ಸರಕು, ಸೇವಾ ತೆರಿಗೆ ಸಂಗ್ರಹದಲ್ಲಿ ಶೇಕಡಾ 35 ಹೆಚ್ಚಳ
ಲಾಕ್‌ಡೌನ್ ತೆರವು ನಂತರ ಆರ್ಥಿಕ ಚಟುವಟಿಕೆ ಚೇತರಿಕೆ ; ಆಗಸ್ಟ್‌ನಲ್ಲಿ 3,884.37 ಕೋಟಿ ರೂ. ಜಿಎಸ್‌ಟಿ ಸಂಗ್ರಹ
Team Udayavani, Sep 3, 2021, 3:42 PM IST
ಬೆಂಗಳೂರು: ಕೋವಿಡ್ ಲಾಕ್‌ಡೌನ್ ತೆರವುನಂತರ ರಾಜ್ಯದಲ್ಲಿ ಆರ್ಥಿಕ ಚಟುವಟಿಕೆಗಳು ಚೇತರಿಕೆಯಾಗಿದ್ದು, ಸರಕು ಮತ್ತು ಸೇವಾ ತೆರಿಗೆ
ಸಂಗ್ರಹದಲ್ಲಿ ಶೇ.35 ಹೆಚ್ಚಳವಾಗಿದೆ. ಮುದ್ರಾಂಕ ಮತ್ತು ನೋಂದಣಿ ಹಾಗೂ ಮೋಟಾರು ವಾಹನ ತೆರಿಗೆಯಲ್ಲಿ ಏರಿಕೆ ಕಾಣದೆ ಚಿಂತೆಗೊಳ ಗಾಗಿದ್ದ ಹಣಕಾಸು ಇಲಾಖೆಗೆ ವಾಣಿಜ್ಯ ತೆರಿಗೆ ಆಗಸ್ಟ್ ತಿಂಗಳಲ್ಲಿ ಒಟ್ಟಾರೆ 3,884.37 ಕೋಟಿ ರೂ. ಜಿಎಸ್‌ಟಿ ಸಂಗ್ರಹವಾಗಿರುವುದ ರಿಂದ ಆಶಾದಾಯಕ ಬೆಳವಣಿಗೆಯಾಗಿದೆ.
ಜುಲೈ ಮಾಹೆಗೆ ಆಗಸ್ಟ್‌ನಲ್ಲಿ ಸಂಗ್ರಹವಾಗಿರುವ ಜಿಎಸ್‌ಟಿಯಲ್ಲಿ ಗಣನೀಯ ಏರಿಕೆ ಕಂಡು ಬಂದಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ಶೇ.35 ಹೆಚ್ಚಳಗೊಂಡಿದ್ದು ಇದು ಉದ್ಯಮ ಹಾಗೂ ಕೈಗಾರಿಕೆ ವಲಯ ಯಥಾಸ್ಥಿತಿಗೆ ಬರುತ್ತಿರುವ ಲಕ್ಷಣ ಎಂದೇ ವ್ಯಾಖ್ಯಾನಿಸಲಾಗುತ್ತಿದೆ. ಏಪ್ರಿಲ್ ತಿಂಗಳಿನಲ್ಲಿ 1544,73 ಕೋಟಿ ರೂ. ಸಂಗ್ರಹವಾಗಿದ್ದ ಜಿಎಸ್‌ಟಿ ಜುಲೈ ತಿಂಗಳ ವೇಳೆಗೆ 3,884.37 ಕೋಟಿ ರೂ. ತಲುಪಿದ್ದು, ಮೂರನೇ ಅಲೆ
ಎದುರಾಗದಿದ್ದರೆವಾಣಿಜ್ಯ ತೆರಿಗೆವಲಯದಿಂದ ಬಜೆಟ್‌ನ ನಿರೀಕ್ಷಿತ ಪ್ರಮಾಣದ ಸಂಪನ್ಮೂಲ ಕ್ರೋಢೀಕರಣವಾಗಲಿದೆ ಎಂದು ಹೇಳಲಾಗಿದೆ.
ವಾಣಿಜ್ಯ ತೆರಿಗೆನಿಂದ ಒಟ್ಟಾರೆ ಕರ್ನಾಟಕಕ್ಕೆ ಆಗಸ್ಟ್ ತಿಂಗಳಲ್ಲಿ 5,614.16 ರೂ. ಸಂಗ್ರಹವಾಗಿದೆ. ಕೋವಿಡ್ ಲಾಕ್‌ಡೌನ್ ತೆರವು, ಲಸಿಕೆ ಅಭಿಯಾನದ ನಂತರ ವಾಣಿಜ್ಯ ವಲಯದಲ್ಲಿ ಚಟುವಟಿಕೆಗಳು ಪುನಾರಂಭಗೊಂಡು ಗ್ರಾಹಕರ ಖರೀದಿ ಸಾಮರ್ಥ್ಯವೂ ಹೆಚ್ಚಳಗೊಂಡಿರುವುದು, ತೆರಿಗೆ ಸೋರಿಕೆ ಹಾಗೂ ನಕಲಿಬಿಲ್‌ಗಳಿಗೆ ಕಡಿವಾಣ ಬಿದ್ದಿರುವ ಪರಿಣಾಮ ತೆರಿಗೆ ಸಂಗ್ರಹದಲ್ಲಿ ಏರಿಕೆಯಾಗಿದೆ ಎಂದು ಹಣಕಾಸು ಇಲಾಖೆ ಅಧಿಕಾರಿಗಳು ಹೇಳುತ್ತಾರೆ.
ಇದನ್ನೂ ಓದಿ:ತಮಿಳು ನಿರ್ದೇಶಕ ಮಣಿ ರತ್ನಂ ವಿರುದ್ಧ ಎಫ್‍ಐಆರ್ ದಾಖಲು
ಮಾರಾಟ ತೆರಿಗೆಯೂ ಹೆಚ್ಚಳ: ಇದೇ ಸಂದರ್ಭದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಸೇರಿದಂತೆ ತೈಲಗಳ ಮೇಲೆ ಕರ್ನಾಟಕ ಮಾರಾಟ ತೆರಿಗೆ ಸಂಗ್ರಹ ಹಾಗೂ ವೃತ್ತಿ ತೆರಿಗೆಯೂ ಕಳೆದ ಎರಡು ತಿಂಗಳಿನಿಂದ ಏರಿಕೆ ಕಂಡಿದೆ. ಏಪ್ರಿಲ್‌ನಲ್ಲಿ ಮಾರಾಟ ತೆರಿಗೆ 1620.63 ಕೋಟಿ ರೂ., ಮೇ ನಲ್ಲಿ 1236.39 ರೂ. ಸಂಗ್ರಹವಾಗಿ ಸ್ವಲ್ಪ ಮಟ್ಟಿಗೆ ಕಡಿಮೆಯಾಗಿತ್ತಾದರೂ ಜೂನ್‌ನಲ್ಲಿ 1468 ಕೋಟಿ ರೂ. ಸಂಗ್ರಹವಾಗಿ ಚೇತರಿಕೆ ಕಂಡಿತ್ತು. ಜುಲೈನಲ್ಲೂ 1729.79ಕೋಟಿ ರೂ. ಸಂಗ್ರಹವಾಗಿದೆ. ಅದೇ ರೀತಿ ವೃತ್ತಿ ತೆರಿಗೆ ಏಪ್ರಿಲ್‌ನಲ್ಲಿ 82.75 ಕೋಟಿ ರೂ.. ಮೇನಲ್ಲಿ 84.28 ಕೋಟಿ ರೂ., ಜೂನ್‌ನಲ್ಲಿ 86.08 ಕೋಟಿ ರೂ. ಸಂಗ್ರಹವಾಗಿತ್ತು. ಜುಲೈನಲ್ಲಿ 86.63ಕೋಟಿ ರೂ. ಸಂಗ್ರಹವಾಗಿದೆ.
ಈ ಮಧ್ಯೆ, ಆಗಸ್ಟ್ ತಿಂಗಳಲ್ಲಿ ಅಬಕಾರಿ ವಲಯದಿಂದ 2067.15 ಕೋಟಿ ರೂ. ಸಂಗ್ರಹವಾಗಿದ್ದು ಕಳೆದ ವರ್ಷದ ಆಗಸ್ಟ್‌ಗೆ ಹೋಲಿಸಿದರೆ 235.76 ಲಕ್ಷ ರೂ. ತೆರಿಗೆ ಸಂಗ್ರಹ ಹೆಚ್ಚಳಗೊಂಡಿದೆ. ಇದರಿಂದಾಗಿ ಪ್ರಸಕ್ತ ಆರ್ಥಿಕ ವರ್ಷದಲ್ಲಿ ಐದು ತಿಂಗಳಲ್ಲಿ ಅಬಕಾರಿ ನಿಂದ 10,197.62 ಕೋಟಿ ರೂ. ಆದಾಯ ಬಂದಂತಾಗಿದೆ. 2021-22 ನೇ ಸಾಲಿನ ಬಜೆಟ್‌ನಲ್ಲಿ 24,580 ಕೋಟಿ ರೂ. ಗುರಿ ನಿಗದಿಪಡಿಸಲಾಗಿತ್ತು.
ಲಾಕ್‌ಡೌನ್ ನಂತರ ವ್ಯಾಪಾರ-ವಹಿವಾಟು ಯಥಾಸ್ಥಿತಿಯಂತಾಗಲು ಎಷ್ಟು ದಿನ ಬೇಕಾಗ ಬಹುದೋ ಎಂಬ ಆತಂಕ ಇತ್ತಾದರೂ ಆಗಸ್ಟ್‌ನಲ್ಲಿ
ಸಂಗ್ರಹವಾಗಿರುವ ಸರಕು ಮತ್ತು ಸೇವಾ ತೆರಿಗೆ ಹೊಸ ಭರವಸೆ ಮೂಡಿಸಿದೆ. ಮಾರುಕಟ್ಟೆ ಚೇತರಿಕೆ ಕಾಣುತ್ತಿದೆ ಎಂಬುದರ ಸಂಕೇತವಿದು.
– ಬಿ.ಟಿ.ಮನೋಹರ್, ಜಿಎಸ್‌ಟಿಸಲಹಾ ಮಂಡಳಿ ಸದಸ್ಯರು
– ಎಸ್. ಲಕ್ಷ್ಮಿ ನಾರಾಯಣ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.