3,716 ಮರಗಳಿಗೆ ಕೊಡಲಿ ಪೆಟ್ಟು
Team Udayavani, Feb 8, 2019, 6:07 AM IST
ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಜಾರಿಗೊಳಿಸಲು ಉದ್ದೇಶಿಸಿರುವ ಆರು ಪಥದ ಎಲಿವೇಟೆಡ್ ಕಾರಿಡಾರ್ ಯೋಜನೆಗೆ 3,716 ಮರಗಳನ್ನು ಕತ್ತರಿಸಲು ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ ನಿಯಮಿತ (ಕೆಆರ್‌ಡಿಸಿಎಲ್) ಬಿಬಿಎಂಪಿಗೆ ಪ್ರಸ್ತಾವನೆ ಸಲ್ಲಿಸಿದೆ.
ಬಳ್ಳಾರಿ ರಸ್ತೆಯಲ್ಲಿ ಎಲಿವೇಟೆಡ್ ಕಾರಿಡಾರ್ ಯೋಜನೆಗೆ 144 ಮರಗಳ ಕಡಿಯುವ ಪ್ರಸ್ತಾವನೆ ಹೊರ ಬೀಳುವ ಮೊದಲೇ ಪರಿಸರವಾದಿಗಳು ಪ್ರತಿಭಟನೆ ನಡೆಸಿದ್ದರು. ಇದೀಗ ಕೆಆರ್‌ಡಿಸಿಎಲ್ ಬರೋಬ್ಬರಿ 3,716 ಮರಗಳನ್ನು ಕತ್ತರಿಸಲು ಪ್ರಸ್ತಾವನೆ ಸಲ್ಲಿಸಿರುವುದು ವಿವಾದಕ್ಕೆ ಎಡೆಮಾಡಿಕೊಡಲಿದ್ದು, ಪರಿಸರವಾದಿಗಳ ಮತ್ತೆ ರಸ್ತೆಗಿಳಿಯುವ ಸಾಧ್ಯತೆಯಿದೆ.
ನಗರದ ಒಂದು ತುಂದಿ ಮತ್ತೂಂದು ತುದಿಗೆ ಸಂಚರಿಸುವ ವಾಹನಗಳಿಗೆ ಅನುಕೂಲವಾಗುವಂತೆ 102 ಕಿ.ಮೀ. ಉದ್ದದ ಎಲಿವೇಟೆಡ್ ಕಾರಿಡಾರ್ ಯೋಜನೆಯನ್ನು ಸರ್ಕಾರ ಕೈಗೆತ್ತಿಕೊಂಡಿದೆ. ಅದರಂತೆ ಯೋಜನೆಗಾಗಿ 3,716 ಮರಗಳನ್ನು ಕತ್ತರಿಸಬೇಕಿದ್ದು, 601 ಮರಗಳನ್ನು ಭಾಗಶಃ ಕತ್ತರಿಸುವಂತೆ ಕೆಆರ್‌ಡಿಸಿಎಲ್ ಪಾಲಿಕೆಯ ಅರಣ್ಯ ವಿಭಾಗಕ್ಕೆ ಮನವಿ ಮಾಡಿದೆ.
ಯಾವುದೇ ಅಭಿವೃದ್ಧಿ ಯೋಜನೆಗೆ 50 ಮರಗಳಿಗಿಂತಲೂ ಹೆಚ್ಚಿನ ಮರಗಳನ್ನು ಕತ್ತರಿಸಬೇಕಾದರೆ ವೃಕ್ಷ ಸಮಿತಿಯ ಅನುಮತಿ ಪಡೆಯುವುದು ಕಡ್ಡಾಯವಾಗಿದೆ. ಆ ಹಿನ್ನೆಲೆಯಲ್ಲಿ ಸಾರ್ವಜನಿಕರಿಂದ ಆಕ್ಷೇಪಣೆಗಳನ್ನು ಪಡೆದ ನಂತರದಲ್ಲಿ ಮುಂದಿನ ಕ್ರಮಕೈಗೊಳ್ಳಲು ಪಾಲಿಕೆಯ ಅಧಿಕಾರಿಗಳು ನಿರ್ಧರಿಸಿದ್ದಾರೆ ಎನ್ನಲಾಗಿದೆ.
ಎಲಿವೇಟೆಡ್ ಕಾರಿಡಾರ್ ಯೋಜನೆಗಾಗಿ 25 ಸಾವಿರ ಕೊಟಿ ರೂ. ವೆಚ್ಚವಾಗುವ ಕುರಿತು ಅಂದಾಜಿಸಲಾಗಿದ್ದು, ಯೋಜನೆಯಿಂದಾಗಿ ಹೆಚ್ಚಿನ ವಾಹನಗಳು ನಗರ ಪ್ರವೇಶಿಸದೆ ನಗರದ ಒಂದು ತುದಿಯಿಂದ ಮತ್ತೂಂದು ತುದಿಗೆ ಸಂಚಾರ ನಡೆಸಲಿವೆ. ಇದರಿಂದಾಗಿ ಸಮಯ ಉಳಿತಾಯವಾಗಲಿದೆ. ಆ ಹಿನ್ನೆಲೆಯಲ್ಲಿ 5 ಹಂತಗಳಲ್ಲಿ ಮರಗಳನ್ನು ಕತ್ತರಿಸುವಂತೆ ಕೆಆರ್‌ಡಿಸಿಎಲ್ ಪ್ರಸ್ತಾವನೆಯಲ್ಲಿ ತಿಳಿಸಿದೆ.
ಆರು ಪಥದ ಎಲಿವೇಟೆಡ್ ಕಾರಿಡಾರ್ ವಿವರ
– ಉತ್ತರ-ದಕ್ಷಿಣ ಕಾರಿಡಾರ್: ಸೆಂಟ್ರಲ್ ಸಿಲ್ಕ್ ಬೋರ್ಡ್‌ನಿಂದ ಹೆಬ್ಟಾಳ
– ಪೂರ್ವ-ಪಶ್ಚಿಮ ಕಾರಿಡಾರ್ 1: ಕೆ.ಆರ್.ಪುರದಿಂದ ಗೊರಗುಂಟೆಪಾಳ್ಯ
– ಪೂರ್ವ-ಪಶ್ಚಿಮ ಕಾರಿಡಾರ್ 2: ವರ್ತೂರು ಕೋಡಿಯಿಂದ ಜ್ಞಾನಭಾರತಿ
4 ಪಥದ ಕನೆಕ್ಟಿಂಗ್ ಕಾರಿಡಾರ್‌ಗಳು
– ಅಗರದಿಂದ ಕಲಾಸಿಪಾಳ್ಯ
– ರಿಚ್‌ಮಂಡ್ ರಸ್ತೆಯಿಂದ ಹಲಸೂರು
– ಕಲ್ಯಾಣನಗರ ಜಂಕ್ಷನ್‌ನಿಂದ ವೀಲರ್ ರಸ್ತೆ ಜಂಕ್ಷನ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.