ಅತ್ಯಾಚಾರಿ ಮೊಬೈಲ್‌ನಲ್ಲಿ 500 ಅಶ್ಲೀಲ ಚಿತ್ರ


Team Udayavani, Mar 15, 2017, 11:27 AM IST

hori-repist.jpg

ಬೆಂಗಳೂರು: ಅಪ್ರಾಪ್ತ ಬಾಲಕಿಯರು, ಸಭೆ ಸಮಾರಂಭಗಳಲ್ಲಿ ಅಡುಗೆ ಕೆಲಸ ಮಾಡುವ ಕೂಲಿ ಕಾರ್ಮಿಕ ಮಹಿಳೆಯರನ್ನು ಪುಸಲಾಯಿಸಿ ಲೈಂಗಿಕ ಕ್ರಿಯೆಗೆ ಬಳಸಿಕೊಳ್ಳುತ್ತಿದ್ದ ವಿಕೃತ ಕಾಮಿಯೊಬ್ಬನನ್ನು ಸಂಜಯ್‌ನಗರ ಪೊಲೀಸರ ಬಂಧಿಸಿದ್ದಾರೆ. ಬಂಧಿತನ ಮೊಬೈಲ್‌ನಲ್ಲಿ 500ಕ್ಕೂ ಹೆಚ್ಚು ಅಶ್ಲೀಲ ವಿಡಿಯೋಗಳು ಪತ್ತೆಯಾಗಿದೆ. 

ಮಲ್ಲಿಕಾರ್ಜುನ ಅಲಿಯಾಸ್‌ ಹೋರಿ (25) ಬಂಧಿತ ಆರೋಪಿ. ಫೆ. 23ರಂದು ಸಂಜಯ್‌ನಗರದಲ್ಲಿ 10 ವರ್ಷದ ಬಾಲಕಿಯನ್ನು ಊಟ ಕೊಡಿಸುವ ನೆಪದಲ್ಲಿ ಕರೆದೊಯ್ದು ಅತ್ಯಾಚಾರ ಎಸಗಿ, ನಂತರ ಕಲಬುರಗಿಗೆ ತೆರಳಿ ತಲೆಮರೆಸಿಕೊಂಡಿದ್ದ. ಆರೋಪಿಯ ಮೊಬೈಲ್‌ ಕರೆಗಳ ಜಾಡು ಹಿಡಿದು ಪೊಲೀಸರು ಬಂಧಿಸಿ ನಗರಕ್ಕೆ ಕರೆತಂದಿದ್ದಾರೆ.

ಪೊಲೀಸರು ಹೆಚ್ಚಿನ ವಿಚಾರಣೆ ನಡೆಸಿದಾಗ ಆರೋಪಿಯು ರಾಜರಾಜೇಶ್ವರಿ ನಗರದಲ್ಲೂ ಬಾಲಕಿಯೊಬ್ಬಳ ಮೇಲೆ ಅತ್ಯಾಚಾರವೆಸಗಿದ್ದ ಪ್ರಕರಣವೊಂದು ಬಯಲಾಗಿದೆ. 
ಆರೋಪಿ ಇನ್ನೂ ಹಲವು ಬಾಲಕಿಯರ ಮೇಲೆ ಅತ್ಯಾಚಾರ ನಡೆಸಿರುವ ಸಾಧ್ಯತೆಗಳಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಯು, ಕೂಲಿ ಕಾರ್ಮಿಕರ, ಬಡ ಹೆಣ್ಣುಮಕ್ಕಳನ್ನು ಚಾಕೋಲೆಟ್‌, ಸಿಹಿತಿಂಡಿ ಕೊಡಿಸುವುದಾಗಿ ನಂಬಿಸಿ ಅತ್ಯಾಚಾರ ಎಸಗುವುದನ್ನು ರೂಢಿಸಿಕೊಂಡಿದ್ದ. ಸದ್ಯ ಆರೋಪಿಯನ್ನು ಮತ್ತಷ್ಟು ವಿಚಾರಣೆಗೊಳಪಡಿಸಲಾಗಿದೆ ಎಂದು ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದರು.

ಫೆ.23ರಂದು ಸಂಜೆ 5ಗಂಟೆ ಸುಮಾರಿಗೆ ಸಂಜಯ್‌ನಗರದಲ್ಲಿ ನೆಲೆಸಿರುವ ಬಡ ಕುಟುಂಬದ 10 ವರ್ಷದ ಬಾಲಕಿ ಶಾಲೆ ಮುಗಿಸಿಕೊಂಡು ಮನೆಗೆ ತೆರಳಿದ್ದಳು. ಈ ವೇಳೆ ಮನೆಯ ಬಳಿ ತೆರಳಿದ್ದ ಆರೋಪಿ, ಪಕ್ಕದ ರಸ್ತೆಯಲ್ಲಿ ನಡೆಯುತ್ತಿರುವ ಗೃಹಪ್ರವೇಶ ಕಾರ್ಯಕ್ರಮದಲ್ಲಿ ಸಾಕಷ್ಟು ಅನ್ನ ಉಳಿದಿದ್ದು, ನೀವು ಬಂದರೆ, ಇಲ್ಲವೇ ಯಾರನ್ನಾದರೂ ಕಳುಹಿಸಿದರೆ ಅನ್ನ, ಸಿಹಿ ತಿನಿಸು ನೀಡುವುದಾಗಿ ಹೇಳಿದ್ದ.

ಇದನ್ನು ನಂಬಿದ್ದ ಪೋಷಕರು ಬಾಲಕಿಯನ್ನು ಆತನ ಜತೆ ಕಳುಹಿಸಿಕೊಟ್ಟಿದ್ದರು. ಈ ವೇಳೆ ಬೈಕ್‌ನಲ್ಲಿ ಮತ್ತೂಬ್ಬನ ಜತೆ ತೆರಳಿದ ಮಲ್ಲಿಕಾರ್ಜುನ, ಜತೆಗಿದ್ದವನನ್ನು ಮಾರ್ಗಮಧ್ಯೆ ಇಳಿಸಿ ಬಾಲಕಿಯನ್ನು ರಾಜಾನುಕುಂಟೆ ಬಳಿಯ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಅತ್ಯಾಚಾರ ಎಸಗಿ ನಂತರ ಮನೆ ಬಳಿ ಬಿಟ್ಟು ಪರಾರಿಯಾಗಿದ್ದ. ಘಟನೆ ನಡೆದ ಎರಡು ದಿನಗಳ ಬಳಿಕ ಅಸ್ವಸ್ಥಳಾಗಿದ್ದ ಬಾಲಕಿಯನ್ನು ಪಾಲಕರು ಆಸ್ಪತ್ರೆಗೆ ಕರೆದೊಯ್ದಾಗ ಘಟನೆ ಬೆಳಕಿಗೆ ಬಂದಿತ್ತು.

ಈ ಸಂಬಂಧ ಸಂತ್ರಸ್ಥ ಬಾಲಕಿಯ ಪೋಷಕರಿಂದ ದೂರು ಸ್ವೀಕರಿಸಿದ ಬಳಿಕ ಸಂಜಯ್‌ನಗರದ ಪ್ರಮುಖ ರಸ್ತೆಗಳಲ್ಲಿ ಹಾಕಲಾಗಿದ್ದ ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿ ಗಮನಿಸಿದಾಗ, ಆರೋಪಿ ಬಾಲಕಿಯನ್ನು ಕರೆದೊಯ್ದಿರುವುದು ಪತ್ತೆಯಾಯಿತು.  ಆರೋಪಿ ಮಲ್ಲಿಕಾರ್ಜುನ 10 ವರ್ಷಗಳಿಂದ ಆಗ್ಗಾಗೆ ನಗರಕ್ಕೆ ಬಂದು ಹೋಗುತ್ತಿದ್ದು, ಕಳೆದ ವರ್ಷದಿಂದ ಸುಂಕದಕಟ್ಟೆಯಲ್ಲಿರುವ ಗಾರ್ಮೆಂಟ್ಸ್‌ಧಿವೊಂದರಲ್ಲಿ ಕೆಲಸ ಮಾಡುತ್ತಿದ್ದ.

ಸಂಜೆಯವರೆಗೂ ಕೆಲಸ ಮಾಡಿಕೊಂಡು ವಾಪಾಸ್ಸಾಗುವಾಗ ಮಾರ್ಗಮಧ್ಯೆ ಯಾವುದಾದರೂ ಕಲ್ಯಾಣ ಮಂಟಪಗಳಲ್ಲಿ ಸಮಾರಂಭ ಕಂಡರೇ ಒಳಗೆ ಹೋಗಿ ಅಡುಗೆ ಕೆಲಸ ಮಾಡುವುದಾಗಿ ಕಾಡಿ ಬೇಡಿ ಅವಕಾಶ ಗಿಟ್ಟಿಸಿಕೊಂಡು ರಾತ್ರಿವರೆಗೆ ಕೆಲಸ ಮಾಡಿ 200ರಿಂದ 300 ರು. ಗಳಿಸುತ್ತಿದ್ದ.

ರಾತ್ರಿ 11 ಗಂಟೆ ಬಳಿಕ ಅಲ್ಲಿ ಕೆಲಸ ಮಾಡುವ ಮಹಿಳೆಯರನ್ನು ಪರಿಚಯಿಸಿಕೊಂಡು ಸಹಕರಿಸಿದವರೊಂದಿಗೆ ಲೈಂಗಿಕ ಕ್ರಿಯೆಲ್ಲಿ ತೊಡಗುತ್ತಿದ್ದ. ಕೆಲವೊಮ್ಮೆ ವೇಶ್ಯೆಯರು, ಮಂಗಳಮುಖೀಯರೊಂದಿಗೂ ಕಾಲ ಕಳೆಯುತ್ತಿದ್ದ. ಮರುದಿನ ಎಂದಿನಂತೆ ಕೆಲಸ ಕಾರ್ಯದಲ್ಲಿ ತೊಡಗುತ್ತಿದ್ದ ಎಂದು ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

500ಕ್ಕೂ ಹೆಚ್ಚು ಸೆಕ್ಸ್‌ ವಿಡಿಯೋ: ಮಂಜುನಾಥ, ಮಂಜಣ್ಣ, ಹೋರಿ, ಬಸವರಾಜು ಹೆಸರಿನಿಂದ ಕರೆಯಲ್ಪಡುವ ಆರೋಪಿಯ ಮೊಬೈಲ್‌ನಲ್ಲಿ 500ಕ್ಕೂ ಹೆಚ್ಚು ಅಶ್ಲೀಲ ವಿಡಿಯೋ ತುಣುಕುಗಳು ದೊರೆತಿವೆ. ಈತನ ವಿಕೃತಕಾಮ ತಡೆಯಲಾಗದೇ ಮೊದಲ ಪತ್ನಿ ಬಿಟ್ಟುಹೋಗಿದ್ದರೆ, ಎರಡನೇ ಹೆಂಡತಿ ಊರಿನಲ್ಲಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ದರ್ಶನ್‌ ಮನೆ ಮುಂದಿನ ಕಾರುಗಳ ಗಾಜು ಒಡೆದಿದ್ದ: ಮಲ್ಲಿಕಾರ್ಜುನನಿಗೆ ಸಿನಿಮಾ ನಟನಾಗುವ ಬಯಕೆಯಿದ್ದು ಸಿನಿಮಾ ಗೀಳು ಹಚ್ಚಿಸಿಕೊಂಡಿದ್ದ.  ನಟನೆಗೆ ಅವಕಾಶ ಕೊಡಿಸುವಂತೆ ನಟರ ಬಳಿ ಮನವಿ ಮಾಡುತ್ತಿದ್ದ. ಸ್ಟಾರ್‌ ನಟರ ಜತೆ ಸೆಲ್ಫಿ ಕೂಡ ತೆಗೆದುಕೊಳ್ಳುವ ಹವ್ಯಾಸವೂ ಇತ್ತು. ಸೆಲ್ಫಿ ನೀಡಲು ನಿರಾಕರಿಸಿದ ನಟ ದರ್ಶನ್‌ ಮೇಲಿನ ಕೋಪಕ್ಕೆ ಅವರ ಮನೆ ಮುಂದೆ ನಿಲ್ಲಿಸಿದ್ದ 2 ಕಾರುಗಳನ್ನು ಧ್ವಂಸಗೊಳಿಸಿರುವ ಸಂಗತಿಯನ್ನೂ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾನೆ ಎಂದು ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದರು.

ಆರೋಪಿ ವಿರುದ್ಧ ಗೂಂಡಾ ಪ್ರಕರಣ?: ಇದೇ ಮೊದಲ ಬಾರಿಗೆ ಸಿಕ್ಕಿಬಿದ್ದಿರುವ ಮಲ್ಲಿಕಾರ್ಜುನನ ವಿರುದ್ಧ ಎರಡು ಅತ್ಯಾಚಾರ ಪ್ರಕರಣ ಬಯಲಾಗಿವೆ. ವಿಚಾರಣೆ ವೇಳೆ ಮತ್ತಷ್ಟು ಲೈಂಗಿಕ ದೌರ್ಜನ್ಯ ಪ್ರಕರಣಗಳು ಬೆಳಕಿಗೆ ಬರುವ ಸಾಧ್ಯತೆಯಿದೆ. ಹೀಗಾಗಿ ಗೂಂಡಾ ಕಾಯಿದೆ ಅಡಿಯಲ್ಲಿ ಪ್ರಕರಣ ದಾಖಲಿಸುವ ಬಗ್ಗೆ ಚರ್ಚೆ ನಡೆದಿದೆ ಎಂದು ಉನ್ನತ ಅಧಿಕಾರಿಯೊಬ್ಬರು “ಉದಯವಾಣಿ’ಗೆ ತಿಳಿಸಿದರು.

ಟಾಪ್ ನ್ಯೂಸ್

BSY–1

ಬಿಜೆಪಿ ಸಭೆಯಲ್ಲಿ ಭಿನ್ನರ ವಿರುದ್ಧ ಕಿಡಿ; ಯತ್ನಾಳ್‌ ಬಣದ ವಿರುದ್ಧ ಮಾಜಿ ಶಾಸಕರು ಅಸಮಾಧಾನ

Sunil-kumar

Naxal Surrender: ನಕ್ಸಲ್‌ ಶರಣಾಗತಿ ಪೂರ್ವಯೋಜಿತ ಸ್ಟೇಜ್‌ ಶೋ ಅಲ್ಲವೇ?

Debt

Finance Debt: ಫೈನಾನ್ಸ್‌ ಸಾಲ ವಸೂಲಿಗೆ ಹೆದರಿ ಊರನ್ನೇ ಬಿಟ್ಟರು!

CT-Ravi

Naxal Surrender: ರಾಜ್ಯ ಸರಕಾರವೇ ನಕ್ಸಲರಿಗೆ ಶರಣಾಗಿದೆಯೋ?: ಸಿ.ಟಿ. ರವಿ

Manipal: ನಾಲ್ವರು ಅನುಪಮ ಸಾಧಕರಿಗೆ ಇಂದು ಹೊಸ ವರ್ಷದ ಪ್ರಶಸ್ತಿ ಪ್ರದಾನ

Manipal: ನಾಲ್ವರು ಅನುಪಮ ಸಾಧಕರಿಗೆ ಇಂದು ಹೊಸ ವರ್ಷದ ಪ್ರಶಸ್ತಿ ಪ್ರದಾನ

vidhana-Soudha

Cast Census: ಲಿಂಗಾಯತ, ಒಕ್ಕಲಿಗ ಜಂಟಿ ಸಮರ?

1-bajaj

L&T CEO ಹೇಳಿಕೆಗೆ ತಿರುಗೇಟು;ಮೊದಲು ಬಾಸ್‌ ವಾರಕ್ಕೆ 90 ಗಂಟೆ ದುಡಿಯಲಿ: ಬಜಾಜ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

15-bng

Cold Weather: ಬೀದರ್‌, ವಿಜಯಪುರ ಗಡಗಡ: 5-6 ಡಿ.ಸೆ.ಗೆ ತಾಪಮಾನ ಇಳಿಕೆ?

13-bng

Danger Spot-1: ಹೊಸೂರು ಮುಖ್ಯರಸ್ತೆ ಸಮೀಪ ನಡೆದಾಡುವುದೂ ಅಪಾಯಕಾರಿ!

9-kishor

BIFF:16ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಕಿಶೋರ್‌ ರಾಯಭಾರಿ

8-ather

EV ದ್ವಿಚಕ್ರ ವಾಹನ ಮಾರಾಟ: ಏಥರ್‌ ಸಂಸ್ಥೆ ಪಾಲು ಶೇ.25

7-aishwarya

Aishwarya Gowda ವಿರುದ್ದ ಬಲವಂತದ ಕ್ರಮ ಬೇಡ: ಪೊಲೀಸರಿಗೆ ಕೋರ್ಟ್‌ ಸೂಚನೆ

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

BSY–1

ಬಿಜೆಪಿ ಸಭೆಯಲ್ಲಿ ಭಿನ್ನರ ವಿರುದ್ಧ ಕಿಡಿ; ಯತ್ನಾಳ್‌ ಬಣದ ವಿರುದ್ಧ ಮಾಜಿ ಶಾಸಕರು ಅಸಮಾಧಾನ

Sunil-kumar

Naxal Surrender: ನಕ್ಸಲ್‌ ಶರಣಾಗತಿ ಪೂರ್ವಯೋಜಿತ ಸ್ಟೇಜ್‌ ಶೋ ಅಲ್ಲವೇ?

Debt

Finance Debt: ಫೈನಾನ್ಸ್‌ ಸಾಲ ವಸೂಲಿಗೆ ಹೆದರಿ ಊರನ್ನೇ ಬಿಟ್ಟರು!

CT-Ravi

Naxal Surrender: ರಾಜ್ಯ ಸರಕಾರವೇ ನಕ್ಸಲರಿಗೆ ಶರಣಾಗಿದೆಯೋ?: ಸಿ.ಟಿ. ರವಿ

Manipal: ನಾಲ್ವರು ಅನುಪಮ ಸಾಧಕರಿಗೆ ಇಂದು ಹೊಸ ವರ್ಷದ ಪ್ರಶಸ್ತಿ ಪ್ರದಾನ

Manipal: ನಾಲ್ವರು ಅನುಪಮ ಸಾಧಕರಿಗೆ ಇಂದು ಹೊಸ ವರ್ಷದ ಪ್ರಶಸ್ತಿ ಪ್ರದಾನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.