![Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!](https://www.udayavani.com/wp-content/uploads/2025/02/19-4-415x249.jpg)
![Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!](https://www.udayavani.com/wp-content/uploads/2025/02/19-4-415x249.jpg)
Team Udayavani, Jun 16, 2019, 3:04 AM IST
ಬೆಂಗಳೂರು: ಸೃಜನಶೀಲತೆ ಪ್ರತಿಯೊಬ್ಬರಲ್ಲೂ ಇರುತ್ತದೆ. ಆದರೆ, ಅದರ ಅಭಿವ್ಯಕ್ತಿಗೆ ಸೂಕ್ತ ವಾತಾವರಣ ಕಲ್ಪಿಸಬೇಕಾಗುತ್ತದೆ ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷೆ ಡಾ.ವಸುಂಧರ ಭೂಪತಿ ತಿಳಿಸಿದರು.
ನಗರದ ಮಲ್ಲೇಶ್ವರಂ ಅಸೋಸಿಯೇಷನ್‌ನಲ್ಲಿ ಶನಿವಾರ ಸಪ್ನ ಬುಕ್ ಹೌಸ್ ಹಮ್ಮಿಕೊಂಡಿದ್ದ ಪಿ.ಎನ್. ಅನನ್ಯ ಅವರ “ಇಟ್ಸ್ ಮೈ ಟೈಂ ವಿತ್ ರೈಮ್’ ಇಂಗ್ಲಿಷ್ ಕವನ ಸಂಕಲನ ಲೋಕಾರ್ಪಣೆಗೊಳಿಸಿ ಮಾತನಾಡಿದರು.
ಪಿಯುಸಿ ವ್ಯಾಸಂಗ ಮಾಡುತ್ತಿರುವ ಅನನ್ಯ ಉತ್ತಮ ಓದಿನ ಜತೆಗೆ ಸೃಜನಶೀಲ ಕವನ ಬರೆದು ಪ್ರಕಟಿಸುತ್ತಿರುವುದು ಶ್ಲಾಘನೀಯ. ಪ್ರತಿಯೊಬ್ಬರಲ್ಲೂ ಇಂತಹ ಸುಪ್ತ ಪ್ರತಿಭೆ ಅಡಗಿರುತ್ತದೆ. ಆದರೆ, ಅದರ ಅನಾವರಣಕ್ಕೆ ಸೂಕ್ತ ವಾತಾವರಣದ ಅವಶ್ಯಕತೆ ಇರುತ್ತದೆ ಎಂದು ಹೇಳಿದರು.
“ಇಟ್ಸ್ ಮೈ ಟೈಂ ವಿತ್ ರೈಮ್’ ಕವನ ಸಂಕಲನದ ಪ್ರತಿ ಕವನ ಉತ್ತಮವಾಗಿ ಮೂಡಿ ಬಂದಿದೆ. ತಂದೆ-ತಾಯಿ, ಗುರು, ಸ್ನೇಹಿತರು, ಪರಿಸರ ಕವನಗಳ ಆಯ್ಕೆ ವಿಷಯಗಳಾಗಿವೆ. 16ರ ಹರೆಯದ ಅನನ್ಯ ಅನುಭವಿಗಳ ಹಾಗೆ ಪದ ಬಳಕೆ ಮಾಡಿದ್ದಾರೆ.
ಪ್ರತಿ ಕವನವೂ ಪ್ರಾಸಬದ್ಧವಾಗಿದ್ದು, ಸಂದೇಶ ರೂಪದಲ್ಲಿವೆ. ಕನ್ನಡಕ್ಕೆ ಮಹಾಕಾವ್ಯ ನೀಡಿದ ಕುವೆಂಪು ಅವರು ಆರಂಭದಲ್ಲಿ ಇಂಗ್ಲಿಷ್‌ನಲ್ಲೇ ಕವನ ಬರೆಯುತ್ತಿದ್ದರು. ಗುರು ಟಿ.ಎಸ್.ವೆಂಕಣ್ಣಯ್ಯ ಅವರ ಸಲಹೆ ಮೇರೆಗೆ ಮಾತೃಭಾಷೆ ಕನ್ನಡದಲ್ಲಿ ಬರೆಯಲು ಆರಂಭಿಸಿದರು ಎಂದರು.
ಲೇಖಕ ರಾ.ನಂ. ಚಂದ್ರಶೇಖರ್ ಮಾತನಾಡಿದರು. ಲೇಖಕ ಎಂ.ಎಸ್. ರಘುನಾಥ್, ಐಎಫ್ಎಸ್ ಅಧಿಕಾರಿ ಮನೋಜ್ ಕುಮಾರ್ ಶುಕ್ಲಾ, ಶಿಕ್ಷಕಿ ಎಸ್. ಕಾರ್ತಿಕಾ ಮತ್ತಿತರರು ಉಪಸ್ಥಿತರಿದ್ದರು.
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
Pro Hockey: ಇಂಗ್ಲೆಂಡ್ ವಿರುದ್ಧ ಭಾರತ ವನಿತೆಯರಿಗೆ ಸೋಲು
You seem to have an Ad Blocker on.
To continue reading, please turn it off or whitelist Udayavani.