50 ರೂ. ವಿಚಾರಕ್ಕೆ ಚಾಕು ಇರಿತ
Team Udayavani, Jun 11, 2018, 11:52 AM IST
ಬೆಂಗಳೂರು: ಕೇವಲ 50 ರೂ. ವಿಚಾರಕ್ಕೆ ಕೂಲಿ ಕಾರ್ಮಿಕ ಬಾಲಾಜಿ ಎಂಬಾತನ ಕಾಲಿಗೆ ಚಾಕು ಇರಿದ ಪ್ರಕರಣ ಕೆ.ಆರ್.ಮಾರ್ಕೆಟ್ ಮೆಟ್ರೋ ಗೆಸ್ಟ್‌ಹೌಸ್ ಬಳಿ ನಡೆದಿದೆ. ಈ ಸಂಬಂಧ ಸಂತೋಷ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಮಾರ್ಕೆಟ್ ಸೇರಿದಂತೆ ಇತರೆ ಕಡೆ ಕೂಲಿ ಕೆಲಸ ಮಾಡುವ ಬಾಲಾಜಿ ಹಾಗೂ ಸಂತೋಷ್ ಮತ್ತಿತರರು ಮಧ್ಯಾಹ್ನ ಮೆಟ್ರೋ ಗೆಸ್ಟ್ ಹೌಸ್ ಬಳಿಯೇ ಉಳಿದುಕೊಳ್ಳುತ್ತಿದ್ದು, ಶನಿವಾರ ಮಧ್ಯಾಹ್ನ 3 ಗಂಟೆ ಸುಮಾರಿಗೆ ಪಾನಮತ್ತರಾಗಿ ಗೆಸ್ಟ್‌ಹೌಸ್ ಬಳಿ ಬಂದಿದ್ದಾರೆ.
ಈ ವೇಳೆ ಕೂಲಿ ಕೆಲಸದಲ್ಲಿ ಬಾಕಿ ಬರಬೇಕಿದ್ದ 50 ರೂ. ನೀಡುವಂತೆ ಬಾಲಾಜಿ ಜತೆಗಿದ್ದ ಸಂತೋಷ್‌ನನ್ನು ಕೇಳಿದ್ದಾನೆ. ಇದೇ ವಿಚಾರಕ್ಕೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆದು ಜಗಳ ವಿಕೋಪಕ್ಕೆ ಹೋಗಿದ್ದು, ಕೋಪಗೊಂಡ ಸಂತೋಷ್ ಹರಿತವಾದ ಚಾಕುವಿನಿಂದ ಬಾಲಾಜಿ ಇರಿಯಲು ಮುಂದಾದ.
ಈ ವೇಳೆ ಬಾಲಾಜಿ ತಪ್ಪಿಸಿಕೊಳ್ಳಲು ಪ್ರಯತ್ನಿಸಿದಾಗ ಚಾಕು ಆತನ ಕಾಲಿಗೆ ಚುಚ್ಚಿಕೊಂಡಿದೆ. ಇದರಿಂದ ರಕ್ತಸ್ರಾವ ಆಗುತ್ತಿದ್ದರೂ ಜಗಳ ಮುಂದುವರಿದಿರುವುದನ್ನು ಗಮನಿಸಿದ ಸ್ಥಳೀಯರು ಜಗಳ ಬಿಡಿಸಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. ಈ ಸಂಬಂಧ ಕಲಾಸಿಪಾಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Boxing Day Test: ನೀಗಲಿ ಭಾರತದ ಬ್ಯಾಟಿಂಗ್ ಬರ; ಇಂದಿನಿಂದ ವರ್ಷಾಂತ್ಯದ ಭಾರತಸ್ಟ್
Covid: ಎನ್-95 ಮಾಸ್ಕ್ ಅವ್ಯವಹಾರ: ಆತುರದ ಕ್ರಮ ಕೈಗೊಳ್ಳದಂತೆ ಸೂಚನೆ
Udupi: ಗೀತಾರ್ಥ ಚಿಂತನೆ 136: ರಕ್ತ ಸುರಿದರೆ ದುಃಖ ಏತಕ್ಕಾಗಿ? ರಕ್ತ ಸುರಿದದ್ದಕ್ಕಲ್ಲ
Koteshwar: ಬೀಜಾಡಿಯ ಯೋಧ ಅನೂಪ್ ಪೂಜಾರಿ ಮೃತ್ಯು
Name Road: ರಸ್ತೆಗೆ ಸಿದ್ದರಾಮಯ್ಯ ಹೆಸರಿಟ್ಟರೇ ತಪ್ಪೇನು?: ಪ್ರತಾಪ್ ಸಿಂಹ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.