Police Case: ಬಾಲಕಿಯರಿಂದ ದುಡಿಸಿಕೊಳ್ಳುತ್ತಿದ್ದ ಕುಟುಂಬದ ವಿರುದ್ಧ ಕೇಸ್ ದಾಖಲು
Team Udayavani, Dec 19, 2023, 11:00 AM IST
ಬೆಂಗಳೂರು: ನೆರೆ ರಾಜ್ಯದ ಇಬ್ಬರು ಅಪ್ರಾಪ್ತ ಹೆಣ್ಣು ಮಕ್ಕಳನ್ನು ಮನೆಯಲ್ಲಿ ಇರಿಸಿಕೊಂಡು ಬಾಲಕಾರ್ಮಿಕರಾಗಿ ದುಡಿಸಿಕೊಳ್ಳುತ್ತಿದ್ದ ಆರೋಪದಡಿ ಮೂವರ ವಿರುದ್ಧ ಜಯನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜಯನಗರ 6ನೇ ಬ್ಲಾಕ್‌ನ ಯಡಿ ಯೂರು ನಿವಾಸಿ ಅಶೋಕ್ ಕುಮಾರ್(51), ಅವರ ಮಕ್ಕಳಾದ ಶ್ರೇಯಾನ್ಸ್ ಚೌರಡೆ(27) ಹಾಗೂ ಗೌರವ್ ಚೌರಡೆ(25) ವಿರುದ್ಧ ಬಾಲಕಾರ್ಮಿಕ ನಿಷೇಧ ಮತ್ತು ನಿಯಂತ್ರಣ ಕಾಯ್ದೆ ಹಾಗೂ ಬಾಲನ್ಯಾಯ ಕಾಯ್ದೆ ಅಡಿ ಪ್ರಕರಣ ದಾಖಲಿಸಿ, ತನಿಖೆ ಮುಂದುವರಿಸಲಾಗಿದೆ ಎಂದು ಪೊಲೀಸರು ಹೇಳಿದರು.
ಮನೆಯೊಂದರಲ್ಲಿ ಅಪ್ರಾಪ್ತೆಯ ರನ್ನು ಕೆಲಸಕ್ಕೆ ಇರಿಸಿಕೊಳ್ಳಲಾಗಿದೆ ಎಂಬ ಖಚಿತ ಮಾಹಿತಿ ಮೇರೆಗೆ ಜಯನಗರ ಠಾಣೆ ಪೊಲೀಸರು, ಅಶೋಕ್ ಕುಮಾರ್ ಮನೆಗೆ ತೆರಳಿ ಪರಿಶೀಲಿಸಿದ್ದಾರೆ. ಆಗ 10 ಮತ್ತು 8 ವರ್ಷದ ಇಬ್ಬರು ಹೆಣ್ಣು ಮಕ್ಕಳು ಇರುವುದು ಕಂಡು ಬಂದಿದ್ದು, ಬಳಿಕ ಮಕ್ಕಳನ್ನು ವಿಚಾರಣೆ ನಡೆಸಲಾಗಿದೆ.
ಈ ವೇಳೆ “ನಾವು ಬಿಹಾರ ಮೂಲದವರು. ನಮ್ಮ ತಾಯಿ ಮೈಸೂರಿನಲ್ಲಿ ಕೆಲಸ ಮಾಡುವಾಗ ಅಶೋಕ್ ಕುಮಾರ್ ಮತ್ತು ಅವರ ಮಕ್ಕಳು ನಮ್ಮನ್ನು ಬೆಂಗಳೂರಿಗೆ ಕರೆತಂದರು. ಆ ನಂತರ ಮನೆಗೆಲಸ ಹಾಗೂ ಅನಾರೋಗ್ಯದಿಂದ ಬಳಲುತ್ತಿ ರುವ ಅಶೋಕ್ ಕುಮಾರ್ ಅವರ ಪತ್ನಿಯ ಸೇವೆಗೆ ನಿಯೋಜಿಸಿದ್ದರು’ ಎಂದು ಹೇಳಿದ್ದಾರೆ. ಬಳಿಕ ಆ ಇಬ್ಬರು ಮಕ್ಕಳನ್ನು ರಕ್ಷಿಸಿ ಬಾಲಮಂದಿರಕ್ಕೆ ಕಳುಹಿಸಲಾಗಿದೆ.
14 ವರ್ಷದೊಳಗಿನ ಮಕ್ಕಳಿಂದ ದುಡಿಮೆ ಮಾಡಿಸಿಕೊಳ್ಳುವುದು ತಪ್ಪು ಎಂಬ ಕಾನೂನು ಇದ್ದರೂ ಅದನ್ನು ಉಲ್ಲಂ ಸಿ ಇಬ್ಬರು ಚಿಕ್ಕ ಮಕ್ಕಳನ್ನು ಕೆಲಸಕ್ಕೆ ನೇಮಿಸಿಕೊಂಡು ದುಡಿಸುತ್ತಿದ್ದ ಮನೆ ಮಾಲೀಕ ಅಶೋಕ್ ಕುಮಾರ್ ಹಾಗೂ ಅವರ ಇಬ್ಬರು ಮಕ್ಕಳ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದರು.
ಅಲ್ಲದೆ, ಮಕ್ಕಳನ್ನು ಅಶೋಕ್ ಕುಮಾರ್ ಜತೆ ಕಳುಹಿಸಿದ ಮಕ್ಕಳ ತಾಯಿಯನ್ನು ಪತ್ತೆ ಹಚ್ಚಿ, ಆಕೆಯ ವಿರುದ್ಧವೂ ಕಾನೂನು ಕ್ರಮಕೈಗೊಳ್ಳ ಲಾಗುತ್ತದೆ. ಸದ್ಯ ಆಕೆ ಮೈಸೂರಿನಲ್ಲಿ ದ್ದಾರೆ ಎಂಬ ಮಾಹಿತಿಯಿದ್ದು, ಪತ್ತೆ ಕಾರ್ಯ ನಡೆಯುತ್ತಿದೆ ಎಂದು ಪೊಲೀಸರು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ಸುರಂಗ ರಸ್ತೆ ಕಾಮಗಾರಿಗೆ ಭಾರತ-ಚೀನಾ ಸಂಬಂಧ ಅಡ್ಡಿ!
Fraud: ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಹೆಸರಲ್ಲಿ ಇಬ್ಬರಿಗೆ 93 ಲಕ್ಷ ರೂ. ವಂಚನೆ
Digital arrest: ವೃದ್ಧೆಗೆ ಡಿಜಿಟಲ್ ದಿಗ್ಬಂಧನ ಹಾಕಿ 10.21 ಲ. ರೂ. ಕಿತ್ತ ಸೈಬರ್ ವಂಚಕ
Drunk & Drive Case: ಅತಿ ವೇಗದ ಚಾಲನೆ: 522 ಕೇಸ್, 1.29 ಲಕ್ಷ ದಂಡ
Bengaluru: ನಿಲ್ಲದ ಪಟಾಕಿ ಅವಘಡ: ಮತ್ತೆ 10 ಮಂದಿ ಕಣ್ಣಿಗೆ ತೊಂದರೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.