Consumer Court: ದೋಷಪೂರಿತ ಇವಿ ದ್ವಿಚಕ್ರ ವಾಹನ ಕೊಟ್ಟ ಕಂಪನಿಗೆ ಕೋರ್ಟ್‌ನಿಂದ 2ಲಕ್ಷ ದಂಡ

Team Udayavani, Oct 21, 2024, 1:27 PM IST

Consumer Court: ದೋಷಪೂರಿತ ಇವಿ ದ್ವಿಚಕ್ರ ವಾಹನ ಕೊಟ್ಟ ಕಂಪನಿಗೆ ಕೋರ್ಟ್‌ನಿಂದ 2ಲಕ್ಷ ದಂಡ

ಬೆಂಗಳೂರು: ಗ್ರಾಹಕನಿಗೆ ದೋಷಪೂರಿತ ವಾಹನ ನೀಡಿ ಗ್ರಾಹಕ ಸೇವೆ ನೀಡುವಲ್ಲಿ ವಿಫ‌ಲವಾದ ಪ್ರತಿಷ್ಟಿತ ಎಲೆಕ್ಟ್ರಿಕ್‌ ದ್ವಿಚಕ್ರವಾಹನ ಕಂಪನಿಗೆ ಗ್ರಾಹಕ ನ್ಯಾಯಾಲಯವು 1.95 ಲಕ್ಷ ರೂ. ದಂಡ ವಿಧಿಸಿ ತೀರ್ಪು ನೀಡಿದೆ.

ಬೆಂಗಳೂರಿನ ಆರ್‌.ಟಿ. ನಗರದ ನಿವಾಸಿಯೊಬ್ಬರು 2023ರ ಜುಲೈನಲ್ಲಿ ಎಲೆಕ್ಟ್ರಿಕ್‌ ವಾಹನ ಖರೀದಿಸಿದರು. ಅವರು ತಮ್ಮ ಹಳೇ ವಾಹನವನ್ನು 37,500 ರೂ.ಗೆ ಮಾರಾಟ ಮಾಡಿದ ಹಣ ಹಾಗೂ ಹೆಚ್ಚುವರಿ 5000 ರೂ. ಬುಕ್ಕಿಂಗ್‌ ಮೊತ್ತವನ್ನು ಪಾವತಿಸಿ, 24 ತಿಂಗಳಿಗೆ ಇಎಂಐನಂತೆ ಒಟ್ಟು 1.87 ಲಕ್ಷ ರೂ. ಮೊತ್ತದ ಎಲೆಕ್ಟ್ರಿಕ್‌ ವಾಹನ ಖರೀದಿಸಿದ್ದ‌ರು.

ವಾಹನ ಖರೀದಿಸಿದ ತಿಂಗಳಲ್ಲಿ ದೋಷಗಳು ಕಂಡುಬಂದವು. ಬೈಕ್‌ ಓಡಿಸುವಾಗ ಸ್ಪೀಡೋ ಮೀಟರ್‌ನ ಕಾರ್ಯಾಚರಣೆ ಸ್ಥಗಿತವಾಗಿದೆ. ಇನ್ನೂ ಬೈಕ್‌ನ ಇಂಡಿಕೇಟರ್‌ ಕೂಡ ಕೆಲಸ ಮಾಡುತ್ತಿರಲಿಲ್ಲ. ಈ ಸಮಸ್ಯೆ ಪ್ರತಿ ನಾಲ್ಕೈದು ದಿನಗಳಿಗೊಮ್ಮೆ ಕಾಣಿಸಿಕೊಳ್ಳುತ್ತಿತ್ತು. ಈ ಕುರಿತು ಗ್ರಾಹಕ ಸೇವೆ ಸಿಬ್ಬಂದಿಗೆ ದೂರು ನೀಡಿದ್ದರು.‌ ಅನೇಕ ಬಾರಿ ರಿಪೇರಿ ಮಾಡಿಸಿದರೂ ಬೈಕ್‌ನ ಸ್ಪಾಫ್ಟ್ì ವೇರ್‌ನಿಂದಾಗಿ ಮತ್ತೆ ಅದೇ ಸಮಸ್ಯೆ ಮರುಕಳಿಸುತ್ತಿತ್ತು. ಇದರಿಂದ ಬೇಸತ್ತ ಗ್ರಾಹಕ ಹೊಸ ಬೈಕ್‌ ರಿಪ್ಲೇಸ್‌ ಮಾಡುವಂತೆ ಮ್ಯಾನೇಜರ್‌ಗೆ ಮನವಿ ಮಾಡಿದ್ದರು.

ದೋಷಪೂರಿತ ಬೈಕ್‌ ಸರಿಪಡಿಸುವಲ್ಲಿ ವಿಫ‌ಲವಾದ ಹಾಗೂ ಬೈಕ್‌ ರಿಪ್ಲೇಸ್‌ ಮಾಡಲು ಒಪ್ಪದ ಕಂಪನಿಯ ವಿರುದ್ಧ ಬೆಂಗಳೂರು 2ನೇ ಹೆಚ್ಚುವರಿ ಗ್ರಾಹಕ ವ್ಯಾಜ್ಯಗಳ ನ್ಯಾಯಲಯಕ್ಕೆ ದೂರು ನೀಡಿದ್ದರು. ಈ ವೇಳೆ ಕಸ್ತೂರಿ ನಗರದ ಆರ್‌ಟಿಒನಲ್ಲಿ ದ್ವಿಚಕ್ರ ವಾಹನವನ್ನು ಪರಿಶೀಲಿಸಲಾಗಿದೆ. ವಾಹನದಲ್ಲಿ ಡೀಸ್‌ ಪ್ಲೇ ಸಮಸ್ಯೆ, ಹ್ಯಾಂಡಲ್‌ ಸೇರಿದಂತೆ ವಿವಿಧ ದೋಷಗಳಿವೆ ಎಂದು ವಾಹನ ತಪಾಸಣಾ ಅಧಿಕಾರಿಗಳು ವರದಿ ಮಾಡಿದ್ದಾರೆ. ಈ ವೇಳೆ ಮೂಲ ಮೊತ್ತ ಹಾಗೂ ಪರಿಹಾರ ಸೇರಿದಂತೆ 1.95 ಲಕ್ಷ ರೂ. ಪರಿಹಾರ ನೀಡುವಂತೆ ಮನವಿ ಮಾಡಿದ್ದಾರೆ.

ದೂರದಾರರ ಸಾಕ್ಷಿಯನ್ನು ಪರಿಶೀಲಿಸಿದ ಗ್ರಾಹಕ ನ್ಯಾಯಾಲಯವು, ಗ್ರಾಹಕ ಪಾವತಿಸಿದ 1.54 ಲಕ್ಷ ರೂ.ಗೆ ಶೇ.8ರ ಬಡ್ಡಿ ದರದಲ್ಲಿ ಪಾವತಿ, ಮಾನಸಿಕ ಹಿಂಸೆಗೆ 30 ಸಾವಿರ ರೂ. 10 ಸಾವಿರ ಕೋರ್ಟ್‌ ಬಾಬ್ತು ಸೇರಿದಂತೆ ಒಟ್ಟು 1.95 ಲಕ್ಷ ರೂ.ವನ್ನು ನವೆಂಬರ್‌ ಅಂತ್ಯದೊಳಗೆ ಪಾವತಿಸುವಂತೆ ಎಲೆಕ್ಟ್ರಿಕ್‌ ದ್ವಿಚಕ್ರವಾಹನ ಕಂಪನಿಗೆ ಸೂಚಿಸಿದೆ.

ಟಾಪ್ ನ್ಯೂಸ್

IPL Mega Auction; 2 day event in Riyadh; IPL Mega Auction Date Revealed

IPL Mega Auction: ರಿಯಾದ್‌ ನಲ್ಲಿ 2 ದಿನದ ಇವೆಂಟ್; ಮೆಗಾ ಹರಾಜಿನ ದಿನಾಂಕ ಬಹಿರಂಗ

Sagara: ರೈತರ ವಿವಿಧ ಭೂಹಕ್ಕು ಮಂಜೂರಾತಿಗೆ ಒತ್ತಾಯಿಸಿ ಅಹೋರಾತ್ರಿ ಧರಣಿ

Sagara: ರೈತರ ವಿವಿಧ ಭೂಹಕ್ಕು ಮಂಜೂರಾತಿಗೆ ಒತ್ತಾಯಿಸಿ ಅಹೋರಾತ್ರಿ ಧರಣಿ

2

Actress Oviya Helen: ನನ್ನ ಖಾಸಗಿ ವಿಡಿಯೋ ಲೀಕ್‌ ಮಾಡಿದ್ದು ಅವನೇ.. ನಟಿ ಓವಿಯಾ

Prajwal Revanna Case: High Court dismisses PIL against Rahul Gandhi

Prajwal Revanna Case: ರಾಹುಲ್‌‌ ಗಾಂಧಿ ವಿರುದ್ದದ ಪಿಐಎಲ್ ವಜಾ ಮಾಡಿದ ಹೈಕೋರ್ಟ್

High Court : ಪ್ರಜ್ವಲ್ ರೇವಣ್ಣ ಜಾಮೀನು ಅರ್ಜಿಗಳನ್ನು ವಜಾಗೊಳಿಸಿದ ಹೈಕೋರ್ಟ್

Chittapura: ಚಾಲಕನ ನಿಯಂತ್ರಣ ತಪ್ಪಿ ನದಿಗೆ ಬಿದ್ದ ಕಾರು… ಚಾಲಕ ಮೃತ್ಯು, ಇಬ್ಬರಿಗೆ ಗಾಯ

Chittapura: ಚಾಲಕನ ನಿಯಂತ್ರಣ ತಪ್ಪಿ ನದಿಗೆ ಬಿದ್ದ ಕಾರು… ಚಾಲಕ ಮೃತ್ಯು, ಇಬ್ಬರಿಗೆ ಗಾಯ

Vettaiyan: ಈ ದಿನ ಓಟಿಟಿಗೆ ಬರಲಿದೆ ರಜಿನಿ ʼವೆಟ್ಟೈಯನ್‌ʼ?; ಇದುವರೆಗಿನ ಗಳಿಕೆ ಎಷ್ಟು?

Vettaiyan: ಈ ದಿನ ಓಟಿಟಿಗೆ ಬರಲಿದೆ ರಜಿನಿ ʼವೆಟ್ಟೈಯನ್‌ʼ?; ಇದುವರೆಗಿನ ಗಳಿಕೆ ಎಷ್ಟು?

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Fraud: ವಿದೇಶದಲ್ಲಿ ಉದ್ಯೋಗ‌ ಕೊಡಿಸುವುದಾಗಿ 9 ಲಕ್ಷ ವಂಚನೆ: ಮೂವರ ವಿರುದ್ಧ ಕೇಸ್‌ 

Fraud: ವಿದೇಶದಲ್ಲಿ ಉದ್ಯೋಗ‌ ಕೊಡಿಸುವುದಾಗಿ 9 ಲಕ್ಷ ವಂಚನೆ: ಮೂವರ ವಿರುದ್ಧ ಕೇಸ್‌ 

0527

Bengaluru: ತಂದೆ ಸಾಲದ ಹಣ ವಾಪಸ್‌ ಕೊಡದಕ್ಕೆ ಬಾಲಕಿ ಮೇಲೆ ರೇಪ್‌

031

Bengaluru: ನೌಕರಿ ಕೊಡಿಸುವುದಾಗಿ 47 ಲಕ್ಷ ರೂ. ದೋಚಿದ ಪೊಲೀಸ್‌

5

Bengaluru: ಕುಡಿದು ಗಲಾಟೆ ಮಾಡುತ್ತಿದ್ದ ಮಗನ ಕೊಂದ ಅಪ್ಪ!

4

Crime: ಹೆಂಡತಿಯನ್ನು ಮಾಂಸ ಕತ್ತರಿಸುವ  ಮಚ್ಚಿನಿಂದ ಕೊಂದ ಕೋಳಿ ವ್ಯಾಪಾರಿ

MUST WATCH

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಕಪ್ಪುಪಟ್ಟಿ ತೆಗೆಸಿದ ಚೀಫ್ ಜಸ್ಟೀಸ್ ಆಫ್ ಇಂಡಿಯಾ!

udayavani youtube

ಯಾಹ್ಯಾ ಸಿನ್ವಾರ್ ಹತ್ಯೆಯ ಡ್ರೋನ್ ವಿಡಿಯೋ ಬಿಡುಗಡೆ ಮಾಡಿದ ಇಸ್ರೇಲ್

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಅಗಲಿದ ರತನ್ ಟಾಟಾಗೆ ಶ್ರದ್ಧಾಂಜಲಿ ಸಲ್ಲಿಸಿದ ಅಂಬಾನಿ ಕುಟುಂಬ

ಹೊಸ ಸೇರ್ಪಡೆ

IPL Mega Auction; 2 day event in Riyadh; IPL Mega Auction Date Revealed

IPL Mega Auction: ರಿಯಾದ್‌ ನಲ್ಲಿ 2 ದಿನದ ಇವೆಂಟ್; ಮೆಗಾ ಹರಾಜಿನ ದಿನಾಂಕ ಬಹಿರಂಗ

Nanjanagud: ಎತ್ತಿನ ಮೈ ಮೇಲೆ ನಟ ದರ್ಶನ್‌ ಖೈದಿ ಸಂಖ್ಯೆ

Nanjanagud: ಎತ್ತಿನ ಮೈ ಮೇಲೆ ನಟ ದರ್ಶನ್‌ ಖೈದಿ ಸಂಖ್ಯೆ

Sagara: ರೈತರ ವಿವಿಧ ಭೂಹಕ್ಕು ಮಂಜೂರಾತಿಗೆ ಒತ್ತಾಯಿಸಿ ಅಹೋರಾತ್ರಿ ಧರಣಿ

Sagara: ರೈತರ ವಿವಿಧ ಭೂಹಕ್ಕು ಮಂಜೂರಾತಿಗೆ ಒತ್ತಾಯಿಸಿ ಅಹೋರಾತ್ರಿ ಧರಣಿ

ಪರಿಶಿಷ್ಟರ ಮೇಲೆ ದೌರ್ಜನ್ಯ; 7 ವರ್ಷದಲ್ಲಿ 488 ಪ್ರಕರಣ!

ಪರಿಶಿಷ್ಟರ ಮೇಲೆ ದೌರ್ಜನ್ಯ; 7 ವರ್ಷದಲ್ಲಿ 488 ಪ್ರಕರಣ!

2

Actress Oviya Helen: ನನ್ನ ಖಾಸಗಿ ವಿಡಿಯೋ ಲೀಕ್‌ ಮಾಡಿದ್ದು ಅವನೇ.. ನಟಿ ಓವಿಯಾ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.