ಇಬ್ಬರು ಪತ್ನಿಯರ ಬಿಟ್ಟು 3ನೇ ಮದುವೆಯಾದ ರೈಲ್ವೇ ನೌಕರ !
Team Udayavani, Nov 19, 2017, 6:25 AM IST
ಹಾಸನ: ಇಬ್ಬರು ಪತ್ನಿಯರಿಗೆ ಕಿರುಕುಳ ನೀಡಿ ಮನೆಯಿಂದ ಓಡಿಸಿದ್ದ ರೈಲ್ವೇ ಇಲಾಖೆ ನೌಕರನೊಬ್ಬ ಮೂರನೇ ಮದುವೆಯಾಗಿ ಬೀಗರೂಟದ ಸಂಭ್ರಮದಲ್ಲಿದ್ದಾಗ ಮೊದಲ ಪತ್ನಿಯ ಸಂಬಂಧಿಕರು ತರಾಟೆಗೆ ತೆಗೆದುಕೊಂಡ ಘಟನೆ ಹಾಸನದ ಗೊರೂರಿನಲ್ಲಿ ಶನಿವಾರ ಸಂಭವಿಸಿದೆ.
ಗೊರೂರು ಗ್ರಾಮದ ರಾಜೇಶ್ (44) 3ನೇ ವಿವಾಹವಾಗಿ ಬೀಗರ ಔತಣ ಏರ್ಪಡಿಸಿದ್ದ. ಮೊದಲ ಪತ್ನಿ ಸೌಮ್ಯಾ, ಸಂಬಂಧಿಕರು ಗೊರೂರಿಗೆ ತೆರಳಿ ವಿಚ್ಛೇದನ ನೀಡದೆ ವಿವಾಹವಾಗಿದ್ದಕ್ಕೆ ರಾಜೇಶನನ್ನು ಪ್ರಶ್ನಿಸಿದ್ದಾರೆ. ಈ ವೇಳೆ ಜಗಳ ನಡೆದು ಸೌಮ್ಯಾ ಅವರಿಗೆ ಪೆಟ್ಟು ಬಿದ್ದಿದ್ದು, ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
2006ರಲ್ಲಿ ಚನ್ನರಾಯಪಟ್ಟಣ ತಾ| ಜಂಬೂರಿನ ಸೌಮ್ಯಾಳನ್ನು ರಾಜೇಶ್ ವಿವಾಹವಾಗಿದ್ದರು. ಇಬ್ಬರು ಗಂಡು ಮಕ್ಕಳಿದ್ದಾರೆ. ಆದರೆ ಸೌಮ್ಯಾಗೆ ಕಿರುಕುಳ ಕೊಟ್ಟು ತವರು ಮನೆಗೆ ಓಡಿಸಿದ ಅನಂತರ ರಾಜೇಶ್ 10 ತಿಂಗಳ ಹಿಂದೆ ಅರಕಲಗೂಡು ತಾ| ಮಲ್ಲಿಪಟ್ಟಣದ ಯುವತಿಯನ್ನು ವಿವಾಹವಾಗಿ, ಆಕೆಯನ್ನೂ ಬಿಟ್ಟು 3ನೇ ವಿವಾಹವಾಗಿದ್ದಾರೆ ಎಂದು ಸೌಮ್ಯಾ ಆರೋಪಿಸಿದ್ದಾರೆ.
ಜೀವನಾಂಶ ಕೋರಿದ ದಾವೆ ಇತ್ಯರ್ಥವಾಗಿಲ್ಲ. ಆದರೂ ರಾಜೇಶ್ 3ನೇ ವಿವಾಹವಾಗಿರುವ ಬಗ್ಗೆ, ಶನಿವಾರ ತನ್ನ ಮೇಲೆ ರಾಜೇಶ್ ಮತ್ತು ಸಂಬಂಧಿಕರು ಹಲ್ಲೆ ನಡೆಸಿರುವ ಬಗ್ಗೆ ಸೌಮ್ಯಾ ಪೊಲೀಸರಿಗೆ ದೂರು ನೀಡಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.