Firecracker sales: ಮಳೆಗೆ ಪಟಾಕಿ ಮಾರಾಟ ಶೇ.30 ಕುಸಿತ!
Team Udayavani, Nov 4, 2024, 10:26 AM IST
ಬೆಂಗಳೂರು: ರಾಜ್ಯ ರಾಜಧಾನಿಯಲ್ಲಿ ಪ್ರತಿ ಬಾರಿಯೂ ದೀಪಾವಳಿಗೆ ನಡೆಯುತ್ತಿದ್ದ ಪಟಾಕಿ ವಹಿವಾಟು ಈ ಬಾರಿ ಶೇ.30 ಕಡಿಮೆಯಾಗಿದೆ. ಕಳೆದ ಶುಕ್ರವಾರ, ಶನಿವಾರ ರಾತ್ರಿ ಭರ್ಜರಿ ವ್ಯಾಪಾರವಾಗುವ ಹುಮ್ಮಸ್ಸಿನಲ್ಲಿದ್ದ ಪಟಾಕಿ ವ್ಯಾಪಾರಿಗಳ ನಿರೀಕ್ಷೆ ಹುಸಿಯಾಗಿದೆ. ನಗರದಲ್ಲಿ 100 ಕೋಟಿ ರೂ. ವಹಿವಾಟು ನಡೆದಿರಬಹುದು ಎಂದು ಪಟಾಕಿ ವ್ಯಾಪಾರಿಗಳು ಅಭಿಪ್ರಾಯಪಟ್ಟಿದ್ದಾರೆ.
ದೀಪಾವಳಿ ಹಬ್ಬಕ್ಕೂ ಮುನ್ನ ಪಟಾಕಿ ಖರೀದಿಗೆ ಕೊಂಚ ಉತ್ಸುಕತೆ ತೋರಿದ್ದ ಗ್ರಾಹಕರು ಹಬ್ಬದ ದಿನ ವಾದ ಶುಕ್ರವಾರ ಹಾಗೂ ಶನಿವಾರ ಪಟಾಕಿ ಮಳಿಗೆಗಳತ್ತ ಹೆಚ್ಚಾಗಿ ಮುಖ ಮಾಡಿಲ್ಲ. ಬಹುತೇಕ ಬೆಂಗಳೂರಿಗರು ಈ ಬಾರಿ ಹಣತೆ, ನಕ್ಷತ್ರಕಡ್ಡಿಗಳಿಗೆ ಮಾತ್ರ ದೀಪಾ ವಳಿಯನ್ನು ಸೀಮಿತಗೊಳಿಸಿದ್ದರು. ಪರಿಣಾಮ ಪಟಾಕಿ ಮಾರಾಟ ಇಳಿಕೆಯಾಗಿದ್ದು, ಕಳೆದ ಬಾರಿಗೆ ಹೋಲಿಸಿ ದರೆ ಈ ಬಾರಿ ಶೇ.30 ಪಟಾಕಿ ಮಾರಾಟ ಕುಸಿದಿದೆ. ಕಳೆದ ಬಾರಿ 250 ರಿಂದ 300 ಕೋಟಿ ರೂ. ವರೆಗೆ ಪಟಾಕಿ ವ್ಯಾಪಾರ ನಡೆದಿತ್ತು. ಆದರೆ, ಈ ಬಾರಿ ಇದರ ಪ್ರಮಾಣ ಕೇವಲ 100 ಕೋಟಿ ಅಸುಪಾಸಿಗೆ ಇಳಿದಿದೆ ಎಂದು ಕೆಲ ಪಟಾಕಿ ವ್ಯಾಪಾರಿಗಳು ಅಂದಾಜಿಸಿದ್ದಾರೆ.
ತಲೆಕೆಳಗಾದ ವ್ಯಾಪಾರಿಗಳ ಲೆಕ್ಕಾಚಾರ: ಹಿಂದೆ ಬಂಡಲ್ ಪಟಾಕಿ ತೆಗೆದುಕೊಳ್ಳುತ್ತಿದ್ದ ಗ್ರಾಹಕರು ಈ ಬಾರಿ ಬಂಡಲ್ ಪಟಾಕಿ ಬದಲು ಸಣ್ಣ-ಪುಟ್ಟ ನಕ್ಷತ್ರ ಕಡ್ಡಿ, ಪ್ಲವರ್ ಪಾಟ್‌ಗಳಂತಹ ಪಟಾಕಿಗಳನ್ನು ಮಾತ್ರ ಖರೀದಿಸುತ್ತಿದ್ದಾರೆ. ಹಬ್ಬದ ದಿನವಾದರೂ ಹೆಚ್ಚಿನ ಪ್ರಮಾಣದಲ್ಲಿ ಪಟಾಕಿ ವ್ಯಾಪಾರ-ವಹಿವಾಟು ನಡೆಯಬಹುದು ಎಂದುಕೊಂಡಿದ್ದ ವ್ಯಾಪಾರಿಗಳ ಲೆಕ್ಕಾಚಾರ ತಲೆಕೆಳಗಾಗಿದೆ.
ಇನ್ನು ಹಬ್ಬದ ದಿನ ಸಂಜೆ ಮಳೆ ಸುರಿದ ಹಿನ್ನೆಲೆಯಲ್ಲಿ ಪಟಾಕಿ ಮಳಿಗೆಗಳ ಮೈದಾನದಲ್ಲಿ ಕೆಸರುಮಯವಾಗಿ ಪಟಾಕಿ ಖರೀದಿಸಲು ಗ್ರಾಹಕರು ಕೊಂಚ ಹಿಂದೇಟು ಹಾಕಿದ ಪ್ರಸಂಗವೂ ನಡೆಯಿತು. ಇದರ ಜೊತೆಗೆ ನಗರದ ಹಲವು ಭಾಗಗಳ ಜನನಿಬಿಡ ಪ್ರದೇಶಗಳಲ್ಲಿ ಅನಧಿಕೃತವಾಗಿ ಪಟಾಕಿಗಳನ್ನು ಮಾರಾಟ ಮಾಡುತ್ತಿರುವ ಆರೋಪಗಳೂ ಕೇಳಿ ಬಂದಿವೆ. ಮತ್ತೂಂದೆಡೆ ವ್ಯಾಪಾರವಾಗದೇ ಉಳಿದ ಲಕ್ಷಾಂತರ ರೂ. ಮೌಲ್ಯದ ಪಟಾಕಿಗಳನ್ನು ಏನು ಮಾಡಬೇಕೆಂದು ವ್ಯಾಪಾರಿಗಳಿಗೆ ತೋಚುತ್ತಿಲ್ಲ.
ಹೊಸೂರಿನಲ್ಲಿ ಸ್ಟಿಕ್ಕರಿಂಗ್ ಪಟಾಕಿ ದಂದೆ: ದೊಡ್ಡ ಪ್ರಮಾಣದಲ್ಲಿ ಪಟಾಕಿ ಖರೀದಿಸುವ ಬೆಂಗಳೂರಿನ ಬಹುತೇಕ ಮಂದಿ ಹೊಸೂರಿಗೆ ಹೋಗುತ್ತಾರೆ. ಅಲ್ಲಿ ಕಂಪನಿಯ ನಿಖರ ಬೆಲೆಗೆ ಮಾರಾಟ ಮಾಡುವುದಿಲ್ಲ. ಉದಾಹರಣೆಗೆ ಪಟಾಕಿಗಳ ಬಾಕ್ಸ್‌ಗಳ ಮೇಲೆ 1 ಸಾವಿರ ರೂ. ಎಂದು ನಮೂದಿಸಿರುವ ಜಾಗದಲ್ಲಿ 1,500 ರೂ. ಎಂದು ಅಲ್ಲಿನವರು ನಮೂದಿಸುತ್ತಾರೆ.
ಪಟಾಕಿ ಬಾಕ್ಸ್‌ಗಳಿಗೆ ಸ್ಟಿಕ್ಕರಿಂಗ್ ಮಾಡಿದ ಬಳಿಕ ಶೇ.80 ರಿಯಾಯ್ತಿ ನೀಡುವುದಾಗಿ ಗ್ರಾಹಕರನ್ನು ಆಕ ರ್ಷಿಸು ತ್ತಾರೆ. ಜನ ಅವರ ಮೋಡಿಗೆ ಮರುಳಾಗಿ ಅಲ್ಲಿಂದ ಪಟಾಕಿ ಖರೀದಿಸಲು ಮುಗಿಬೀಳುತ್ತಾರೆ. ಬೆಂಗಳೂರಿನ ಮಳಿಗೆಗಳಲ್ಲಿ ಕಂಪನಿ ನಿಗದಿಪಡಿಸಿರುವ ನಿಖರ ಬೆಲೆಗೆ ಪಟಾಕಿ ಮಾರಾಟ ಮಾಡುತ್ತಾರೆ. ಹೀಗಾಗಿ ಹೊಸೂರಿಗಿಂತ ನಗರದ ಮಳಿಗೆಗಳಲ್ಲಿ ಪಟಾಕಿ ಬೆಲೆ ಹೆಚ್ಚು ಎಂದು ಗ್ರಾಹಕರಿಗೆ ಅನ್ನಿಸುತ್ತದೆ. ಈ ಬಾರಿಯೂ ಟೆಕಿಗಳು, ಉದ್ಯಮಿಗಳೆಲ್ಲ ಕುಟುಂಬ ಸಮೇತರಾಗಿ ಹೊಸೂರಿಂದಲೇ ಖರೀದಿಸುತ್ತಿದ್ದಾರೆಂದು ರಾಜಾಜಿ ನಗರದ ಪಟಾಕಿ ವ್ಯಾಪಾರಿಯೊಬ್ಬರು ಆರೋಪಿಸಿದ್ದಾರೆ.
ಹಿಂದೆ ನಗರದಲ್ಲಿ ಕಡಿಮೆ ಪಟಾಕಿ ಮಳಿಗೆಗಳಿದ್ದವು. ಆದರೆ, ಈ ಬಾರಿ ಪಟಾಕಿ ಮಳಿಗೆಗಳ ಪ್ರಮಾಣ ಹೆಚ್ಚಿದರೂ ವ್ಯಾಪಾರದಲ್ಲಿ ಸುಮಾರು ಶೇ.30ರಷ್ಟು ಕಡಿಮೆಯಾಗಿದೆ. ಗ್ರಾಹಕರು ದೊಡ್ಡ ಮೊತ್ತದಲ್ಲಿ ಪಟಾಕಿ ಖರೀದಿಗೆ ಈ ಬಾರಿ ಗ್ರಾಹಕರು ಹಿಂದೇಟು ಹಾಕಿದ್ದಾರೆ. -ಶ್ರೀಧರ್, ಪಟಾಕಿ ವ್ಯಾಪಾರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Health: ಶೀಘ್ರ ಕ್ಯಾನ್ಸರ್ ಪತ್ತೆ, ಶಸ್ತ್ರಚಿಕಿತ್ಸೆ ತಿಳಿವಳಿಕೆ ಯಾಕೆ ಮುಖ್ಯ?
ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ
Harapanahalli: ಪ್ರತಿಷ್ಠೆಯ ಕಣವಾದ ಬಿ90 ಸೊಸೈಟಿ ಚುನಾವಣೆ
Nagpur: ʼಪುಷ್ಪ-2ʼ ನೋಡುತ್ತಿದ್ದಾಗಲೇ ಥಿಯೇಟರ್‌ಗೆ ಪೊಲೀಸರ ಎಂಟ್ರಿ; ಸ್ಮಗ್ಲರ್ ಬಂಧನ
Hysteroscopy: ಸಂತಾನಹೀನತೆಯ ಪತ್ತೆ ಮತ್ತು ಚಿಕಿತ್ಸೆಗೆ ಒಂದು ಅತ್ಯವಶ್ಯಕ ಕಾರ್ಯವಿಧಾನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.