ಆಹಾರ ಇಲಾಖೆ ಆಯುಕ್ತ ಹುದ್ದೆಗೆ 20 ಬಾರಿ ವರ್ಗಾವಣೆ ಭಾಗ್ಯ
Team Udayavani, Jan 23, 2018, 11:59 AM IST
ಬೆಂಗಳೂರು: ಮುಖ್ಯಮಂತ್ರಿಯವರ ಮಹತ್ವಕಾಂಕ್ಷೆಯ “ಅನ್ನಭಾಗ್ಯ’ ಯೋಜನೆಯ ಅನುಷ್ಠಾನದ ಹೊಣೆ ಹೊತ್ತಿರುವ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಆಯುಕ್ತರ ಹುದ್ದೆ ಎಂಬುದು ಶಾಲಾ ಮಕ್ಕಳ “ಕುರ್ಚಿಯಾಟ’ ಆದಂತಾಗಿದೆ.
ಕಳೆದ ನಾಲ್ಕೂವರೆ ವರ್ಷದಲ್ಲಿ ಬರೊಬ್ಬರಿ 19 ಆಯುಕ್ತರು ಈ ಇಲಾಖೆಗೆ ಬಂದು ಹೋಗಿದ್ದು, ಈಗ ಹೊಸ ಆಯುಕ್ತರನ್ನಾಗಿ ರಾಮನಗರ ಜಿಲ್ಲಾಧಿಕಾರಿಯಾಗಿದ್ದ ಡಾ. ಬಿ.ಆರ್. ಮಮತಾ ಅವರನ್ನು ಸರ್ಕಾರ ಸೋಮವಾರ ವರ್ಗಾವಣೆ ಮಾಡಿದೆ. ಅದರಂತೆ ಇಲಾಖೆಗೆ 20ನೇ ಆಯುಕ್ತರು ಬಂದಂತಾಗಿದೆ.
ಯಾವುದೇ ಇಲಾಖೆಯ ಯೋಜನೆ ಮತ್ತು ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುವಲ್ಲಿ ಆಯುಕ್ತರ ಪಾತ್ರ ಮುಖ್ಯವಾಗಿರುತ್ತದೆ. ಸಿದ್ದರಾಮಯ್ಯ ಸರ್ಕಾರದ ಬ್ಯಾಂಡ್ ಯೋಜನೆಯಾಗಿರುವ ಅನ್ನಭಾಗ್ಯ ಯೋಜನೆಯನ್ನು ಅನುಷ್ಠಾನಗೊಳಿಸಬೇಕಾದ ಆಯುಕ್ತರೇ “ಹೀಗೆ ಬಂದು ಹಾಗೆ ಹೋಗಿದ್ದಾರೆ’.
ಐಎಎಸ್ ಅಧಿಕಾರಿಗಳನ್ನು ಈ ನಾಲ್ಕೂವರೆ ವರ್ಷದ ಅವಧಿಯಲ್ಲಿ ಆಯುಕ್ತರನ್ನಾಗಿ ನೇಮಕ ಮಾಡಲಾಗಿದೆ. ಇದರಲ್ಲಿ ಮನೋಜ್‌ಕುಮಾರ್ ಮೀನಾ ಕೇವಲ ಮೂರು ದಿನಕ್ಕೆ ಆಯುಕ್ತರಾಗಿದ್ದ ಉದಾಹರಣೆಯಿದೆ.
ಉಳಿದಂತೆ ಜೆ. ಕಲ್ಪನಾ, ನವೀನ್‌ರಾಜ್ ಸಿಂಗ್, ಆರ್.ಆರ್. ಜನ್ನು, ಆಜಯ್ ನಾಗಭೂಷಣ್ ಆಯುಕ್ತರಾಗಿ ಬಂದು ಹೋದರು. ಈಗಿದ್ದ ವಿ.ಚೈತ್ರಾ ಕಳೆದ ವರ್ಷ ಜುಲೈ ತಿಂಗಳಲ್ಲಷ್ಟೇ ಆಯುಕ್ತರಾಗಿ ಬಂದಿದ್ದರು. ಈಗ ಅವರೂ ವರ್ಗಾವಣೆಗೊಂಡಿದ್ದು, ಆ ಜಾಗಕ್ಕೆ ಮಮತಾ ಬಂದಿದ್ದಾರೆ.
ಸುದ್ದಿ ಮಾಡಿತ್ತು ತಿವಾರಿ ಸಾವು: 2016ರ ಆರಂಭದಲ್ಲಿ ಆಯುಕ್ತರಾಗಿದ್ದ ಬಂದಿದ್ದ ಅನುರಾಗ್ ತಿವಾರಿ, ಅದೇ ವರ್ಷ ಮೇ 17ರಂದು ಉತ್ತರ ಪ್ರದೇಶದ ಲಖನೌದಲ್ಲಿ ನಿಗೂಢವಾಗಿ ಸಾವನ್ನಪ್ಪಿದ್ದರು. ಈ ಪ್ರಕರಣ ರಾಜಕೀಯ ವಲಯದಲ್ಲಿ ಸಾಕಷ್ಟು ಗಲಾಟೆ ಸೃಷ್ಟಿಸಿತ್ತು. ಆಹಾರ ಇಲಾಖೆಯ ಹಗರಣಗಳನ್ನು ಬಯಲಿಗೆಳೆಯಲು ಮುಂದಾಗಿದ್ದಕ್ಕೆ ತಿವಾರಿ ಹತ್ಯೆ ಮಾಡಲಾಗಿದೆ ಎಂದು ಸರ್ಕಾರದ ವಿರುದ್ಧ ಗಂಭೀರ ಆರೋಪಗಳು ಕೇಳಿ ಬಂದಿದ್ದವು. ಈ ಪ್ರಕರಣದ ತನಿಖೆ ಸಿಬಿಐ ನಡೆಸುತ್ತಿದೆ.
ದುರ್ಬಲ ಆಡಳಿತಕ್ಕೆ ಸಾಕ್ಷಿ: ಒಂದು ಇಲಾಖೆಯಲ್ಲಿ ನಾಲ್ಕೂವರೆ ವರ್ಷದಲ್ಲಿ 20 ಜನ ಆಯುಕ್ತರು ಬರುತ್ತಾರೆ ಎಂದರೆ ಸರ್ಕಾರಕ್ಕೆ ನಾಚಿಕೆಗೇಡಿನ ಸಂಗತಿ. ದುರ್ಬಲ ಆಡಳಿತ ವ್ಯವಸ್ಥೆಗೆ ಇದು ಸಾಕ್ಷಿ. ಆಹಾರ ಇಲಾಖೆಯಲ್ಲಿ ಹಿರಿಯ ಅಧಿಕಾರಿಗಳ ನಡುವಿನ ಹೊಂದಾಣಿಕೆ ಮತ್ತು ಗೊಂದಲಗಳೇ ಇದಕ್ಕೆ ಕಾರಣ.
ತಿಂಗಳಿಗೊಂದು ಕಾನೂನು, ದಿನಕ್ಕೊಂದು ನೀತಿ ಜಾರಿಗೆ ಬರುವ ಈ ಇಲಾಖೆಯಲ್ಲಿ ಕೆಲಸ ಮಾಡಲು ಯಾರಿಗೂ ಮನಸ್ಸಿಲ್ಲ. ವರ್ಗಾವಣೆಯಾಗಿ ಬಂದವರು, ಅಧಿಕಾರವಹಿಸಿಕೊಳ್ಳುವ ಮೊದಲೇ ಇಲ್ಲಿಂದ ಹೇಗೆ ಬಿಡುಗಡೆ ಹೊಂದಬಹುದು ಎಂದು ಪ್ಲಾನ್ ಮಾಡುತ್ತಿರುತ್ತಾರೆ ಎಂದು ಕರ್ನಾಟಕ ರಾಜ್ಯ ಪಡಿತರ ವಿತರಕರ ಸಂಘದ ಅಧ್ಯಕ್ಷ ಕೃಷ್ಣಪ್ಪ ಆರೋಪಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Cold Weather: ಬೀದರ್, ವಿಜಯಪುರ ಗಡಗಡ: 5-6 ಡಿ.ಸೆ.ಗೆ ತಾಪಮಾನ ಇಳಿಕೆ?
Danger Spot-1: ಹೊಸೂರು ಮುಖ್ಯರಸ್ತೆ ಸಮೀಪ ನಡೆದಾಡುವುದೂ ಅಪಾಯಕಾರಿ!
BIFF:16ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಕಿಶೋರ್ ರಾಯಭಾರಿ
EV ದ್ವಿಚಕ್ರ ವಾಹನ ಮಾರಾಟ: ಏಥರ್ ಸಂಸ್ಥೆ ಪಾಲು ಶೇ.25
Aishwarya Gowda ವಿರುದ್ದ ಬಲವಂತದ ಕ್ರಮ ಬೇಡ: ಪೊಲೀಸರಿಗೆ ಕೋರ್ಟ್ ಸೂಚನೆ
MUST WATCH
ಹೊಸ ಸೇರ್ಪಡೆ
Elon Musk ಮಾನಸಿಕ ಸ್ಥಿತಿ ಸರಿಯಿಲ್ಲ: ಲೇಖಕ ಅಬ್ರಾಮ್‌ಸನ್
Hardeep Singh Puri: ಕಲ್ಲಿದ್ದಲು ಆಧಾರಿತ ವಿದ್ಯುತ್ ಸ್ಥಾವರಗಳಿಗೆ ನೈಸರ್ಗಿಕ ಅನಿಲ
Bantwal: ಬೋಳಂತೂರಿನ ದರೋಡೆ ಪ್ರಕರಣ: ವಾರ ಕಳೆದರೂ ಸಿಗದ ಮಹತ್ವದ ಸುಳಿವು
National Highway ಕಾಮಗಾರಿ ಪರಿಶೀಲನೆ: ಮಾರ್ಚ್ ಅಂತ್ಯಕ್ಕೆ ಶೇ. 95 ಕಾಮಗಾರಿ ಪೂರ್ಣ: ಡಿಸಿ
Suratkal: ಬಾಂಗ್ಲಾದೇಶ ಮೂಲದ ಅಕ್ರಮ ವಲಸಿಗ ಕಾರ್ಮಿಕನ ಸೆರೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.