Fraud: ಎಂಜಿನಿಯರ್ಗೆ 40 ಲಕ್ಷ ರೂ. ಟೋಪಿ
Team Udayavani, Nov 18, 2023, 10:39 AM IST
ಬೆಂಗಳೂರು: ಬಿಟ್ಕಾಯಿನ್ನಲ್ಲಿ ಹಣ ಹೂಡಿಕೆ ಮಾಡಿದರೆ ಹೆಚ್ಚು ಲಾಭ ನೀಡುವುದಾಗಿ ನಂಬಿಸಿ ಎಂಜಿನಿಯರ್ಗೆ ಅಪರಿಚಿತರು ಬರೋಬ್ಬರಿ 40 ಲಕ್ಷ ರೂ. ಟೋಪಿ ಹಾಕಿದ್ದಾರೆ.
ರಾಘವೇಂದ್ರ ಬಡಾವಣೆಯ ನಿವಾಸಿ ಭರತ್ (38) ವಂಚನೆಗೊಳಗಾದವರು.
ಭರತ್ ಖಾಸಗಿ ಕಂಪನಿಯಲ್ಲಿ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದಾರೆ. ಇತ್ತೀಚೆಗೆ ಭರತ್ ಮೊಬೈಲ್ ನಂಬರ್ ಅನ್ನು ಯಾರೋ ಅಪರಿಚಿತರು ಎನ್ಕ್ರಿಪ್ಟ್ ಡಾಟಾ ಟ್ರೇಡಿಂಗ್ ಗ್ರೂಪ್ ಎಂಬ ವಾಟ್ಸ್ಆ್ಯಪ್ ಗ್ರೂಪ್ಗೆ ಸೇರಿಸಿದ್ದರು. ಈ ಗ್ರೂಪ್ ಕ್ರಿಪ್ಟೋ ಬಿಟ್ ಕಾಯಿನ್ ಟ್ರೇಡಿಂಗ್ ಬಗ್ಗೆ ಮಾಹಿತಿಯನ್ನು ನೀಡುವ ಗ್ರೂಪ್ ಆಗಿತ್ತು.
ನಂತರ ಅಪರಿಚಿತರು ಭರತ್ ಅವರನ್ನು ಆನ್ಲೈನ್ ಮೂಲಕ ಸಂಪರ್ಕಿಸಿ ಬಿಟ್ ಕಾಯಿನ್ ಮೇಲೆ ಹೂಡಿಕೆ ಮಾಡಿದರೆ ಹೆಚ್ಚು ಲಾಭ ನೀಡುವುದಾಗಿ ನಂಬಿಸಿ ಬಿನಾನ್ಸ್ ಅಪ್ಲಿಕೇಷನ್ ಮೂಲಕ ಹಣವನ್ನು ಯು.ಎಸ್ .ಡಿ.ಟಿಗೆ ಬದಲಾಯಿಸುವಂತೆ ತಿಳಿಸಿದ್ದರು.
ನಂತರ ಈ ಯು. ಎಸ್.ಡಿ.ಟಿ ಹಣವನ್ನು ಮೊಬೈಲ್ ಅಪ್ಲಿಕೇಶನ್ನ ಅಪರಿಚಿತ ವ್ಯಾಲೆಟ್ಗೆ ಹಂತ-ಹಂತವಾಗಿ 40 ಲಕ್ಷ ರೂ. ಹೂಡಿಕೆ ಮಾಡಿಸಿಕೊಂಡಿದ್ದರು. ನಂತರ ಲಾಭವನ್ನೂ ನೀಡದೇ, ಅಸಲು ದುಡ್ಡನ್ನೂ ಹಿಂತಿರುಗಿಸದೇ ವಂಚಿಸಿದ್ದಾರೆ. 40 ಲಕ್ಷ ರೂ. ದುಡ್ಡು ಕಳೆದುಕೊಂಡಿರುವ ಭರತ್ ಪಶ್ಚಿಮ ವಿಭಾಗದ ಸಿಇಎನ್ ಠಾಣೆಗೆ ದೂರು ನೀಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ಯುವತಿ ಜೊತೆ ಅಸಭ್ಯ ವರ್ತನೆ: ಮ್ಯಾನೇಜರ್, ಮತ್ತಿಬ್ಬರ ಮೇಲೆ ಕೇಸ್
Bengaluru: 3 ತಿಂಗಳ ಹಿಂದಷ್ಟೇ ವಿವಾಹ ಆಗಿದ್ದ ಚಿನ್ನಾಭರಣ ವ್ಯಾಪಾರಿ ಆತ್ಮಹತ್ಯೆ
Bengaluru: 40000 ರೂ. ಲಂಚ ಸ್ವೀಕರಿಸುವಾಗ ಎಎಸ್ಐ ಸೇರಿ ಇಬ್ಬರು ಲೋಕಾ ಬಲೆಗೆ
Bengaluru: ಸೆಂಟ್ರಿಂಗ್ ಮರಗಳು ಬಿದ್ದು ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಸಾವು
Bengaluru: ಬಿಬಿಎಂಪಿ ಕಸದ ಲಾರಿ ಹರಿದು ಇಬ್ಬರು ಸಹೋದರಿಯರ ಬಲಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.