30ರಿಂದ ಲಾರಿ, ಬಸ್‌ಗಳ ಅನಿರ್ದಿಷ್ಟಾವಧಿ ಮುಷ್ಕರ
Team Udayavani, Mar 19, 2017, 11:14 AM IST
ಬೆಂಗಳೂರು: ಮೂರನೇ ವ್ಯಕ್ತಿ ವಿಮೆ (ಥರ್ಡ್ ಪಾರ್ಟಿ ಇನ್‌ಶುರೆನ್ಸ್) ಪ್ರೀಮಿಯಂ ದರ ದುಪ್ಪಟ್ಟು, 15 ವರ್ಷಗಳಹಳೆಯ ವಾಹನ ನಿಷೇಧ, ರಾಜ್ಯ ಹೆದ್ದಾರಿಗಳಲ್ಲೂ ಟೋಲ್ ಸಂಗ್ರಹ ತೀರ್ಮಾನ ಖಂಡಿಸಿ ಮಾ.30ರಿಂದ ದಕ್ಷಿಣ ಭಾರತದ 6 ರಾಜ್ಯಗಳಲ್ಲಿ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲು ದಕ್ಷಿಣ ವಲಯದ ವಾಣಿಜ್ಯ ಸೇವಾ ವಾಹನಗಳ ಮಾಲಿಕರ ಸಂಘ ನಿರ್ಧರಿಸಿದೆ. ಲಾರಿ ಮುಷ್ಕರಕ್ಕೆ ಖಾಸಗಿ ಬಸ್, ಟ್ಯಾಕ್ಸಿ, ಮ್ಯಾಕ್ಸಿಕ್ಯಾಬ್, ಪ್ರವಾಸಿ ವಾಹನಗಳ ಮಾಲಿಕರ ಸಂಘಗಳು ಕೈ ಜೋಡಿಸಿದ್ದು, 30ರಂದು ಬೆಳಗ್ಗೆಯಿಂದಲೇ ಈ ಎಲ್ಲ ವಾಹನಗಳು ರಸ್ತೆಗಿಳಿಯುವುದಿಲ್ಲ ಎಂದು ದಕ್ಷಿಣ ವಲಯದ ವಾಣಿಜ್ಯ ಸೇವಾ ವಾಹನಗಳ ಮಾಲಿಕರ ಸಂಘದ ಪ್ರಧಾನ ಕಾರ್ಯದರ್ಶಿ ಜಿ.ಆರ್. ಷಣ್ಮುಗಪ್ಪ ತಿಳಿಸಿದ್ದಾರೆ.
ಕರ್ನಾಟಕ, ತಮಿಳುನಾಡು, ತೆಲಂಗಾಣ, ಆಂಧ್ರಪ್ರದೇಶ, ಪುದುಚೇರಿ ಸೇರಿದಂತೆ 6 ರಾಜ್ಯಗಳಲ್ಲಿ ವಾಣಿಜ್ಯ ಸೇವಾ ವಾಹನಗಳ ಸಂಚಾರ ಸ್ಥಗಿತಗೊಳ್ಳಲಿದೆ. ಈ ಅವೈಜ್ಞಾನಿಕ ನಿರ್ಧಾರಗಳಿಂದ ಹಿಂದೆ ಸರಿಯುವವರೆಗೂ ಮುಷ್ಕರ ಹಿಂಪಡೆಯುವುದಿಲ್ಲ ಎಂದು ತಿಳಿಸಿದ್ದಾರೆ. ಈ ಸಂಬಂಧ
“ಉದಯವಾಣಿ’ ಜತೆ ಮಾತನಾಡಿದ ಅವರು, ಕರ್ನಾಟಕದಲ್ಲೇ ಲಾರಿ ಸೇರಿ 20 ಲಕ್ಷ ವಾಣಿಜ್ಯ ಸೇವೆಯ ವಾಹನಗಳಿವೆ. ವಿಮಾ ಮೊತ್ತ ದುಪ್ಪಟ್ಟುಗೊಳಿಸುವುದರಿಂದ ಹೊರೆಯಾಗಲಿದೆ. 5-10 ವರ್ಷದ ಇಂಡಿಕಾ ಕಾರುಗಳ ಬೆಲೆಯೇ 70 ರಿಂದ 80 ಸಾವಿರ ರೂ. ಇರುತ್ತದೆ. ಆದರೆ, ಅದಕ್ಕೆ ಥರ್ಡ್ ಪಾರ್ಟಿ ಇನ್‌ಶುರೆನ್ಸ್ ಮೊತ್ತವೇ 50 ಸಾವಿರ ರೂ. ಆಗುತ್ತದೆ. ಬರೀ ಲಾರಿಗಳಿಂದಲೇ ಮಾಲಿನ್ಯ ಆಗುತ್ತಿದೆಯೇ? ಕೈಗಾರಿಕೆಗಳು ಹೊಗೆ ಉಗುಳುತ್ತಿಲ್ಲವೇ? 3ರಿಂದ 4 ಲಕ್ಷ ವಾಹನಗಳು 15 ವರ್ಷ ಮೀರಿವೆ.ಅವುಗಳನ್ನು ಏನು ಮಾಡಬೇಕು ಎಂದು ಪ್ರಶ್ನಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Thirthahalli: ಶಾಸಕ ಸ್ಥಾನವನ್ನು ಗಿರವಿ ಇಟ್ಟರಾ ಆರಗ ಜ್ಞಾನೇಂದ್ರ ?
Bengaluru: ಮುನಿರತ್ನ ವಿರುದ್ಧ ಹನಿಟ್ರ್ಯಾಪ್ ಕೇಸ್: ಪಿಐ ಸೆರೆ
Bengaluru: ಇ-ಖಾತಾ ಗೊಂದಲದಿಂದ ಲಂಚಕ್ಕೆ ದಾರಿ: ಆರ್. ಅಶೋಕ್
Shimoga; ಜಮೀರ್ ಅವರನ್ನು ಗಡಿಪಾರು ಮಾಡಿ: ಶಾಸಕ ಚನ್ನಬಸಪ್ಪ
Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು
MUST WATCH
ಹೊಸ ಸೇರ್ಪಡೆ
Karkala: ತಿಂಗಳ ಹಿಂದೆ ಮೃತಪಟ್ಟ ಪತಿ, ಮನನೊಂದು ಆತ್ಮಹತ್ಯೆಗೆ ಶರಣಾದ ಅಂಗನವಾಡಿ ಶಿಕ್ಷಕಿ
Hampanakatte: ಗುಟ್ಕಾ ಉಗುಳುವವರು, ಧೂಮಪಾನಿಗಳ ಹಾವಳಿ
Mangaluru: ತೆರೆದ ತೋಡಿನಲ್ಲಿ ಕೊಳಚೆ ನೀರು ಹರಿಯುವುದು ನಿಂತಿಲ್ಲ
Karkala: ಅಣ್ಣನ ತಿಥಿಗೆ ಬಂದಿದ್ದ ತಂಗಿ ವಿದ್ಯುತ್ ಆಘಾತದಿಂದ ಮೃ*ತ್ಯು
Mangaluru: ಪಂಪ್‌ವೆಲ್-ಪಡೀಲ್ ನಡುವಿನ ಚತುಷ್ಪಥ ಕಾಮಗಾರಿ 3 ವರ್ಷ ಕಳೆದರೂ ಅಪೂರ್ಣ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.