ಬಾಷ್ ಸಂಸ್ಥೆ 3ನೇ ತ್ತೈಮಾಸಿಕದ ಆದಾಯ 2,811 ಕೋಟಿ ರೂ.
Team Udayavani, Feb 16, 2017, 12:06 PM IST
ಬೆಂಗಳೂರು: ಆಟೋಮೋಟಿವ್ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಬಾಷ್ ಕಂಪನಿಯು 2016-17ನೇ ಹಣಕಾಸು ವರ್ಷದ 3ನೇ ತ್ತೈಮಾಸಿಕ ಅವಧಿಯಲ್ಲಿ ಮಾರಾಟ ಮತ್ತು ನಾನಾ ನಿರ್ವಹಣಾ ಸೇವೆಗಳಿಂದ ಒಟ್ಟು 2,811 ಕೋಟಿ ರೂ. ಆದಾಯ ಗಳಿಸಿದ್ದು, ಕಳೆದ ವರ್ಷದ 3ನೇ ತ್ತೈಮಾಸಿಕ ಅವಧಿಗೆ ಹೋಲಿಸಿದರೆ ಈ ಅವಧಿಯಲ್ಲಿ ಶೇ.7.2ರಷ್ಟು ಬೆಳವಣಿಗೆ ಸಾಧಿಸಿದೆ. ಮೂರನೇ ತ್ತೈಮಾಸಿಕ ಅವಧಿಯಲ್ಲಿ ತೆರಿಗೆ ಪೂರ್ವ ಲಾಭವು 299 ಕೋಟಿ ರೂ.ನಷ್ಟಿದೆ.
ಇದೇ ಅವಧಿಯಲ್ಲಿ ತೆರಿಗೆ ನಂತರದ ಲಾಭ 215 ಕೋಟಿ ರೂ. ಇದ್ದು, ಕಳೆದ ವರ್ಷ ಈ ಅವಧಿಗೆ ಹೋಲಿಸಿದರೆ ಶೇ.23.5ರಷ್ಟು ಏರಿಕೆ ಕಂಡಿದೆ. ಈ ಬಗ್ಗೆ ಮಾಹಿತಿ ನೀಡಿರುವ ಬಾಷ್ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕರೂ ಆದ ಬಾಷ್ ಸಮೂಹದ ಅಧ್ಯಕ್ಷ (ಭಾರತ) ಸೌಮಿತ್ರಾ ಭಟ್ಟಾಚಾರ್ಯ, “ನೋಟು ಅಮಾನ್ಯದಿಂದಾಗಿ ಮೂರನೇ ತ್ತೈಮಾಸಿಕದಲ್ಲಿ ಆಟೋಮೋಟಿವ್ ಮಾರುಕಟ್ಟೆ ಮೇಲೆ ತೀವ್ರ ದುಷ್ಪರಿಣಾಮ ಬೀರಿದೆ.
16 ವರ್ಷಗಳಲ್ಲಿ ಅತಿ ಕಡಿಮೆ ಮಾರಾಟ ಕಳೆದ ಡಿಸೆಂಬರ್‌ನಲ್ಲಿ ದಾಖಲಾಗಿದೆ,” ಎಂದರು. “ಕಳೆದ ವರ್ಷಕ್ಕೆ ಹೋಲಿಸಿದರೆ ಒಟ್ಟಾರೆ ಆಟೋಮೋಟಿವ್ ಕ್ಷೇತ್ರದ ವಹಿವಾಟು ಶೇ.1.4ರಷ್ಟು ಏರಿಕೆಯಾಗಿದೆ. ಈ ಅವಧಿಯಲ್ಲಿ ಸಂಸ್ಥೆಯ ಒಟ್ಟಾರೆ ಬೆಳವಣಿಗೆ ಶೇ.7.2ರಷ್ಟು ಏರಿಕೆಯಾಗಿದೆ. ಟ್ರ್ಯಾಕ್ಟರ್ ಹಾಗೂ ಭಾರಿ ವಾಹನ ಮಾರಾಟ ವಹಿವಾಟು ಏರಿಕೆ ಕಂಡಿದ್ದು, ಏಪ್ರಿಲ್‌ನಲ್ಲಿ ಬಿಎಸ್4 ಮಾದರಿಯ ವಾಹನಗಳ ತಯಾರಿಕೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ,” ಎಂದು ಹೇಳಿದರು.
ಷೇರಿಗೆ 75ರೂ. ಡಿವಿಡೆಂಟ್: “”ಸಕ್ತ ಆರ್ಥಿಕ ವರ್ಷದಲ್ಲಿ ಕಂಪನಿಯ ಸ್ಟಾರ್ಟರ್ ಮೋಟಾರ್ ಮತ್ತು ಜನರೇಟರ್ ಒಟ್ಟಾರೆ ಮಾರಾಟ ಆಧರಿಸಿ ಕಳೆದ ಫೆ.10ರಂದು ನಡೆದ ಆಡಳಿತ ಮಂಡಳಿ ಸಭೆಯಲ್ಲಿ 10 ರೂ. ಮೊತ್ತದ ತಲಾ ಷೇರಿಗೆ 75 ರೂ. ಮಧ್ಯಂತರ ಡಿವಿಡೆಂಟ್ ನೀಡಲು ತೀರ್ಮಾನಿಸಲಾಗಿದೆ,” ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Kannada Cinema: ‘ನಾ ನಿನ್ನ ಬಿಡಲಾರೆ’ ಟ್ರೇಲರ್ ಬಂತು: ನ.29ಕ್ಕೆ ಸಿನಿಮಾ ತೆರೆಗೆ
Sagara: ಕರವೇ ತಾಲೂಕು ಅಧ್ಯಕ್ಷರ ಮನೆ ಮೇಲೆ ಅರಣ್ಯಾಧಿಕಾರಿಗಳಿಂದ ದಾಳಿ; ಜಿಂಕೆ ಮಾಂಸ ವಶ
BGT Series: ವಿರಾಟ್ ಕೊಹ್ಲಿ ಜತೆ ವೈಯಕ್ತಿಕ ಪೈಪೋಟಿಗೆ ಇಳಿದಿದ್ದೆ: ಮಿಚೆಲ್ ಜಾನ್ಸನ್
Congress ಶಾಸಕರಿಗೆ ಬಿಜೆಪಿ ಆಫರ್; ರವಿ ಗಣಿಗ ಆರೋಪಕ್ಕೆ ಶಾಸಕ ತಮ್ಮಯ್ಯ ಸ್ಪಷ್ಟನೆ
BGT 2024: ಗಾಯಗೊಂಡ ಗಿಲ್: ಮೂರನೇ ಕ್ರಮಾಂಕದಲ್ಲಿ ಕನ್ನಡಿಗನಿಗೆ ಒಲಿದ ಅದೃಷ್ಟ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.