ನಾಳೆಯಿಂದ 4 ದಿನ ಕೃಷಿ ಮೇಳ
ಮೇಳದಲ್ಲಿ 10 ಹೊಸ ತಳಿಗಳು, ಕೃಷಿ ಆಧಾರಿತ 28 ತಂತ್ರಜ್ಞಾನಗಳ ಪರಿಚಯ
Team Udayavani, Nov 10, 2021, 11:20 AM IST
ಬೆಂಗಳೂರು: ಬೆಂಗಳೂರು ಕೃಷಿ ವಿಶ್ವವಿದ್ಯಾಲಯವು ನ.11ರಿಂದ 14ರವರೆಗೆ 2021ನೇ ಸಾಲಿನ ಕೃಷಿ ಮೇಳ ಆಯೋಜಿಸಿದೆ. ಈ ಬಾರಿಯ ಮೇಳದಲ್ಲಿ ಹತ್ತು ಹೊಸ ತಳಿಗಳು ಹಾಗೂ ಕೃಷಿ ಆಧಾರಿತ 28 ತಂತ್ರಜ್ಞಾನಗಳನ್ನು ಪರಿಚಯಿಸಲಿದೆ. ಗಾಂಧಿ ಕೃಷಿ ವಿಜ್ಞಾನ ಕೇಂದ್ರ (ಜಿಕೆವಿಕೆ)ಯಲ್ಲಿ ನಡೆಯಲಿರುವ ಮೇಳವನ್ನು ನ.11ರಂದು ಗುರುವಾರ ಬೆಳಗ್ಗೆ 11 ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚಾಲನೆ ನೀಡಲಿದ್ದು, ಕೃಷಿ ಸಚಿವ ಬಿ.ಸಿ. ಪಾಟೀಲ್ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ಶಾಸಕ ಕೃಷ್ಣ ಬೈರೇಗೌಡ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ವಿವಿ ಕುಲಪತಿ ಡಾ. ಎಸ್. ರಾಜೇಂದ್ರ ಪ್ರಸಾದ್ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಇದನ್ನೂ ಓದಿ:- ಬೀದರ: ಶಿಕ್ಷಕನ ಮರ್ಮಾಂಗ ಕತ್ತರಿಸಿ ಭೀಕರ ಹತ್ಯೆ
ನ.14ರಂದು ಮಧ್ಯಾಹ್ನ 2.30ಕ್ಕೆ ನಡೆಯಲಿರುವ ಸಮಾ ರೋಪದಲ್ಲಿ ರಾಜ್ಯಪಾಲರಾದ ಥಾವರ್ ಚಂದ್ ಗೆಹಲೋತ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಕೇಂದ್ರದ ಮಾಜಿ ಸಚಿವ ಡಿ.ವಿ. ಸದಾನಂದಗೌಡ ಪಾಲ್ಗೊಳ್ಳಲಿದ್ದಾರೆ. ಮೇಳದಲ್ಲಿ ಪ್ರತಿ ದಿನ 15ರಿಂದ 20 ಸಾವಿರ ರೈತರು ಆಗಮಿಸುವ ನಿರೀಕ್ಷೆ ಹೊಂದಲಾಗಿದೆ. ಮೇಳಕ್ಕೆ ಬರುವವರಿಗೆ ಉಚಿತ ಪ್ರವೇಶ ಕಲ್ಪಿಸಲಾಗಿದ್ದು, ವಾಹನ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿದೆ. ರಿಯಾಯಿತಿ ದರದಲ್ಲಿ ಊಟದ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.
ಕೃಷಿ ಆದಾಯ ಹೆಚ್ಚಿಸುವ ತಾಂತ್ರಿಕತೆ: ರೈತರ ಆದಾಯ ದ್ವಿಗುಣಗೊಳಿಸುವಿಕೆಗೆ ಕೃಷಿ ತಾಂತ್ರಿಕತೆಗಳು ಎಂಬ ಅಡಿ ಬರಹದಲ್ಲಿ ಈ ಬಾರಿ ಮೇಳ ಆಯೋ ಜಿಸಿದೆ. ರೈತರ ಆದಾಯ ದ್ವಿಗುಣಗೊಳಿಸುವುದು ಕೇವಲ ಬೆಳೆಯಿಂದ ಮಾತ್ರವಲ್ಲ, ಪರಿಕರಗಳನ್ನು ಒದಗಿಸುವುದು, ಇಳುವರಿ ಹೆಚ್ಚಳ ಸೇರಿದಂತೆ ಹಲವು ರೀತಿಯಲ್ಲಿ ರೈತರಿಗೆ ಸರ್ಕಾರ ಪ್ರೋತ್ಸಾಹ ನೀಡುವುದಾಗಿದೆ ಎಂದರು.
ಸಾಧಕರಿಗೆ ಪ್ರಶಸ್ತಿ: ಹಾಸನದ ಅರಕಲಗೂಡು ತಾಲೂಕಿನ ದೊಡ್ಡ ಮಗ್ಗೆ ರೈತ ಎಂ.ಸಿ. ರಂಗಸ್ವಾಮಿ ಅವ ರಿಗೆ ಎಚ್.ಡಿ. ದೇವೇಗೌಡ ರಾಜ್ಯಮಟ್ಟದ ಅತ್ಯು ತ್ತಮ ರೈತ ಪ್ರಶಸ್ತಿ, ಬೆಂ.ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕು ದೊಡ್ಡ ತುಮಕೂರು ರೈತ ಟಿ.ಎಂ. ಅರವಿಂದ ಅವರಿಗೆ ಡಾ. ಎಂ.ಎಚ್. ಮರೀಗೌಡ ರಾಜ್ಯಮಟ್ಟದ ಅತ್ಯುತ್ತಮ ತೋಟಗಾರಿಕಾ ರೈತ ಪ್ರಶಸ್ತಿ, ಹಾಸನ ಜಿಲ್ಲೆ ಆಲೂರು ತಾಲೂಕಿನ ಯಡೂರು ರೈತ ಮಹಿಳೆ ವೈ.ಜಿ. ಮಂಜುಳ ಹಾಗೂ ಬೆಂ. ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾ ಪುರ ತಾಲೂಕಿನ ಲಕ್ಷ್ಮೀದೇವಿಪುರದ ರೈತ ಸಿ. ವಿ ಕ್ರಮ್ ಅವರಿಗೆ ಕ್ಯಾನ್ ಬ್ಯಾಂಕ್ ರಾಜ್ಯಮಟ್ಟದ ಅತ್ಯು ತ್ತಮ ರೈತ ಪ್ರಶಸ್ತಿ, ಕೋಲಾರ ಜಿಲ್ಲೆ ಅರಿನಾಗ ನಹಳ್ಳಿ ರೈತ ಮುನಿರೆಡ್ಡಿ ಅವರಿಗೆ ಡಾ. ಆರ್. ದ್ವಾರಕೀ ನಾಥ್ ಅತ್ಯುತ್ತಮ ರೈತ ಪ್ರಶಸ್ತಿ ನೀಡಲಾಗುತ್ತಿದೆ.
ಇದನ್ನೂ ಓದಿ:- ಬೀದರ: ಶಿಕ್ಷಕನ ಮರ್ಮಾಂಗ ಕತ್ತರಿಸಿ ಭೀಕರ ಹತ್ಯೆ
ದೊಡ್ಡಬಳ್ಳಾಪುರದ ಹಾಡೋನಹಳ್ಳಿ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥರಾದ ಹಿರಿಯ ವಿಜ್ಞಾನಿ ಡಾ. ವಿ.ಪಿ. ಮಲ್ಲಿಕಾರ್ಜುನಗೌಡ ಅವರಿಗೆ ಡಾ. ಆರ್. ದ್ವಾರಕೀನಾಥ್ ಅತ್ಯುತ್ತಮ ವಿಸ್ತರಣಾ ಕಾರ್ಯಕರ್ತ ಪ್ರಶಸ್ತಿ ಹಾಗೂ ಬಾಗಲಕೋಟೆ ತೋಟಗಾರಿಕಾ ವಿವಿ ಸಂಶೋಧನಾ ನಿರ್ದೇಶಕರಾದ ಡಾ. ಎಚ್.ಸಿ. ಮಹೇಶ್ವರಪ್ಪ ಅವರಿಗೆ ಡಾ. ಎಂ.ಎಚ್. ಮರೀಗೌಡ ಅತ್ಯುತ್ತಮ ತೋಟಗಾರಿಕಾ ಸಂಶೋಧನಾ ರಾಷ್ಟ್ರೀ ಯ ದತ್ತಿ ಪ್ರಶಸ್ತಿ ವಿತರಿಸಲಾಗುತ್ತಿದೆ ಎಂದು ತಿಳಿಸಿದರು. ಇದರ ಜೊತೆಗೆ ಕೃಷಿ ವಿವಿ ವ್ಯಾಪ್ತಿಯಲ್ಲಿರುವ 10 ಜಿಲ್ಲೆಗಳಲ್ಲಿ ಅರ್ಹ ರೈತರಿಗೆ ಪ್ರಗತಿಪರ ರೈತ ಮತ್ತು ರೈತ ಮಹಿಳೆ ಪ್ರಶಸ್ತಿ, ಅದೇ ರೀತಿ ವಿವಿ ವ್ಯಾಪ್ತಿ ಯಲ್ಲಿರುವ 61 ತಾಲೂಕುಗಳಲ್ಲಿ ಪ್ರಗತಿಪರ ಯುವ ರೈತ ಪ್ರಶಸ್ತಿ ನೀಡಿ ಪ್ರೋತ್ಸಾಹಿಸಲಾಗುತ್ತಿದೆ ಎಂದರು.
450 ಮಳಿಗೆಗಳಿಗೆ ಅವಕಾಶ: ಕೊರೊನಾ ಕಾರಣದಿಂದ ಕೇವಲ 450 ಮಳಿಗೆಗಳಿಗೆ ಅವಕಾಶ ನೀಡಲಾಗಿದೆ. ಮಳಿಗೆ ಹಾಕುವವರನ್ನು ಪ್ರೋತ್ಸಾಹಿಸಲು ಶೇ.50 ಶುಲ್ಕ ಕಡಿತ ಮಾಡಲಾಗಿದೆ. ಕೃಷಿ ಸಮಸ್ಯೆಗಳಿಗೆ ತಜ್ಞರಿಂದ ವೈಜ್ಞಾನಿಕ ಸಲಹೆ: ರೈತರು ಕೇಳುವ ಕೃಷಿ ಸಂಬಂಧಿ ಪ್ರಶ್ನೆಗಳಿಗೆ ಭೌತಿಕವಾಗಿ ಮತ್ತು ವರ್ಚುಯಲ್ (ಜೂಮ್) ಮೂಲಕವೂ ನೇರ ಉತ್ತರ ಕೊಡಿಸಲಾಗುತ್ತಿದೆ. ರೈತರು ತಮ್ಮ ಸಮಸ್ಯೆಗಳಿಗೆ ಉತ್ತರ ಕಂಡುಕೊಳ್ಳಬಹುದು. ಬೆಳಗ್ಗೆ 9- 6 ರವರೆಗೆ ನೇರ ಪ್ರಸಾರ: ಮೇಳಕ್ಕೆ ಆಗಮಿ ಸಲು ಸಾಧ್ಯವಾಗದ ರೈತರಿಗೆ ಆನ್‌ಲೈನ್ ಮೂಲಕ ನೇರ ಪ್ರಸಾರ ಮಾಡಲಾಗುತ್ತಿದೆ. ಸಾಮಾ ಜಿಕ ತಾಣ ಮತ್ತು ಜೂಮ್ ಮೂಲಕ ನೇರ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿದೆ ಎಂದರು. ಸಂಶೋಧನಾ ನಿರ್ದೇ ಶಕ ಡಾ. ವೈ.ಜಿ. ಷಡಕ್ಷರಿ ಮತ್ತು ವಿಸ್ತರಣಾ ನಿರ್ದೇಶಕ ಡಾ. ಎನ್. ದೇವಕುಮಾರ್ ಉಪಸ್ಥಿತರಿದ್ದರು.
ಹೊಸ ತಳಿಗಳ ಪರಿಚಯ-
ವಿವಿಯು ಈ ಬಾರಿ ನೂತನವಾಗಿ ಹತ್ತು ಹೊಸ ತಳಿಗಳ ಬೆಳೆಗಳನ್ನು ಪರಿಚಯಿಸುತ್ತಿದೆ. ಜ್ಯೋತಿ ತಳಿಯನ್ನು ಹೋಲುವ ಕೆಎಂಪಿ-220 ತಳಿ ಭತ್ತ, ಎಂಎಸ್‌ಎನ್-99 ತಳಿ ಭತ್ತ, ಕೆಎಂಆರ್-316 ತಳಿ ರಾಗಿ, ಜಿಪಿಯುಪಿ-28 ತಳಿಯ ಬರಗು, ಜಿಪಿಯುಎಫ್-3 ತಳಿಯ ನವಣೆ, ಸಿಓವಿಸಿ-18061 ತಳಿಯ ಕಬ್ಬು, ಮೂರೂವರೆ ವರ್ಷಕ್ಕೆ ಫಸಲು ನೀಡುವ ಹಾಗೂ ವರ್ಷದಲ್ಲಿ ಎರಡು ಬಾರಿ ಫಲ ಬಿಡುವ ಬೈರಚಂದ್ರ ಹಲಸು, ಓಟ್ಸ್ ಹೋಲುವ ಮೇವಿನ ತೋಕೆ ಗೋಧಿ ಆರ್‌ಒ: 11-1 ತಳಿಗಳನ್ನು ಪರಿಚಯಿಸುತ್ತಿದೆ.
ಕೃಷಿ ಬೆಳೆ ಅಭಿವೃದ್ಧಿಗೆ ಸಂಬಂಧಿಸಿದ ವಿವಿಧ 5 ತಂತ್ರಜ್ಞಾನಗಳನ್ನು ಆವಿಷ್ಕರಿಸಿದೆ. ಅದೇ ರೀತಿ ಉತ್ಪಾದನೆಗೆ 8, ಬೆಳೆ ಸಂರಕ್ಷಣೆ ಕುರಿತ 10, ರೇಷ್ಮೆ ಕೃಷಿಗೆ ಸಂಬಂಧಿಸಿದ 3, ಜೇನು ಕೃಷಿ ಮತ್ತು ಕೃಷಿ ಎಂಜಿನಿಯರಿಂಗ್ ಕುರಿತ ತಲಾ ಒಂದು ತಂತ್ರಜ್ಞಾನಗಳನ್ನು ಪರಿಚಯಿಸಲಾಗುತ್ತದೆ.
ಮೇಳದ ಆಕರ್ಷಣೆಗಳು:
65 ಲಕ್ಷ ರೂ. ಮೌಲ್ಯದ ಎತ್ತುಗಳು ಮಂಡ್ಯ ಮಳ್ಳವಳ್ಳಿಯ ಹಳ್ಳಿಕಾರ್ ಎತ್ತುಗಳು ಈ ಬಾರಿ ಮೇಳದ ಪ್ರಮುಖ ಆಕರ್ಷಣೆಗಳಲ್ಲಿ ಒಂದಾಗಿದೆ. ಈ ಎತ್ತುಗಳು ದಷ್ಟಪುಷ್ಟವಾಗಿದ್ದು, ಹಲವು ವಿಶೇಷತೆಗಳನ್ನು ಒಳಗೊಂಡಿವೆ. ಅದೇ ರೀತಿ ರಾಮನಗರದ 50 ಲಕ್ಷ ರೂ. ಮೌಲ್ಯದ ಎತ್ತುಗಳನ್ನೂ ನೋಡಬಹುದು.
3 ಲಕ್ಷ ರೂ. ಗಳ ಓತ
ದೊಡ್ಡಬಳ್ಳಾಪುರದ ಜಮುನಾ ಪ್ಯಾರಿ ಹೆಸರಿನ ಓತವೂ ಮೇಳದ ಆಕರ್ಷಣೆಯಾಗಿದೆ. ಈ ತಳಿ ಅಭಿವೃದ್ಧಿಗೆ ಹೆಸರುವಾಸಿಯಾಗಿದೆ.
ರೇಷ್ಮೆ ಗೂಡು ಬಿಡಿಸುವ ಯಂತ್ರ
ಇದೇ ಮೊದಲ ಬಾರಿಗೆ ವಿವಿ ವಿದ್ಯಾರ್ಥಿಗಳು ಸಂಶೋಧಿಸಿರುವ ರೇಷ್ಮೆ ಗೂಡು ಬಿಡಿಸುವ ಯಂತ್ರವನ್ನು ಪ್ರದರ್ಶಿಸಲಾಗುತ್ತಿದೆ. ಈ ಯಂತ್ರವು ಚಂದ್ರಿಕೆಯಿಂದ ರೇಷ್ಮೆ ಗೂಡು ಬಿಡಿಸಲಿದೆ. ಸುಮಾರು 7ರಿಂದ 8 ಸಾವಿರ ರೂ. ವೆಚ್ಚ ತಗಲಬಹುದು. ವಿದ್ಯಾರ್ಥಿಗಳು ಮೇಳದಲ್ಲಿ ಪ್ರಾತ್ಯಕ್ಷಿಕೆ ಮಾಡಲಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Karnataka HC; ನಾಲ್ಕನೇ ಪ್ರಕರಣದಲ್ಲೂ ಪ್ರಜ್ವಲ್ ರೇವಣ್ಣ ನಿರೀಕ್ಷಣಾ ಜಾಮೀನು ಅರ್ಜಿ ವಜಾ
Madhu Bangarappa ; ಟ್ರೋಲ್ ಗಳಿಗೆ ಬಗ್ಗಲ್ಲ.. ಕಿಡಿ ಕಿಡಿಯಾದ ಶಿಕ್ಷಣ ಸಚಿವ!
Bidar; ಲಂಚ ಸ್ವೀಕರಿಸುತ್ತಿದ್ದ ಬುಡಾ ಆಯುಕ್ತ ಸೇರಿ ಮೂವರು ಲೋಕಾಯುಕ್ತ ಬಲೆಗೆ
Caste ನೋಡಿ ಮತ ಹಾಕಿದರೆ ಸಮಾಜದಲ್ಲಿ ಬದಲಾವಣೆ ಅಸಾಧ್ಯ : ಸಿಎಂ ಸಿದ್ದರಾಮಯ್ಯ
BJP Protest: ʼ1,500 ವರ್ಷದ ಹಿಂದೆ ಅಲ್ಲಾನು ಇರಲಿಲ್ಲ ಮುಲ್ಲಾನೂ ಇರಲಿಲ್ಲʼ: ಸಿ.ಟಿ.ರವಿ
MUST WATCH
ಹೊಸ ಸೇರ್ಪಡೆ
Karnataka HC; ನಾಲ್ಕನೇ ಪ್ರಕರಣದಲ್ಲೂ ಪ್ರಜ್ವಲ್ ರೇವಣ್ಣ ನಿರೀಕ್ಷಣಾ ಜಾಮೀನು ಅರ್ಜಿ ವಜಾ
Sagara: ಟ್ರಾಫಿಕ್ ಜಾಮ್‌ಗೆ ಕಾರಣವಾದ ವಾಹನ ವಶ; ಚಾಲಕನ ವಿರುದ್ಧ ಎಫ್ಐಆರ್ ದಾಖಲು
Siruguppa: ತೆಕ್ಕಲಕೋಟೆಯಲ್ಲಿ ಅಕ್ರಮ ಪಡಿತರ ಅಕ್ಕಿ ವಶ
Mangaluru Airport; ಕೆ 9 ಹೀರೋ ಜಾಕ್ ಇನ್ನಿಲ್ಲ: ಭಾವನಾತ್ಮಕ ವಿದಾಯ
Kottigehara: ಅಪಘಾತದಿಂದ ಗಾಯಗೊಂಡ ನಾಗರಹಾವಿಗೆ ಚಿಕಿತ್ಸೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.