ಶೇ.72.36 ರಾಜ್ಯದ ಇತಿಹಾಸದಲ್ಲೇ ದಾಖಲೆ ಮತದಾನ
Team Udayavani, May 14, 2018, 6:00 AM IST
ಬೆಂಗಳೂರು: ಮುಂಬರುವ ಲೋಕಸಭಾ ಚುನಾವಣೆಗೆ ದಿಕ್ಸೂಚಿ ಮತ್ತು ರಾಷ್ಟ್ರ ರಾಜಕಾರಣದಲ್ಲಿ ಧ್ರುವೀಕರಣಕ್ಕೆ ಕಾರಣವಾಗಲಿದೆ ಎಂದು ವಿಶ್ಲೇಷಿಸಲಾಗುತ್ತಿದ್ದ ವಿಧಾನಸಭೆ ಚುನಾವಣೆಯಲ್ಲಿ ಮತದಾರ ಶನಿವಾರ ಸಾರ್ವತ್ರಿಕ ದಾಖಲೆ ಬರೆದಿದ್ದಾನೆ. ರಾಜ್ಯದ ಚುನಾವಣಾ ಇತಿಹಾಸದಲ್ಲೇ ಅತಿ ಹೆಚ್ಚು ಹಾಗೂ ದಾಖಲೆಯ ಶೇ.72.36ರಷ್ಟು ಮತದಾನವಾಗಿದೆ.
1978ರಲ್ಲಿ ಶೇ.71.90ರಷ್ಟು ಮತದಾನವಾಗಿದ್ದುದು ಇದುವರೆಗಿನ ದಾಖಲೆಯ ಮತದಾನವಾಗಿತ್ತು. 2013ರಲ್ಲಿ ಶೇ.71.45 ಮತದಾನವಾಗಿ ದಾಖಲೆಯ ಸಮೀಪ ಬಂದಿತ್ತಾದರೂ ಅದು ಸಾಧ್ಯವಾಗಲಿಲ್ಲ. ಆದರೆ, ಈ ಬಾರಿ 48 ವರ್ಷದ ಹಿಂದಿನ ದಾಖಲೆಯನ್ನು ಮತದಾರರು ಪುಡಿಗಟ್ಟಿ ಹೊಸ ದಾಖಲೆ ಸೃಷ್ಟಿಸಿದ್ದಾರೆ.
ಆದರೂ ಈ ಸಾರ್ವಕಾಲಿಕ ದಾಖಲೆ ಇನ್ನಷ್ಟು ಬೆಳೆಯಬೇಕಿತ್ತಾದರೂ ರಾಜಧಾನಿ ಬೆಂಗಳೂರಿನ ಜಾಗೃತ’ ಮತದಾರರು ಇದಕ್ಕೆ ಹಿನ್ನಡೆ ಉಂಟು ಮಾಡಿದ್ದಾರೆ. ಯಥಾ ಪ್ರಕಾರ ಬೆಂಗಳೂರು ನಗರ ಜಿಲ್ಲೆಯಲ್ಲಿ ಕಡಿಮೆ ಶೇ.54.72ರಷ್ಟು ಮತದಾನವಾಗಿದೆ. 2013ರಲ್ಲಿ ಇಲ್ಲಿ ಶೇ.57.38 ಮತದಾನವಾಗಿತ್ತು. ಕಳೆದ ಬಾರಿಗಿಂತ ಶೇ. 2.66ರಷ್ಟು ಕಡಿಮೆ ಮತದಾನ ಆಗಿದೆ. ಈ ಕಳಪೆ ಪ್ರದರ್ಶನ ಶೇ. 75ರಷ್ಟು ಮತದಾನದ ಗುರಿ ಸಾಧನೆಗಾಗಿ ಚುನಾವಣಾ ಆಯೋಗ ಮಾಡಿದ ಪ್ರಯತ್ನಗಳಿಗೆ ತಣ್ಣೀರೆರಚಿದ್ದಾನೆ ಮತದಾರ.
ವಿಶೇಷವೆಂದರೆ, ಬೆಂಗಳೂರು ನಗರದ ಮತದಾರರು ಶೇ. 54.72ರಷ್ಟು ಮತದಾನದೊಂದಿಗೆ ಕಳಪೆ ಪ್ರದರ್ಶನ ನೀಡಿದರೆ, ಇದಕ್ಕೆ ಹೊಂದಿಕೊಂಡಂತೆ ಇರುವ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಶೇ. 78.25ರಷ್ಟು ಮತದಾನವಾಗಿದೆ. ಇದು ಈ ಬಾರಿಯ ಚುನಾವಣೆಯಲ್ಲಿ ಇಡೀ ರಾಜ್ಯದಲ್ಲೇ ಎರಡನೇ ಅತಿಹೆಚ್ಚಿನ ಮತದಾನದ ಪ್ರಮಾಣವಾಗಿದೆ. ಅದರಲ್ಲೂ ಹೊಸಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಶೇ. 89.97ರಷ್ಟು ಮತದಾನವಾಗಿದೆ.
2013ರ ಚುನಾವಣೆಯಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಅತಿ ಹೆಚ್ಚು ಶೆ.83.50ರಷ್ಟು ಮತದಾನವಾಗಿದ್ದರೆ, ಈ ಬಾರಿ ರಾಮನಗರ ಆ ಸ್ಥಾನ ಪಡೆದಿದೆ. ಜಿಲ್ಲೆಯಲ್ಲಿ ಶೇ.84.55 ಮತದಾನವಾಗಿದೆ. ಅತಿ ಕಡಿಮೆ ಮತದಾನವನ್ನು ಬೆಂಗಳೂರು ನಗರ ಜಿಲ್ಲೆ ಉಳಿಸಿಕೊಂಡಿದೆ. (ಅಂಕಿ ಅಂಶಕ್ಕಾಗಿ ಬಳಸಿಕೊಳ್ಳಲು) 83.50%: ಚಿಕ್ಕಬಳ್ಳಾಪುರದಲ್ಲಿ ಅತಿ ಹೆಚ್ಚು ಮತದಾನ 54.72%: ಬೆಂಗಳೂರು ನಗರದಲ್ಲಿ ಅತಿ ಕಡಿಮೆ ಮತದಾನ
ರಾಜ್ಯದಲ್ಲಿ ಇದುವರೆಗಿನ ಶೇಕಡವಾರು ಮತದಾನ
ಕರ್ನಾಟಕ ರಾಜ್ಯ ವಿಧಾನಸಭೆಗೆ 1952ರಿಂದ 2013ರವರೆಗೆ ಒಟ್ಟು 14 ಚುನಾವಣೆಗಳು ನಡೆದಿದ್ದು, ಈಗ 15ನೇ ವಿಧಾನಸಭೆಗೆ ಚುನಾವಣೆ ನಡೆದಿದೆ. 1952ರಲ್ಲಿ ನಡೆದ ಮೊದಲ ವಿಧಾನಸಭೆ ಚುನಾವಣೆಯಲ್ಲಿ ಶೇ.50.38ರಷ್ಟು ಮತದಾನವಾಗಿತ್ತು. ನಂತರ 1957ರಲ್ಲಿ ಶೇ.51.30, 1962ರಲ್ಲಿ ಶೇ. 59, 1967ರಲ್ಲಿ ಶೇ.63.10, 1972ರಲ್ಲಿ ಶೇ.61.57, 1978ರಲ್ಲಿ ಅತಿ ಹೆಚ್ಚು ಶೇ. 71.90, 1983ರಲ್ಲಿ ಶೇ. 65.67, 1985ರಲ್ಲಿ ಶೇ. 67.25, 1989ರಲ್ಲಿ ಶೇ. 67.57, 1994ರಲ್ಲಿ ಶೇ. 68.59, 2004ರಲ್ಲಿ ಶೇ. 65.17, 2008ರಲ್ಲಿ ಶೇ. 64.68, 2013ರಲ್ಲಿ ಶೇ. 71.45 ಹಾಗೂ 2018ರಲ್ಲಿ ಶೇ. 72.13ರಷ್ಟು ಮತದಾನವಾಗಿದೆ.
ಜಿಲ್ಲಾವಾರು ಮತದಾನ ವಿವರ
ಜಿಲ್ಲೆ 2018 2013
ಬೆಳಗಾವಿ ಶೇ. 74.17 ಶೇ. 74.67
ಬಾಗಲಕೋಟೆ ಶೇ. 74.74 ಶೇ. 72.94
ವಿಜಯಪುರ ಶೇ. 69.63 ಶೇ. 66.43
ಕಲಬುರಗಿ ಶೇ. 62.68 ಶೇ. 63.75
ಬೀದರ್ ಶೇ. 67.66 ಶೇ. 66.43
ಯಾದಗಿರಿ ಶೇ. 65.84 ಶೇ. 64.92
ರಾಯಚೂರು ಶೇ. 65.80 ಶೇ. 64.83
ಕೊಪ್ಪಳ ಶೇ. 76.12 ಶೇ. 73.48
ಗದಗ ಶೇ. 74.81 ಶೇ. 72.90
ಧಾರವಾಡ ಶೇ. 71.64 ಶೇ. 67.16
ಉತ್ತರ ಕನ್ನಡ ಶೇ. 78.24 ಶೇ. 73.66
ಹಾವೇರಿ ಶೇ. 80.47 ಶೇ. 79.91
ಬಳ್ಳಾರಿ ಶೇ. 74.13 ಶೇ. 73.16
ಚಿತ್ರದುರ್ಗ ಶೇ. 81.22 ಶೇ. 76.66
ದಾವಣಗೆರೆ ಶೇ. 76.32 ಶೇ. 75.98
ಶಿವಮೊಗ್ಗ ಶೇ. 78.06 ಶೇ. 74.76
ಉಡುಪಿ ಶೇ. 78.86 ಶೇ. 76.15
ಚಿಕ್ಕಮಗಳೂರು ಶೇ. 78.35 ಶೇ. 75.47
ತುಮಕೂರು ಶೇ. 82.51 ಶೇ. 79.38
ಚಿಕ್ಕಬಳ್ಳಾಪುರ ಶೇ. 84.19 ಶೇ. 83.50
ಕೋಲಾರ ಶೇ. 81.39 ಶೇ. 81.47
ಬೆಂಗಳೂರು ನಗರ ಶೇ. 54.72 ಶೇ. 57.33
ಬೆಂಗಳೂರು ಗ್ರಾಂಮಾಂತರ ಶೇ. 84.03 ಶೇ. 57.33
ರಾಮನಗರ ಶೇ. 84.55 ಶೇ. 82.94
ಮಂಡ್ಯ ಶೇ. 82.53 ಶೇ. 77.98
ಹಾಸನ ಶೇ.81.48 ಶೇ. 78.77
ದಕ್ಷಿಣ ಕನ್ನಡ ಶೇ. 77.66 ಶೇ. 74.48
ಕೊಡಗು ಶೇ.74.90 ಶೇ. 73.27
ಮೈಸೂರು ಶೇ. 74.88 ಶೇ. 66.88
ಚಾಮರಾಜನಗರ ಶೇ. 82.44 ಶೇ. 78.65
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಬಿಜೆಪಿ ಸಭೆಯಲ್ಲಿ ಭಿನ್ನರ ವಿರುದ್ಧ ಕಿಡಿ; ಯತ್ನಾಳ್ ಬಣದ ವಿರುದ್ಧ ಮಾಜಿ ಶಾಸಕರು ಅಸಮಾಧಾನ
Naxal Surrender: ನಕ್ಸಲ್ ಶರಣಾಗತಿ ಪೂರ್ವಯೋಜಿತ ಸ್ಟೇಜ್ ಶೋ ಅಲ್ಲವೇ?
Finance Debt: ಫೈನಾನ್ಸ್ ಸಾಲ ವಸೂಲಿಗೆ ಹೆದರಿ ಊರನ್ನೇ ಬಿಟ್ಟರು!
Cast Census: ಲಿಂಗಾಯತ, ಒಕ್ಕಲಿಗ ಜಂಟಿ ಸಮರ?
ಶ್ರೀರಾಮಸೇನೆ ಕಾರ್ಯಕರ್ತರಿಗೆ ಬಂದೂಕು ತರಬೇತಿ: 27 ಮಂದಿ ವಿರುದ್ಧ ಪ್ರಕರಣ ದಾಖಲು
MUST WATCH
ಹೊಸ ಸೇರ್ಪಡೆ
ಬಿಜೆಪಿ ಸಭೆಯಲ್ಲಿ ಭಿನ್ನರ ವಿರುದ್ಧ ಕಿಡಿ; ಯತ್ನಾಳ್ ಬಣದ ವಿರುದ್ಧ ಮಾಜಿ ಶಾಸಕರು ಅಸಮಾಧಾನ
Naxal Surrender: ನಕ್ಸಲ್ ಶರಣಾಗತಿ ಪೂರ್ವಯೋಜಿತ ಸ್ಟೇಜ್ ಶೋ ಅಲ್ಲವೇ?
Finance Debt: ಫೈನಾನ್ಸ್ ಸಾಲ ವಸೂಲಿಗೆ ಹೆದರಿ ಊರನ್ನೇ ಬಿಟ್ಟರು!
Naxal Surrender: ರಾಜ್ಯ ಸರಕಾರವೇ ನಕ್ಸಲರಿಗೆ ಶರಣಾಗಿದೆಯೋ?: ಸಿ.ಟಿ. ರವಿ
Manipal: ನಾಲ್ವರು ಅನುಪಮ ಸಾಧಕರಿಗೆ ಇಂದು ಹೊಸ ವರ್ಷದ ಪ್ರಶಸ್ತಿ ಪ್ರದಾನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.