Arrested: ಬಿಹಾರದ ಬೆಡ್‌ಶೀಟ್ ಗ್ಯಾಂಗ್‌ನ 8 ಮಂದಿ ಸೆರೆ
Team Udayavani, Nov 28, 2024, 11:24 AM IST
ಬೆಂಗಳೂರು: ಬೆಡ್‌ಶೀಟ್‌ಗಳನ್ನು ಅಡ್ಡಇಟ್ಟು ಮೊಬೈಲ್ ಅಂಗಡಿಗಳ ಕನ್ನ ಹಾಕುತ್ತಿದ್ದ ಬಿಹಾರ ಮೂಲದ “ಬೆಡ್‌ಶೀಟ್’ ಗ್ಯಾಂಗ್‌ನ 8 ಮಂದಿ ಸದಸ್ಯರನ್ನು ಬಂಧಿಸುವಲ್ಲಿ ಬೈಯಪ್ಪನಹಳ್ಳಿ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.
ಬಿಹಾರದ ಪೂರ್ವ ಚಂಪಾರಣ್ ಜಿಲ್ಲೆಯ ಇಮ್ತಿಯಾಜ್ ಆಲಂ (30), ಜಾವೇದ್ ಆಲಂ (32), ಪವನ್ ಷಾ (29), ಮುನೀಲ್ ಕುಮಾರ್ (30), ರಿಜ್ವಾನ್ ದೇವನ್ (32), ಸಲೀಂ ಆಲಂ (30), ರಾಮೇಶ್ವರ ಗಿರಿ (40) ಹಾಗೂ ಸೂರಜ್ ಕುಮಾರ್ (34) ಬಂಧಿತರು. ಆರೋಪಿಗಳಿಂದ ಲಕ್ಷಾಂತರ ರೂ. ಮೌಲ್ಯದ ಮೊಬೈಲ್‌ಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ಹೇಳಿದರು.
ಆರೋಪಿಗಳು ಇತ್ತೀಚೆಗೆ ಬೈಯಪ್ಪನಹಳ್ಳಿ ಠಾಣಾ ವ್ಯಾಪ್ತಿಯ ನಾಗವಾರಪಾಳ್ಯದ ಸ್ಯಾಮ್‌ಸಾಂಗ್ ಶೋರೂಮಿಗೆ ನುಗ್ಗಿದ್ದ ಆರೋಪಿಗಳು 22 ಲಕ್ಷ ರೂ. ಮೌಲ್ಯದ ಮೊಬೈಲ್ ಗಳನ್ನು ಕದ್ದು ಪರಾರಿಯಾಗಿದ್ದರು. ಸಿಸಿ ಕ್ಯಾಮೆರಾ ದೃಶ್ಯಗಳನ್ನು ಆಧರಿಸಿ ತನಿಖೆ ಕೈಗೊಂಡ ಬೈಯಪ್ಪನಹಳ್ಳಿ ಠಾಣೆ ಪೊಲೀಸರು, ಬೇಗೂರು ಠಾಣೆ ವ್ಯಾಪ್ತಿಯಲ್ಲಿ ಆರೋಪಿಗಳನ್ನು ಬಂಧಿಸಿದ್ದಾರೆ. ಕದ್ದ ಮೊಬೈಲ್ ಗಳನ್ನು ಆರೋಪಿಗಳ ಪೈಕಿ ಒಬ್ಟಾತ ಬಿಹಾರ ಮಾರ್ಗವಾಗಿ ನೇಪಾಳಕ್ಕೆ ಕೊಂಡೊಯ್ದು ಮಾರಿರುವುದು ಗೊತ್ತಾಗಿದೆ. ಸದ್ಯ ಆತನನ್ನು ಬಂಧಿಸಿ ಸಾಕಷ್ಟು ಮೊಬೈಲ್‌ಗಳನ್ನು ವಶಕ್ಕೆಪಡೆಯಲಾಗಿದೆ.
ಅಂಗಡಿ ಒಳಗೆ ಹೋಗುವುದನ್ನು ಮರೆಮಾಚಲು ಬೆಡ್‌ಶೀಟ್ ಬಳಕೆ! : ಆರೋಪಿಗಳು ಯಾವ ಅಂಗಡಿ ಕಳವು ಮಾಡಬಹುದು ಎಂದು ತಿಳಿದುಕೊಳ್ಳುತ್ತಿದ್ದರು. ತಡರಾತ್ರಿ ಮುಖಕ್ಕೆ ಮಾಸ್ಕ್, ತಲೆಗೆ ಕ್ಯಾಪ್ ಹಾಕಿ ಅಂಗಡಿ ಬಳಿ ಹೋಗುತ್ತಿದ್ದರು. ಬಳಿಕ ಆರೋಪಿಗಳ ಪೈಕಿ ಮೂವರು ಅಂಗಡಿಯ ರೋಲಿಂಗ್ ಶೆಟರ್ ಮುಂದೆ ಬೆಡ್‌ಶೀಟ್ ಅನ್ನು ಅಡ್ಡವಾಗಿ ಹಿಡಿದುಕೊಳ್ಳುತ್ತಿದ್ದರು. ಇತರೆ ಆರೋಪಿಗಳು ರೋಲಿಂಗ್ ಶೆಟರ್ ತೆರೆದು ಒಳ ಹೋಗುತ್ತಿದ್ದರು. ಅಂಗಡಿಯೊಳಗೆ ಇರುವ ಆರೋಪಿಗಳು, ವಸ್ತುಗಳನ್ನು ಬ್ಯಾಗ್‌ಗೆ ತುಂಬಿಕೊಳ್ಳುತ್ತಿದ್ದರು. ಬಳಿಕ ಅಂಗಡಿ ಹೊರಗಡೆ ಇರುತ್ತಿದ್ದ ತಮ್ಮ ಸಹಚರರಿಗೆ ಕರೆ ಮಾಡುತ್ತಿದ್ದರು. ಆ ನಂತರ ಮತ್ತೆ ಅಂಗಡಿ ಮುಂಭಾಗದ ರೋಲಿಂಗ್ ಶೆಟ್ಟರ್‌ಗೆ ಅಡ್ಡವಾಗಿ ಬೆಡ್‌ಶೀಟ್ ಹಿಡಿದು ಹೊರಗಡೆ ಕರೆಸಿಕೊಳ್ಳುತ್ತಿದ್ದರು. ಬಳಿಕ ಎಲ್ಲರೂ ಮುಖಕ್ಕೆ ಬೆಡ್‌ಶೀಟ್ ಸುತ್ತಿಕೊಂಡು ಸ್ಥಳದಿಂದ ಪರಾರಿಯಾಗುತ್ತಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru Crime: ವಾಟರ್ ಹೀಟರ್‌ನಿಂದ ಸ್ನೇಹಿತನ ಕೊಲೆಗೈದವ ಸೆರೆ
State Govt: ಸರ್ಕಾರದ ಬಳಿಯೇ ಇದೆ ಪಂಚಾಯತ್ ಅಧಿಕಾರ!
Fraud Case: ಉದ್ಯಮಿಗೂ 5 ಕೋಟಿ ರೂ. ವಂಚಿಸಿದ್ದ ಐಶ್ವರ್ಯ: ಆರೋಪ
Bengaluru: ನಕಲಿ ದಾಖಲೆ ನೀಡಿ ಹುದ್ದೆ ಪಡೆದ ಆರೋಪದಡಿ ಪಿಎಸ್‌ಐ ವಿರುದ್ಧ ಕೇಸ್
Fraud Case: ಸಾಗರದ ಚಿನ್ನದಂಗಡಿಗೂ 20 ಲಕ್ಷ ವಂಚಿಸಿದ್ದ ವರ್ತೂರು ಆಪ್ತೆ ಶ್ವೇತಾ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.