![Gun-Fire](https://www.udayavani.com/wp-content/uploads/2025/02/Gun-Fire-415x249.jpg)
![Gun-Fire](https://www.udayavani.com/wp-content/uploads/2025/02/Gun-Fire-415x249.jpg)
Team Udayavani, Mar 11, 2021, 6:31 PM IST
ಬೆಂಗಳೂರು: ಕೇಂದ್ರ ಸರ್ಕಾರ 15ವರ್ಷ ಮೇಲ್ಪಟ್ಟ ವಾಹನಗಳನ್ನು ಗುಜರಿಗೆ (ಸ್ಕ್ರಾ ಪ್) ಹಾಕಬೇಕು ಎನ್ನುವ ನಿಯಮದಿಂದ ನಗರದಲ್ಲಿರುವ 21,96,963 ವಾಹನಗಳು ಗುಜರಿಗೆ ಸೇರುವ ಸಾಧ್ಯತೆ ಇದೆ.
ದೇಶ ದಲ್ಲಿ 15 ವರ್ಷ ಮೇಲ್ಪಟ್ಟ ವಾಹನಗಳಿಂದ ವಾಯುಮಾಲಿನ್ಯ ಪ್ರಮಾಣ ಹೆಚ್ಚಾಗುತ್ತಿದ್ದು, ಇದನ್ನು ತಪ್ಪಿ ಸುವ ನಿಟ್ಟಿನಲ್ಲಿ ಗುಜರಿ ಪ್ರಸ್ತಾವನೆಗೆ ಕೇಂದ್ರ ಸರ್ಕಾರ ಅಸ್ತು ಎಂದಿದೆ. ಆದರೆ, ಈ ಗುಜರಿ ವಾಹ ನ ಗಳ ವಿಲೇ ವಾರಿ ಯಾವ ರೀತಿ ಆಗ ಬೇಕು ಹಾಗೂ ಗುಜರಿ ಯಾರ್ಡ್‌ಗಳ ನಿರ್ಮಾಣ ಸೇರಿ ದಂತೆ ವಾಹ ನ ಗಳ ಮೆಟಲ್ ಬಿಡಿ ಭಾಗ ಗ ಳನ್ನು ಹೇಗೆ ವಿಲೇ ವಾರಿ ಮಾಡ ಬೇಕು ಎನ್ನು ವು ದಕ್ಕೆ ಸಂಬಂಧಿ ಸಿ ದಂತೆ ಕೇಂದ್ರ ಸರ್ಕಾರ ಇನ್ನಷ್ಟೇ ಮಾರ್ಗ ಸೂಚಿ ಬಿಡುಗಡೆ ಮಾಡಬೇಕಿದೆ.
15 ವರ್ಷ ಮೇಲ್ಪಟ್ಟ ವಾಹನಗಳ ಗುಜರಿ ಪ್ರಸ್ತಾವನೆ ಏಕೆ:
ಬೈಕ್, ಕಾರ್ ಹಾಗೂ ಸರಕು ಸಾಗಾ ಣಿಕೆ ಮಾಡುವ ಭಾರೀ ವಾಹನಗಳ ಜೀವಿತಾವಧಿ 10 ರಿಂದ 15 ವರ್ಷ ತಲುಪುತ್ತಿದ್ದಂತೆಯೇ ವಾಹನಗಳ ಇಂಜಿನ್ ಸಾಮರ್ಥ್ಯ ಕುಸಿ ಯಲು ಪ್ರಾರಂಭ ವಾ ಗು ತ್ತದೆ. ಇದ ರಿಂದ ವಾಹ ನ ಗಳ ಹೊಗೆ ಉಗು ಳುವ ಪ್ರಮಾಣ ಹೆಚ್ಚಾ ಗು ತ್ತದೆ. ಭಾರೀ ವಾಹನಗಳಿಂದ ಹೊಗೆ ಪ್ರಮಾಣ ಇನ್ನೂ ಹೆಚ್ಚಾ ಗು ತ್ತದೆ ಎನ್ನುತ್ತಾರೆ ತಜ್ಞರು. ಇದೇ ಕಾರಣಕ್ಕಾಗಿ ಮಾಲಿನ್ಯ ನಿಯಂತ್ರಣ ಮಂಡಳಿ ಸಹ 15 ವರ್ಷ ಮೇಲ್ಪಟ್ಟ ವಾಹನಗಳ ಬಳಕೆ ನಿಷೇಧಿಸಬೇಕು ಎಂದು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು.
ಮಾರ್ಗ ಸೂಚಿ ಬರ ಬೇಕು:
ಕೇಂದ್ರ ಸರ್ಕಾರ ವಾಯು ಮಾ ಲಿನ್ಯ ಪ್ರಮಾಣ ಕಡಿಮೆ ಮಾಡುವ ಉದ್ದೇ ಶ ದಿಂದ 15 ವರ್ಷ ಜೀವಿತಾ ವಧಿ ಪೂರೈ ಸಿ ರುವ ವಾಹ ನ ಗ ಳ ನ್ನು ಗುಜ ರಿಗೆ ಹಾಕುವ ನಿಯಮ ಜಾರಿ ಮಾಡಲು ಮುಂದಾ ಗಿದೆ. ಇದರ ಭಾಗ ವಾಗಿ ಗುಜರಿ ವಾಹನಗಳ ವಿಲೇವಾರಿಗೆ ನಗರಗಳಲ್ಲಿ ಯಾರ್ಡ್ (ಗುಜರಿ ಬಿಡಿ ಭಾಗ ಬೇರ್ಪಡಿಸು ವುದು, ಮರು ಬಳಕೆ ಹಾಗೂ ಅನುಪಯುಕ್ತ ವಿಲೇವಾರಿ ಸ್ಥಳ) ಅಭಿವೃದ್ಧಿಪಡಿಸುವ ಅವಶ್ಯಕತೆ ಇದೆ ಎಂದು ಸೆಂಟರ್ ಆಫ್ ಸ್ಟಡಿ ಆಫ್ ಸೈನ್ಸ್ ಟೆಕ್ನಾ ಲಜಿ ಆ್ಯಂಡ್ ಪಾಲಿಸಿ ಸಂಸ್ಥೆಯ ಸಂಶೋ ಧನಾ ವಿಜ್ಞಾನಿ ಡಾ. ಪ್ರತಿಮಾ ಸಿಂಗ್ ತಿಳಿಸಿದರು.
ಕೇಂದ್ರ ಸರ್ಕಾರ ಗುಜರಿ ವಾಹನಗಳ ವಿಲೇವಾರಿಗೆ ಯಾರ್ಡ್ ನಿರ್ಮಿಸಲು ಅನುದಾನ ನೀಡಲಿದೆಯೇ, ಸರ್ಕಾರ ಅಥವಾ ಸ್ಥಳೀಯ ಆಡಳಿತವೇ ಇದರ ವ್ಯವಸ್ಥೆ ಮಾಡಿಕೊಳ್ಳ ಬೇಕೆ ಎನ್ನುವುದು ಇನ್ನಷ್ಟೇ ಸ್ಪಷ್ಟವಾಗಬೇಕಿದೆ. ಅದೇ ರೀತಿ ಗುಜರಿ ವಾಹನಗಳ ಮೆಟಲ್ ವಿಲೇವಾರಿ ಹಾಗೂ ಬಿಡಿ ಭಾಗಗಳನ್ನು ಯಾವ ರೀತಿ ವಿಲೇ ವಾರಿ ಮಾಡ ಬೇಕು ಎನ್ನುವುದು ಸೇರಿ ದಂತೆ ಸಂಪೂರ್ಣ ಮಾರ್ಗ ಸೂಚಿ ಬಂದ ಮೇಲೆ ಗುಜರಿ ಪ್ರಕ್ರಿಯೆ ಪ್ರಾರಂಭ ವಾಗುವ ಸಾಧ್ಯತೆ ಇದೆ ಎಂದು ಹೇಳಿ ದರು.
Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್: 3 ವರ್ಷದ ಮಗು ಮೃತ್ಯು!
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
You seem to have an Ad Blocker on.
To continue reading, please turn it off or whitelist Udayavani.