹಗಳು ಸಮಗ್ರತೆಯ ಹೂರಣ: ಡಾ.ವಿವೇಕ್‌ ರೈ

DK SHI NEW

MLAs 50 ಕೋಟಿ ರೂ.; ಸಾಕ್ಷಿ ಕೊಡುವ ಹೊಣೆ ಯತ್ನಾಳ್‌ದು: ಡಿಕೆಶಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.