2018ಕ್ಕೆ ರಾಜ್ಯ “ಬಯಲು ಬಹಿರ್ದೆಸೆ ಮುಕ್ತ’ ಆಗುತ್ತಾ?


Team Udayavani, Mar 12, 2017, 3:45 AM IST

toilet.jpg

ಬೆಂಗಳೂರು: ಕರ್ನಾಟಕವನ್ನು 2018ರ ಅ.2ರ ಗಾಂಧಿಜಯಂತಿ ದಿನದಂದು ಸಂಪೂರ್ಣ “ಬಯಲು ಬಹಿರ್ದೆಸೆ ಮುಕ್ತ ರಾಜ್ಯ’ ವನ್ನಾಗಿ ಘೋಷಣೆ ಮಾಡಲು ಸರ್ಕಾರ ಸಂಕಲ್ಪ ತೊಟ್ಟಿದೆ. ಆದರೆ, ಸರ್ಕಾರಿ ಅಧಿಕಾರಿಗಳು ಹಾಗೂ ಸಾರ್ವಜನಿಕರು ಅದರಲ್ಲೂ ಹೈದರಾಬಾದ್‌ ಕರ್ನಾಟಕ ಮತ್ತು ಮುಂಬೈ ಕರ್ನಾಟಕದ ಕೆಲವು ಜಿಲ್ಲೆಗಳ ಜನರ ಇಚ್ಛಾಶಕ್ತಿಯ ಕೊರತೆಯಿಂದಾಗಿ ಸ್ವತ್ಛ ಭಾರತದ ಕನಸನ್ನು ಸಾಕಾರಗೊಳಿಸುವ ಒಂದು ಉತ್ತಮ ಯೋಜನೆ ಕುಂಟುತ್ತ ಸಾಗಿದೆ.

ಶೌಚಾಲಯಗಳ ನಿರ್ಮಾಣದ ಪ್ರಗತಿಯಲ್ಲಿ ಕರಾವಳಿ ಹಾಗೂ ಮೈಸೂರು ಭಾಗದ ಜಿಲ್ಲೆಗಳು ಉತ್ತಮ ಸಾಧನೆ ಮಾಡಿದ್ದರೆ, ಹೈ-ಕ‌ದ ಕೊಪ್ಪಳ ಜಿಲ್ಲೆ ಹೊರತುಪಡಿಸಿ ಉಳಿದ 5 ಜಿಲ್ಲೆಗಳು ಮತ್ತು ಮುಂಬೈ ಕರ್ನಾಟಕದ ಹಲವು ಜಿಲ್ಲೆಗಳು ತೀರಾ ಕಳಪೆ ಪ್ರಗತಿ ಸಾಧಿಸಿವೆ. ಇದಕ್ಕೆ ಅಧಿಕಾರಿ ವರ್ಗದ ನಿರ್ಲಕ್ಷ್ಯದ ಜೊತೆಗೆ ಸಮಗ್ರ ಉತ್ತರ ಕರ್ನಾಟಕ ಭಾಗದ ಜನರ “ಸಾಮಾಜಿಕ ಮನೋಭಾವನೆ’ ಕಾರಣ ಎಂದು ಹೇಳಲಾಗುತ್ತಿದೆ. ಕರಾವಳಿ ಮತ್ತು ಹಳೆ ಮೈಸೂರು ಭಾಗ ಹೊರತು ಪಡಿಸಿದರೆ, ಉತ್ತರ ಕರ್ನಾಟಕ ಭಾಗದಲ್ಲಿ ಈಗಲೂ “ಬಯಲು ಬಹಿರ್ದೆಸೆ’ ವ್ಯವಸ್ಥೆಯನ್ನೇ ಜನ ಹೆಚ್ಚಾಗಿ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ.

11 ತಿಂಗಳಲ್ಲಿ ಶೇ.50ರಷ್ಟು ಪ್ರಗತಿ:
2016-17ನೇ ಸಾಲಿನ ಬಜೆಟ್‌ನಲ್ಲಿ 12.89 ಲಕ್ಷ ಶೌಚಾಲಯ ನಿರ್ಮಾಣ ಮಾಡುವ ಗುರಿ ಇಟ್ಟುಕೊಳ್ಳಲಾಗಿತ್ತು. ಆದರೆ, ಕಳೆದ 11 ತಿಂಗಳಲ್ಲಿ ಶೇ.50ರಷ್ಟು ಮಾತ್ರ ಗುರಿ ಸಾಧಿಸಲಾಗಿದ್ದು, ಇನ್ನುಳಿದ ಅರ್ಧದಷ್ಟು ಗುರಿಯನ್ನು ಕೇವಲ ಒಂದು ತಿಂಗಳಲ್ಲಿ ಸಾಧಿಸಬೇಕಾಗಿದೆ. 11  ತಿಂಗಳಲ್ಲಿ 6 ಲಕ್ಷ ಶೌಚಾಲಯ ನಿರ್ಮಾಣ ಆಗಿದ್ದರೆ, ಉಳಿದ 6 ಲಕ್ಷ ಶೌಚಾಲಯಗಳನ್ನು ಕೇವಲ ಒಂದು 1 ತಿಂಗಳಲ್ಲಿ ನಿರ್ಮಾಣ ಮಾಡಲು ಸಾಧ್ಯವೇ ಅನ್ನುವ ಪ್ರಶ್ನೆ ಈಗ ಉದ್ಭವಾಗಿದೆ.

ಜೊತೆಗೆ 2013ರ ಬೇಸ್‌ಲೈನ್‌ ಸರ್ವೆ ಪ್ರಕಾರ ರಾಜ್ಯದಲ್ಲಿ 85.14 ಲಕ್ಷ ಕುಟುಂಬಗಳಿದ್ದು, ಆ ಪೈಕಿ 30.15 ಲಕ್ಷ ಕುಟುಂಬಗಳು ಶೌಚಾಲಯ ಹೊಂದಿವೆ. 54.99 ಲಕ್ಷ ಕುಟುಂಬಗಳಿಗೆ ಶೌಚಾಲಯಗಳಿಲ್ಲ. ಅದಕ್ಕಾಗಿ ಕಳೆದ 3 ವರ್ಷಗಳಲ್ಲಿ 28 ಲಕ್ಷ ಶೌಚಾಲಯಗಳನ್ನು ನಿರ್ಮಿಸಿದೆ. ಆದರೆ, ಕರ್ನಾಟಕ ಸಂಪೂರ್ಣ ಬಯಲು ಬಹಿರ್ದೆಸೆ ಮುಕ್ತ ರಾಜ್ಯ ಅಗಲು 20 ತಿಂಗಳಲ್ಲಿ ಇನ್ನೂ ಅಂದಾಜು 26 ಲಕ್ಷ ಕುಟುಂಬಗಳಿಗೆ ವೈಯುಕ್ತಿಕ ಶೌಚಾಲಯಗಳನ್ನು ನಿರ್ಮಿಸಬೇಕಾಗಿದೆ.

ಶೌಚಾಲಯಗಳ ನಿರ್ಮಾಣದಲ್ಲಿ ರಾಜ್ಯದ ಒಟ್ಟಾರೆ ಪ್ರಗತಿ ಶೇ.64.61ರಷ್ಟಿದೆ. 2016-17ನೇ ಸಾಲಿನ ಅಂಕಿ-ಅಂಶಗಳ ಪ್ರಕಾರ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಮಂಗಳೂರು, ಉಡುಪಿ, ಕೊಡಗು ಹಾಗೂ ಶಿವಮೊಗ್ಗ ಜಿಲ್ಲೆಗಳು ಶೇ.100ರಷ್ಟು ಪ್ರಗತಿ ಸಾಧಿಸಿದ್ದರೆ. ಯಾದಗಿರಿ ಶೇ.24.60, ರಾಯಚೂರು ಶೇ.27.86, ಬೀದರ್‌ ಶೇ.28.96, ವಿಜಯಪುರ ಶೇ.30.32 ಹಾಗೂ ಕಲಬುರಗಿ ಶೇ.34.37 ಗುರಿ ಸಾಧಿಸಿ ಕಳಪೆ ಪ್ರಗತಿ ದಾಖಲಿಸಿವೆ.

ಉಳಿದಂತೆ, ಚಿಕ್ಕಮಗಳೂರು ಶೇ.93, ಉತ್ತರ ಕನ್ನಡ ಶೇ.91, ರಾಮನಗರ ಶೇ.86, ಮಂಡ್ಯ ಶೇ.76, ಹಾಸನ ಶೇ.74, ಧಾರವಾಡ ಶೇ.73, ಕೊಪ್ಪಳ ಶೇ.72, ಮೈಸೂರು ಶೇ.71.39, ಚಿಕ್ಕಬಳ್ಳಾಪುರ ಶೇ.70.67, ಗದಗ ಶೇ.68.04, ಕೋಲಾರ ಶೇ.66.87, ದಾವಣಗೆರೆ ಶೇ.65.19, ಹಾವೇರಿ ಶೇ.62.30, ಬಳ್ಳಾರಿ ಶೇ.56.53, ಬೆಳಗಾವಿ ಶೇ.52.03, ಚಾಮರಾಜನಗರ ಶೇ.49.19, ಬಾಗಲಕೋಟೆ ಶೇ.48.65, ತುಮಕೂರು ಶೇ.47.03, ಚಿತ್ರದುರ್ಗ ಶೇ.46.79ರಷ್ಟು ಪ್ರಗತಿ ಸಾಧಿಸಿವೆ.

ಕೇಂದ್ರದಿಂದ 419 ಕೋಟಿ ರೂ.:
ಕೇಂದ್ರ ಸರ್ಕಾರದ ಅಂಕಿ-ಅಂಶಗಳ ಪ್ರಕಾರ, ಶೌಚಾಲಯಗಳ ನಿರ್ಮಾಣಕ್ಕೆ ಪ್ರಸಕ್ತ ಸಾಲಿನಲ್ಲಿ ಕೇಂದ್ರ ಸರ್ಕಾರ, ಕರ್ನಾಟಕ ರಾಜ್ಯಕ್ಕೆ 419 ಕೋಟಿ ರೂ. ಮಂಜೂರು ಮಾಡಿದ್ದು, ಅದರಲ್ಲಿ 190 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಬಳಕೆ ಪ್ರಮಾಣ ಪತ್ರ ಹಾಗೂ ಪೂರಕ ದಾಖಲೆಗಳನ್ನು ಸಲ್ಲಿಸಿದ ಬಳಿಕ ಉಳಿದ ಹಣ ಬಿಡುಗಡೆ ಮಾಡಲಾಗುವುದು ಎಂದು ಕೇಂದ್ರ ಗ್ರಾಮೀಣ ಕುಡಿಯುವ ನೀರು ಹಾಗೂ ನೈರ್ಮಲ್ಯ ಸಚಿವಾಲಯದ ಮೂಲಗಳು ಹೇಳುತ್ತವೆ. ಅಲ್ಲದೇ ಇಲ್ಲಿವರೆಗೆ 1,500 ಕೋಟಿ ರೂ.ಗೂ ಹೆಚ್ಚು ಹಣ ಖರ್ಚು ಮಾಡಲಾಗಿದೆ ಎಂದು ರಾಜ್ಯದ ಗ್ರಾಮೀಣಭಿವೃದ್ದಿ ಇಲಾಖೆ ಮೂಲಗಳು ಹೇಳುತ್ತದೆ.

26 ಲಕ್ಷಕ್ಕೂ ಹೆಚ್ಚು ಶೌಚಾಲಯ ನಿರ್ಮಾಣ ಅಗತ್ಯ
ಕಳೆದ 3 ವರ್ಷಗಳಲ್ಲಿ ಅಂದಾಜು 28 ಲಕ್ಷ ಶೌಚಾಲಯಗಳನ್ನು ನಿರ್ಮಿಸಲಾಗಿದೆ. ಅದರಂತೆ ಇಲ್ಲಿವರೆಗೆ 5 ಜಿಲ್ಲೆಗಳು 20 ತಾಲೂಕುಗಳು ಹಾಗೂ 1 ಸಾವಿರ ಗ್ರಾಪಂಗಳನ್ನು ಬಯಲು ಬಹಿರ್ದೆಸೆ ಮುಕ್ತ ಎಂದು ಘೋಷಿಸಲಾಗಿದೆ. ಆದರೆ, ಇನ್ನೂ 26 ಜಿಲ್ಲೆಗಳು, 154 ತಾಲೂಕುಗಳು ಹಾಗೂ ಸುಮಾರು 5 ಸಾವಿರ ಗ್ರಾಪಂಗಳನ್ನು ಬಯಲು ಬಹಿರ್ದೆಸೆ ಮುಕ್ತ ಎಂದು ಘೋಷಿಸಲು ಸುಮಾರು 26 ಲಕ್ಷಕ್ಕೂ ಹೆಚ್ಚು ಶೌಚಾಲಯಗಳನ್ನು ನಿರ್ಮಿಸಬೇಕಾಗಿದೆ. ಇದಕ್ಕೆ ಉಳಿದಿರುವುದು 20 ತಿಂಗಳು ಮಾತ್ರ.

– ರಫೀಕ್‌ ಅಹ್ಮದ್‌

ಟಾಪ್ ನ್ಯೂಸ್

Pakshikere-1

Kinnigoli: ಶೌಚಾಲಯದ ಕಮೋಡ್‌ನ‌ಲ್ಲಿ ಮೊಬೈಲ್‌ ಪತ್ತೆ!, ಅಡವಿಟ್ಟ ಚಿನ್ನಾಭರಣ ಎಲ್ಲಿ ಹೋಯಿತು?

Mangaluru-VV

Mangalore University: ಪದವಿ ವಿದ್ಯಾರ್ಥಿಗಳಿಗೆ ಶುಲ್ಕ ಏರಿಕೆಯ ಹೊರೆ!

Loka-raid

Corrupts Hunt: ಏಕಕಾಲಕ್ಕೆ 37 ಕಡೆ ಲೋಕಾಯುಕ್ತ ದಾಳಿ; 22 ಕೋಟಿ ರೂ. ಅಕ್ರಮ ಆಸ್ತಿ ಪತ್ತೆ!

1-aaa

US ಅಧಿಕಾರಶಾಹಿ ಸ್ವಚ್ಛಗೊಳಿಸಲು ಮಸ್ಕ್, ವಿವೇಕ್ ರಾಮಸ್ವಾಮಿ ಆಯ್ಕೆ ಮಾಡಿದ ಟ್ರಂಪ್

BJP-JDS-congress-Party

Vote: ಶಿಗ್ಗಾಂವಿ, ಚನ್ನಪಟ್ಟಣ, ಸಂಡೂರು ಉಪಚುನಾವಣೆ: ಇಂದು ಮತದಾನ

Chalavadi-Ashok

Controversy: ಅಂಬೇಡ್ಕರ್‌ ಇಸ್ಲಾಂ ಸ್ವೀಕಾರ ವಿಚಾರ: ಖಾದ್ರಿ ಹೇಳಿಕೆಗೆ ಬಿಜೆಪಿ ಆಕ್ರೋಶ

By-election: ರಾಹುಲ್‌ ತೊರೆದ ವಯನಾಡಲ್ಲಿ ಪ್ರಿಯಾಂಕಾ ಗಾಂಧಿ ಗೆಲ್ಲುತ್ತಾರಾ?

By-election: ರಾಹುಲ್‌ ತೊರೆದ ವಯನಾಡಲ್ಲಿ ಪ್ರಿಯಾಂಕಾ ಗಾಂಧಿ ಗೆಲ್ಲುತ್ತಾರಾ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Loka-raid

Corrupts Hunt: ಏಕಕಾಲಕ್ಕೆ 37 ಕಡೆ ಲೋಕಾಯುಕ್ತ ದಾಳಿ; 22 ಕೋಟಿ ರೂ. ಅಕ್ರಮ ಆಸ್ತಿ ಪತ್ತೆ!

BJP-JDS-congress-Party

Vote: ಶಿಗ್ಗಾಂವಿ, ಚನ್ನಪಟ್ಟಣ, ಸಂಡೂರು ಉಪಚುನಾವಣೆ: ಇಂದು ಮತದಾನ

Chalavadi-Ashok

Controversy: ಅಂಬೇಡ್ಕರ್‌ ಇಸ್ಲಾಂ ಸ್ವೀಕಾರ ವಿಚಾರ: ಖಾದ್ರಿ ಹೇಳಿಕೆಗೆ ಬಿಜೆಪಿ ಆಕ್ರೋಶ

ajjamper-Qadri

Adi Jambava Samavesha: ಅಂಬೇಡ್ಕರ್‌ ಇಸ್ಲಾಂ ಧರ್ಮ ಸೇರಲು ಸಜ್ಜಾಗಿದ್ದರು: ಖಾದ್ರಿ

Karnataka: ಮೀಸಲು ಪ್ರಸ್ತಾಪ ಇಲ್ಲ: ರಾಜ್ಯ ಸರ್ಕಾರ

Karnataka: ಮೀಸಲು ಪ್ರಸ್ತಾಪ ಇಲ್ಲ: ರಾಜ್ಯ ಸರ್ಕಾರ

MUST WATCH

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

udayavani youtube

ನನ್ನ ಎದುರು ನೀನು ಬಚ್ಚ ! ಏಕವಚದಲ್ಲಿ ಕಿತ್ತಾಡಿಕೊಂಡ ಲಾಯರ್ ಜಗದೀಶ್ & ಕುಡುಪಲಿ ನಾಗರಾಜ್

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

ಹೊಸ ಸೇರ್ಪಡೆ

Pakshikere-1

Kinnigoli: ಶೌಚಾಲಯದ ಕಮೋಡ್‌ನ‌ಲ್ಲಿ ಮೊಬೈಲ್‌ ಪತ್ತೆ!, ಅಡವಿಟ್ಟ ಚಿನ್ನಾಭರಣ ಎಲ್ಲಿ ಹೋಯಿತು?

Mangaluru-VV

Mangalore University: ಪದವಿ ವಿದ್ಯಾರ್ಥಿಗಳಿಗೆ ಶುಲ್ಕ ಏರಿಕೆಯ ಹೊರೆ!

Loka-raid

Corrupts Hunt: ಏಕಕಾಲಕ್ಕೆ 37 ಕಡೆ ಲೋಕಾಯುಕ್ತ ದಾಳಿ; 22 ಕೋಟಿ ರೂ. ಅಕ್ರಮ ಆಸ್ತಿ ಪತ್ತೆ!

1-aaa

US ಅಧಿಕಾರಶಾಹಿ ಸ್ವಚ್ಛಗೊಳಿಸಲು ಮಸ್ಕ್, ವಿವೇಕ್ ರಾಮಸ್ವಾಮಿ ಆಯ್ಕೆ ಮಾಡಿದ ಟ್ರಂಪ್

BJP-JDS-congress-Party

Vote: ಶಿಗ್ಗಾಂವಿ, ಚನ್ನಪಟ್ಟಣ, ಸಂಡೂರು ಉಪಚುನಾವಣೆ: ಇಂದು ಮತದಾನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.