ರಾಜಧಾನಿಗೆ 216ನೇ ರ್‍ಯಾಂಕ್
Team Udayavani, Jun 25, 2018, 11:55 AM IST
ಬೆಂಗಳೂರು: ತ್ಯಾಜ್ಯ ವಿಲೇವಾರಿ, ಸಂಸ್ಕರಣೆ, ನಗರದ ಸ್ವತ್ಛತೆಗೆ ಬಿಬಿಎಂಪಿ ಕೈಗೊಂಡ ಕ್ರಮಗಳು ಕೇಂದ್ರ ಸರ್ಕಾರದ ಪ್ರಶಂಸೆಗೆ ಪಾತ್ರವಾದರೂ, ಕೇಂದ್ರ ನಗರಭಿವೃದ್ಧಿ ಇಲಾಖೆಯ ಸ್ವಚ್ಛ ಸರ್ವೆಕ್ಷನ್ ಅಭಿಯಾನದಲ್ಲಿ ಬೆಂಗಳೂರಿಗೆ 216ನೇ ರ್‍ಯಾಂಕ್ ಸಿಕ್ಕಿದೆ.
ಕ್ಲೀನ್ ಬೆಂಗಳೂರು ಅಭಿಯಾನ, ವಾರ್ಡ್‌ವಾರು ಕಾಂಪೋಸ್ಟ್ ಸಂತೆ, ಇ-ಶೌಚಾಲಯ, ವೈಜ್ಞಾನಿಕ ತ್ಯಾಜ್ಯ ಸಂಸ್ಕರಣೆ ಸೇರಿದಂತೆ ಹಲವು ಕಾರ್ಯಕ್ರಮಗಳ ಮೂಲಕ ಈ ಬಾರಿಯ ಅಭಿಯಾನದಲ್ಲಿ ಉತ್ತಮ ರ್‍ಯಾಂಕಿಂಗ್ ಪಡೆಯುವ ಭರವಸೆಯನ್ನು ಪಾಲಿಕೆ ಹೊಂದಿತ್ತು. ಆದರೆ, ಶನಿವಾರ ಘೋಷಣೆಯಾಗಿರುವ ಪಟ್ಟಿಯಲ್ಲಿ ಬಿಬಿಎಂಪಿಗೆ ಹಿನ್ನಡೆಯಾಗಿದೆ.
ಸ್ವತ್ಛ ಸವೇಕ್ಷಣ್ ಸಮೀಕ್ಷೆಯಲ್ಲಿ ಕಳೆದ ಎರಡು ವರ್ಷಗಳಿಂದ ಉತ್ತಮ ಸ್ಥಾನ ಪಡೆಯುವಲ್ಲಿ ವಿಫಲವಾಗಿದ್ದ ಬಿಬಿಎಂಪಿ, 2018ನೇ ಸಾಲಿನಲ್ಲಿ ಉತ್ತಮ ರ್‍ಯಾಂಕ್ ಪಡೆಯಲೇಬೇಕೆಂಬ ಉದ್ದೇಶದಿಂದ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿತ್ತು.
ಅದರಂತೆ ಸ್ವತ್ಛತೆ ಕಾರ್ಯಕ್ರಮ, ಮೊಬೈಲ್ ಆ್ಯಪ್ ಮೇಲ್ವಿಚಾರಣೆ, ಅಭಿಪ್ರಾಯ ಸಂಗ್ರಹ, ತ್ಯಾಜ್ಯದಿಂದ ವಿದ್ಯುತ್ ತಯಾರಿಕಾ ಘಟಕಗಳ ನಿರ್ಮಾಣ, ರಸ್ತೆ, ಮೇಲ್ಸೇತುವೆ ಸುಂದರೀಕರಣಕ್ಕಾಗಿ ಕ್ಲೀನ್ ಬೆಂಗಳೂರು ಅಭಿಯಾನ, ಯಾಂತ್ರೀಕೃತ ಕಸ ಗುಡಿಸುವ ಯಂತ್ರ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ರೂಪಿಸಿತ್ತು.
ಇವೆಲ್ಲದರ ಹೊರತಾಗಿಯೂ ಬಿಬಿಎಂಪಿಗೆ 216ನೇ ಸ್ಥಾನ ಸಿಕ್ಕಿರುವುದು ಅಭಿಯಾನದ ಬಗ್ಗೆಯೇ ಅನುಮಾನ ಮೂಡಿಸುವಂತೆ ಮಾಡಿದ್ದು, ಮುಂದಿನ ವರ್ಷದಿಂದ ಅಭಿಯಾನದಲ್ಲಿ ಪಾಲ್ಗೊಳ್ಳದಿರಲು ಪಾಲಿಕೆ ಚಿಂತಿಸಿದೆ ಎನ್ನಲಾಗಿದೆ.
ಅಭಿಯಾನದಿಂದ ದೂರ: ಕೇಂದ್ರದಿಂದ ಆಯೋಜಿಸುತ್ತಿರುವ ಸ್ವತ್ಛ ಸರ್ವೇಕ್ಷನ್‌ನಲ್ಲಿ ಪ್ರತಿ ಬಾರಿ ಬೆಂಗಳೂರಿಗೆ ಕಳಪೆ ಸ್ಥಾನ ದೊರೆಯುವುದು ಅನುಮಾನಗಳಿಗೆ ಕಾರಣವಾಗಿದ್ದು, ಮುಂದಿನ ವರ್ಷದಿಂದ ಅಭಿಯಾನದಲ್ಲಿ ಭಾಗವಹಿಸದಿರುವ ಕುರಿತು ಪಾಲಿಕೆ ಹಾಗೂ ರಾಜ್ಯ ಸರ್ಕಾರ ನಿರ್ಧರಿಸಿದೆ ಎನ್ನಲಾಗುತ್ತಿದೆ. ಜತೆಗೆ ಸರ್ವೇಕ್ಷನ್‌ಗೆ ಪರ್ಯಾಯವಾಗಿ ರಾಜ್ಯಮಟ್ಟದಲ್ಲಿಯೇ ಅಭಿಯಾನ ನಡೆಸುವ ಕುರಿತು ಸರ್ಕಾರದ ಮಟ್ಟದಲ್ಲಿ ಚರ್ಚಿಸಲು ಚಿಂತನೆ ನಡೆಸಲಾಗಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.
ಬಿಬಿಎಂಪಿಗೆ ಮಾರಕವಾದ ಅಂಶವೇನು?: ನಗರಾಭಿವೃದ್ಧಿ ಇಲಾಖೆಯ ಸ್ವಚ್ಛ ಸರ್ವೇಕ್ಷಣ್ ಸಮೀಕ್ಷೆಯಂತೆ ನಗರಗಳು ಸಂಪೂರ್ಣವಾಗಿ “ಬಯಲು ಶೌಚ ಮುಕ್ತ’ ಎಂದು ಘೋಷಿಸಿಕೊಳ್ಳಬೇಕು. ರ್‍ಯಾಂಕಿಂಗ್ ನೀಡುವ ವೇಳೆಯಲ್ಲಿಯೂ ಇದೇ ಅಂಶವನ್ನು ಪ್ರಮುಖ ಮಾನದಂಡವಾಗಿ ಪರಿಗಣಿಸಲಾಗುತ್ತದೆ.
ಆದರೆ, ಬಿಬಿಎಂಪಿ ವ್ಯಾಪ್ತಿಯಲ್ಲಿನ 198 ವಾರ್ಡ್‌ಗಳ ಪೈಕಿ ಈವರೆಗೆ ಯಾವುದೇ ವಾರ್ಡ್ ಅಧಿಕೃತವಾಗಿ ಬಯಲು ಶೌಚ ಮುಕ್ತವಾಗಿಲ್ಲ. ಸಮೀಕ್ಷೆ ಆರಂಭವಾದ ಹಿನ್ನೆಲೆಯಲ್ಲಿ ಸುಮಾರು 100 ವಾರ್ಡ್‌ಗಳು ಬಯಲು ಶೌಚ ಮುಕ್ತವಾಗಿದೆ ಎಂಬ ಪ್ರಸ್ತಾವನೆಯನ್ನು ಪಾಲಿಕೆಯ ಕೌನ್ಸಿಲ್ ಮುಂದಿಟ್ಟರೂ, ಈವರೆಗೆ ಅನುಮೋದನೆ ಸಿಕ್ಕಿಲ್ಲ.
ಹಲವು ಕಾರ್ಯಕ್ರಮಗಳನ್ನು ರೂಪಿಸಿದರೂ ಬೆಂಗಳೂರಿಗೆ ಉತ್ತಮ ರ್‍ಯಾಂಕಿಂಗ್ ದೊರೆಯದಿರುವುದು ಬೇಸರ ತಂದಿದೆ. ಯಾವ ಕಾರಣದಿಂದ ಬೆಂಗಳೂರಿಗೆ ಕಡಿಮೆ ರ್‍ಯಾಂಕ್ ಬಂದಿದೆ ಎಂಬ ಕುರಿತು ಮಾಹಿತಿ ನೀಡುವಂತೆ ಕೇಂದ್ರ ನಗರಾಭಿವೃದ್ಧಿ ಇಲಾಖೆಗೆ ಪತ್ರ ಬರೆಯಲಾಗುವುದು.
-ಆರ್.ಸಂಪತ್ ರಾಜ್, ಮೇಯರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Cold Weather: ಬೀದರ್, ವಿಜಯಪುರ ಗಡಗಡ: 5-6 ಡಿ.ಸೆ.ಗೆ ತಾಪಮಾನ ಇಳಿಕೆ?
Danger Spot-1: ಹೊಸೂರು ಮುಖ್ಯರಸ್ತೆ ಸಮೀಪ ನಡೆದಾಡುವುದೂ ಅಪಾಯಕಾರಿ!
BIFF:16ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಕಿಶೋರ್ ರಾಯಭಾರಿ
EV ದ್ವಿಚಕ್ರ ವಾಹನ ಮಾರಾಟ: ಏಥರ್ ಸಂಸ್ಥೆ ಪಾಲು ಶೇ.25
Aishwarya Gowda ವಿರುದ್ದ ಬಲವಂತದ ಕ್ರಮ ಬೇಡ: ಪೊಲೀಸರಿಗೆ ಕೋರ್ಟ್ ಸೂಚನೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.