50 ಸಾವಿರ ಸೋಂಕು ಪರೀಕ್ಷೆ ಕಡಿತ!

Team Udayavani, May 5, 2021, 1:49 PM IST

50 thousand infection test cuts!

ಬೆಂಗಳೂರು: ಅತಿ ಹೆಚ್ಚು ಸೋಂಕು ಪರೀಕ್ಷೆ ನಡೆಸುವಮೂಲಕ ಕೊರೊನಾ ಸೋಂಕಿನ ಮೊದಲ ಅಲೆಹತ್ತಿಕ್ಕಿದ್ದನ್ನು ರಾಜ್ಯ ಸರ್ಕಾರ ಮರೆತಂತಿದೆ!ಎರಡನೇ ಅಲೆ ತೀವ್ರಗೊಂಡಿರುವ ಈಸಂದರ್ಭದಲ್ಲಿಯೇ 50 ಸಾವಿರದಷ್ಟು ಸೋಂಕುಪರೀಕ್ಷೆಗಳನ್ನು ಕಡಿಮೆ ಮಾಡಿದೆ. ಈ ಮೂಲಕಪರೋಕ್ಷವಾಗಿ ಹೊಸ ಸೋಂಕು ಪ್ರಕರಣಗಳನ್ನುಇಳಿಕೆಗೆ ಮುಂದಾದಂತಿದೆ. ಸರ್ಕಾರದ ಈ ನಡೆಗೆಆರೋಗ್ಯ ತಜ್ಞರು ಕೂಡಾ ಬೇಸರ ವ್ಯಕ್ತಪಡಿಸಿದ್ದು,ಪರೀಕ್ಷೆ ಇಳಿಕೆಯಾದರೆ ಸೋಂಕು ಹತೋಟಿ ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.

ಸೋಂಕು ತೀವ್ರತೆ ಹೆಚ್ಚಿರುವ ಪ್ರದೇಶದಲ್ಲಿ ಅತಿ ಹೆಚ್ಚುಪರೀಕ್ಷೆಗಳನ್ನು ನಡೆಸಿ ಶೀಘವೇ ಸೋಂಕಿತರನ್ನು ಪತ್ತೆಮಾಡಿ ಕ್ವಾರಂಟೈನ್‌/ ಚಿಕಿತ್ಸೆ ನೀಡಿದರೆ ಆತನಿಂದ ಮತ್ತೂಬ್ಬರಿಗೆ ಸೋಂಕು ಹರಡುವುದನ್ನು ತಪ್ಪಿಸಬಹುದು.ಇದು ಸೋಂಕನ್ನು ಹತೋಟಿಗೆ ತರುವ ಪ್ರಮುಖ ತಂತ್ರವಾಗಿದೆ. ಈ ಹಿಂದೆ ರಾಜ್ಯ ಸರ್ಕಾರವು ಕೂಡಾ ಇದನ್ನೆಮಾಡಿದ್ದು, ಮೊದಲ ಅಲೆ ತೀವ್ರವಾಗಿದ್ದ ಆಗಸ್ಟ್‌ನಲ್ಲಿನಿತ್ಯ 50 ಸಾವಿರ ನಡೆಯುತ್ತಿದ್ದ ಪರೀಕ್ಷೆಗಳನ್ನು ಸೆಪ್ಟೆಂಬರ್ ಮತ್ತು ಅಕ್ಟೋಬರ್‌ನಲ್ಲಿ ದುಪ್ಪಟ್ಟು ಅಂದರೆ ಒಂದು ಲಕಕ್ಕೆ ‌ ಹೆಚ್ಚಿಸಿತ್ತು. ಸತತ 60 ದಿನ 1 ಲಕ್ಷಕ್ಕೂ ಅಧಿಕ ಪರೀಕ್ಷೆ ನಡೆಯುವ ಮೂಲಕ ಅಕ್ಟೋಬರ್‌ ಅಂತ್ಯಕ್ಕೆ ಸೋಂಕು ಅರ್ಧಕ್ಕರ್ದ ಕ‌ಡಿಮೆಯಾದವು.  ಆನಂತರ ನವೆಂಬರ್‌,ಡಿಸೆಂಬರ್‌ನಲ್ಲೂ ಇದೇ ರೀತಿ ಪರೀಕ್ಷೆ ನಡೆಸಿ ವರ್ಷಾಂತ್ಯಕ್ಕೆ ಪರೀಕ್ಷೆಗೆ ತಕ್ಕ ಫ‌ಲವೆಂಬಂತೆ 11 ಸಾವಿರಕ್ಕೆ ಏರಿದ್ದ ಹೊಸ ಪ್ರಕರಣ ಒಂದು ಸಾವಿರಕ್ಕೆ ಇಳಿಕೆಯಾಗಿದ್ದವು.

ಎರಡರಿಂದ ಒಂದೂವರೆ ಲಕ್ಷಕ್ಕೆ ತಗ್ಗಿದ ಪರೀಕ್ಷೆ:ಮೊದಲ ಅಲೆಯ ಹತ್ತಿಕ್ಕಿದ್ದ ತಂತ್ರವನ್ನು ಈ ಬಾರಿ ರಾಜ್ಯಸರ್ಕಾರ ಮರೆತಿದ್ದು, ಕಳೆದ ವಾರ ಹೆಚ್ಚು ಕಡಿಮೆ ಎರಡುಲಕ್ಷ ಗಡಿಯಲ್ಲಿ ಪ‌ರೀಕ್ಷೆಗಳು ಈಗ ಒಂದೂವರೆ ಲಕಕ್ಕೆ ‌Òತಗ್ಗಿವೆ. ಏ.30 ರಂದು 1.9 ಲಕ್ಷ ನಡೆದಿ¨ ಸª ಸೋಂಕು ಪರೀಕ್ಷೆಗಳು ಕಳೆದ ಐದು ದಿನಗಳಿಂದ ನಿತ್ಯ 8 ರಿಂದ 10ಸಾವಿರ ಇಳಿಕೆಯಾಗುತ್ತಾ ಸಾಗಿ ಸದ್ಯ 1.4 ಲಕ್ಷಕ್ಕೆ ಬಂದುನಿಂತಿವೆ. ಅದರಲ್ಲೂ ಸೋಂಕು ಹೆಚ್ಚಿರುವಬೆಂಗಳೂರಿನಲ್ಲಿ ಪರೀಕ್ಷೆಗಳ ಸಂಖ್ಯೆ ಒಂದು ಲಕ್ಷದಿಂದ40 ಸಾವಿರಕ್ಕೆ ಇಳಿಕೆಯಾಗಿವೆ.

ಸರ್ಕಾರದಿಂದಲೇ ಸೂಚನೆ?: ಕೇಂದ್ರ ಸರ್ಕಾರದಮಾರ್ಗಸೂಚಿಯಂತೆ ಒಬ್ಬ ಸೋಂಕಿತನ ಕನಿಷ್ಠ 20ಸಂಪರ್ಕಿತರ ಪರೀಕ್ಷೆ ನಡೆಸಬೇಕು. ಆದರೆ,ಐದಕ್ಕಿಂತಲೂ ಕಡಿಮೆ ಸಂಪರ್ಕಿತರ ಪರೀಕ್ಷೆನಡೆಯುತ್ತಿದೆ. ಇದು ಕೂಡಾ ಪರೀಕ್ಷೆ ತಗ್ಗಲುಕಾರಣವಾಗಿದೆ. ಈ ಕುರಿತು ಬಿಬಿಎಂಪಿ ಮತ್ತುಆರೋಗ್ಯ ಇಲಾಖೆ ಅಧಿಕಾರಿಗಳನ್ನು ಕೇಳಿದರೆಏಪ್ರಿಲ್‌ ಮೂರನೇ ವಾರದಲ್ಲಿ ಪರೀಕ್ಷೆ ಹೆಚ್ಚಿಸಲುಸೂಚಿಸಿದ್ದರು. ಒಂದು ವಾರದಿಂದ ಪರೀಕ್ಷೆ ಕಡಿಮೆಗೆಸೂಚನೆ ಬಂದಿದೆ ಎನ್ನುತ್ತಾರೆ.

ಇರೋ ಸೋಂಕಿತರಿಗೆಚಿಕಿತ್ಸೆ, ಆರೈಕೆ ಸಾಧ್ಯವಾಗುತ್ತಿಲ್ಲ. ಪರೀಕ್ಷೆ ಹೆಚ್ಚಿಸಿಇನ್ನಷ್ಟು ಸೋಂಕಿತರ ಹೆಚ್ಚಾದರೆ ನಿಭಾಹಿಸುವುದುಕಷ್ಟವಾಗ ಬಹುದು ಎಂಬ ಲೆಕ್ಕಾಚಾರ ಸರ್ಕಾರದ ಬಳಿಇರಬಹುದು. ಆದರೆ, ಇದು ಸಮಂಜಸವಲ್ಲ ಎಂಬಅಭಿಪ್ರಾಯವನ್ನು ಕೆಲ ವೈದ್ಯರು ವ್ಯಕ್ತಪಡಿಸಿದ್ದಾರೆ.

ಪರೀಕ್ಷೆ ತಗ್ಗಿದರೂ,

ಹೊಸ ಪ್ರಕರಣಗಳು ಕುಗ್ಗಲಿಲ್ಲ:ರಾಜ್ಯದಲ್ಲಿ ಕಳೆದ ಒಂದು ವಾರದಿಂದ ನಿತ್ಯ 10ಸಾವಿರದಂತೆ 50 ಸಾವಿರ ಪರೀಕ್ಷೆ ಕಡಿಮೆ ಮಾಡುತ್ತಾಬಂದರೂ ಹೊಸ ಪ್ರಕರಣಗಳು ಮಾತ್ರ ನಲವತ್ತುಸಾವಿರ ಆಸುಪಾಸಿನಲ್ಲಿಯೇ ಇವೆ. ಈ ಮೂಲಕಪರೀಕ್ಷೆ ಕಡಿಮೆ ಮಾಡಿ ಪ್ರಕರಣಗಳನ್ನು ಕಡಿಮೆಮಾಡಬಹುದು ಎಂಬ ಸರ್ಕಾರದ ಆಲೋಚನೆಹಿನ್ನಡೆಯಾಗಿದೆ.ಸೋಂಕು ಕಳೆದ ಬಾರಿಗಿಂತದುಪ್ಪಟ್ಟಾಗಿದ್ದು, ಪರೀಕ್ಷೆಯೂ ದುಪ್ಪಟ್ಟಾಗಬೇಕು. ಈಕುರಿತು ಸರ್ಕಾರ ಕ್ರಮಕೈಗೊಂಡರೇ ಸೋಂಕುಹತೋಟಿ ಸಾಧ್ಯ ಎಂದು ತಜ್ಞರು ತಿಳಿಸಿದ್ದಾರೆ.

ಸೋಂಕು ಹತೋಟಿಗೆ ಸರ್ಕಾರದಮುಂದೆ ಸದ್ಯ ಇರುವ ಮಾರ್ಗ ಅತಿಹೆಚ್ಚು ಪರೀಕ್ಷೆ ಮಾಡುವುದಾಗಿದೆ.ರಾಜ್ಯದಲ್ಲಿ ಗರಿಷ್ಠ ಪ್ರಮಾಣದಲ್ಲಿ ಪರೀಕ್ಷೆನಡೆಸಬೇಕು. ಪರೀಕ್ಷೆ ಪ್ರಮಾಣ ಇಳಿಕೆಯುಸೋಂಕು ಹರಡುವಿಕೆ ಹಾದಿಯಾಗುತ್ತದೆ.

  • ಡಾ.ಸುದರ್ಶನ್‌ ಬಲ್ಲಾಳ್‌,ತಜ್ಞರ ಸಲಹಾ ಸಮಿತಿ ಸದಸ್ಯರು,ಅಧ್ಯಕ್ಷರು ಮಣಿಪಾಲ್‌ ಆಸ್ಪತ್ರೆ

ಜಯಪ್ರಕಾಶ್‌ ಬಿರಾದಾರ್‌

ಟಾಪ್ ನ್ಯೂಸ್

adani

Adani ವಿರುದ್ಧ ಲಂಚ ಆರೋಪ; ಏನಿದು ಪ್ರಕರಣ? ಅಮೆರಿಕದಲ್ಲಿ ಪ್ರಕರಣ ಏಕೆ?

Naxal ಎನ್‌ಕೌಂಟರ್‌ ತನಿಖೆ ಆರಂಭ; ಉಳಿದವರು ಯಾವ ಕಡೆಗೆ ಪರಾರಿ?

Naxal ಎನ್‌ಕೌಂಟರ್‌ ತನಿಖೆ ಆರಂಭ; ಉಳಿದವರು ಯಾವ ಕಡೆಗೆ ಪರಾರಿ?

Hebri: ಎನ್‌ಕೌಂಟರ್‌ ತನಿಖೆ ನಡೆಸುವ ಹೆಬ್ರಿ ಪೊಲೀಸ್‌ ಠಾಣೆ ಇಲ್ಲಗಳ ಆಗರ!

Hebri: ಎನ್‌ಕೌಂಟರ್‌ ತನಿಖೆ ನಡೆಸುವ ಹೆಬ್ರಿ ಪೊಲೀಸ್‌ ಠಾಣೆ ಇಲ್ಲಗಳ ಆಗರ!

ashok

CM ಸಿದ್ದರಾಮಯ್ಯ ಭ್ರಷ್ಟ ಎಂದು ನಿರೂಪಿಸಲು ಯಶಸ್ವಿ: ಆರ್‌.ಅಶೋಕ್‌

BJP: ವಿಜಯೇಂದ್ರ ದಿಲ್ಲಿಗೆ: ವರಿಷ್ಠರ ಜತೆ “ಬಣ’ ರಾಜಕೀಯ ಚರ್ಚೆ?

BJP: ವಿಜಯೇಂದ್ರ ದಿಲ್ಲಿಗೆ: ವರಿಷ್ಠರ ಜತೆ “ಬಣ’ ರಾಜಕೀಯ ಚರ್ಚೆ?

1-siddu

Congress; ಅಧಿವೇಶನಕ್ಕೆ ಮುನ್ನ ಸಂಪುಟಕ್ಕೆ ಸರ್ಜರಿ? ಸಾಧ್ಯತೆಗಳೇನು?

1-mahayu

Mahayuti ಗೆಲುವು: ಆ್ಯಕ್ಸಿಸ್‌ ಮೈ ಇಂಡಿಯಾ, ಚಾಣಕ್ಯ ಸಮೀಕ್ಷೆ ಭವಿಷ್ಯ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Smart Bus Stan: ಕೋರಮಂಗಲದಲ್ಲಿ ಸ್ಮಾರ್ಟ್‌ ಬಸ್‌ ನಿಲ್ದಾಣ!

Smart Bus Stan: ಕೋರಮಂಗಲದಲ್ಲಿ ಸ್ಮಾರ್ಟ್‌ ಬಸ್‌ ನಿಲ್ದಾಣ!

Bengaluru: ಇವಿ ಬೈಕ್‌ ಶೋರೂಮ್‌ನಲ್ಲಿ ಬೆಂಕಿ ಅವಘಡ; ಮಾಲೀಕ, ಮ್ಯಾನೇಜರ್‌ ಬಂಧನ, ಬಿಡುಗಡೆ

Bengaluru: ಇವಿ ಬೈಕ್‌ ಶೋರೂಮ್‌ನಲ್ಲಿ ಬೆಂಕಿ ಅವಘಡ; ಮಾಲೀಕ, ಮ್ಯಾನೇಜರ್‌ ಬಂಧನ, ಬಿಡುಗಡೆ

Bengaluru: ನಗರದಲ್ಲಿ ನಿಷೇಧಿತ ಕಲರ್‌ ಕಾಟನ್‌ ಕ್ಯಾಂಡಿ ತಯಾರಿಕಾ ಘಟಕ ಬಂದ್‌

Bengaluru: ನಗರದಲ್ಲಿ ನಿಷೇಧಿತ ಕಲರ್‌ ಕಾಟನ್‌ ಕ್ಯಾಂಡಿ ತಯಾರಿಕಾ ಘಟಕ ಬಂದ್‌

3

Shobha Karandlaje: ಶೋಭಾ ಲೋಕಸಭಾ ಸದಸ್ಯತ್ವ ರದ್ದು ಕೋರಿ ಅರ್ಜಿ: ಡಿ.6ಕ್ಕೆ ವಿಚಾರಣೆ 

Arrested: ನಕಲಿ ದಾಖಲೆ ನೀಡಿ ಟಿಡಿಎಸ್‌ ಪಡೆಯುತ್ತಿದ್ದ ಆರೋಪಿಯ ಬಂಧಿಸಿದ ಜಾರಿ ನಿರ್ದೇಶನಾಲಯ

Arrested: ನಕಲಿ ದಾಖಲೆ ನೀಡಿ ಟಿಡಿಎಸ್‌ ಪಡೆಯುತ್ತಿದ್ದ ಆರೋಪಿಯ ಬಂಧಿಸಿದ ಜಾರಿ ನಿರ್ದೇಶನಾಲಯ

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

adani

Adani ವಿರುದ್ಧ ಲಂಚ ಆರೋಪ; ಏನಿದು ಪ್ರಕರಣ? ಅಮೆರಿಕದಲ್ಲಿ ಪ್ರಕರಣ ಏಕೆ?

Naxal ಎನ್‌ಕೌಂಟರ್‌ ತನಿಖೆ ಆರಂಭ; ಉಳಿದವರು ಯಾವ ಕಡೆಗೆ ಪರಾರಿ?

Naxal ಎನ್‌ಕೌಂಟರ್‌ ತನಿಖೆ ಆರಂಭ; ಉಳಿದವರು ಯಾವ ಕಡೆಗೆ ಪರಾರಿ?

Hebri: ಎನ್‌ಕೌಂಟರ್‌ ತನಿಖೆ ನಡೆಸುವ ಹೆಬ್ರಿ ಪೊಲೀಸ್‌ ಠಾಣೆ ಇಲ್ಲಗಳ ಆಗರ!

Hebri: ಎನ್‌ಕೌಂಟರ್‌ ತನಿಖೆ ನಡೆಸುವ ಹೆಬ್ರಿ ಪೊಲೀಸ್‌ ಠಾಣೆ ಇಲ್ಲಗಳ ಆಗರ!

ashok

CM ಸಿದ್ದರಾಮಯ್ಯ ಭ್ರಷ್ಟ ಎಂದು ನಿರೂಪಿಸಲು ಯಶಸ್ವಿ: ಆರ್‌.ಅಶೋಕ್‌

BJP: ವಿಜಯೇಂದ್ರ ದಿಲ್ಲಿಗೆ: ವರಿಷ್ಠರ ಜತೆ “ಬಣ’ ರಾಜಕೀಯ ಚರ್ಚೆ?

BJP: ವಿಜಯೇಂದ್ರ ದಿಲ್ಲಿಗೆ: ವರಿಷ್ಠರ ಜತೆ “ಬಣ’ ರಾಜಕೀಯ ಚರ್ಚೆ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.