4 ಕ್ಷೇತ್ರಗಳಲ್ಲಿ 26 ಸಾವಿರ ಯುವ ಮತದಾರರು
Team Udayavani, Nov 28, 2019, 3:08 AM IST
ಬೆಂಗಳೂರು: ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಡಿ.5ರಂದು ನಡೆಯಲಿರುವ ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲಿ ನಡೆಯಲಿರುವ ಉಪ ಚುನಾವಣೆಯಲ್ಲಿ 26 ಸಾವಿರ ಯುವ ಮತದಾರರು ಮೊದಲ ಬಾರಿಗೆ ತಮ್ಮ ಮತದಾನದ ಹಕ್ಕನ್ನು ಚಲಾಯಿಸಲಿದ್ದಾರೆ ಎಂದು ಬೆಂಗಳೂರು ಜಿಲ್ಲೆ ಚುನಾವಣಾಧಿಕಾರಿ ಬಿ.ಎಚ್.ಅನಿಲ್‌ಕುಮಾರ್ ತಿಳಿಸಿದ್ದಾರೆ.
ಬುಧವಾರ ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಂಗಳೂರು ನಗರದ ವ್ಯಾಪ್ತಿಗೆ ಬರುವ ಕೆ.ಆರ್.ಪುರ, ಶಿವಾಜಿನಗರ, ಯಶವಂತಪುರ ಹಾಗೂ ಮಹಾಲಕ್ಷ್ಮೀ ಲೇಔಟ್ ಕ್ಷೇತ್ರಗಳಿಗೆ ಡಿ.5 ರಂದು ಉಪ ಚುನಾವಣೆಯ ಮತದಾನ ನಡೆಯಲಿದೆ. ಈ ವೇಳೆ 26,233 ಯುವ ಮತದಾರು ತಮ್ಮ ಮತದಾನದ ಹಕ್ಕು ಚಲಾಯಿಸಲಿದ್ದಾರೆ ಎಂದು ತಿಳಿಸಿದರು.
2019ರ ಮಾ.17ರಿಂದ 2019ರ ನ.8 ವರೆಗೆ 18ವರ್ಷ ತುಂಬಿದ 33,156 ಯುವ ಮತದಾರರು ಫಾರಂ 6ರ ಮೂಲಕ ತಮ್ಮ ಹೆಸರುಗಳನ್ನು ಮತದಾರ ಪಟ್ಟಿಗೆ ಸೇರ್ಪಡೆ ಮಾಡಿಕೊಳ್ಳುವುದಕ್ಕೆ ಅರ್ಜಿ ಸಲ್ಲಿಕೆ ಮಾಡಿದ್ದರು. ಅದರಲ್ಲಿ 29,858 ಅರ್ಜಿಗಳು ಸ್ವೀಕೃತವಾಗಿವೆ. 1,412 ಅರ್ಜಿಗಳನ್ನು ತಿರಸ್ಕರಿಸಲಾಗಿದೆ. 26,233 ಮತದಾರರ ಹೆಸರುಗಳನ್ನು ಮತದಾರರ ಪಟ್ಟಿಗೆ ಸೇರ್ಪಡೆಗೊಳಿಸಲಾಗಿದ್ದು, ಉಪ ಚುನಾವಣೆಯಲ್ಲಿ ಇವರು ಮತದಾನ ಮಾಡಲಿದ್ದಾರೆ ಎಂದು ಮಾಹಿತಿ ನೀಡಿದರು.
ಹೊಸ ಮತದಾರರಿಗೆ ನ.28ರಿಂದ ಡಿ.1ರ ಒಳಗಾಗಿ ಮತದಾರರ ಭಾವಚಿತ್ರವಿರುವ ವೋಟರ್ ಐಡಿಯನ್ನು ವಿತರಣೆ ಮಾಡಲಾಗುವುದು. ಚುನಾವಣೆ ನಡೆಯುವ ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲಿ ಒಟ್ಟು 14,48,523 ಮತದಾರರಿದ್ದಾರೆ. ಅದರಲ್ಲಿ 7,49,684 ಪುರುಷ, 6,98,584 ಮಹಿಳಾ ಹಾಗೂ 255 ಇತರೆ ಮತದಾರರಿದ್ದಾರೆ ಎಂದು ಅನಿಲ್‌ಕುಮಾರ್ ವಿವರಿಸಿದರು.
ಉಪಚುನಾವಣೆಗೆ ಆಯೋಗದ ಸಿದ್ಧತೆ ಪೂರ್ಣಗೊಂಡಿದ್ದು, 1,361 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ 1,361 ಮತಗಟ್ಟೆಗಳಿಗೆ ಶೇ. 10 ರಷ್ಟು ಹೆಚ್ಚುವರಿ ಚುನಾವಣಾ ಸಿಬ್ಬಂದಿ ಒಳಗೊಂಡಂತೆ ಒಟ್ಟು 5,988 ಸಿಬ್ಬಂದಿ ನಿಯೋಜಿಸಲಾಗುವುದು. ನಾಲ್ಕು ಕ್ಷೇತ್ರಗಳ ಗಡಿಯಲ್ಲಿ 42 ಚೆಕ್‌ಪೋಸ್ಟ್‌ಗಳ ಸ್ಥಾಪಿಸಲಾಗಿದೆ ಎಂದು ಹೇಳಿದರು. ನಾಲ್ಕು ಕ್ಷೇತ್ರಗಳಲ್ಲಿ ಮಾತ್ರ ನೀತಿ ಸಂಹಿತೆ ಜಾರಿಯಲ್ಲಿದೆ.
ಆದರೆ, ಉಳಿದ ಕ್ಷೇತ್ರಗಳ ಮೇಲೂ ಚುನಾವಣಾ ಆಯೋಗ ಗಮನಹರಿಸಲಿದೆ. ಪಕ್ಕದ ಕ್ಷೇತ್ರಗಳಿಂದ ಚುನಾವಣೆ ನಡೆಯುವ ಕ್ಷೇತ್ರಗಳ ಮತದಾರರಿಗೆ ಆಮಿಷ ಒಡ್ಡುವ ಕುರಿತು ದೂರು ಕೇಳಿಬಂದರೆ ಕ್ರಮ ಕೈಗೊಳ್ಳಲಾಗುವುದು. ಮುಖ್ಯವಾಗಿ ಚುನಾವಣೆ ನಡೆಯುವ ಕ್ಷೇತ್ರದ ಪಕ್ಕದಲ್ಲಿರುವ ಕ್ಷೇತ್ರದ ಮದ್ಯದಂಗಡಿ, ಅಲ್ಲಿಗೆ ಸರಬರಾಜು ಮಾಡಲಾಗುತ್ತಿರುವ ಮದ್ಯ, ಬ್ಯಾಂಕ್ ಖಾತೆಗಳನ್ನು ನಗದು ಜಮಾವಣೆಯ ಬಗ್ಗೆ ನಿಗಾ ವಹಿಸುವುದಕ್ಕೆ ಸೂಚಿಸಿದೆ ಎಂದರು.
ವಿಧಾನಸಭಾ ಕ್ಷೇತ್ರವಾರು ಮತಗಟ್ಟೆ ವಿವರ
ಕ್ಷೇತ್ರ ಒಟ್ಟು ಮತಗಟ್ಟೆ ಸಂಖ್ಯೆ ಸೂಕ್ಷ್ಮ ಮತಗಟ್ಟೆ ಸಂಖ್ಯೆ ಅತಿ ಸೂಕ್ಷ್ಮ ಮತಗಟ್ಟೆ ಸಂಖ್ಯೆ
ಕೆ.ಆರ್.ಪುರ 437 88 05
ಯಶವಂತಪುರ 461 106 15
ಮಹಾಲಕ್ಷ್ಮೀ ಲೇಔಟ್ 270 74 0
ಶಿವಾಜಿನಗರ 193 16 24
ಒಟ್ಟು 1,361 284 44
ವಿಧಾನಸಭಾ ಕ್ಷೇತ್ರವಾರು ಮತದಾರರ ವಿವರ
ಕ್ಷೇತ್ರ ಪುರುಷ ಮಹಿಳಾ ಇತರೆ ಒಟ್ಟು
ಕೆ.ಆರ್.ಪುರ 2,55,465 2,32,228 164 4,87,857
ಯಶವಂತಪುರ 2,48,842 2,32,066 45 4,80,953
ಮಹಾಲಕ್ಷಿ¾ ಲೇಔಟ್ 1,47,353 1,38,474 42 2,85,869
ಶಿವಾಜಿನಗರ 98,024 95,816 04 1,93,844
ಒಟ್ಟು 7,49,684 6,98,584 255 14,48,523
ಚುನಾವಣೆ ಪ್ರಕ್ರಿಯೆ
ಡಿ.5 ಮತದಾನ
ಡಿ.9 ಮತ ಎಣಿಕೆ
ಡಿ.11 ಚುನಾವಣೆ ಪ್ರಕ್ರಿಯೆ ಪೂರ್ಣ
ಯಾವ ಕ್ಷೇತ್ರದಲ್ಲಿ ಎಲ್ಲಿ ಮತ ಎಣಿಕೆ?
ವಿಧಾನಸಭಾ ಕ್ಷೇತ್ರ- ಮತ ಎಣಿಕೆ ಕೇಂದ್ರ
ಕೆ.ಆರ್.ಪುರ- ವಿಠಲ್ ಮಲ್ಯ ರಸ್ತೆಯ ಸೆಂಟ್ ಜೋಸೆಫ್ ಇಂಡಿಯನ್ ಹೈಸ್ಕೂಲ್.
ಯಶವಂತಪುರ- ಆರ್.ವಿ. ಎಂಜಿನಿಯರಿಂಗ್ ಕಾಲೇಜು, ಆರ್.ವಿ.ನಿಕೇತನ್, ಮೈಸೂರು ರಸ್ತೆ, ಕೆಂಗೇರಿ.
ಮಹಾಲಕ್ಷ್ಮಿಲೇಔಟ್-ವಿಠಲ್ ಮಲ್ಯ ರಸ್ತೆಯ ಸೆಂಟ್ ಜೋಸೆಫ್ ಇಂಡಿಯನ್ ಹೈಸ್ಕೂಲ್.
ಶಿವಾಜಿನಗರ- ಅರಮನೆ ರಸ್ತೆಯ ಮೌಂಟ್ ಕಾರ್ಮಲ್ ಪಿ.ಯು ಕಾಲೇಜು.
ಹೊಸ ಮತದಾರರ ವಿವರ
ಕ್ಷೇತ್ರ ಒಟ್ಟು ಅರ್ಜಿ ಅನುಮೋದಿತ ಅರ್ಜಿ ತಿರಸ್ಕರಿಸಿದ ಅರ್ಜಿ ಮತದಾರರ ಪಟ್ಟಿಗೆ ಸೇರ್ಪಡೆ ಸಂಖ್ಯೆ
ಕೆ.ಆರ್.ಪುರ 14,036 12,445 816 12,069
ಯಶವಂತಪುರ 8,481 7,606 55 7,134
ಮಹಾಲಕ್ಷ್ಮೀ ಲೇಔಟ್ 4,720 4,506 193 4,011
ಶಿವಾಜಿನಗರ 5,919 5,301 348 3,019
ಒಟ್ಟು 33,156 29,858 1,412 26,233
ಕ್ಷೇತ್ರ ಕಣದಲ್ಲಿರುವ ಅಭ್ಯರ್ಥಿಗಳು
ಕೆ.ಆರ್.ಪುರ 13
ಯಶವಂತಪುರ 12
ಮಹಾಲಕ್ಷ್ಮೀ ಲೇಔಟ್ 12
ಶಿವಾಜಿನಗರ 19
ಒಟ್ಟು 56
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Egg Thrown Case: 100-150 ಜನರಿಂದ ನನ್ನ ಮೇಲೆ ದಾಳಿ: ಶಾಸಕ ಮುನಿರತ್ನ ದೂರು
Bengaluru: ಚಲಿಸುತ್ತಿದ್ದ ರೈಲಿಗೆ ಸಿಲುಕಿ ಇಬ್ಬರು ಯುವಕರು ಸಾವು
Fraud Case: ಡಿಕೆಸು ಹೆಸರಿನಲ್ಲಿ 8.4 ಕೋಟಿ ರೂ. ವಂಚನೆ; ಆರೋಪಿಗಳಿಗೆ ನೋಟಿಸ್
Arrested: ಸ್ನೇಹಿತನ ಹತ್ಯೆಗೈದಿದ್ದ ಆರೋಪಿ ಬಂಧನ
Toll fee: ಹೆಬ್ಬಾಳ-ಸಿಲ್ಕ್ ಬೋರ್ಡ್ ಸುರಂಗ ರಸ್ತೆ: ಕೇವಲ 18 ಕಿ.ಮೀ.ಗೆ 288 ರೂ. ಸುಂಕ?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Patna: “ರಘುಪತಿ ರಾಘವ’ ಭಜನೆ ಹಾಡಿದ ಗಾಯಕಿ ವಿರುದ್ಧ ಪ್ರತಿಭಟನೆ: ಹಾಡುಗಾರ್ತಿ ಕ್ಷಮೆ
Canada: ಮಾನವ ಕಳ್ಳಸಾಗಣೆಯಲ್ಲಿ ಕೆನಡಾದ 260 ಕಾಲೇಜು! ವಿದ್ಯಾರ್ಥಿ ವೀಸಾ ಮೂಲಕ ಆಮಿಷ
KMF: ಸಂಕ್ರಾಂತಿ ಬಳಿಕ ಹಾಲಿನ ದರ ಪರಿಷ್ಕರಣೆ ಸರಕಾರದಿಂದ ನಿರ್ಧಾರ: ಭೀಮಾ ನಾಯ್ಕ
Accidental Prime Minister: ದ ಮೇಕಿಂಗ್ ಆ್ಯಂಡ್ ಅನ್‌ಮೇಕಿಂಗ್ ಆಫ್ ಡಾ.ಸಿಂಗ್
Mangaluru: ವಿಚ್ಛೇದಿತ ಮಹಿಳೆಯನ್ನು ಹಿಂಬಾಲಿಸಿದ ಇಬ್ಬರು ವಶಕ್ಕೆ; ಪ್ರಕರಣ ದಾಖಲು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.