ಸಾರಿಗೆ ಸಂಸ್ಥೆಗಳ ನಷ್ಟ ಶೇ.25: ಪರಿಹಾರ ಶೇ.50
ಬೆಂಗಳೂರು ಮಹಾನಗರ ಸಾರಿಗೆ ನಷ್ಟದ ಅಂತರ ಶೇ. 55 ಮುಂದಿನ ದಿನಗಳಲ್ಲಿ ನಿಗಮಗಳಿಗೇ ಹೊರೆ?
Team Udayavani, Dec 4, 2020, 9:30 AM IST
ಬೆಂಗಳೂರು: ಸತತ ಎಂಟನೇ ತಿಂಗಳು ಸಾರಿಗೆ ನೌಕರರ ವೇತನ ಬಿಡುಗಡೆಗೆ ಸರ್ಕಾರ ಆದೇಶ ಹೊರಡಿಸಿದೆ. ಆದರೆ ಹೀಗೆ ಬಿಡುಗಡೆಯಾದ ವೇತನ ಆಯಾ ನಿಗಮಗಳು ಎದುರಿಸುತ್ತಿರುವ “ಆದಾಯ ಕೊರತೆ’ ಆಧಾರದ ಮೇಲಿಲ್ಲ. ಬದಲಿಗೆ ಏಕರೂಪ ದಲ್ಲಿದ್ದು, ಈ ಬಗ್ಗೆ ನಿಗಮಗಳ ವಲಯದಲ್ಲೇ ಅಪಸ್ವರ ಕೇಳಿಬರುತ್ತಿದೆ.
ಕೆಎಸ್‌ಆರ್‌ಟಿಸಿ, ಎನ್‌ಡಬ್ಲ್ಯುಕೆಆರ್‌ಟಿಸಿ, ಎನ್‌ಇಕೆಆರ್‌ಟಿಸಿ ಸೇರಿದಂತೆ ಮೂರೂ ನಿಗಮಗಳು ಬಹುತೇಕ ಸಹಜ ಸ್ಥಿತಿಗೆ ಮರಳುತ್ತಿವೆ. ಕೋವಿಡ್-19 ಪೂರ್ವ ಸ್ಥಿತಿಗೆ ಹೋಲಿಸಿದರೆ ಗರಿಷ್ಠ ಶೇ. 30ರಿಂದಕನಿಷ್ಠ15 ಆದಾಯದಲ್ಲಿ ವ್ಯತ್ಯಾಸ ಕಂಡುಬರುತ್ತಿದೆ. ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಮಾತ್ರ ಶೇ.55ರಷ್ಟು ಆದಾಯ ಕೊರತೆ ಎದುರಿಸುತ್ತಿವೆ. ಆದರೆ, ಸರ್ಕಾರವು ನಾಲ್ಕೂ ಸಾರಿಗೆ ನಿಗಮಗಳಿಗೆ ಏಕರೂಪದಲ್ಲಿ ಅಕ್ಟೋಬರ್ ಮತ್ತು ನವೆಂಬರ್‌ಗೆ ತಲಾ ಶೇ. 50 ವೇತನ ಬಿಡುಗಡೆ ಮಾಡಿದೆ.
ನ. 1ರಿಂದ 20ರವರೆಗಿನ ಅಂಕಿ-ಅಂಶಗಳ ಪ್ರಕಾರ ಕೆಎಸ್‌ಆರ್‌ಟಿಸಿ ಶೇ. 25-30 ಆದಾಯ ಕೊರತೆ ಎದುರಿಸುತ್ತಿವೆ. ಅದೇ ರೀತಿ, ಈಶಾನ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಮತ್ತು ವಾಯವ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದಲ್ಲಿ ತಲಾ ಸರಾಸರಿ ಶೇ. 15 ರಿಂದ 20 ಕೊರತೆ ಕಂಡುಬರುತ್ತಿದೆ. ಆದರೆ, ಬಿಎಂಟಿಸಿಯಲ್ಲಿ ಈ ಪ್ರಮಾಣ ಶೇ. 55ರಷ್ಟಿದೆ. ವಸ್ತುಸ್ಥಿತಿ ಹೀಗಿರುವಾಗ, ಸರ್ಕಾರ ಎಲ್ಲ ನಿಗಮಗಳಿಗೂ ಏಕರೂಪದ ಅಂದರೆ ಶೇ.50 ವೇತನ ಬಿಡುಗಡೆ ಮಾಡಿದೆ. ಇದು ಎಷ್ಟು ಸರಿ? ಬಿಡುಗಡೆ ಪ್ರಮಾಣ ಅವೈಜ್ಞಾನಿಕವಾಗಿದೆ ಎಂಬ ಆಕ್ಷೇಪ ಕೇಳಿ ಬರುತ್ತಿದೆ. ಸಹಾಯಧನದ ಮರು ಹೊಂದಾಣಿಕೆ ಅನುದಾನವನ್ನೂ ಇದು ಒಳಗೊಂಡಿರುವುದರಿಂದ, ಪರೋಕ್ಷವಾಗಿ ಮುಂಬರುವ ದಿನಗಳಲ್ಲಿ ಇದು ಆಯಾ ನಿಗಮಗಳಿಗೇ ಹೊರೆ ಆಗಲಿದೆ.
ಇದನ್ನೂ ಓದಿ : ಭಾರತ-ಆಸ್ಟ್ರೇಲಿಯ ಮೊದಲ ಟಿ20: ತಿರುಗೇಟು ನೀಡಲು ಕೊಹ್ಲಿ ಪಡೆಗೊಂದು ಅವಕಾಶ
ಸರ್ಕಾರವು ಆದೇಶದಲ್ಲಿ ವಿಧಿಸಿರುವ ಷರತ್ತುಗಳಿಂದಲೇ ಇದು ಸ್ಪಷ್ಟವಾಗುತ್ತದೆ. ನವೆಂಬರ್‌ನಲ್ಲಿ ದೀಪಾವಳಿ ಹಬ್ಬ ಇದ್ದುದರಿಂದ ಸಾರಿಗೆ ನಿಗಮಗಳಿಗೆ ಹೆಚ್ಚು ಆದಾಯ ಬಂದಿದ್ದು, ನಷ್ಟದ ಪ್ರಮಾಣ ಕಡಿಮೆ ಎಂದು ಹೇಳಬಹುದು.ಆದರೆ,ಬಸ್ ಗಳ ಕಾರ್ಯಾಚರಣೆ ಲೆಕ್ಕಹಾಕಿದ್ದರೂ ಮೂರು ನಿಗಮಗಳು ರಸ್ತೆಗಿಳಿಸಿದ ಅನುಸೂಚಿಗಳ ಸಂಖ್ಯೆ ಕಡಿಮೆ ಇದ್ದು, ಅದು ಡೀಸೆಲ್, ಬಸ್‌ಗಳ ನಿರ್ವಹಣೆ ಸೇರಿದಂತೆ ಮತ್ತಿತರ ರೂಪದಲ್ಲಿ ಉಳಿತಾಯ ರೂಪದಲ್ಲಿ ಪರಿಣಮಿಸುತ್ತದೆ. ಉದಾಹರಣೆಗೆ ಕೆಎಸ್ ಆರ್‌ಟಿಸಿಯು8,250 ಬಸ್‌ಗಳ ಪೈಕಿ 5,800 ಬಸ್‌ಗಳನ್ನು ರಸ್ತೆಗಿಳಿಸಿದೆ. ಇದರಿಂದ 8.5 ಕೋಟಿ ರೂ. ಬದಲಿಗೆ ಏಳು ಕೋಟಿ ಆದಾಯ ಗಳಿಸುತ್ತಿದೆ. ಆದರೆ, ಬಿಎಂಟಿಸಿ 6,100 ಅನುಸೂಚಿಗಳಲ್ಲಿ 5,000 ಬಸ್‌ಗಳು ಸೇವೆ ನೀಡುತ್ತಿದ್ದು, ಒಂದೂವರೆಕೋಟಿ ರೂ. ಆದಾಯ ತರುತ್ತಿವೆ ಎಂದು ಹೆಸರು ಹೇಳಲಿಚ್ಛಿಸದ ಅಧಿಕಾರಿಗಳು ತಿಳಿಸುತ್ತಾರೆ.
ಇನ್ನು ಕಳೆದ ತಿಂಗಳು ದಸರಾ ಇತ್ತು. ಆಗ, ಅ. 1ರಿಂದ 31ರವರೆಗಿನ ಆದಾಯ ಕೊರತೆ ಅಂತರ ಲೆಕ್ಕಹಾಕಿದರೂ ಬಿಎಂಟಿಸಿ ಶೇ.60-65 ನಷ್ಟ ಅನುಭವಿಸಿದ್ದನ್ನು ಕಾಣಬಹುದು. ಉಳಿದಂತೆ ಕೆಎಸ್‌ಆರ್‌ಟಿಸಿ, ಎನ್‌ಇಕೆಆರ್‌ಟಿಸಿ, ಎನ್‌ಡಬ್ಲ್ಯುಕೆಆರ್‌ಟಿಸಿ ಕ್ರಮವಾಗಿ ಶೇ. 40ರಿಂದ 45 ನಷ್ಟ ಎದುರಿಸಿವೆ.ಈಮಧ್ಯೆ ಮೂರೂ ಸಾರಿಗೆ ನಿಗಮಗಳು ಕೆಲವೆಡೆ ಅಂತರ ರಾಜ್ಯ ಸೇವೆ ಆರಂಭಿಸಿರುವುದರಿಂದ ಸಹಜವಾಗಿ ಈ ಆದಾಯದ ಪ್ರಮಾಣ ಏರಿಕೆ ಕ್ರಮದಲ್ಲೇ ಸಾಗಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಉಳಿದ ನಿಗಮಗಳಿಗೆ ಹೋಲಿಸಿದರೆ, ಬಿಎಂಟಿಸಿ ಆದಾಯ ನಷ್ಟದ ಅಂತರ ಹೆಚ್ಚಿದೆ. ಹೀಗಾಗಿ, ಎಲ್ಲ ನಿಗಮಗಳು ಸೇರಿ ಶೇ. 75ರಷ್ಟು ವೇತನ ಬಿಡುಗಡೆಗೆ ಸರ್ಕಾರಕ್ಕೆ ಮನವಿ ಮಾಡಲಾಗಿತ್ತು. ಆರ್ಥಿಕ ಸ್ಥಿತಿಗತಿ ನೋಡಿಕೊಂಡು ಸರ್ಕಾರ ಶೇ. 50ರಷ್ಟು ಬಿಡುಗಡೆ ಮಾಡಿದೆ. ಇದು ತೃಪ್ತಿ ತಂದಿದೆ. – ಸಿ. ಶಿಖಾ, ವ್ಯವಸ್ಥಾಪಕ ನಿರ್ದೇಶರು, ಬಿಎಂಟಿಸಿ
-ವಿಶೇಷ ವರದಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಎಸ್.ಎಂ.ಕೃಷ್ಣ ಸಂಸ್ಮರಣಾ ವೇದಿಕೆಯಿಂದ ಪಂಚನಮನ
Bengaluru:ಕುಡಿದ ಅಮಲಲ್ಲಿದ್ದ ಚಾಲಕ; ರಕ್ಷಣೆಗಾಗಿ ಚಲಿಸುತ್ತಿದ್ದ ರಿಕ್ಷಾದಿಂದ ಜಿಗಿದ ಮಹಿಳೆ
Gold Fraud Case: ಐಶ್ವರ್ಯಗೌಡ ದಂಪತಿಯ 3 ಐಷಾರಾಮಿ ಕಾರು ಜಪ್ತಿ
Gold Cheating Case: ಚಿನಾಭರಣ ವಂಚನೆ… ಶ್ವೇತಾಗೌಡ ವಿರುದ್ಧ ಇನ್ನೊಂದು ದೂರು
Metro: ಮೆಟ್ರೋದಲ್ಲಿ ಮಹಿಳಾ ಟೆಕಿ ಫೋಟೋ ತೆಗೆದು ಸಿಕ್ಕಿಬಿದ್ದ ಆಯುರ್ವೇದಿಕ್ ವೈದ್ಯ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Gadag: ಡಿವೈಡರ್ ಗೆ ಕಾರು ಡಿಕ್ಕಿ: ಸ್ಥಳದಲ್ಲೇ ಇಬ್ಬರು ಯುವಕರ ಸಾವು
Chikkaballapura: ಮಾರಕಾಯುಧಗಳಿಂದ ಜೆಡಿಎಸ್ ಮುಖಂಡನ ಭೀಕರ ಕೊಲೆ
Horoscope: ಹೆಚ್ಚಿನ ಜವಾಬ್ದಾರಿಗಳಿಗೆ ಸಿದ್ಧತೆ, ಗೃಹಿಣಿಯರ ಸ್ವಂತ ಆದಾಯ ಗಳಿಕೆ ವೃದ್ಧಿ
Syria ಕ್ಷಿಪಣಿ ಘಟಕ ಉಡಾಯಿಸಿದ ಇಸ್ರೇಲ್!120 ಕಮಾಂಡೋಗಳ 3 ಗಂಟೆ ಕಾರ್ಯಾಚರಣೆ
US Satellite: ಅಮೆರಿಕದ ಸಂವಹನ ಉಪಗ್ರಹ ಭಾರತದ ರಾಕೆಟ್‌ನಿಂದ ಲಾಂಚ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.