ದೀಪಾವಳಿಗೆ ಕಳೆಗಟ್ಟಿದ ಮಾರುಕಟ್ಟೆ
ಹೂ-ಹಣ್ಣು, ತರಕಾರಿ, ಪಟಾಕಿ, ದೀಪಗಳ ಖರೀದಿ ಜೋರು | ನಗರದಲ್ಲಿ ಮೂಡಿದ ಹಬ್ಬದ ಕಳೆ
Team Udayavani, Nov 3, 2021, 10:17 AM IST
ಬೆಂಗಳೂರು: ನಗರದಲ್ಲಿ ಕೊರೊನಾ ಸೋಂಕು ಕಡಿಮೆಯಾಗಿರುವ ಪರಿಣಾಮ, ಮಾರುಕಟ್ಟೆಗಳಲ್ಲಿ ದೀಪಾವಳಿ ಖರೀದಿ ಭರಾಟೆ ಮಂಗಳವಾರ ಜೋರಾಗಿಯೇ ಇತ್ತು. ಮೊದಲ ವಾರವೇ ಹಬ್ಬ ಇರುವುದರಿಂದ ಮಾರುಕಟ್ಟೆಗಳು ಕಳೆಗಟ್ಟಿವೆ. ಹೂ, ಹಣ್ಣು, ತರಕಾರಿ, ಪಟಾಕಿ, ದೀಪಗಳ ಖರೀದಿ ಸೇರಿದಂತೆ ಇನ್ನಿತರ ವಸ್ತುಗಳ ಖರೀದಿ ದೀಪಾವಳಿ ಸಂಭ್ರಮ ಭರ್ಜರಿಯಾಗಿದೆ. ಬುಧವಾರದಿಂದ ಶುಕ್ರವಾರ (ಬುಧವಾರ ನರಕ ಚತುರ್ದಶಿ, ಗುರುವಾರ ಅಮಾವಾಸ್ಯೆ-ಲಕ್ಷ್ಮೀಪೂಜೆ, ಶುಕ್ರವಾರ ಬಲಿಪಾಡ್ಯಮಿ)ದವರೆಗೆ ಅಂದರೆ ಮೂರು ದಿನಗಳ ಕಾಲ ನಡೆಯುವ ದೀಪಾವಳಿ ಹಬ್ಬಕ್ಕೆ ನಗರದಲ್ಲಿ ಮಂಗಳವಾರ ಖರೀದಿಯ ಭರಾಟೆ ಜೋರಾಗಿಯೇ ಶುರುವಾಗಿದೆ.
ದಸರಾ ಹಬ್ಬದಲ್ಲಿ ಮಳಿಗೆ, ವಾಹನಗಳಿಗೆ ಪೂಜೆ ಮಾಡದವರು ಇದೀಗ ದೀಪಾವಳಿಯಲ್ಲಿ ಮಾಡುತ್ತಾರೆ. ಹೀಗಾಗಿ ಬೂದುಕುಂಬಳ, ನಿಂಬೆಹಣ್ಣುಗಳಿಗೂ ಬೇಡಿಕೆ ಇದೆ. ಕಳೆದ ವರ್ಷ ಕೊರೊನಾ ಎರಡನೇ ಅಲೆಯ ಅಬ್ಬರವಿತ್ತು. ಹೀಗಾಗಿ, ಜನರು ದೀಪಾವಳಿಯನ್ನು ಸಂಭ್ರಮಿಸಿರಲಿಲ್ಲ. ಆದರೆ, ಈ ಬಾರಿ ಸೋಂಕು ನಿಯಂತ್ರ ಣದಲ್ಲಿರುವುದರಿಂದ ಜನರು ಮಾರುಕಟ್ಟೆಗಳಲ್ಲಿ ಮುಗಿಬಿದ್ದು ವಸ್ತುಗಳನ್ನು ಖರೀದಿಸಿದರು. ಮನೆ ಬಾಗಿಲಿನಲ್ಲಿ ಹಚ್ಚುವ ದೀಪಗಳನ್ನು 3 ರೂ. ಗಳಿಂದ 200 ರೂ.ವರೆಗಿನ ಗ್ರಾಹಕರನ್ನು ಆಕರ್ಷಿಸುತ್ತಿ ದ್ದವು.
ಇದನ್ನೂ ಓದಿ:- ಭಾರತದಲ್ಲಿ 11,903 ಕೋವಿಡ್ ಪ್ರಕರಣ ಪತ್ತೆ, ಸಕ್ರಿಯ ಪ್ರಕರಣ ಭಾರೀ ಇಳಿಕೆ
ಜತೆಗೆ ಬಗೆ ಬಗೆಯ ವಿನ್ಯಾಸ ಮತ್ತು ಬಣ್ಣದ ಆಕಾಶ ಬುಟ್ಟಿಗಳು ಕೂಡ ಮಳಿಗೆಗಳಲ್ಲಿ ರಾರಾಜಿಸು ತ್ತಿದ್ದು, ಗ್ರಾಹಕರು ಖುಷಿಯಿಂದ ಖರೀದಿಸುತ್ತಿದ್ದರು. ಹಬ್ಬಕ್ಕೆಂದೇ ನಗರದ ನಾನಾ ಬಡಾವಣೆಗಳಲ್ಲಿ ಮಾರಾಟ ಮಳಿಗೆಗಳನ್ನು ತೆರೆಯಲಾಗಿದೆ. ಮತ್ತೂಂದೆಡೆ ಸಿಹಿ ತಿನಿಸು ಮಳಿಗೆಗಳು ಜನ ದಟ್ಟಣೆಯಿಂದ ಕೂಡಿವೆ. ಉಡುಗೊರೆಗಳ ಖರೀದಿಯ ಅಬ್ಬರವೂ ಕಾಣುತ್ತಿತ್ತು.
ಮಲ್ಲಿಗೆ ದುಬಾರಿ, ಕುಸಿದ ಸೇವಂತಿಗೆ
ಮತ್ತೂಂದೆಡೆ ಹಬ್ಬಕ್ಕೆ ಬೇಕಾದ ಹೂವು, ಹಣ್ಣುಗಳ ಖರೀದಿಯೂ ನಡೆಯುತ್ತಿದೆ. ಮಲ್ಲಿಗೆ ಹೂವು ಸೀಸನ್ ಮುಗಿದಿರುವುದರಿಂದ ಮಲ್ಲಿಗೆ ಮೊಗ್ಗು ಕೆ.ಜಿ.ಗೆ 1000-1200 ರೂ. ಇದೆ. ಕನಕಾಂಬರ ಹೂವು ಕೂಡ ಕೆ.ಜಿ.ಗೆ 1000 ರಿಂದ 1300 ರೂ.ವರೆಗೆ ದರವಿದೆ. ಆದರೆ, ಸೇವಂತಿಗೆ ಹೂವು ಕಳೆದ ಒಂದೂವರೆ ತಿಂಗಳಲ್ಲಿ ಇಳಿಕೆಯಾಗಿದ್ದು, ಮತ್ತೆ ಏರಿಕೆಯಾಗಲಿಲ್ಲ. ಹೀಗಾಗಿ, ಕೆ.ಆರ್. ಮಾರುಕಟ್ಟೆಯಲ್ಲಿ ಸಗಟು ದರದಲ್ಲಿ ಕೆ.ಜಿ.ಗೆ 30-60 ರೂ. ದರವಿದೆ.
ಕಾಕಡ 300-400 ರೂ., ಸುಗಂಧ ರಾಜ 60 ರೂ. ಇದೆ ಎನ್ನುತ್ತಾರೆ ಕೆ.ಆರ್. ಮಾರುಕಟ್ಟೆ ಸಗಟು ಹೂವಿನ ಮಾರಾಟಗಾರರದ ರವಿಕುಮಾರ್. ಹಣ್ಣುಗಳ ದರವೂ ಕಡಿಮೆಯಾಗಿದೆ. ಏಲಕ್ಕಿ ಬಾಳೆ ಕೆ.ಜಿ.ಗೆ 60 ರೂ. ಇದ್ದರೆ, ಸೇಬು 120 ರೂ., ಕಿತ್ತಳೆ ಹಣ್ಣು 40-50 ರೂ. ದರವಿದೆ. ಹೀಗಾಗಿ, ಗ್ರಾಹಕರಿಗೆ ಹೆಚ್ಚಿನ ಹೊರೆಯಿಲ್ಲ. ಟೊಮೇಟೊ ದರ ಕೂಡ ಕಳೆದ ಎರಡು ವಾರಗಳ ಹಿಂದೆ ಕೆ.ಜಿ.ಗೆ 60 ರೂ. ಇದ್ದುದು ಇದೀಗ ಸ್ವಲ್ಪ ಇಳಿಕೆಯಾಗಿದೆ. ಕೆ.ಜಿ.ಗೆ 40 ರೂ.ಗೆ ಮಾರಾಟವಾಗುತ್ತಿದೆ ಎಂದು ಹಣ್ಣು-ತರಕಾರಿ ಮಾರಾಟಗಾರ ರಾಮು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Adalat: ಲೋಕ್ ಅದಾಲತ್‌ನಲ್ಲಿ 38.8 ಲಕ್ಷ ವ್ಯಾಜ್ಯ ಇತ್ಯರ್ಥ
Bengaluru: ಒಬಾಮಾ ಭೇಟಿ ವೇಳೆ ಸ್ಫೋಟ ಸಂಚು: ಡಿ.23ಕ್ಕೆ ಶಿಕ್ಷೆ ಪ್ರಕಟ
Fraud: ಸಿಬಿಐ ಸೋಗಿನಲ್ಲಿ ವೃದ್ಧೆಗೆ 1.24 ಕೋಟಿ ರೂ. ವಂಚನೆ
BSY: ಬಿಎಸ್‌ವೈ ತಪ್ಪೊಪ್ಪಿಕೊಂಡಿರುವುದಾಗಿ ಸಂತ್ರಸ್ತೆ ಹೇಳಿಕೆ ದಾಖಲು: ಎಸ್‌ಪಿಪಿ
IPS officer D. Roopa: ಸಿಂಧೂರಿ ಮೇಲೆ ಮಾನನಷ್ಟ ಪ್ರಕರಣ ದಾಖಲಿಸಿದ ರೂಪಾ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.