ಎರಡೇ ದಿನದಲ್ಲಿ ವಾಹನ ನೋಂದಣಿ ಶೇ.30 ಹೆಚ್ಚಳ
Team Udayavani, Apr 2, 2017, 12:24 PM IST
ಬೆಂಗಳೂರು: ಏಪ್ರಿಲ್ 1ರಿಂದ ಭಾರತ್ ಸ್ಟೇಜ್-3 (ಬಿಎಸ್-3) ಮಾದರಿಯ ವಾಹನಗಳ ಮಾರಾಟ ನಿಷೇಧದ ಹಿನ್ನೆಲೆಯಲ್ಲಿ ಗುರುವಾರ ಹಾಗೂ ಶುಕ್ರವಾರ ರಾಜ್ಯಾದ್ಯಂತ ಸಾರಿಗೆ ಇಲಾಖೆಯಲ್ಲಿ ವಾಹನಗಳ ನೋಂದಣಿ ಶೇ.30ರಷ್ಟು ಹೆಚ್ಚಳವಾಗಿದೆ.
ವಾಹನಗಳ ಮಾರಾಟಕ್ಕೆ ವಿಶೇಷ ರಿಯಾಯಿತಿ ಘೋಷಣೆ ಪರಿಣಾಮಬೆಂಗಳೂರಿನಲ್ಲಿ ಈ ಎರಡೂ ದಿನಗಳಲ್ಲಿ ಒಟ್ಟು 7,600 ವಾಹನಗಳು ನೋಂದಣಿಯಾಗಿವೆ!
ವಾಯು ಮಾಲಿನ್ಯ ತಡೆಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಸುಪ್ರೀಂ ಕೋರ್ಟ್ ಬಿಎಸ್-3 ಮಾದರಿಯ ವಾಹನಗಳ ಮಾರಾಟವನ್ನು ಏ.1ರಿಂದ ನಿಷೇಧಿಸಿ ಬುಧವಾರ ಮಹತ್ವದ ಆದೇಶ ನೀಡಿತ್ತು.
ರಾಜ್ಯಾದ್ಯಂತ ಸುಮಾರು 30,000ಕ್ಕೂ ಹೆಚ್ಚು ಬಿಎಸ್-3 ಮಾದರಿಯ ವಾಹನಗಳು ಮಾರಾಟಕ್ಕೆ ಸಿದ್ಧವಿದ್ದವು. ಈ ಹಿನ್ನೆಲೆಯಲ್ಲಿ ಕಂಪನಿ ಹಾಗೂ ಶೋ ರೂಂ ಮಾಲೀಕರು ವಿಶೇಷ ರಿಯಾಯ್ತಿಗಳನ್ನು ದಿಢೀರ್ ಪ್ರಕಟಿಸಿದ್ದರು. ಹಾಗಾಗಿ ಮಾರಾಟಕ್ಕೆ ಅವಕಾಶವಿದ್ದ ಎರಡು ದಿನಗಳಲ್ಲೇ ದಾಖಲೆ ಎನ್ನಬಹುದಾದ ಪ್ರಮಾಣದಲ್ಲಿ ವಾಹನಗಳು ಮಾರಾಟವಾಗಿವೆ. ಸುಪ್ರೀಂ ಕೋರ್ಟ್ ಬಿಎಸ್-3 ಮಾದರಿಯ ವಾಹನ ಮಾರಾಟಕ್ಕೆ ನೀಡಿದ್ದ ಗಡುವು ಮುಕ್ತಾಯವಾಗಿದ್ದು, ಶನಿವಾರದಿಂದ ಈ ಮಾದರಿಯ ವಾಹನಗಳ ನೋಂದಣಿ ನಿಷೇಧಗೊಂಡಿದೆ.
ಆದರೆ ಮಾರ್ಚ್ 31ರೊಳಗೆ ಮಾರಾಟವಾಗಿದ್ದರೆ (ಇನ್ ವಾಯ್ಸ ಸೇರಿದಂತೆ ಶುಲ್ಕ ಪಾವತಿಯಾದವು) ಆ ವಾಹನಗಳಿಗೆ ಏಪ್ರಿಲ್ 1ರ ನಂತರವೂ ನೋಂದಣಿಗೆ ಅವಕಾಶವಿರಲಿದೆ. ಮೂರು ಪಟ್ಟು ನೋಂದಣಿ: ಮಾರ್ಚ್ 30 ಹಾಗೂ 31ರಂದು ರಾಜ್ಯಾದ್ಯಂತ ವಾಹನ ನೋಂದಣಿ ಶೇ.30ರಷ್ಟು ಹೆಚ್ಚಳವಾಗಿದೆ. ಸರಾಸರಿ ನಿತ್ಯ 3,000 ವಾಹನ ನೋಂದಣಿಯಾದರೆ, ಈ ಎರಡೂ ದಿನಗಳಲ್ಲಿ ಶೇ.30ರಷ್ಟು ಹೆಚ್ಚುವರಿ ವಾಹನಗಳು ನೋಂದಣಿಯಾಗಿವೆ. ಇನ್ನು 10 ಪ್ರಾದೇಶಿ ಸಾರಿಗೆ ಕಚೇರಿಗಳನ್ನು (ಆರ್ಟಿಒ) ಹೊಂದಿರುವ ಬೆಂಗಳೂರು ನಗರದಲ್ಲಿ ಈ ಎರಡೂ ದಿನಗಳಲ್ಲಿ ಸಾಮಾನ್ಯ ದಿನಗಳಿಗೆ ಹೋಲಿಸಿದರೆ ಮೂರು ಪಟ್ಟು ಹೆಚ್ಚು ವಾಹನಗಳು ನೋಂದಣಿಯಾಗಿವೆ.
ಕೆಲ ಗಂಟೆಗಳಲ್ಲೇ ಬಿಕರಿ: ಬಿಎಸ್-3 ಮಾದರಿಯ ವಾಹನಗಳಲ್ಲಿ ಪ್ರಮುಖವಾಗಿ ದ್ವಿಚಕ್ರ ವಾಹನಗಳಿಗೆ ಭಾರಿ ರಿಯಾಯ್ತಿ, ಉಚಿತ ವಿಮಾ ಸೌಲಭ್ಯಗಳನ್ನು ಪ್ರಕಟಿಸಿದ್ದರಿಂದ ಗ್ರಾಹಕರು ಪೈಪೋಟಿಗೆ ಬಿದ್ದವರಂತೆ ಖರೀದಿಗೆ ಮುಂದಾದರು. ಏಪ್ರಿಲ್ 1ರ ನಂತರ ಒಂದು ಲಕ್ಷ ರೂ.ಗಿಂತ ಹೆಚ್ಚು ಮೊತ್ತದ ವಾಹನಕ್ಕೆ ತೆರಿಗೆ ಪ್ರಮಾಣ ಶೇ.12ರಿಂದ ಶೇ.18ರಷ್ಟಕ್ಕೆಏರಿಕೆಯಾಗುವ ಹಿನ್ನೆಲೆಯಲ್ಲಿ ಮಾ.31ರೊಳಗೆ ಖರೀದಿಗೆ ಮನಸ್ಸು ಮಾಡಿದ್ದರಿಂದ ಬಹಳಷ್ಟು ಮಳಿಗೆಗಳಲ್ಲಿ ಶುಕ್ರವಾರ ಕೆಲ ಗಂಟೆಗಳಲ್ಲೇ ಬಿಎಸ್ -3 ಮಾದರಿಯ ವಾಹನಗಳು ಬಿಕರಿಯಾಗಿದ್ದವು.
ಗ್ರಾಹಕರಿಂದ ಬೇಡಿಕೆ ಹೆಚ್ಚಾಗಿದ್ದರಿಂದ ಹಲವೆಡೆ “ಬಿಎಸ್-3 ಮಾದರಿಯ ವಾಹನಗಳಿಲ್ಲ’ ಎಂಬ ಫಲಕ ಅಳವಡಿಸಿದ್ದು ಕಂಡುಬಂತು. ರಾಜ್ಯಾದ್ಯಂತ ನಿತ್ಯ ಸರಾಸರಿ 3000 ವಾಹನಗಳು ನೋಂದಣಿಯಾಗುತ್ತವೆ. ಆದರೆ ಮಾರ್ಚ್ 30 ಹಾಗೂ 31ರಂದು ಸಾಮಾನ್ಯ ದಿನಗಳಿಗೆ ಹೋಲಿಸಿದರೆ ಶೇ.30ರಷ್ಟು ಹೆಚ್ಚುವರಿ ವಾಹನಗಳು ನೋಂದಣಿಯಾಗಿವೆ.
– ಬಿ.ದಯಾನಂದ, ಸಾರಿಗೆ ಇಲಾಖೆ ಆಯುಕ್ತ
ಬೆಂಗಳೂರಿನಲ್ಲಿ ಗುರುವಾರ 2,100 ಹಾಗೂ ಶುಕ್ರವಾರ 5,500 ವಾಹನಗಳು ನೋಂದಣಿಯಾಗಿದ್ದು, ಬಹುತೇಕ ದ್ವಿಚಕ್ರ ವಾಹನಗಳಾಗಿವೆ. ಬೆಂಗಳೂರಿನಲ್ಲಿ ನಿತ್ಯ ಸರಾಸರಿ 1,500 ವಾಹನಗಳು ನೋಂದಣೆಯಾಗುತ್ತಿದ್ದು, ಶುಕ್ರವಾರ ಮೂರು ಪಟ್ಟು ಹೆಚ್ಚು ವಾಹನಗಳು ನೋಂದಣಿಯಾಗಿವೆ. ಮಾ.31ರೊಳಗೆ ಇನ್ವಾಯ್ಸ ಮುಗಿದು ಶುಲ್ಕ ಪಾವತಿಸಿದ್ದರೆ ಅಂತಹ ಬಿಎಸ್-3 ಮಾದರಿಯ ವಾಹನ ನೋಂದಣಿಗೆ ಅವಕಾಶವಿರಲಿದೆ.
– ಜ್ಞಾನೇಂದ್ರ ಕುಮಾರ್, ಜಂಟಿ ಆಯುಕ್ತ (ಬೆಂಗಳೂರು ನಗರ)
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Renukaswamy Case: ದರ್ಶನ್ ಜಾಮೀನಿಗೆ ಪ್ರಬಲ ವಾದ; ಸಂಜೆ 4ಗಂಟೆಗೆ ಮತ್ತೆ ವಿಚಾರಣೆ
Dharwad: ಡ್ರಗ್ಸ್ ಯುವ ಶಕ್ತಿಗೆ ಮಾರಕ… ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್
Vijayapura: ಮಹಾನಗರ ಪಾಲಿಕೆ ಉಪ ಚುನಾವಣೆ… ವಾರ್ಡ್ ನಂ.29ರಲ್ಲಿ ಬಿಜೆಪಿ ಗೆಲುವು
By Election: ಕೊಪ್ಪಳ ನಗರಸಭೆ ಉಪಚುನಾವಣೆ… ಕಮಲಕ್ಕೊಂದು ಕೈಗೊಂದು ಗೆಲುವು
Siddaramaiah ಸಂಪುಟ ಸೇರಲು ಭರ್ಜರಿ ಲಾಬಿ: ಆಕಾಂಕ್ಷಿಗಳು ಯಾರು? ಕೆಲವರಿಗೆ ಕೊಕ್?
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Vitla-ಉಕ್ಕುಡ -ಪಡಿಬಾಗಿಲು ಅಂತರ್ ರಾಜ್ಯ ಹೆದ್ದಾರಿಯ ಅವ್ಯವಸ್ಥೆ: ರಸ್ತೆ ತಡೆದು ಪ್ರತಿಭಟನೆ
Renukaswamy Case: ದರ್ಶನ್ ಜಾಮೀನಿಗೆ ಪ್ರಬಲ ವಾದ; ಸಂಜೆ 4ಗಂಟೆಗೆ ಮತ್ತೆ ವಿಚಾರಣೆ
Thirthahalli: ತುಂಗಾ ಕಮಾನು ಸೇತುವೆ ಕೆಳಗೆ ಅಸ್ತಿ ಪಂಜರ ಪತ್ತೆ
RBI ಗವರ್ನರ್ ಶಕ್ತಿಕಾಂತ್ ದಾಸ್ ಚೆನ್ನೈ ಆಸ್ಪತ್ರೆಗೆ ದಾಖಲು; ಶೀಘ್ರವೇ ಡಿಸ್ ಚಾರ್ಜ್
Mundargi: ಲಾರಿ ಹರಿದು 12 ಕುರಿಗಳು ಸಾವು; 30 ಕುರಿಗಳು ಗಂಭೀರ ಗಾಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.