ಆರು ತಿಂಗಳಲ್ಲಿ ಲೋಕಾಯುಕ್ತಕ್ಕೆ 2952 ದೂರು
Team Udayavani, Oct 4, 2017, 11:44 AM IST
ಬೆಂಗಳೂರು: ಸರ್ಕಾರಿ ಅಧಿಕಾರಿಗಳ ಲಂಚಗುಳಿತನ, ಅಧಿಕಾರ ದುರ್ಬಳಕೆ ಸೇರಿದಂತೆ ಮತ್ತಿತರ ಆರೋಪಗಳ ಸಂಬಂಧದ ದೂರುಗಳು ಲೋಕಾಯುಕ್ತಕ್ಕೆ ಹರಿದು ಬರುತ್ತಿದ್ದು, ಕಳೆದ ಫೆಬ್ರವರಿಯಿಂದ ಸೆಪ್ಟೆಂಬರ್ 21ರ ನಡುವೆ ಬರೋಬ್ಬರಿ 2952 ದೂರುಗಳು ದಾಖಲಾಗಿವೆ.
ಈ ಮುಂಚೆ ಲೋಕಾಯುಕ್ತದಲ್ಲಿ 7174 ದೂರುಗಳು ಬಾಕಿಯಿದ್ದು, ಈ ವರ್ಷ ಸಾರ್ವಜನಿಕರು ಹಾಗೂ ಲೋಕಾಯುಕ್ತರು ಸ್ವಯಂಪ್ರೇರಿತವಾಗಿ ದಾಖಲಿಸಿಕೊಂಡಿರುವುದೂ ಸೇರಿದಂತೆ ದೂರುಗಳು 2952ಕ್ಕೂ ಹೆಚ್ಚಿವೆ. ಈ ಪೈಕಿ 3832 ದೂರುಗಳನ್ನು ಇತ್ಯರ್ಥಪಡಿಸಿದ್ದು, ಇನ್ನೂ 6294 ದೂರುಗಳ ವಿಚಾರಣೆ ಬಾಕಿ ಉಳಿದುಕೊಂಡಿದೆ.
ಅದೇ ರೀತಿ ವಿಚಾರಣಾ ಹಂತದಲ್ಲಿದ್ದ 2695 ಪ್ರಕರಣಗಳಿಗೆ ಈ ಬಾರಿ 860 ಕೇಸ್‌ಗಳು ಸೇರ್ಪಡೆಗೊಂಡಿವೆ. ಈ ಪ್ರಕರಣಗಳಲ್ಲಿ 370 ಪ್ರಕರಣಗಳನ್ನು ಇತ್ಯರ್ಥಪಡಿಸಿದ್ದು 3185 ಕೇಸ್‌ಗಳ ವಿಚಾರಣೆ ಪ್ರಗತಿಯಲ್ಲಿವೆ.ಲೋಕಾಯುಕ್ತದಲ್ಲಿ ಬಾಕಿ ಉಳಿದುಕೊಂಡಿರುವ ಕೇಸ್‌ಗಳನ್ನು ತ್ವರಿತವಾಗಿ ಇತ್ಯರ್ಥಪಡಿಸಲು ಕ್ರಮ ಕೈಗೊಳ್ಳಲಾಗುತ್ತಿದ್ದರೂ ವಿಚಾರಣಾಧಿಕಾರಿಗಳ ಕೊರತೆಯಿದೆ.
ಹೀಗಾಗಿ ಜಿಲ್ಲಾನ್ಯಾಯಾಧೀಶರ ಹುದ್ದೆಯ 9 ಮಂದಿಯನ್ನು ವಿಚಾರಣಾಧಿಕಾರಿಗಳು ಹಾಗೂ 3 ಮಂದಿ ರೀಸರ್ಚ್ ಅಸಿಸ್ಟೆಂಟ್‌ಗಳು, ಅವರಿಗೆ ನೆರವಾಗಲು ಅಗತ್ಯವಾದ ಸಿಬ್ಬಂದಿ ಸೇರಿ ಒಟ್ಟು 36 ಮಂದಿಯನ್ನು ನೇಮಕಗೊಳಿಸುವಂತೆ ಸರ್ಕಾರಕ್ಕೆ ಪತ್ರಬರೆಯಲಾಗಿದ್ದು ಉತ್ತಮ ಪ್ರತಿಕ್ರಿಯೆ ದೊರೆತಿದೆ ಎಂದು ಲೋಕಾಯುಕ್ತ ಪಿ.ವಿಶ್ವನಾಥಶೆಟ್ಟಿ ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
PoK ಪ್ರದೇಶದಲ್ಲಿ ಚಾಂಪಿಯನ್ಸ್ ಟ್ರೋಫಿ ಪಂದ್ಯಗಳು: ಬಿಸಿಸಿಐ ನಿಂದ ತೀವ್ರ ಖಂಡನೆ
Congress: ಸರ್ಕಾರದಲ್ಲಿ ಒಬ್ಬರು ಏತಿ ಅಂದರೆ ಮತ್ತೊಬ್ಬರು ಪ್ರೇತಿ ಅಂತಾರೆ: ಆರ್.ಅಶೋಕ್
50 cr for 50 Cong MLAs ; ಎಸ್ ಐಟಿ ತನಿಖೆಗೆ ಎಚ್.ಡಿ.ಕುಮಾರಸ್ವಾಮಿ ಒತ್ತಾಯ
‘Kanguva’; ಮೊದಲ ದಿನವೇ 58.62 ಕೋಟಿ ರೂ. ಬಾಚಿದ ಕಂಗುವ
Udupi: ಮೀನುಗಾರಿಕೆ ಕಾರ್ಮಿಕ ಸಾವು; ಪ್ರಕರಣ ದಾಖಲು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.