ನಕಲಿ ಏಷಿಯನ್ ಪೇಂಟ್ ಫ್ಯಾಕ್ಟರಿ ಸ್ಥಾಪಿಸಿದ್ದ ಉದ್ಯಮಿ!
Team Udayavani, Apr 15, 2023, 3:44 PM IST
ಬೆಂಗಳೂರು: ನಕಲಿ ಏಷಿಯನ್ ಪೇಂಟ್ಸ್ ತಯಾರಿಸಿ ಮಾರಾಟ ಮಾಡುತ್ತಿದ್ದ ಉದ್ಯಮಿಯನ್ನು ವಿ.ವಿ.ಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ರಾಜಸ್ತಾನ ಮೂಲದ ಚುನ್ನಿಲಾಲ್ ಬಂಧಿತ ಆರೋಪಿ. 20 ಲಕ್ಷ ರೂ. ಮೌಲ್ಯದ ನಕಲಿ ಏಷಿಯನ್ ಪೇಂಟ್ ಜಪ್ತಿ ಮಾಡಿದ್ದಾರೆ.
ನಕಲಿ ಏಷಿಯನ್ ಪೇಂಟ್ಸ್ ತಯಾರಿಸಲೆಂದೇ ತನ್ನದೇ ಆದ ಚಿಕ್ಕ ಫ್ಯಾಕ್ಟರಿ, ಶೋರೂಂ ತೆರೆದಿರುವುದು ಪತ್ತೆಯಾಗಿದೆ. ಈತ ಕಳೆದ 10 ವರ್ಷಗಳಿಂದ ಪ್ರತಿಷ್ಠಿತ ಏಷಿಯನ್ ಪೇಂಟ್ಸ್ ಹೆಸರಿನಲ್ಲಿ ನಕಲಿ ಪೈಂಟ್‌ಗಳನ್ನು ತಯಾರಿಸಿ ಮಾರಾಟ ಮಾಡುತ್ತಿದ್ದ. ತನ್ನದೇ ಆದಂತಹ ಪೇಂಟ್ ಶೋ ರೂಮ್ ಒಂದನ್ನು ಹೊಂದಿದ್ದ. ಹೀಗಾಗಿ ಪೈಂಟ್ ಬಗ್ಗೆ ಬಹುತೇಕ ಎಲ್ಲ ವಿಚಾರಗಳನ್ನೂ ಅರಿತಿದ್ದ. ಕಳೆದ 10 ವರ್ಷದಲ್ಲಿ ಕೋಟ್ಯಂತರ ರೂ. ಬೆಲೆ ಬಾಳುವ ಏಷಿಯನ್ ಪೇಂಟ್ ಮಾರಾಟ ಮಾಡಿದ್ದ. ಏಷಿಯನ್ ಪೇಂಟ್ ಸ್ಟಿಕ್ಕರ್ ಸೇರಿದಂತೆ ಪೇಂಟ್ ಉತ್ಪನ್ನಗಳನ್ನು ಸಹ ನಕಲು ಮಾಡುತ್ತಿದ್ದ. ಏಷಿಯನ್ ಪೇಂಟ್ಸ್ ವಿತರಕರಿಗೆ ಇತ್ತೀಚೆಗೆ ಆರೋಪಿಯ ಕಳ್ಳಾಟದ ಸುಳಿವು ಸಿಕ್ಕಿತ್ತು. ಅವರು ಈ ಬಗ್ಗೆ ವಿ.ವಿ.ಪುರಂ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಇತ್ತ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಗ್ರಾಹಕರ ಸೋಗಿನಲ್ಲಿ ಹೋಗಿ ಸ್ಯಾಂಪಲ್ ಗಾಗಿ ಒಂದು ಬಾಕ್ಸ್ ಪೇಂಟ್ ಖರೀದಿಸಿ ಪರೀಕ್ಷೆ ಮಾಡಿಸಿದ್ದರು. ಪರೀಕ್ಷೆಯಲ್ಲಿ ನಕಲಿ ಪೇಂಟ್ ಎಂಬುದು ಪತ್ತೆಯಾಗಿತ್ತು. ಕೂಡಲೇ ಪೊಲೀಸರು ಚುನ್ನಿಲಾಲ್ ನನ್ನು ಬಂಧಿಸಿದ್ದಾರೆ.
ಗೋದಾಮಿಗೆ ದಾಳಿ ನಡೆಸಿ ಪೇಂಟ್ ಜಪ್ತಿ: ಆರೋಪಿ ಯನ್ನು ವಿಚಾರಣೆಗೊಳಪಡಿಸಿದಾಗ ಗೋದಾಮಿನಲ್ಲಿ ಏಷಿಯನ್ ಪೇಂಟ್ ಸಂಗ್ರಹಿಸಿಟ್ಟಿರುವ ಮಾಹಿತಿ ಸಿಕ್ಕಿತ್ತು. ಕೂಡಲೇ ನಕಲಿ ಪೇಂಟ್ ತಯಾರಿಸುವ ಹೆಸರುಘಟ್ಟ ಮುಖ್ಯ ರಸ್ತೆಯ ಕಾರ್ಖಾನೆ ಹಾಗೂ ಶಿವಕೋಟೆ ಗ್ರಾಮದಲ್ಲಿರುವ ಗೋದಾಮಿನ ಮೇಲೆ ದಾಳಿ ಮಾಡಿ 20 ಲಕ್ಷ ರೂ. ಮೌಲ್ಯದ ಏಷಿಯನ್ ಪೇಂಟ್ಸ್ ಬ್ರ್ಯಾಂಡಿನ ಅಪೇಕ್ಸ್, ಏಸ್, ರಾಯಲ್, ಟ್ರಾಕ್ಟರ್, ಪ್ರೀಮಿಯಮ್ ಸೇರಿದಂತೆ ವಿವಿಧ ಬಗೆಯ ಪೇಂಟ್ ಜಪ್ತಿ ಮಾಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Jayadeva Hospital ಉದ್ಘಾಟನಾ ಸಮಾರಂಭದಿಂದ ದೂರ ಉಳಿದ ಸಚಿವ ಪ್ರಿಯಾಂಕ್ ಖರ್ಗೆ
Kalaburagi; ಜಾಹೀರಾತು, ಫಲಕದಲ್ಲಿ ಹೆಸರಿಲ್ಲ: ಶಾಸಕ ಅಲ್ಲಮಪ್ರಭು ಬೆಂಬಲಿಗರಿಂದ ಪ್ರತಿಭಟನೆ
Viral: ಲಿಂಗ ಪರಿವರ್ತನೆ ಸರ್ಜರಿಗೆ ಒಳಗಾಗಿ ಪ್ರೀತಿಸಿದ ಯುವತಿ ಜತೆ ವಿವಾಹವಾದ ಮಹಿಳೆ.!
Kalaburagi: ವರದಿ ನಂತರ ತೊಗರಿ ಹಾನಿಗೆ ಪರಿಹಾರ ನಿರ್ಧಾರ: ಸಿಎಂ ಸಿದ್ದರಾಮಯ್ಯ
ಕೊಡುವುದರಿಂದ ಕೊರತೆಯಾಗದು!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.