ಸಂಗೀತಪ್ರಿಯರಿಗೆ 4 ದಿನಗಳ ಧ್ಯಾನ ಸಂಗೀತ ಹಬ್ಬ
Team Udayavani, Nov 5, 2021, 9:39 AM IST
ಬೆಂಗಳೂರು: ಪಿರಮಿಡ್ ಮೆಡಿಟೇಶನ್ ಮ್ಯೂಸಿಕ್ ಅಕಾಡೆಮಿಯಿಂದ ಶುಕ್ರವಾರದಿಂದ (ನ.5) ನ.8 ರವರೆಗೆ ನಾಲ್ಕು ದಿನಗಳ ಕಾಲ ”ಧ್ಯಾನ ಸಂಗೀತ ಹಬ್ಬ”‘ ಕಾರ್ಯಕ್ರಮವನ್ನು ಕನಕಪುರ ರಸ್ತೆಯ ಹಾರೋಹಳ್ಳಿ ಬಳಿಯಿರುವ ಪಿರಮಿಡ್ ವ್ಯಾಲಿ ಇಂಟರ್‌ನ್ಯಾಷನಲ್ ನಲ್ಲಿ ಹಮ್ಮಿಕೊಳ್ಳಲಾಗಿದೆ.
ಬ್ರಹ್ಮರ್ಷಿ ಪಿತಾಮಹಾ ಡಾ. ಸುಭಾಷ್ ಪತ್ರೀಜಿ ಅವರು, ಜಗತ್ತಿನಾದ್ಯಂತ ಪ್ರತಿಯೊಬ್ಬರಿಗೂ ಆಧ್ಯಾತ್ಮಿಕ ಸತ್ಯಗಳು ಮತ್ತು ಆಧ್ಯಾತ್ಮಿಕ ವಿಜ್ಞಾನದ ಮೂಲಭೂತ ಅಂಶಗಳ ಬಗ್ಗೆ ತಿಳಿಸಲು, ಪಿರಮಿಡ್ ಸ್ಪಿರಿಚ್ಯುಯಲ್ ಸೊಸೈಟೀಸ್ ಮೂವ್‌ಮೆಂಟ್ ಸ್ಥಾಪಿಸಿದರು. ‘ಪ್ರತಿನಿತ್ಯ ಅನುಭವಗಳನ್ನು ಪಡೆಯುತ್ತಿರುವ ನಾವು, ಕೇವಲ ಭೌತಿಕ ಅಸ್ತಿತ್ವ ಹೊಂದಿರುವವರು ಮಾತ್ರವಲ್ಲ. ಶಕ್ತಿಚೈನತ್ಯ ಸ್ವರೂಪರು, ಶಾಶ್ವತ ಅಸ್ತಿತ್ವವುಳ್ಳ ವಿಶ್ವ ಪ್ರಜ್ಞೆ ಗಳಿಸುವವರು.
ಇದನ್ನೂ ಓದಿ:- ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಹೇಳಿದ ವಿಂಡೀಸ್ ಆಲ್ ರೌಂಡರ್ ಡ್ವೇಯ್ನ್ ಬ್ರಾವೋ
ವಾಸ್ತವಗಳನ್ನು ಸೃಷ್ಟಿಸಿಕೊಳ್ಳುವ ಆಯ್ಕೆಯನ್ನು ಹೊಂದಿರುವ ನಿತ್ಯಸ್ವರೂಪಿಗಳು ನಾವು’ ಎಂಬ ಸತ್ಯವನ್ನು ತಿಳಿಸುವುದೇ ಈ ಆಂದೋಲನದ ಮುಖ್ಯ ಉದ್ದೇಶವಾಗಿದೆ. ಈ ಸೊಸೈಟಿಯ ಆಂದೋಲನವು ಶಾಸ್ತ್ರೀಯ ಸಂಗೀತಕ್ಕೆ ಮತ್ತು ಗಾಯಕರಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡಿದೆ. ಅಖಂಡ ಧ್ಯಾನ(ನಿರಂತರತೆ)ವು ಸುಮಧುರ ಶಾಸ್ತ್ರೀಯ ಸಂಗೀತ ಮತ್ತು ಧ್ಯಾನದ ಉತ್ತಮ ಸಂಗಮವಾಗಿದೆ. ಆದ್ದರಿಂದ ಈ ಕಾರ್ಯಕ್ರಮದಲ್ಲಿ ವಾದ್ಯಸಂಗೀತದ ಮಾಧುರ್ಯವು ಆಳವಾದ ಧ್ಯಾನಕ್ಕೆ ಪ್ರೇರಕ ಶಕ್ತಿಯಾಗಿ, ಶಕ್ತಿಚೈತ್ಯನ್ಯವನ್ನು ತುಂಬುತ್ತದೆ. ಶಾಸ್ತ್ರೀಯ ಸಂಗೀತದಿಂದ ಮಾನವನ ಭಾವನೆಗಳನ್ನು ಗಟ್ಟಿಕೊಳಿಸಿ, ಮಾನಸಿಕವಾಗಿ ಮತ್ತಷ್ಟು ಸದೃಢವಾಗುವಂತಹ ಶಬ್ದಸ್ತರಗಳು, ಸ್ವರ ಏರಿಳಿತಗಳು, ಸ್ಪಷ್ಟೋಚ್ಛಾರಗಳು, ಸೂಕ್ಮದನಿಗಳು ಮತ್ತು ಮಧುರವಾದ ಲಯಗಳನ್ನು ಕೇಳಿದರೆ, ತಮ್ಮ ಒತ್ತಡಗಳಿಂದ ಹೊರಬಂದು ಧನಾತ್ಮ ಚೈತನ್ಯಗಳನ್ನು ವೃದ್ಧಿಸಿಕೊಳ್ಳಲು ನೆರವಾಗುತ್ತದೆ ಎಂದು ಸಂಯೋಜಕ ಗಣೇಶ್ ಕುಮಾರ್ ತಿಳಿಸಿದ್ದಾರೆ.
ಕಾರ್ಯಕ್ರಮದಲ್ಲಿ ಖ್ಯಾತ ಸಂಗೀತ ಗಾರರು ಕಲೈಮಾಮಣಿ ಪರೂರ್ ಎಂ.ಎ. ಕೃಷ್ಣ ಸ್ವಾಮಿ, ಪ್ರೊ. ಟಿ.ಎಸ್. ಸತ್ಯವತಿ, ಕರ್ನಾಟಕ ಕಲಾಶ್ರೀ ಅನೂರ್ ಅನಂತಕೃಷ್ಣ ಶರ್ಮ ಗಾನಸುಧೆ ಹರಿಯಲಿದೆ. ವಿದ್ವಾನ್ ವಿನಯ್ ಶರ್ಮ, ಕಾಂಚನ ಸಹೋದರಿಯರು, ರಂಜನಿ, ಶೃತಿ ರಂಜನಿ, ಸಿದ್ಧಾರ್ಥ್ ಬೆಳ್ಮಣ್ಣು ಸೇರಿದಂತೆ ಇತರರು ಪಾಲ್ಗೊ ಳ್ಳಲಿದ್ದಾರೆ. ಡಾ. ಈಶ್ವರ ದೈತೋಟ, ಡಾ.ಎಂ. ಸೂರ್ಯಪ್ರಸಾದ್ ಒಳಗೊಂ ಡಂತೆ ಸಾಧಕರಿಗೆ ಸನ್ಮಾನಿಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಎಸ್.ಎಂ.ಕೃಷ್ಣ ಸಂಸ್ಮರಣಾ ವೇದಿಕೆಯಿಂದ ಪಂಚನಮನ
Bengaluru:ಕುಡಿದ ಅಮಲಲ್ಲಿದ್ದ ಚಾಲಕ; ರಕ್ಷಣೆಗಾಗಿ ಚಲಿಸುತ್ತಿದ್ದ ರಿಕ್ಷಾದಿಂದ ಜಿಗಿದ ಮಹಿಳೆ
Gold Fraud Case: ಐಶ್ವರ್ಯಗೌಡ ದಂಪತಿಯ 3 ಐಷಾರಾಮಿ ಕಾರು ಜಪ್ತಿ
Gold Cheating Case: ಚಿನಾಭರಣ ವಂಚನೆ… ಶ್ವೇತಾಗೌಡ ವಿರುದ್ಧ ಇನ್ನೊಂದು ದೂರು
Metro: ಮೆಟ್ರೋದಲ್ಲಿ ಮಹಿಳಾ ಟೆಕಿ ಫೋಟೋ ತೆಗೆದು ಸಿಕ್ಕಿಬಿದ್ದ ಆಯುರ್ವೇದಿಕ್ ವೈದ್ಯ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.