Bangalore: ಅಪಘಾತ ಎಸಗಿದ ಬೈಕ್ ಸವಾರನಿಗೆ 2 ತಿಂಗಳ ಜೈಲು
Team Udayavani, Nov 19, 2023, 10:52 AM IST
ಬೆಂಗಳೂರು: ರೆಡ್ ಸಿಗ್ನಲ್ ಬಿದ್ದಿದ್ದರೂ ಅತೀವೇಗ ಮತ್ತು ನಿರ್ಲಕ್ಷ್ಯದಿಂದ ವಾಹನ ಚಲಾಯಿಸಿ ವೃದ್ಧರೊಬ್ಬರ ಸಾವಿಗೆ ಕಾರಣವಾದ ಬೈಕ್ ಸವಾರನಿಗೆ ಕೋರ್ಟ್ ಆರು ವರ್ಷಗಳ ಬಳಿಕ ಎರಡು ತಿಂಗಳ ಶಿಕ್ಷೆ ಹಾಗೂ ದಂಡ ವಿಧಿಸಿದೆ.
ನಗರದ ನಿವಾಸಿ ಪ್ರಕಾಶ್ ಕುಂಬಾರ್ ಶಿಕ್ಷೆಗೊಳಗಾದ ದ್ವಿಚಕ್ರ ವಾಹನ ಸವಾರ. ಆರು ವರ್ಷಗಳ ಹಿಂದೆ ನಡೆದ ರಸ್ತೆ ಅಪಘಾತದಲ್ಲಿ ವಿ.ಎಸ್.ರಾಜಕುಮಾರ್(68) ಎಂಬುವರು ಮೃತಪಟ್ಟಿದ್ದರು. 2017ರ ಮೇ 12ರಂದು ಮೃತರಾದ ರಾಜಕುಮಾರ್ ಬೈಕ್‌ನಲ್ಲಿ ಕಮರ್ಷಿಯಲ್ ಸ್ಟ್ರೀಟ್ ಕಡೆಯಿಂದ ಎಂ.ಜಿ.ಸ್ತೆ ಕಡೆ ಹೋಗುತ್ತಿದ್ದರು. ಅದೇ ವೇಳೆ ಕಬ್ಬನ್ ರಸ್ತೆ ಮಣಿಪಾಲ್ ಸೆಂಟರ್ ಕಡೆಯಿಂದ ಬಿ.ಆರ್.ವಿ. ಜಂಕ್ಷನ್ ಕಡೆ ಬರುತ್ತಿದ್ದ ಅಪರಾಧಿ ಪ್ರಕಾಶ್ ಕುಂಬಾರ್ ರೆಡ್ ಸಿಗ್ನಲ್ ಬಂದಿದ್ದರೂ ಅತೀವೇಗ ಮತ್ತು ನಿರ್ಲಕ್ಷ್ಯ ದಿಂದ ಬೈಕ್ ಚಾಲನೆ ಮಾಡಿ ರಾಜ್‌ಕುಮಾರ್ ಬೈಕ್‌ಗೆ ಡಿಕ್ಕಿ ಹೊಡೆದಿದ್ದ. ಪರಿಣಾಮ ಕೆಳಗೆ ಬಿದ್ದಿದ್ದ ರಾಜ್‌ಕುಮಾರ್ ತಲೆಗೆ ಗಂಭೀರ ಪೆಟ್ಟು ಬಿದ್ದಿತ್ತು ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ನಿಮ್ಹಾನ್ಸ್‌ಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ರಾಜಕುಮಾರ್ 2017ರ ಮೇ 17ರಂದು ಮೃತಪಟ್ಟಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿ ಕೊಂಡಿದ್ದ ಶಿವಾಜಿನಗರ ಸಂಚಾರ ಪೊಲೀ ಸರು ಆರೋಪಿಯ ವಿರುದ್ಧ ಕೋರ್ಟ್‌ಗೆ ಆರೋಪಪಟ್ಟಿ ಸಲ್ಲಿಸಿ ದ್ದರು.ಈ ಸಂಬಂಧ ವಿಚಾರಣೆ ನಡೆಸಿದ ಕೋರ್ಟ್ ಆರೋಪಿಗೆ 60 ದಿನಗಳ ಕಾಲ ಸದಾ ಶಿಕ್ಷೆ ಹಾಗೂ 11,500 ರೂ. ದಂಡ ವಿಧಿಸಿದೆ ಎಂದು ಸಂಚಾರ ಪೊಲೀಸರು ಮಾಹಿತಿ ನೀಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Brutal: ಪತ್ನಿ, ಇಬ್ಬರು ಮಕ್ಕಳನ್ನು ಮಚ್ಚಿನಿಂದ ಕೊಚ್ಚಿ ಕೊಂದ ಪತಿ!
Naxals Surrender: ಮುಖ್ಯಮಂತ್ರಿ ಸಮ್ಮುಖ ಶಸ್ತ್ರಾಸ್ತ್ರ ತ್ಯಜಿಸಿ ಶರಣಾದ 6 ನಕ್ಸಲರು
Bengaluru: ಪಾಲುದಾರನ ಕಿರುಕುಳ: ಉದ್ಯಮಿ ಆತ್ಮಹತ್ಯೆ
Atul Subhash Case: ಮೊಮ್ಮಗನನ್ನು ಟೆಕಿ ಅತುಲ್ ತಾಯಿಯ ಸುಪರ್ದಿಗೆ ವಹಿಸಲು ಸುಪ್ರೀಂ ನಕಾರ
illegal Investigation: ಬಿಬಿಎಂಪಿ ಮುಖ್ಯ ಎಂಜಿನಿಯರ್ ಕಚೇರಿ ಮೇಲೆ ಇ.ಡಿ. ದಾಳಿ
MUST WATCH
ಹೊಸ ಸೇರ್ಪಡೆ
Dinner Politics: ಊಟ, ಅಜೆಂಡಾ ನಮ್ಮದು, ಬೇರೆಯವರಿಗೆ ಆತಂಕ ಏಕೆ?: ಸತೀಶ್ ಜಾರಕಿಹೊಳಿ
CLP Meeting: ಜ.13ರಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ
Cyber Crime: ನಯ ವಂಚಕರ ಬಹುರೂಪಕ್ಕೆ ಮರುಳಾಗಬೇಡಿ!
Governer Meet CM: ಸಿ.ಟಿ.ರವಿ ಪ್ರಕರಣ: ಮುಖ್ಯಮಂತ್ರಿ ವರದಿ ಕೇಳಿದ ರಾಜ್ಯಪಾಲ ಗೆಹ್ಲೋಟ್
Daily Horoscope: ಅನಿರೀಕ್ಷಿತ ಘಟನೆಗಳಿಂದ ಕಂಗೆಡದಿರಿ, ಉದ್ಯೋಗ ಸ್ಥಾನದಲ್ಲಿ ಯಥಾಸ್ಥಿತಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.