Suburban rail: ಉಪನಗರ ರೈಲು ಮಾರ್ಗಕ್ಕೆ 2800 ಕೋಟಿ ವಿದೇಶಿ ಸಾಲ

Team Udayavani, Jun 22, 2024, 3:28 PM IST

Suburban rail: ಉಪನಗರ ರೈಲು ಮಾರ್ಗಕ್ಕೆ 2800 ಕೋಟಿ ವಿದೇಶಿ ಸಾಲ

ಬೆಂಗಳೂರು: ನಗರದ ಅಂತಾ ರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಉಪನಗರ ರೈಲು ಮಾರ್ಗಕ್ಕೆ ಯೂರೋಪಿಯನ್‌ ಇನ್‌ವೆಸ್ಟ್‌ ಮೆಂಟ್‌ ಬ್ಯಾಂಕ್‌ ಸುಮಾರು 2,800 ಕೋಟಿ ರೂ. ಆರ್ಥಿಕ ನೆರವು ನೀಡಲು ಮುಂದೆ ಬಂದಿದ್ದು, ಈ ಸಂಬಂಧ ದೆಹಲಿಯಲ್ಲಿ ಕೇಂದ್ರದ ಆರ್ಥಿಕ ವ್ಯವಹಾರಗಳ ಇಲಾಖೆಯು ಗುರುವಾರ ಬ್ಯಾಂಕ್‌ ನೊಂದಿಗೆ ಒಡಂಬಡಿಕೆ ಮಾಡಿಕೊಂಡಿತು.

ಒಡಂಬಡಿಕೆಯಂತೆ ಕರ್ನಾಟಕ ರೈಲ್ವೆ ಮೂಲಸೌಕರ್ಯ ಅಭಿವೃದ್ಧಿ ನಿಯಮಿತ (ಕೆ-ರೈಡ್‌) ಕೈಗೆತ್ತಿಕೊಂಡಿರುವ ಬೆಂಗ ಳೂರು ಉಪನಗರ ರೈಲು ಯೋಜನೆಗೆ ಯೂರೋಪಿಯನ್‌ ಇನ್‌ವೆಸ್ಟ್‌ಮೆಂಟ್‌ ಬ್ಯಾಂಕ್‌ (ಇಐಎ) 300 ಮಿಲಿಯನ್‌ ಯೂರೋ (2,789 ಕೋಟಿ ರೂ.) ದೀರ್ಘಾವಧಿ ಸಾಲ ನೀಡಲಿದೆ. ಇದನ್ನು ಉದ್ದೇಶಿತ ಯೋಜನೆಯ ಕಾರಿಡಾರ್‌-1, ಡಿಪೋ-2 ಹಳಿ, ಟ್ರ್ಯಾಕ್ಷನ್‌ ಮತ್ತಿತರ ಉದ್ದೇಶಗಳಿಗೆ ವಿನಿಯೋಗಿಸಲು ಅವಕಾಶ ಕಲ್ಪಿಸಿದೆ.

41.4 ಕಿ.ಮೀ. ಉದ್ದದ ಕಾರಿಡಾರ್‌-1 ಮಾರ್ಗವು ಬೆಂಗಳೂರು ನಗರದಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ದೇವನಹಳ್ಳಿ ನಡುವೆ ಸಂಪರ್ಕ ಕಲ್ಪಿಸಲಿದೆ. 2026-27ರ ಅಂತ್ಯಕ್ಕೆ ಈ ಮಾರ್ಗ ಪೂರ್ಣಗೊಳಿಸುವ ಗುರಿಯನ್ನು ಕೆ-ರೈಡ್‌ ಹೊಂದಿದೆ. ಈ ಸಾಲದ ನೆರವಿನಿಂದ ಯೋಜನೆ ಪ್ರಗತಿ ಮತ್ತಷ್ಟು ಚುರುಕುಗೊಳ್ಳಲಿದೆ. ಇದೇ ವಿಮಾನ ನಿಲ್ದಾಣಕ್ಕೆ “ನಮ್ಮ ಮೆಟ್ರೋ’ ಕೂಡ ಸಂಪರ್ಕ ಕಲ್ಪಿಸುತ್ತಿದ್ದು, ಕಾಮಗಾರಿ ಪ್ರಗತಿಯಲ್ಲಿದೆ. ಒಟ್ಟಾರೆ 148 ಕಿ.ಮೀ. ಉದ್ದದ 4 ಕಾರಿಡಾರ್‌ ಗಳು ಉಪನಗರ ರೈಲು ಯೋಜನೆ ಅಡಿ ನಿರ್ಮಿಸಲಾಗುತ್ತಿದ್ದು, 15,767 ಕೋಟಿ ರೂ. ಯೋಜನಾ ವೆಚ್ಚ ಅಂದಾಜಿಸಲಾಗಿದೆ. ಈ ಪೈಕಿ 7,438 ಕೋಟಿ (800 ಮಿಲಿಯನ್‌ ಯೂರೋ) ವಿವಿಧ ಹಣಕಾಸು ಸಂಸ್ಥೆಗಳಿಂದ ಸಾಲದ ರೂಪದಲ್ಲಿ ಪಡೆಯಲು ಕೆ-ರೈಡ್‌ಗೆ ಅವಕಾಶ ಕಲ್ಪಿಸಲಾಗಿದೆ.

ಈ ಮಧ್ಯೆ ಗುರುವಾರ ವಾಣಿಜ್ಯ ಮತ್ತು ಕೈಗಾರಿಕೆ ಹಾಗೂ ಮೂಲ ಸೌಕರ್ಯ ಸಚಿವ ಎಂ.ಬಿ. ಪಾಟೀಲ, ಜರ್ಮನಿಯ ಕೆಎಫ್ಡಬ್ಲ್ಯು ಡೆವಲಪ್‌ಮೆಂಟ್‌ ಬ್ಯಾಂಕ್‌ ಮತ್ತು ಯೂರೋ ಪಿಯನ್‌ ಇನ್‌ವೆಸ್ಟ್‌ಮೆಂಟ್‌ ಬ್ಯಾಂಕ್‌ನ ಪ್ರತಿನಿಧಿಗಳೊಂದಿಗೆ ಸಮಾಲೋಚನೆ ನಡೆಸಿದರು. ಈ ವೇಳೆ ಯೋಜನೆ ಪ್ರಯೋಜನಗಳ ಕುರಿತು ವಿವರಿಸಿದರು. ಅಭಿವೃದ್ಧಿ ಆಯುಕ್ತೆ ಶಾಲಿನಿ ರಜನೀಶ್‌ ಕೂಡ ಚರ್ಚೆ ನಡೆಸಿದರು.

ಟಾಪ್ ನ್ಯೂಸ್

2

T20 World Cup: ಭಾರತದ ವಿಶ್ವಕಪ್‌ ಗೆಲುವಿಗೆ 10 ಕಾರಣಗಳು

Modi,-Dravid

T-20 World Cup: ದೂರವಾಣಿ ಕರೆ ಮಾಡಿ ಭಾರತ ತಂಡಕ್ಕೆ ಶುಭ ಹಾರೈಸಿದ ಮೋದಿ

6-health

AUB: ಗರ್ಭಕೋಶದ ಅಸಹಜ ರಕ್ತಸ್ರಾವ; ಅಬ್ನಾರ್ಮಲ್‌ ಯುಟರೈನ್‌ ಬ್ಲೀಡಿಂಗ್‌ (ಎಯುಬಿ)

1

T20 world cup: ವಿಶ್ವಕಪ್‌ ದಿಗ್ವಿಜಯ… ಅಂದು – ಇಂದು 

TeamIndia; ಮುಂದಿನ ಕೋಚ್ ಬಹುತೇಕ ಅಂತಿಮ…: ದೊಡ್ಡ ಸುಳಿವು ನೀಡಿದ ಬಿಸಿಸಿಐ ಅಧ್ಯಕ್ಷ ಬಿನ್ನಿ

TeamIndia; ಮುಂದಿನ ಕೋಚ್ ಬಹುತೇಕ ಅಂತಿಮ…: ದೊಡ್ಡ ಸುಳಿವು ನೀಡಿದ ಬಿಸಿಸಿಐ ಅಧ್ಯಕ್ಷ ಬಿನ್ನಿ

9

700 ಕೋಟಿ ವೆಚ್ಚದ ʼಕಲ್ಕಿ 2898 ಎಡಿʼ.. ಇಲ್ಲಿದೆ ಅತ್ಯಂತ ದುಬಾರಿ ಭಾರತೀಯ ಚಿತ್ರಗಳ ಪಟ್ಟಿ

prahlad joshi

Hubli; ಹೆಚ್ಚುವರಿ ಡಿಸಿಎಂ ಸ್ಥಾನ ವಿಚಾರದಲ್ಲಿ ಸಿದ್ದರಾಮಯ್ಯ ಕೈವಾಡವಿದೆ: ಪ್ರಹ್ಲಾದ ಜೋಶಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Crime: ಸ್ನೇಹಿತನನ್ನು ಕಟ್ಟಡದಿಂದ ಕೆಳಗೆ ದೂಡಿ ಕೊಲೆಗೈದ ಆರೋಪಿ ಸೆರೆ

Crime: ಸ್ನೇಹಿತನನ್ನು ಕಟ್ಟಡದಿಂದ ಕೆಳಗೆ ದೂಡಿ ಕೊಲೆಗೈದ ಆರೋಪಿ ಸೆರೆ

Untitled-1

Bengaluru: ಬೆಂಕಿ ಅವಘಡ; 6 ಕಾಲೇಜು ಬಸ್‌ಗಳು ಸುಟ್ಟು ಕರಕಲು

Bengaluru: ಟ್ರಾಫಿಕ್‌ ಜಾಮ್‌ ಪರಿಹಾರಕ್ಕೆ ಕೇಂದ್ರದ ಮೊರೆ ಹೋದ ರಾಜ್ಯ

Bengaluru: ಟ್ರಾಫಿಕ್‌ ಜಾಮ್‌ ಪರಿಹಾರಕ್ಕೆ ಕೇಂದ್ರದ ಮೊರೆ ಹೋದ ರಾಜ್ಯ

BBMP: ಬಿಬಿಎಂಪಿಯಲ್ಲಿ ಅಕ್ರಮದ ಕುರಿತು ವರದಿ ಕೇಳಿದ ಸಿಎಂ ಕಚೇರಿ

BBMP: ಬಿಬಿಎಂಪಿಯಲ್ಲಿ ಅಕ್ರಮದ ಕುರಿತು ವರದಿ ಕೇಳಿದ ಸಿಎಂ ಕಚೇರಿ

Bengaluru: ಫ್ಲೈಓವರ್‌ನಲ್ಲಿ ಹಿಮ್ಮುಖವಾಗಿ ಕಾರು ಓಡಿಸಿದ ಚಾಲಕನ ಸೆರೆ

Bengaluru: ಫ್ಲೈಓವರ್‌ನಲ್ಲಿ ಹಿಮ್ಮುಖವಾಗಿ ಕಾರು ಓಡಿಸಿದ ಚಾಲಕನ ಸೆರೆ

MUST WATCH

udayavani youtube

ವಿಧಿಯಾಟಕ್ಕೆ ಬಲಿಯಾದ ಅಂಧರ ಪುಟ್ ಬಾಲ್ ತಂಡದ ಕ್ಯಾಪ್ಟನ್

udayavani youtube

ಮಾತು ಬರದ ಮಗುವಿಗೆ ಮಾತು ಬರಿಸಿದ ಕಾಪು ಮಾರಿಯಮ್ಮ | ಕಾಪುವಿನ ಅಮ್ಮನ ಪವಾಡ

udayavani youtube

ಡಿಸಿಎಂ ವಿಚಾರ ಇನ್ನೊಮ್ಮೆ ಮಾತನಾಡೋಣ; ಕುಕ್ಕೆಯಲ್ಲಿ ಡಿ.ಕೆ.ಶಿವಕುಮಾರ್

udayavani youtube

ಆನೆಗುಡ್ಡೆ ಶ್ರೀ ವಿನಾಯಕ ದೇಗುಲದಲ್ಲಿ ಅಂಗಾರ ಸಂಕಷ್ಟಹರ ಚತುರ್ಥಿ|

udayavani youtube

ಬಸ್ಸೇರಿ ಸಮಸ್ಯೆ ಆಲಿಸಿದ ಶಾಸಕ ರೈ

ಹೊಸ ಸೇರ್ಪಡೆ

2

T20 World Cup: ಭಾರತದ ವಿಶ್ವಕಪ್‌ ಗೆಲುವಿಗೆ 10 ಕಾರಣಗಳು

Modi,-Dravid

T-20 World Cup: ದೂರವಾಣಿ ಕರೆ ಮಾಡಿ ಭಾರತ ತಂಡಕ್ಕೆ ಶುಭ ಹಾರೈಸಿದ ಮೋದಿ

6-health

AUB: ಗರ್ಭಕೋಶದ ಅಸಹಜ ರಕ್ತಸ್ರಾವ; ಅಬ್ನಾರ್ಮಲ್‌ ಯುಟರೈನ್‌ ಬ್ಲೀಡಿಂಗ್‌ (ಎಯುಬಿ)

1

T20 world cup: ವಿಶ್ವಕಪ್‌ ದಿಗ್ವಿಜಯ… ಅಂದು – ಇಂದು 

shivamogga

Shimoga; ಭದ್ರಾವತಿ ವಿಐಎಸ್ಎಲ್ ಕಾರ್ಖಾನೆಗೆ ಸಚಿವ ಕುಮಾರಸ್ವಾಮಿ ಭೇಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.