Fraud: ಅರಣ್ಯ ಸಚಿವರ ಆಪ್ತನ ಸೋಗಿನಲ್ಲಿ 6 ಲಕ್ಷ ರೂ. ವಂಚನೆ
Team Udayavani, Jan 12, 2025, 7:05 AM IST
ಬೆಂಗಳೂರು: ಅರಣ್ಯ ಸಚಿವರ ಆಪ್ತನೆಂದು ಪರಿಚಯಿಸಿಕೊಂಡು ಸರ್ಕಾರಿ ಕೆಲಸ ಕೊಡಿಸುವುದಾಗಿ ನಂಬಿಸಿ 6 ಲಕ್ಷ ರೂ. ಪಡೆದು ವಂಚಿಸಿರುವ ಆರೋಪಿ ವಿರುದ್ಧ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಾಣೆಬೆನ್ನೂರು ಮೂಲದ ಪಿ.ಎಚ್.ಅಡವಿ ಎಂಬುವವರು ಕೊಟ್ಟ ದೂರಿನ ಆಧಾರದಲ್ಲಿ ಕೆ.ಪಿ.ವೀರೇಶ್ ಎಂಬಾತನ ವಿರುದ್ಧ ಎಫ್ಐಆರ್ ದಾಖಲಾಗಿದೆ.
2023ರಲ್ಲಿ ದೂರುದಾರರ ಸಹೋದರ ಎ.ಎಚ್.ಅಡವಿ ಮೂಲಕ ದೂರುದಾರರಿಗೆ ಆರೋಪಿ ವೀರೇಶ್ ಪರಿಚಯವಾಗಿತ್ತು. ಪರಿಚಯವಾದ ಕೆಲವೇ ದಿನಗಳಲ್ಲಿ ತನಗೆ ಅರಣ್ಯ ಸಚಿವರು ಬಹಳ ಆತ್ಮೀಯರಾಗಿದ್ದಾರೆ ಎಂದು ನಂಬಿಸಿದ್ದ. 2023ರ ಡಿಸೆಂಬರ್‌ನಲ್ಲಿ ಅರಣ್ಯ ಇಲಾಖೆಯಲ್ಲಿ ಖಾಲಿ ಇರುವ ಅರಣ್ಯ ರಕ್ಷಕ ಹಾಗೂ ಅರಣ್ಯ ವೀಕ್ಷಕರ ಹುದ್ದೆಗಳಿಗೆ ವಿವಿಧ ಜಿಲ್ಲೆಗಳಲ್ಲಿ ಅರ್ಜಿ ಕರೆಯಲಾಗಿದೆ.
ನಾನು ಕೆಲಸ ಕೊಡಿಸುವುದಾಗಿ ಆರೋಪಿ ನಂಬಿಸಿದ್ದ. ಅದರಂತೆ ಅಡವಿಯವರು ತಮ್ಮ ಮಕ್ಕಳು, ಸಹೋದರನ ಮಕ್ಕಳು ಸೇರಿದಂತೆ ಮೂವರಿಂದ ಧಾರವಾಡ, ಶಿವಮೊಗ್ಗ, ಚಾಮರಾಜನಗರ ಜಿಲ್ಲೆಗಳಿಗೆ ಅರ್ಜಿ ಹಾಕಿಸಿದ್ದರು. ಇದಾದ ಬಳಿಕ ಕೆಲಸ ಕೊಡಿಸಲು ಮುಂಗಡ ಹಣ ಪಾವತಿಸಬೇಕು ಎಂದ ಆರೋಪಿ ವೀರೇಶ್, ವಿಕಾಸಸೌಧದ ಸಮೀಪ ಸೇರಿದಂತೆ ವಿವಿಧ ಕಡೆ ಹಂತ ಹಂತವಾಗಿ 6 ಲಕ್ಷ ರೂ. ಪಡೆದುಕೊಂಡಿದ್ದ. ಹಣ ಪಡೆದ ಬಳಿಕ ಒಂದು ವರ್ಷ ಕಳೆದರೂ ಸಹ ಕೆಲಸವನ್ನೂ ಕೊಡಿಸದೇ, ಹಣವನ್ನೂ ಹಿಂತಿರುಗಿಸಿರಲಿಲ್ಲ. ಇದರಿಂದ ಅನುಮಾನಗೊಂಡ ವಿರೇಶ್‌ನನ್ನು ವಿಚಾರಿಸಿದಾಗ ತಾವು ವಂಚನೆಗೊಳಗಾಗಿರುವುದು ಗೊತ್ತಾಗಿದೆ. ನಂತರ ಅಡವಿ ಅವರು ವಿಧಾನಸೌಧ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಇದೀಗ ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Los Angeles: ಹತೋಟಿಗೆ ಬಾರದ ಕಾಡ್ಗಿಚ್ಚು, ಸಾವಿರಾರು ಮನೆಗಳು ಆಹುತಿ, ಮೃತರ ಸಂಖ್ಯೆ 16ಕ್ಕೆ
Champions Trophy: ನ್ಯೂಜಿಲ್ಯಾಂಡ್ ತಂಡ ಪ್ರಕಟ; ತಂಡಕ್ಕೆ ಮರಳಿದ ಮೂವರು ಘಟಾನುಘಟಿಗಳು
Bengaluru Crime: ಪ್ರಿಯಕರ ಆತ್ಮಹತ್ಯೆ: ಪ್ರೇಯಸಿಯೂ ನೇಣಿಗೆ ಶರಣು
Shivamogga: ಖ್ಯಾತ ಫೋಟೋ ಜರ್ನಲಿಸ್ಟ್ ಗೆ ಹೃದಯಾಘಾತ, ನಿಧನ
ಕೌನ್ ಬನೇಗಾ ಕರೋಡ್ ಪತಿ: 50 ಲಕ್ಷ ರೂ.ಗೆದ್ದ ಬಾಗಲಕೋಟೆಯ ರಮಜಾನ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.