ಒಂದು ದೇಶ; ಒಂದು ಕಾರ್ಡ್
Team Udayavani, Jun 2, 2019, 3:08 AM IST
ಬೆಂಗಳೂರು: ಅಂದುಕೊಂಡಂತೆ ಎಲ್ಲವೂ ನಡೆದರೆ, ದೆಹಲಿ ಮೆಟ್ರೋಗೆ ಬಳಸುವ ಕಾರ್ಡ್ ಅನ್ನು ಬೆಂಗಳೂರಿನ “ನಮ್ಮ ಮೆಟ್ರೋ’ದಲ್ಲೂ ತೋರಿಸಿ ಪ್ರಯಾಣಿಸಬಹುದು. ಅದೇ ಕಾರ್ಡ್‌ನಲ್ಲಿ ಬಿಎಂಟಿಸಿ ಬಸ್‌ಗಳಲ್ಲೂ ಓಡಾಡಬಹುದು!
ಹೌದು, ಒಂದು ದೇಶ; ಒಂದು ತೆರಿಗೆ ಆಯ್ತು. ಈಗ ಒಂದು ದೇಶ; ಒಂದು ಕಾರ್ಡ್ ಯೋಜನೆ ಬರುತ್ತಿದೆ. ನ್ಯಾಷನಲ್ ಕಾಮನ್ ಮೊಬಿಲಿಟಿ ಕಾರ್ಡ್ (ಎನ್‌ಸಿಎಂಸಿ) ಯೋಜನೆ ಅಡಿ ಭಾರತ್ ಎಲೆಕ್ಟ್ರಾನಿಕ್ಸ್ ಲಿ., (ಬಿಇಎಲ್) “ಸ್ವಾಗತ್’ ಎಂಬ ಆಟೋಮೆಟಿಕ್ ಫೇರ್ ಕಲೆಕ್ಷನ್ ಗೇಟ್‌ಗಳನ್ನು ಅಭಿವೃದ್ಧಿಪಡಿಸಿದ್ದು, ದೆಹಲಿ ಮೆಟ್ರೋ ನಿಲ್ದಾಣಗಳಲ್ಲಿ ಪ್ರಾಯೋಗಿಕವಾಗಿ ಅಳವಡಿಸಲು ನಿರ್ಧರಿಸಿದೆ. ಹಂತ ಹಂತವಾಗಿ ಇದನ್ನು ವಿಸ್ತರಿಸಲಿದೆ.
ಪ್ರಸ್ತುತ ಇರುವ ಮೆಟ್ರೋ ಗೇಟ್‌ಗಳು ಹೊರದೇಶಗಳಿಂದ ಆಮದು ಮಾಡಿಕೊಂಡಿದ್ದು, ಇದೇ ಮೊದಲ ಬಾರಿಗೆ ಸ್ವದೇಶಿ ಆಟೋಮೆಟಿಕ್ ಫೇರ್ ಗೇಟ್‌ಗಳನ್ನು ಅಳವಡಿಸಲಾಗುತ್ತಿದೆ. ಇವು “ಓಪನ್ ಲೂಪ್’ ವ್ಯವಸ್ಥೆ ಹೊಂದಿದ್ದು, ದೇಶದ ಇತರೆ ಮೆಟ್ರೋ, ನಗರ ಸಾರಿಗೆ ಬಸ್‌ಗಳಲ್ಲೂ ಉಪಯೋಗಿಸಬಹುದು. ಈ ಸಂಬಂಧ ಬ್ಯಾಂಕ್‌ಗಳೊಂದಿಗೂ ಒಪ್ಪಂದ ಮಾಡಿಕೊಳ್ಳಲಿದ್ದು, ಸದ್ಯ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಜತೆ ಒಡಂಬಡಿಕೆ ಮಾಡಿಕೊಳ್ಳಲಾಗಿದೆ ಎಂದು ಬಿಇಎಲ್ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ಎಂ.ವಿ. ಗೌತಮ ತಿಳಿಸಿದರು.
ಎಲ್ಲವೂ ಸ್ವದೇಶಿ; ಚಿಪ್ ವಿದೇಶಿ: ನಗರದ ಅಶೋಕ ಹೋಟೆಲ್‌ನಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಪ್ರಸಕ್ತ ಹಣಕಾಸು ವರ್ಷದಲ್ಲೇ ಈ ಮಾದರಿಯ ಗೇಟ್‌ಗಳನ್ನು ಅಳವಡಿಸುವ ಗುರಿ ಇದೆ. ಪ್ರತಿ ನಿಲ್ದಾಣಗಳಲ್ಲಿ ಎರಡರಿಂದ ಮೂರು ಗೇಟ್‌ಗಳು ಬರಲಿವೆ. ಈ ಗೇಟ್‌ಗಳ ಸಾಫ್ಟ್ವೇರ್, ವಿನ್ಯಾಸ ಎಲ್ಲವೂ ದೇಶೀಯವಾಗಿದೆ. ಆದರೆ, ಅದಕ್ಕೆ ಬಳಸುವ ಚಿಪ್ ಮಾತ್ರ ಹೊರದೇಶದ್ದಾಗಿದೆ. ಇದಕ್ಕೆ ಬಳಸುವ ಕಾರ್ಡ್ ಅನ್ನು ರಸ್ತೆ ಸಾರಿಗೆ, ಟೋಲ್‌ನಲ್ಲೂ ಬಳಸಬಹುದು. ಮಹಾರಾಷ್ಟ್ರದ ಮುಂಬೈ ರಸ್ತೆ ಸಾರಿಗೆ ಸಂಸ್ಥೆ ಕೂಡ ಈ ವ್ಯವಸ್ಥೆ ಅಳವಡಿಕೆಗೆ ಆಸಕ್ತಿ ತೋರಿಸಿದೆ ಎಂದು ಮಾಹಿತಿ ನೀಡಿದರು.
ಒಟ್ಟಾರೆ ಇದರ ಉದ್ದೇಶ ದೇಶದ ಇಡೀ ಸಾರಿಗೆ ವ್ಯವಸ್ಥೆಗೆ ಒಂದೇ ಮಾದರಿಯ ಕಾರ್ಡ್ ಪರಿಚಯಿಸುವುದಾಗಿದೆ. ನಮ್ಮ ಮೆಟ್ರೋ ಮತ್ತು ನಗರ ಬಸ್ ಸೇವೆಯಲ್ಲೂ ಮುಂದಿನ ದಿನಗಳಲ್ಲಿ ಇದು ಜಾರಿಗೆ ಬರಲಿದೆ ಎಂದು ಹೇಳಿದರು. ನಗರದಲ್ಲಿ ಬಿಎಂಟಿಸಿ ಹಾಗೂ ಬಿಎಂಆರ್‌ಸಿಎಲ್ ಸಂಯೋಗದಲ್ಲಿ ಕಾಮನ್ ಮೊಬಿಲಿಟಿ ಕಾರ್ಡ್ ಜಾರಿಗೊಳಿಸುವ ಯೋಜನೆ ಇದೆ. ಆದರೆ, ತಾಂತ್ರಿಕ ಕಾರಣಗಳಿಂದ ಇದು ಇನ್ನೂ ಸಾಧ್ಯವಾಗಿಲ್ಲ.
ಎಲೆಕ್ಟ್ರಿಕ್ ಕಾರುಗಳ ತಯಾರಿಕೆ ಯೋಚನೆ ಸದ್ಯಕ್ಕಿಲ್ಲ. ಈ ಕುರಿತು ಮುಂದಿನ ದಿನಗಳಲ್ಲಿ ಮಾರುಕಟ್ಟೆಯಲ್ಲಿನ ಬೇಡಿಕೆ ಆಧರಿಸಿ ನಿರ್ಧರಿಸಲಾಗುವುದು ಎಂದ ಅವರು, ಲೀಥಿಯಂ ಬ್ಯಾಟರಿಗೆ ಅಗತ್ಯವಿರುವ ಕಚ್ಚಾವಸ್ತು ಶೇ. 90ರಷ್ಟು ಚೀನಾದಲ್ಲೇ ಸಿಗುತ್ತದೆ. ಹಾಗಾಗಿ, ಈ ಮಾದರಿಯ ಬ್ಯಾಟರಿ ತಯಾರಿಕೆಗೆ ಚೀನಾ ಅವಲಂಬನೆ ಅನಿವಾರ್ಯ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು. ಸುದ್ದಿಗೋಷ್ಠಿಯಲ್ಲಿ ನಿರ್ದೇಶಕರಾದ ನಟರಾಜ್ ಕೃಷ್ಣಪ್ಪ, ಆನಂದಿ ರಾಮಲಿಂಗಂ ಮತ್ತಿತರರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Smart Bus Stan: ಕೋರಮಂಗಲದಲ್ಲಿ ಸ್ಮಾರ್ಟ್ ಬಸ್ ನಿಲ್ದಾಣ!
Bengaluru: ಇವಿ ಬೈಕ್ ಶೋರೂಮ್‌ನಲ್ಲಿ ಬೆಂಕಿ ಅವಘಡ; ಮಾಲೀಕ, ಮ್ಯಾನೇಜರ್ ಬಂಧನ, ಬಿಡುಗಡೆ
Bengaluru: ನಗರದಲ್ಲಿ ನಿಷೇಧಿತ ಕಲರ್ ಕಾಟನ್ ಕ್ಯಾಂಡಿ ತಯಾರಿಕಾ ಘಟಕ ಬಂದ್
Shobha Karandlaje: ಶೋಭಾ ಲೋಕಸಭಾ ಸದಸ್ಯತ್ವ ರದ್ದು ಕೋರಿ ಅರ್ಜಿ: ಡಿ.6ಕ್ಕೆ ವಿಚಾರಣೆ
Arrested: ನಕಲಿ ದಾಖಲೆ ನೀಡಿ ಟಿಡಿಎಸ್ ಪಡೆಯುತ್ತಿದ್ದ ಆರೋಪಿಯ ಬಂಧಿಸಿದ ಜಾರಿ ನಿರ್ದೇಶನಾಲಯ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.