ಬಿಬಿಎಂಪಿಯಿಂದ “4ಜಿ’ ಹಗರಣ: ಆರೋಪ
ಬಹುತೇಕ ಕಾಮಗಾರಿ ಕೆಆರ್‌ಐಡಿಎಲ್‌ಗೆ ಗುತ್ತಿಗೆ ನೀಡಿ ಕೋಟ್ಯಂತರ ರೂ. ಅವ್ಯವಹಾರ
Team Udayavani, Sep 23, 2020, 1:06 PM IST
ಬೆಂಗಳೂರು: ಪಾಲಿಕೆಯಲ್ಲಿ 2015-20ನೇ ಸಾಲಿ ನಲ್ಲಿ ಅಧಿಕಾರದಲ್ಲಿದ್ದ ಸದಸ್ಯರು ಸಾವಿರಾರು ಕೋಟಿ ರೂ. ವಿವಿಧ ಕಾಮಗಾರಿಗಳನ್ನು ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮ (ಕೆಆರ್‌ಐಡಿಎಲ್)ಕ್ಕೆ ನೀಡುವ ಮೂಲಕ ಬಹು ಕೋಟಿ ಅವ್ಯವಹಾರ ನಡೆಸಿದ್ದಾರೆ.
ಇದು ಪಾಲಿಕೆ ಸದಸ್ಯರು ನಡೆಸಿರುವ 4ಜಿ ಹಗರಣ ಎಂದು ಬೆಂಗಳೂರು ನವ ನಿರ್ಮಾಣ ಪಕ್ಷ ಅಂಕಿ- ಅಂಶ ಮತ್ತು ದಾಖಲೆಯ ಸಹಿತ ಆರೋಪ ಮಾಡಿದೆ. ಈ ಸಂಬಂಧ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಬೆಂಗಳೂರು ನವ ನಿರ್ಮಾಣ ಪ್ರಧಾನ ಕಾರ್ಯದರ್ಶಿ ಶ್ರೀಕಾಂತ್ ನರಸಿಂಹನ್ ಮಾತನಾಡಿ, 2015ರಿಂದ 2020ರ ಅವಧಿಯಲ್ಲಿ 10 ಸಾವಿರ ಕೋಟಿ ರೂ. ಮೊತ್ತದ ಕಾಮಗಾರಿಯನ್ನು ಕೆಆರ್‌ಐಡಿಎಲ್‌ಗೆ ನೀಡಲಾಗಿದೆ. ಈ ರೀತಿ ಒಂದೇ ಏಜೆನ್ಸಿಗೆ ಸಾವಿರಾರುಕೋಟಿ ರೂ. ಮೊತ್ತದ ಕಾಮಗಾರಿ ನೀಡುವ ಮೂಲಕ ಬಹುದೊಡ್ಡ ಹಗರಣ ಮಾಡಲಾಗಿದೆ. ಇದನ್ನು ಪಾಲಿಕೆಯ 4ಜಿ ಹಗರಣ ಎಂದೇ ವ್ಯಾಖ್ಯಾನಿಸಬಹುದಾಗಿದೆ. ಪಾಲಿಕೆ ವ್ಯಾಪ್ತಿಯ 198 ವಾರ್ಡ್‌ಗಳಲ್ಲೂ ಕೆಆರ್ ಐಡಿಎಲ್‌ಗೆಕಾಮಗಾರಿ ನೀಡಲಾಗಿದೆ. ಕಳೆದ ಐದು ವರ್ಷಗಳಲ್ಲಿ 21,653 ಕೋಟಿ ರೂ. ಮೌಲ್ಯದ 63,629 ಕಾಮಗಾರಿಗಳನ್ನು ಕೆಆರ್ ಐಡಿಎಲ್‌ಗೆ ನೀಡಲಾಗಿದ್ದು, ಇದರಲ್ಲಿ 10,018 ಕೋಟಿ ರೂ. ಮೌಲ್ಯದ 28,314 ಯೋಜನೆಗಳಿಗೆ ಅನುಮೋದನೆ ಸಿಕ್ಕಿದೆ. ಇನ್ನುಕೆಲವುಕಾಮಗಾರಿಗಳು ಪ್ರಗತಿಯಲ್ಲಿವೆ. ಈ ಪೈಕಿ, ಸುಮಾರು4721ಕೋಟಿ ರೂ. ಮೌಲ್ಯದ ಶೇ.50 ಕಾಮಗಾರಿಗಳನ್ನು ಒಂದೇ ಏಜೆನ್ಸಿಗೆ ಗುತ್ತಿಗೆ ನೀಡಲಾಗಿದೆ. ಉದ್ದೇಶಪೂರ್ವಕ ವಾಗಿ ಅವ್ಯವಹಾರ ನಡೆಸಲು ಒಂದೇ ಏಜೆನ್ಸಿಗೆ ನೀಡಲಾಗಿದೆ ಎಂದು ಆರೋಪಿಸಿದರು.
ಪ್ರತಿ ಯೊಜನೆಯಲ್ಲಿ ಶೇ.10 ಕಮಿಷನ್ ಪಡೆದುಕೊಳ್ಳಲಾಗಿದೆ. ಇದು ಪಾಲಿಕೆಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರಕ್ಕೆ ಒಂದು ಉದಾಹರಣೆ ಮತ್ತು ಆಡಳಿತದ ದುರ್ಬಳಕೆಗೆ ಹಿಡಿದಕನ್ನಡಿ ಎಂದರು.
ಬಿಎನ್‌ಪಿ ಯ ತಾಂತ್ರಿಕ ವಿಭಾಗದ ಮುಖ್ಯಸ್ಥ ಅರುಣ್ ಮಹೇಂದ್ರನ್ ಮಾತನಾಡಿ, ನಗರದ ಸಾರ್ವಜನಿಕರು ತಮ್ಮ ವಾರ್ಡ್‌ಗಳಲ್ಲಿ ನಡೆದಿರುವ ಕಾಮಗಾರಿಗಳ ಬಗ್ಗೆ ಮಾಹಿತಿ ಪಡೆದುಕೊಳ್ಳುವ ಉದ್ದೇಶದಿಂದ ಕೆಆರ್‌ಐಡಿಎಲ್‌ಗೆನೀಡಲಾಗಿರುವ ಕಾಮಗಾರಿಗಳ ವಿವರವನ್ನು ವಾರ್ಡುವಾರು ವಿಂಗಡಿಸಿ, ಬೆಂಗಳೂರು ನವ ನಿರ್ಮಾಣ ಪಕ್ಷದ ವೆಬ್‌ಸೈಟ್ (www.nammabnp.org) ನಲ್ಲಿ ಪ್ರಕಟಿಸಲಾಗಿದೆ ಎಂದು ಮಾಹಿತಿ ನೀಡಿದರು.
ಪಕ್ಷದ (ಬಿಎನ್‌ಪಿ )ವಿಷ್ಲೇಷಣಾ ಘಟಕದ ಮುಖ್ಯಸ್ಥ ಸಂಜಯ್ ಮೆಹ್ರೋತ್ರ, ಬಿಎನ್‌ಪಿಯ ಖಜಾಂಚಿ ಸುಬ್ಬು ಹೆಗ್ಡೆ, ಬಿಎನ್‌ಪಿಯ ಸಂಶೋಧನಾ ವಿಭಾಗದ ಮುಖ್ಯಸ್ಥ ಸೌಮ್ಯಾ ರಾಘವನ್ ಹಾಗೂ ಪದ್ಮನಾಭ ನಗರ ಕ್ಷೇತ್ರದ ಬಿಎನ್‌ಪಿ ಮುಖಂಡರಾದ ಸಿದ್ಧಾರ್ಥ ಶೆಟ್ಟಿ ಇತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru; ಪಟಾಕಿ ಬಾಕ್ಸ್ ಮೇಲೆ ಕುಳ್ಳಿರಿಸಿ ಸ್ನೇಹಿತರ ಹುಚ್ಚಾಟ: ಯುವಕ ಸಾ*ವು
ತಂದೆ, ಮಗು ಸಾವು: ಬೆಸ್ಕಾಂ ಎಂಜಿನಿಯರ್ ವಿರುದ್ಧದ ಕೇಸು ರದ್ದತಿಗೆ ಹೈಕೋರ್ಟ್ ನಕಾರ
Arrested: ರಾಜಸ್ಥಾನದಿಂದ ಫ್ಲೈಟ್‌ನಲ್ಲಿ ಬಂದು ಕಾರು ಕದಿಯುತ್ತಿದ್ದವನ ಸೆರೆ; ಆರೋಪಿ ಬಂಧನ
Bengaluru: ಅತಿ ವೇಗವಾಗಿ ಬಂದ ಕಾರು ಬೈಕ್‌ಗೆ ಡಿಕ್ಕಿ: ಫುಡ್ ಡೆಲಿವರಿ ಬಾಯ್ ಸಾವು
Bengaluru: ಊರಿಂದ ವಾಪಸ್ಸಾದವರಿಗೆ ಸಂಚಾರ ದಟ್ಟಣೆ ಬಿಸಿ
MUST WATCH
ಹೊಸ ಸೇರ್ಪಡೆ
ಅಕ್ರಮ ಮರಳುಗಾರಿಕೆ ಕುರಿತು ಮಾಹಿತಿ ನೀಡಿದ ಆರೋಪ… ವ್ಯಕ್ತಿಗೆ ಹಲ್ಲೆ ನಡೆಸಿ ಇರಿಯಲು ಯತ್ನ
BBK11: ಕ್ಯಾಪ್ಟನ್ ಹನುಮಂತುಗೆ ನಿಯತ್ತಿನ ಪ್ರಶ್ನೆ ಹಾಕಿ, ರೇಗಾಡಿದ ಚೈತ್ರಾ
Sagara: ಚಿರತೆ ಉಗುರು, ಹಲ್ಲು ಅಕ್ರಮ ಸಾಗಣೆ… ಸೊತ್ತು ಸಮೇತ ವ್ಯಕ್ತಿ ವಶ
Mudhol: ಸಾಲಬಾಧೆಗೆ ಹೆದರಿ ರೈತ ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆ
Belegavi: ‘ನಾ ಡ್ರೈವರ್’ ಹಾಡಿನ ಗಾಯಕ ಮಾಳು ನಿಪನಾಳನಿಂದ ಯುವಕನ ಮೇಲೆ ಹಲ್ಲೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.