OLX ನಲ್ಲಿ ಫ್ರಿಡ್ಜ್ ಮಾರಲು ಹೋದವರಿಗೆ 99 ಸಾವಿರ ರೂ ವಂಚನೆ
Team Udayavani, Jun 30, 2023, 4:02 PM IST
ಬೆಂಗಳೂರು: ಓಎಲ್‌ಎಕ್ಸ್‌ನಲ್ಲಿ ಮನೆಯ ಫ್ರಿಡ್ಜ್ ಮಾರಾಟ ಮಾಡಲು ಮುಂದಾದ ಎಂಜಿನಿಯರ್‌ಗೆ ಸೈಬರ್ ಕಳ್ಳರು 99 ಸಾವಿರ ರೂ. ವಂಚಿಸಿದ್ದಾರೆ.
ವಿಜಯನಗರದ ಪೂರ್ಣಚಂದ್ರ ರಾವ್ (41) ವಂಚನೆಗೊಳಗಾದ ಎಂಜಿನಿಯರ್. ಪೂರ್ಣಚಂದ್ರ ರಾವ್ ಇತ್ತೀಚೆಗೆ ಓಎಲ್‌ಎಕ್ಸ್‌ನಲ್ಲಿ ಫ್ರಿಡ್ಜ್ ಮಾರಾಟ ಮಾಡಲು ಜಾಹೀರಾತು ಹಾಕಿದ್ದರು.
ಅಮಿತ್‌ಶರ್ಮಾ ಎಂಬ ಅಪರಿಚಿತ ವ್ಯಕ್ತಿ ಇವರನ್ನು ಸಂಪರ್ಕಿಸಿ “ನಾನು ಆರ್ಮಿಯಲ್ಲಿ ಕೆಲಸ ಮಾಡುತ್ತಿದ್ದು, ನಿಮ್ಮ ಫ್ರಿಡ್ಜ್ ಖರೀದಿಸುತ್ತೇನೆ’ ಎಂದು ನಂಬಿಸಿದ್ದರು. “ಆರ್ಮಿ ಪ್ರಕಾರ ಹೆಚ್ಚಿನ ಹಣ ವರ್ಗಾವಣೆ ಮಾಡುವಂತಿಲ್ಲ. ಹೀಗಾಗಿ ನಮಗೆ ನೀವು ಇಂತಿಷ್ಟು ದುಡ್ಡು ಹಾಕಿದರೆ ಅದರ ದುಪ್ಪುಟ್ಟು ಹಣ ನಿಮ್ಮ ಖಾತೆಗೆ ಜಮೆ ಆಗುತ್ತದೆ’ ಎಂದು ಹೇಳಿ, ಕ್ಯೂಆರ್‌ಕೋಡ್ ಕಳುಹಿಸಿ ಸ್ಕ್ಯಾನ್ ಮಾಡುವಂತೆ ಸೂಚಿಸಿದ್ದರು.
ಇದನ್ನೂ ಓದಿ:Education ಕ್ಷೇತ್ರವು ರೂಪಾಂತರಗೊಂಡಿದೆ ;DU ಶತಮಾನೋತ್ಸವದಲ್ಲಿ ಪ್ರಧಾನಿ ಮೋದಿ
ಪೂರ್ಣಚಂದ್ರರಾವ್ ಕ್ಯೂಆರ್‌ಕೋಡ್ ಸ್ಕ್ಯಾನ್ ಮಾಡುತ್ತಿದ್ದಂತೆ ಇವರ ಬ್ಯಾಂಕ್ ಖಾತೆಯಲ್ಲಿದ್ದ 99 ಸಾವಿರ ರೂ. ವಿವಿಧ ಬ್ಯಾಂಕ್ ಖಾತೆಗೆ ವರ್ಗಾವಣೆಯಾಗಿದೆ. ಈ ಬಗ್ಗೆ ಪರಿಶೀಲನೆ ನಡೆಸಿದಾಗ ಇದು ಸೈಬರ್ ಕಳ್ಳರ ಕೈ ಚಳಕ ಎಂಬುದು ಬೆಳಕಿಗೆ ಬಂದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Naxals Surrender: ಮುಖ್ಯಮಂತ್ರಿ ಸಮ್ಮುಖ ಶಸ್ತ್ರಾಸ್ತ್ರ ತ್ಯಜಿಸಿ ಶರಣಾದ 6 ನಕ್ಸಲರು
Bengaluru: ಪಾಲುದಾರನ ಕಿರುಕುಳ: ಉದ್ಯಮಿ ಆತ್ಮಹತ್ಯೆ
Atul Subhash Case: ಮೊಮ್ಮಗನನ್ನು ಟೆಕಿ ಅತುಲ್ ತಾಯಿಯ ಸುಪರ್ದಿಗೆ ವಹಿಸಲು ಸುಪ್ರೀಂ ನಕಾರ
illegal Investigation: ಬಿಬಿಎಂಪಿ ಮುಖ್ಯ ಎಂಜಿನಿಯರ್ ಕಚೇರಿ ಮೇಲೆ ಇ.ಡಿ. ದಾಳಿ
Sangeetha Mobiles: ಜಯನಗರದಲ್ಲಿ ಸಂಗೀತಾ ಗ್ಯಾಜೆಟ್ಸ್ ನೂತನ ಮಳಿಗೆ ಲೋಕಾರ್ಪಣೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.