ಬೆಂಗಳೂರು: ಯೂಟ್ಯೂಬ್ ನೋಡಿ ಬುಲೆಟ್ ಕಳ್ಳತನ ಮಾಡುತ್ತಿದ್ದ 7 ಮಂದಿ ಪದವೀಧರರ ಸೆರೆ
Team Udayavani, Apr 6, 2022, 1:41 PM IST
ಬೆಂಗಳೂರು: ಸಾಮಾಜಿಕ ಜಾಲತಾಣ ಯೂಟ್ಯೂಬ್ ನೋಡಿ ರಾಯಲ್ ಎನ್ ಫೀಲ್ಡ್ ಬುಲೆಟ್ ಸೇರಿದಂತೆ ವಿವಿಧ ಮಾದರಿಯ ಬೈಕ್‌ಗಳನ್ನು ಕದ್ದು ಜಾಲಿರೇಡ್ ಮಾಡಿ, ಪೆಟ್ರೋಲ್ ಖಾಲಿಯಾಗುತ್ತಿದ್ದಂತೆ ಮಾರಾಟ ಮಾಡುತ್ತಿದ್ದ 7 ಮಂದಿ ಪದವೀಧರರು ಬನಶಂಕರಿ ಪೊಲೀಸರ ಬಲೆಗೆ ಬಿದ್ದಿದ್ದಾರೆ.
ಆಂಧ್ರಪ್ರದೇಶದ ಹೇಮಂತ್ (27), ವಿಜಯ ಬಂಡಿ (25), ಬಾನುಮೂರ್ತಿ(25), ಗುಣಶೇಖರ್‌ರೆಡ್ಡಿ (30), ಪುರುಷೋತ್ತಮ ನಾಯ್ಡು (30), ಕಾರ್ತಿಕ್ ಕುಮಾರ್ (27) ಹಾಗೂ ಕಿರಣ್ ಕುಮಾರ್ (22) ಬಂಧಿತರು.
ಅವರಿಂದ 68 ಲಕ್ಷ ಮೌಲ್ಯದ 12 ಬುಲೆಟ್ ಸೇರಿದಂತೆ 30 ಬೈಕ್‌ಗಳನ್ನು ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ಹೇಳಿದರು.
ಇತ್ತೀಚೆಗೆ ಆರೋಪಿಗಳು ತ್ಯಾಗರಾಜ ನಗರದ ಮನೆಯೊಂದರ ಮುಂದೆ ನಿಲ್ಲಿಸಿದ್ದ ರಾಯಲ್ ಎನ್ ಫೀಲ್ಡ್ ಬುಲೆಟ್ ಕದ್ದಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.
ಇದನ್ನೂ ಓದಿ:ಭ್ರಷ್ಟಾಚಾರ: ಬಂಧನ ಭೀತಿಯಿಂದ ಇಮ್ರಾನ್ ಪತ್ನಿಯ ಗೆಳತಿ ಪಾಕ್ ನಿಂದ ಪರಾರಿ, ಯಾರೀಕೆ?
ಯೂಟ್ಯೂಬ್ ನೋಡಿ ಕಳವು: ಆರೋ ಪಿಗಳ ಪೈಕಿ ಕೆಲವರು ಎಂಜನಿಯರಿಂಗ್, ಡಿಪ್ಲೋಮಾ, ಎಂಬಿಎ ಪದವೀಧರರಾಗಿ ದ್ದಾರೆ. ಎಲ್ಲರೂ ಕೆಲಸಕ್ಕೆ ಸೇರಿದ್ದರು. ಆದರೆ, ತಮ್ಮ ಐಷಾರಾಮಿ ಜೀವನಕ್ಕೆ ಬೇಕಾಗುವಷ್ಟು ಸಂಬಳ ಬರುತ್ತಿರಲಿಲ್ಲ. ಹೀಗಾಗಿ ಕೆಲಸ ಬಿಟ್ಟು, ಕಳ್ಳತನ ಮಾರ್ಗ ಕಂಡು ಕೊಂಡಿದ್ದರು. ಅದಕ್ಕಾಗಿ ಬುಲೆಟ್ ಹಾಗೂ ಇತರೆ ಮಾದರಿಯ ವಾಹನಗಳ ಹ್ಯಾಂಡಲ್ ಲಾಕ್ ಹೇಗೆ ಮುರಿಯುವುದು, ಕಳ್ಳತನ ಹೇಗೆ ಮಾಡಬೇಕು ಎಂಬಿ ತ್ಯಾದಿ ಮಾಹಿತಿಯನ್ನು ಯೂಟ್ಯೂಬ್ ನೋಡಿ ತಿಳಿದುಕೊಂಡಿದ್ದರು. ಅದೇ ಮಾದರಿಯಲ್ಲಿ ಮನೆ ಮುಂದೆ ನಿಲ್ಲಿಸಿದ್ದ ಬುಲೆಟ್‌ಗಳನ್ನು ಕಳವು ಮಾಡುತ್ತಿದ್ದರು.
ಕಳೆದ 3 ವರ್ಷದಿಂದಲೂ ಕೃತ್ಯ : ಕದ್ದ ವಾಹನಗಳಲ್ಲಿ ಜಾಲಿರೇಡ್ ಹೋಗುತ್ತಿದ್ದರು. ಪೆಟ್ರೋಲ್ ಖಾಲಿಯಾಗುತ್ತಿ ದ್ದಂತೆ ಆಂಧ್ರಪ್ರದೇಶದ ಕೆಲ ಗ್ರಾಮೀಣ ಪ್ರದೇಶಗಳಲ್ಲಿ ಕಡಿಮೆ ಮೊತ್ತಕ್ಕೆ ಮಾರಾಟ ಮಾಡುತ್ತಿದ್ದರು. ಆರೋಪಿಗಳ ವಿರುದ್ಧ ಕೆ.ಆರ್.ಪುರ, ಬನಶಂಕರಿ, ಸಿ.ಕೆ.ಅಚ್ಚುಕಟ್ಟು, ಜಯನಗರ, ಕುಮಾರಸ್ವಾಮಿ ಲೇಔಟ್, ಮೈಕೋ ಲೇಔಟ್, ಬೇಗೂರು ಸೇರಿದಂತೆ ನಗರದ ವಿವಿಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಳೆದ ಮೂರು ವರ್ಷದಿಂದ ಆರೋಪಿಗಳು ಒಟ್ಟಿಗೆ ಸೇರಿ ಕೃತ್ಯವೆಸಗುತ್ತಿದ್ದರು ಎಂದು ಪೊಲೀಸರು ಮಾಹಿತಿ ನೀಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Karnataka; 7 ವೈದ್ಯಕೀಯ ಕಾಲೇಜುಗಳಲ್ಲಿ ಕ್ರಿಟಿಕಲ್ ಕೇರ್ ವಿಭಾಗ ಆರಂಭ
Bandh; ನ. 20ರಂದು ರಾಜ್ಯವ್ಯಾಪಿ ಮದ್ಯ ಮಾರಾಟ ಬಂದ್
BJP ಆಮಿಷ ನಿಜ: ಸಿಎಂ, ಡಿಸಿಎಂ ಹೇಳಿಕೆಗೆ ದನಿಗೂಡಿಸಿದ ಸಚಿವರು, ಶಾಸಕರು
2025ರ ಸಾರ್ವತ್ರಿಕ ರಜೆ ಪಟ್ಟಿಗೆ ಸಂಪುಟ ಅಸ್ತು;19 ಸಾರ್ವತ್ರಿಕ,20 ಪರಿಮಿತ ರಜೆಗೆ ಅನುಮೋದನೆ
50 crores ಆಮಿಷ ಸುಳ್ಳಿನ ಕಂತೆ; ಸೂಕ್ತ ಸಾಕ್ಷಿ ನೀಡಿ ಇಲ್ಲವೇ ED ತನಿಖೆಗೊಪ್ಪಿಸಿ: ಬಿಜೆಪಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.