ಕಾಂಪ್ಯಾಕ್ಟರ್ ಹೆಸರಲ್ಲಿ 800 ಕೋಟಿ ಗೋಲ್‌ಮಾಲ್!
Team Udayavani, Oct 31, 2017, 12:09 PM IST
ಬೆಂಗಳೂರು: ಬಿಬಿಎಂಪಿಯಲ್ಲಿ ಕಸ ಗುಡಿಸುವ ಯಂತ್ರ ಮತ್ತು ಕಾಂಪ್ಯಾಕ್ಟರ್ ಖರೀದಿಯಲ್ಲಿ ಅವ್ಯವಹಾರ ನಡೆದಿದ್ದು ಸುಮಾರು 800 ಕೋಟಿ ರೂ. ಗೋಲ್‌ಮಾಲ್ ನಡೆದಿದೆ ಎಂದು ಬಿಜೆಪಿ ಶಾಸಕ ಸಿ.ಎನ್.ಅಶ್ವತ್ಥನಾರಾಯಣ ಆರೋಪಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಂಗಳೂರು ನಗರಾಭಿವೃದ್ಧಿ ಸಚಿವರ ಕುಮ್ಮಕ್ಕಿನಿಂದಾಗಿ ಅಧಿಕಾರಿಗಳು ಕದ್ದುಮುಚ್ಚಿ ವ್ಯವಹಾರ ನಡೆಸಿದ್ದಾರೆ. ಬಿಬಿಎಂಪಿ ಒಂದು ಮಾದರಿಯ ಯಂತ್ರಕ್ಕೆ ಟೆಂಡರ್ ಕರೆದರೆ, ಗುತ್ತಿಗೆ ಪಡೆದ ಸಂಸ್ಥೆ ಇನ್ನೊಂದು ಮಾದರಿಯ ಯಂತ್ರ ಒದಗಿಸಿದೆ ಎಂದು ದೂರಿದರು.
ಈ ಗೋಲ್‌ಮಾಲ್ ಬಹಿರಂಗವಾಗಿ ಲೋಕಾಯುಕ್ತದಲ್ಲಿ ದೂರು ದಾಖಲಾಗುತ್ತಿದ್ದಂತೆ ಅಧಿಕಾರಿಗಳು ಟೆಂಡರ್ ಪ್ರಕ್ರಿಯೆಗೆ ಸಂಬಂಧಿಸಿದಂತೆ ಹೊಸ ಕಡತವನ್ನೇ ಸೃಷ್ಟಿ ಸಿ, ಹಗರಣವನ್ನು ಮುಚ್ಚಿಹಾಕಲು ಯತ್ನಿಸುತ್ತಿರುವ ಸಚಿವರು ಮತ್ತು ಅಧಿಕಾರಿಗಳು ಮತ್ತೆ ಶಾಮೀಲಾಗಿ ಮತ್ತೆ ಕಾಂಪ್ಯಾಕ್ಟರ್ ಖರೀದಿಗೆ ಮುಂದಾಗಿದ್ದಾರೆ. ಹೀಗಾಗಿ ಖರೀದಿ ಪ್ರಕ್ರಿಯೆ ಸ್ಥಗಿತಗೊಳಿಸಬೇಕು ಎಂದು ತಪ್ಪಿತಸ್ತರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಿಬೇಕು ಎಂದು ಮುಖ್ಯಮಂತ್ರಿಯನ್ನು ಒತ್ತಾಯಿಸಿದ್ದಾರೆ.
ಏನಿದು ಅವ್ಯವಹಾರ?: ಬಿಬಿಎಂಪಿ ವ್ಯಾಪ್ತಿಯಲ್ಲಿ ಬೃಹತ್ ರಸ್ತೆಗಳನ್ನು ಸ್ವತ್ಛಗೊಳಿಸಲು ಸೆಲ್ಫ್ ಪ್ರೊಫೈಲ್ಡ್ ಅಥವಾ ರೈಡಾನ್ ಸ್ವೀಪಿಂಗ್ ಯಂತ್ರಗಳನ್ನು ಖರೀದಿಸಲು 2014ರ ಫೆ .25ರಂದು ಬಿಬಿಎಂಪಿ ವಿಶೇಷ ಆಯುಕ್ತರ ಅಧ್ಯಕ್ಷತೆಯಲ್ಲಿ ನಡೆದ ತಜ್ಞರ ಸಲಹಾ ಸಮಿತಿ ಸಭೆಯಲ್ಲಿ ನಿರ್ಧರಿಸಲಾಯಿತು. ಅರ್ಹ ಸಂಸ್ಥೆಗಳಿಂದ ದರಪಟ್ಟಿಯ ಮೌಲಿಕರಣ ನಡೆಸದೆ ಟೆಂಡರ್‌ಕರೆಯಲಾಯಿತು. ಟಿವಿಎಸ್ ಸಂಸ್ಥೆ ಮಾತ್ರ ಭಾಗವಹಿಸಿ ಹೆಚ್ಚುದರ ನಮೂದಿಸಿದ್ದರಿಂದ ವಿಶೇಷ ಆಯುಕ್ತ ದರ್ಪಣ್ ಜೈನ್ ಟೆಂಡರ್ ರದ್ದುಗೊಳಿಸಿದ್ದರು.
ಈ ಮಧ್ಯೆ ದರ್ಪಣ್ ಜೈನ್ ವರ್ಗಾವಣೆಯಾದ ಜಾಗಕ್ಕೆ ಸುಬೋದ್ ಯಾದವ್ ಬಂದ ಬಳಿಕ ಮತ್ತೆ ಕಡತ ಮಂಡಿಸಲಾಯಿತು. ಈ ವೇಳೆ ಟೆಂಡರ್ ರದ್ದಿತಿ ವಿಷಯ ಮುಚ್ಚಿಟ್ಟು ಸ್ಥಗಿತಗೊಳಿಸಲಾಗಿದೆ ಅದನ್ನು ಮುಂದುವರಿಸಬೇಕೆಂದು ತಿಳಿಸಿದ್ದರು. ಆದರೆ ಯಾದವ್ ಇದರ ಪರಿಶೀಲನೆಗೆ ಹೈದರಾಬಾದ್‌ಗೆ ಅಧಿಕಾರಿಗಳ ತಂಡ ಕಳುಹಿಸಿದ್ದರು. ತಂಡ ವರದಿ ನೀಡುವ ಮುನ್ನವೇ ಅಧಿಕಾರಿಗಳು ಟೆಂಡರ್ ಪ್ರಕ್ರಿಯೆ ಮುಗಿಸಿದ್ದರು.
ಪ್ರತಿ ಯಂತ್ರಕ್ಕೆ 1.18 ಕೋಟಿ ರೂ. ಮತ್ತು ಐದು ವರ್ಷದ ನಿರ್ವಹಣೆಗೆ 2.26 ಕೋಟಿ ರೂ. ನಂತೆ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಈ ಕುರಿತು ಆದೇಶ ಹೊರಡಿಸಲು ಕೆಲವೇ ದಿನ ಮುನ್ನ ಟಿಪಿಎಸ್ ಕಂಪೆನಿ ಸರ್ಕಾರಕ್ಕೆ ಪತ್ರ ಬರೆದು ನಿರ್ವಹಣೆ ವೆಚ್ಚವನ್ನು 2.26 ಕೋಟಿ ರೂ.ಗೆ ಹೆಚ್ಚಿಸಬೇಕು ಎಂದು ಕೋರಿತ್ತು. ಈ ಬಗ್ಗೆ ಸರ್ಕಾರದಿಂದ ಒಪ್ಪಿಗೆ ಪಡೆಯದೆ ಮತ್ತು ಪಾಲಿಕೆಯ ಅನುಮತಿ ಇಲ್ಲದೆ ನಿರ್ವಹಣೆ ಮೊತ್ತವನ್ನು 2.48 ಕೋಟಿಗೆ ಪರಿಷ್ಕರಿಸಲಾಗಿದೆ.
ಇನ್ನೊಂದೆಡೆ ಖರೀದಿ ನಂತರ ಮುಖ್ಯಮಂತ್ರಿಗಳೇ ಅದರ ಕಾರ್ಯಕ್ಕೆ ಚಾಲನೆ ನೀಡಿದರು. ಆದರೆ, ಟೆಂಡರ್ ಕರೆದಿದ್ದು ಸೆಲ#… ಪ್ರೊಫೈಲ್ಡ… ಮಷೀನ್‌ಗೆ ಟೆಂಡರ್ ಕರೆದರೆ ಕಂಪೆನಿ ಟ್ರಕ್ ಮೌಂಟೆಡ್ ವಾಹನ ನೀಡಿತ್ತು. ಈ ಬಗ್ಗೆ ಲೋಕಾಯುಕ್ತದಲ್ಲಿ ದೂರು ದಾಖಲಾಗುತ್ತಿದ್ದಂತೆ ಅಧಿಕಾರಿಗಳು ಹೊಸ ಕಡತವನ್ನೇ ಸೃಷ್ಟಿಮಾಡಿ ತಾಂತ್ರಿಕ ದೋಶದ ಕಾರಣ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಸೆಲ್ಫ್ ಪ್ರೊಫೈಲ್ಡ್ ಯಂತ್ರದ ಖರೀದಿಗೆ 5 ವರ್ಷದ ನಿರ್ವಹಣೆಗೆ 24.15 ಕೋಟಿಗೆ ಅನುಮೋದಿಸಲಾಗಿದ್ದು, ಟ್ರಕ್ ಮೌಂಟೆಡ್ ಯಂತ್ರ ಖರೀದಿಗೆ ಹಾಗೂ 5 ವರ್ಷದ ನಿರ್ವಹಣೆಗೆ 27.21 ಕೊಟಿ ರೂ.ಗೆ ಕಡತ ಮಂಡಿಸಿ ಅನುಮೋದನೆ ಪಡೆಯಲಾಗಿದೆ, ಅಚ್ಚರಿ ಎಂದರೆ ಕಡತ ಮಂಡಿಸುವ ಒಂದು ತಿಂಗಳ ಮೊದಲೇ (2017ರ ಜೂ.24)ರಂದು ಕಾರ್ಯಾದೇಶ ನೀಡಲಾಗಿದೆ. ಅಲ್ಲದೆ, ಒಪ್ಪಂದ ಉಲ್ಲಂಘನೆಯಾದರೆ ಮುಂದಿನ ಕ್ರಮದ ಬಗ್ಗೆಯೂ ಪ್ರಸ್ತಾಪಿಸಿಲ್ಲ ಎಂದು ದೂರಿದರು.
ಹಗರಣದಲ್ಲಿ ಜಂಟಿ ಆಯುಕ್ತ ಸಫರಾಜ್ ಖಾನ್, ಕಾರ್ಯಪಾಲಕ ಅಭಿಯಂತರರಾದ ಹೇಮಲತಾ ಹಾಗೂ ಲೋಕೇಶ್, ತಾಂತ್ರಿಕ ಸಹಾಯಕ ಸಂತೋಷ್ ಸಾಮೀಲಾಗಿದ್ದಾರೆ ಎಂದು ಆರೋಪಿಸಿರುವ ಅವರು, ಸಚಿವರ ಕುಮ್ಮಕ್ಕಿನಿಂದಲೇ ಅವರು ಈ ಕೃತ್ಯ ಎಸಗಿದ್ದಾರೆ ಎಂದು ಆಪಾದಿಸಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.