ನೂರು ದಿನಗಳಲ್ಲಿ 505 ಮಕ್ಕಳು, ಮಹಿಳೆಯರ ರಕ್ಷಣೆ
Team Udayavani, Nov 8, 2017, 11:35 AM IST
ಬೆಂಗಳೂರು: ಕಳೆದ ನೂರು ದಿನಗಳಲ್ಲಿ “ರೈಲ್ವೆ ರಕ್ಷಣಾ ದಳ’ (ಆರ್‌ಪಿಎಫ್)ವು ಬೆಂಗಳೂರು, ಮೈಸೂರು ಮತ್ತು ಹುಬ್ಬಳ್ಳಿ ರೈಲು ನಿಲ್ದಾಣಗಳಲ್ಲಿ ವಿಶೇಷ ಕಾರ್ಯಾಚರಣೆ ನಡೆಸಿ ಕಳೆದುಹೋಗಿದ್ದ 505 ಮಕ್ಕಳು ಮತ್ತು ಮಹಿಳೆಯರನ್ನು ರಕ್ಷಿಸಿದೆ.
“ಆಪರೇಷನ್ ನನ್ಹೇ ಫರಿಶ್ತೆ’ ಶೀರ್ಷಿಕೆ ಅಡಿ ಈ ಕಾರ್ಯಾಚರಣೆ ನಡೆದಿದ್ದು, ರಕ್ಷಿಸಿದ 505 ಜನರಲ್ಲಿ 438 ಮಕ್ಕಳು ಕರ್ನಾಟಕ ಮೂಲದವರಾಗಿದ್ದು, ಈ ಪೈಕಿ 400ಕ್ಕೂ ಅಧಿಕ ಮಕ್ಕಳನ್ನು ಆಧಾರ್ ಸಹಾಯದಿಂದ ಪೋಷಕರಿಗೆ ಒಪ್ಪಿಸಲಾಗಿದೆ ಎಂದು ಆರ್‌ಪಿಎಫ್ ಸುರಕ್ಷತಾ ಆಯುಕ್ತೆ ದೇವಶ್ಮಿತಾ ಚಟ್ಟೋಪಾಧ್ಯಾಯ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಉಳಿದಂತೆ ಬಿಹಾರದ 12, ಆಂಧ್ರ ಪ್ರದೇಶದ 8, ಉತ್ತರ ಪ್ರದೇಶದ 7, ಅಸ್ಸಾಂನ 6, ಮಹಾರಾಷ್ಟ್ರ, ತಮಿಳುನಾಡು, ಒರಿಸ್ಸಾ, ಪಶ್ಚಿಮ ಬಂಗಾಳದ ತಲಾ 4, ರಾಜಸ್ತಾನ, ಜಾರ್ಖಂಡ್‌ನ ತಲಾ 3, ಗುಜರಾತ್, ಅರುಣಾಚಲ್, ತೆಲಂಗಾಣ, ಗೋವಾ, ಮಧ್ಯಪ್ರದೇಶ, ದೆಹಲಿಯ ತಲಾ 2 ಮಕ್ಕಳನ್ನು ರಕ್ಷಿಸಲಾಗಿದೆ ಎಂದರು.
ಈ ಹಿಂದೆ ನಿಲ್ದಾಣಗಳಲ್ಲಿ ಕಳೆದು ಹೋದ ಮಕ್ಕಳನ್ನು ಸರ್ಕಾರೇತರ ಸಂಘ-ಸಂಸ್ಥೆಗಳು ನೋಡಿಕೊಳ್ಳುತ್ತಿದ್ದವು. ಇದೀಗ ಆರ್‌ಪಿಎಫ್ ಸಂಪೂರ್ಣ ಆಧಾರ್ ಮಾಹಿತಿ ಹೊಂದಿದ್ದು, ಅದರ ಆಧಾರದಲ್ಲಿ ಕಳೆದುಹೋದ ಮಕ್ಕಳು ಅಥವಾ ಮನೆ ಬಿಟ್ಟು ಬಂದ ಮಕ್ಕಳನ್ನು ಸುರಕ್ಷಿತವಾಗಿ ಸಂಬಂಧಪಟ್ಟವರಿಗೆ ಸೇರಿಸಲಾಗುತ್ತಿದೆ ಎಂದು ಹೇಳಿದರು.
ನೈಋತ್ಯ ರೈಲ್ವೆಯ ರೈಲ್ವೆ ಪ್ರೊಟೆಕ್ಷನ್ ಫೋರ್ಸ್ ತಲಾ 8 ಸಿಬ್ಬಂದಿ ಹೊಂದಿದ್ದ 3 ತಂಡ ರಚಿಸಿ ವಿಶೇಷ ಕಾರ್ಯಾಚರಣೆ ನಡೆಸಿತ್ತು. ಇದರಲ್ಲಿ ಬೆಂಗಳೂ ರಿನಲ್ಲಿ 246, ಹುಬ್ಬಳ್ಳಿಯಲ್ಲಿ 124 ಮತ್ತು ಮೈಸೂರಿನಲ್ಲಿ 135 ಮಕ್ಕಳು ಮತ್ತು ಮಹಿಳೆಯರನ್ನು ರಕ್ಷಿಸಲಾಗಿದೆ.
ದೇಶದಲ್ಲೇ ಮೊಟ್ಟ ಮೊದಲ ಬಾರಿಗೆ ನೈಋತ್ಯ ರೈಲ್ವೆ ಆರ್‌ಪಿಎಫ್ ಇಂತಹ ಒಂದು ವಿಶೇಷ ಕಾರ್ಯಾಚರಣೆ ನಡೆಸಿದೆ. ಹುಬ್ಬಳ್ಳಿ ಮತ್ತು ಮೈಸೂರು ರೈಲ್ವೆ ನಿಲ್ದಾಣಗಳಿಗೆ ಹೋಲಿಸಿದರೆ ಬೆಂಗಳೂರಿನಲ್ಲೇ ಅತ್ಯಧಿಕ ಮಕ್ಕಳು ಮತ್ತು ಮಹಿಳೆಯರನ್ನು ಆರ್‌ಪಿಎಫ್ ರಕ್ಷಿಸಿದೆ.
ಕೇಂದ್ರ ಸರ್ಕಾರ ನೀಡುವ ಮಾಹಿತಿಂತೆ ಪ್ರತಿ 8 ನಿಮಿಷಕ್ಕೊಂದು ಮಗು ಅಪಹರಣಕ್ಕೆ ಒಳಗಾಗುತ್ತದೆ. ಆರ್‌ಪಿಎಫ್ ರಕ್ಷಿಸಿದ 505 ಮಕ್ಕಳು ಮತ್ತು ಮಹಿಳೆಯರಲ್ಲಿ 451 ಗಂಡು ಮತ್ತು 54 ಹೆಣ್ಣು ಮಕ್ಕಳು-ಮಹಿಳೆಯರಿದ್ದಾರೆ. ಪ್ರಮುಖವಾಗಿ ಆರ್‌ಪಿಎಫ್ ಕಳೆದ ನೂರು ದಿನಗಳಲ್ಲಿ 6 ಹೆಣ್ಣುಮಕ್ಕಳ ಅಪಹರಣ ಪ್ರಕರಣವನ್ನು ಭೇದಿಸಿದೆ. 61 ಬಾಲಕಾರ್ಮಿಕ, ಅಂಗಾಗ ಮಾರಾಟ ಪ್ರಕರಣ, 438 ಮನೆ ಬಿಟ್ಟು ಬಂದ ಪ್ರಕರಣಗಳಿವೆ ಎಂದು ಮಾಹಿತಿ ನೀಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Adalat: ಲೋಕ್ ಅದಾಲತ್‌ನಲ್ಲಿ 38.8 ಲಕ್ಷ ವ್ಯಾಜ್ಯ ಇತ್ಯರ್ಥ
Bengaluru: ಒಬಾಮಾ ಭೇಟಿ ವೇಳೆ ಸ್ಫೋಟ ಸಂಚು: ಡಿ.23ಕ್ಕೆ ಶಿಕ್ಷೆ ಪ್ರಕಟ
Fraud: ಸಿಬಿಐ ಸೋಗಿನಲ್ಲಿ ವೃದ್ಧೆಗೆ 1.24 ಕೋಟಿ ರೂ. ವಂಚನೆ
BSY: ಬಿಎಸ್‌ವೈ ತಪ್ಪೊಪ್ಪಿಕೊಂಡಿರುವುದಾಗಿ ಸಂತ್ರಸ್ತೆ ಹೇಳಿಕೆ ದಾಖಲು: ಎಸ್‌ಪಿಪಿ
IPS officer D. Roopa: ಸಿಂಧೂರಿ ಮೇಲೆ ಮಾನನಷ್ಟ ಪ್ರಕರಣ ದಾಖಲಿಸಿದ ರೂಪಾ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.