Manipal Hospitals; ಹಿರಿಯ ನಾಗರಿಕರಿಗೆ ಆಲ್ಝೈಮರ್ಸ್ ಕಾಯಿಲೆಯ ಕುರಿತು ತಜ್ಞರೊಂದಿಗೆ ಚರ್ಚೆ


Team Udayavani, Sep 28, 2024, 7:14 PM IST

Manipal Hospitals; ಹಿರಿಯ ನಾಗರಿಕರಿಗೆ ಆಲ್ಝೈಮರ್ಸ್ ಕಾಯಿಲೆಯ ಕುರಿತು ತಜ್ಞರೊಂದಿಗೆ ಚರ್ಚೆ

ಬೆಂಗಳೂರು: ವಿಶ್ವ ಅಲ್ಝೈ ಮರ್ಸ್ ಜಾಗೃತಿ ತಿಂಗಳ ಸಂದರ್ಭದಲ್ಲಿ ಸರ್ಜಾಪುರದ ಮಣಿಪಾಲ ಆಸ್ಪತ್ರೆಯು ಹಿರಿಯ ನಾಗರಿಕರಿಗಾಗಿ ‘ತಜ್ಞರೊಂದಿಗೆ ಮಾತುಕತೆ’ಯನ್ನು ನಡೆಸಿತು. ಪ್ರಪಂಚದಾದ್ಯಂತ ಲಕ್ಷಾಂತರ ಜನರ ಮೇಲೆ ಪರಿಣಾಮ ಬೀರುವ ಗಂಭೀರ ಸ್ಥಿತಿಯಾದ ಆಲ್ಝೈಮರ್ ಕಾಯಿಲೆಯ ಬಗ್ಗೆ ಪ್ರಮುಖ ವಿಷಯಗಳನ್ನು ಚರ್ಚಿಸಲು ಅನುಭವಿ ನ್ಯೂರೋಲಾಜಿಸ್ಟ್‌ಗಳು ಮತ್ತು ನ್ಯೂರೋಸೈಕೋಲಾಜಿಸ್ಟ್‌ಗಳು ಒಟ್ಟಾಗಿ ಸೇರಿ ಇದರ ಬಗ್ಗೆ ಚರ್ಚಿಸಿದರು.

ಈ ಕಾರ್ಯಕ್ರಮವು ಜಾಗೃತಿ ಮೂಡಿಸಲು ಮತ್ತು ಆಲ್ಝೈಮರ್ ಕಾಯಿಲೆಯನ್ನು ತಡೆಗಟ್ಟುವ ಮತ್ತು ಚಿಕಿತ್ಸೆ ನೀಡುವ ವಿಧಾನಗಳ ಕುರಿತು ಚರ್ಚೆಗಳಿಗೆ ವೇದಿಕೆಯನ್ನು ಸೃಷ್ಟಿಸುವ ಗುರಿಯನ್ನು ಹೊಂದಿದೆ. ಈ ವರ್ಷದ ಥೀಮ್ ಎರಡು ಮುಖ್ಯ ವಿಷಯಗಳ ಮೇಲೆ ಗಮನಹರಿಸುತ್ತದೆ: ಆಲ್ಝೈಮರ್ ಕಾಯಿಲೆ ತಡೆಗಟ್ಟುವಿಕೆ ಮತ್ತು ಚಿಕಿತ್ಸೆ ವಿಧಾನಗಳು, ಮತ್ತು ಚಿಕಿತ್ಸೆಗೆ ಮಾನಸಿಕ ವಿಧಾನಗಳು.

ತಜ್ಞರ ಸಮಿತಿಯಲ್ಲಿ ಮಣಿಪಾಲ್ ಆಸ್ಪತ್ರೆಯಿಂದ ಡಾ.ಶಿವಕುಮಾರ ಆರ್, ಹೆಡ್ ಮತ್ತು ಹಿರಿಯ ಕನ್ಸಲ್ಟೆಂಟ್ ನ್ಯೂರೊಲೊಜಿ, ಡಾ. ಶ್ವೇತಾ ಕಡಬ, ಕನ್ಸಲ್ಟೆಂಟ್   ನ್ಯೂರೋಸೈಕಾಲಜಿಸ್ಟ್, ಡಾ. ಲಕ್ಷ್ಮೀ ಕೃಷ್ಣ ವಿ, ಕನ್ಸಲ್ಟೆಂಟ್ ನ್ಯೂರೊಲೊಜಿ ಮತ್ತು ಡಾ. ಆದಿತ್ಯ ಕುಲಕರ್ಣಿ, ಕನ್ಸಲ್ಟೆಂಟ್ ನ್ಯೂರೊಲೊಜಿ ಇವರುಗಳು ಆಲ್ಝೈಮರ್ ಕಾಯಿಲೆಯ ಇತ್ತೀಚಿನ ಸಂಶೋಧನೆಯ ಬಗ್ಗೆ ಮಾತನಾಡಿ, ವೈದ್ಯಕೀಯ ಮತ್ತು ಮಾನಸಿಕ ಆರೋಗ್ಯ ಚಿಕಿತ್ಸೆಗಳ ಮೇಲೆ ಕೇಂದ್ರೀಕರಿಸುವ ಮೂಲಕ ಹೇಗೆ ರೋಗದ ಪ್ರಗತಿಯನ್ನು ನಿಧಾನಗೊಳಿಸಬಹುದು ಮತ್ತು ರೋಗಿಗಳ ಜೀವನದ ಗುಣಮಟ್ಟವನ್ನು ಸುಧಾರಿಸಬಹುದು ಎಂದು ತಿಳಿಸಿದರು.

ಆರಂಭಿಕ ಹಂತದ ಪತ್ತೆ, ತಡೆಗಟ್ಟುವ ವಿಧಾನಗಳು ಮತ್ತು ಪರಿಣಾಮಕಾರಿ ಚಿಕಿತ್ಸೆಯನ್ನು ನೀಡಲು ನಡೆಯುತ್ತಿರುವ ಸಂಶೋಧನೆಯ ಅಗತ್ಯವನ್ನು ಕಾರ್ಯಕ್ರಮವು ಎತ್ತಿ ತೋರಿಸಿದೆ. ಡಾ.ಶಿವ ಕುಮಾರ್ ಆರ್ ಅವರು ಕಾಯಿಲೆ, ಅದು ತರುವ ಸವಾಲುಗಳು ಮತ್ತು ರೋಗಿಗಳು ಮತ್ತು ಆರೈಕೆ ಮಾಡುವವರಿಗೆ ಸಮುದಾಯದ ಬೆಂಬಲದ ಅಗತ್ಯತೆಯ ಕುರಿತು ಮಾತನಾಡುತ್ತಾ, “ಮರೆಗುಳಿತನ 60 ರಿಂದ 80 ಪ್ರತಿಶತ ಆಲ್ಝೈಮರ್ ಕಾಯಿಲೆಯ ಪ್ರಕರಣಗಳಿಗೆ ಕಾರಣವಾಗಿದೆ, ಮತ್ತು ಇದು ಪ್ರಪಂಚದಾದ್ಯಂತ ಲಕ್ಷಾಂತರ ಜನರ ಮೇಲೆ ಪರಿಣಾಮ ಬೀರುತ್ತದೆ ಮತ್ತು ರೋಗಿಗಳು ಮತ್ತು ಅವರ ಆರೈಕೆದಾರರಿಗೆ ಗಮನಾರ್ಹ ಸವಾಲುಗಳನ್ನು ಒಡ್ಡುತ್ತದೆ. ಆಲ್ಝೈಮರ್ ಅನ್ನು ತಡೆಗಟ್ಟುವುದು ಅಥವಾ ಸೋಲಿಸುವುದು ಅಸಾಧ್ಯವೆಂದು ಹಲವು ಜನರು ಭಾವಿಸುತ್ತಾರೆ, ಆದರೆ ಅದರ ಪ್ರಭಾವವನ್ನು ಕಡಿಮೆ ಮಾಡಲು ಮತ್ತು ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕಾಗಿ ಆರಂಭಿಕ ಹಂತದ ಆರೈಕೆಯನ್ನು ಮಾಡಲು ಒಂದು ಸಮುದಾಯವಾಗಿ ನಾವು ಬಹಳಷ್ಟು ಕೆಲಸ ಮಾಡಬಹುದು,” ಎಂದರು.

ಆಲ್ಝೈಮರ್ ಕಾಯಿಲೆಯು ದೈನಂದಿನ ಕೆಲಸಗಳನ್ನು ಮಾಡುವ ವ್ಯಕ್ತಿಯ ಸಾಮರ್ಥ್ಯದ ಮೇಲೆ ಪರಿಣಾಮ ಬೀರಬಹುದು. ಡಾ.ಶ್ವೇತಾ ಕಡಬ ಮಾತನಾಡಿ, “ಮರೆಗುಳಿತನವು ರೋಗಿಗಳ ಕುಟುಂಬಗಳು ಮತ್ತು ಅರೋಗ್ಯ ಸೇವಾ ಆರೈಕೆದಾರರ ಮೇಲೆ ದೊಡ್ಡ ಒತ್ತಡವನ್ನು ಉಂಟುಮಾಡುತ್ತದೆ ಏಕೆಂದರೆ ಮರೆಗುಳಿತನ ಹೊಂದಿರುವ ಜನರು ಪರಿಸ್ಥಿತಿಯು ಹದಗೆಟ್ಟಾಗ ತಮ್ಮನ್ನು ತಾವು ಕಾಳಜಿ ವಹಿಸುವ ಸಾಮರ್ಥ್ಯವನ್ನು ನಿಧಾನವಾಗಿ ಕಳೆದುಕೊಳ್ಳುತ್ತಾರೆ,” ಎಂದರು.

ರೋಗದ ಸುತ್ತಲೂ ಇರುವ ತಪ್ಪು ಕಲ್ಪನೆಗಳು ಜನರ ಆರೋಗ್ಯ ಮತ್ತು ಯೋಗಕ್ಷೇಮದ ಮೇಲೆ ಪರಿಣಾಮ ಬೀರುತ್ತದೆ. ಹಾಗಾಗಿ ನಾವು ಇವರಿಗೆ ಉತ್ತಮ ಬೆಂಬಲ ಮತ್ತು ಸೌಲಭ್ಯಗಳನ್ನು ಒದಗಿಸಬೇಕಾಗಿದೆ. ಇದರ ಬಗ್ಗೆ ಪ್ರತಿಕ್ರಿಯಿಸಿದ ಡಾ.ಲಕ್ಷ್ಮೀಕೃಷ್ಣ ವಿ ಮಾತನಾಡಿ, “ಮರೆಗುಳಿತನವು ಆಲ್ಝೈಮರ್ ನ ಒಂದು ಸಾಮಾನ್ಯ ರೋಗಲಕ್ಷಣವಾಗಿದೆ. ಆಲ್ಝೈಮರ್ ಜ್ಞಾಪಕ ಶಕ್ತಿ, ಆಲೋಚನೆ ಮತ್ತು ದೈನಂದಿನ ಚಟುವಟಿಕೆಗಳ ಮೇಲೆ ಪರಿಣಾಮ ಬೀರುತ್ತದೆ ಏಕೆಂದರೆ ಅಮಿಲಾಯ್ಡ್ ಪ್ಲೇಕ್‌ಗಳು ಮತ್ತು ಟೌ ಪ್ರೋಟೀನ್ ಗಳು ಮೆದುಳಿನ ಚಟುವಟಿಕೆಗಳನ್ನು ದುರ್ಬಲಗೊಳಿಸುತ್ತದೆ. ಈ ವರ್ಷದ ಥೀಮ್: ಮರೆಗುಳಿತನದ ವಿರುದ್ಧ ಹೋರಾಡುವ ಸಮಯ, ಆಲ್ಝೈಮರ್ ವಿರುದ್ಧ ಹೋರಾಡುವ ಸಮಯ. ಈ ಕಾರ್ಯಕ್ರಮವು ತಪ್ಪು ಕಲ್ಪನೆಗಳನ್ನು ಕಡಿಮೆ ಮಾಡಲು ಮತ್ತು ಆರೈಕೆ ಮಾಡುವವರಿಗೆ ಸಹಾಯ ಒದಗಿಸುವ ಗುರಿಯನ್ನು ಹೊಂದಿದೆ. ಏಕೆಂದರೆ ರೋಗಿಗಳು, ಆಗಾಗ್ಗೆ ಭಾರೀ ಭಾವನಾತ್ಮಕ, ದೈಹಿಕ ಮತ್ತು ಆರ್ಥಿಕ ಸವಾಲುಗಳನ್ನು ಎದುರಿಸುತ್ತಾರೆ, ಇದು ಒತ್ತಡ ಮತ್ತು ಒಂಟಿತನಕ್ಕೆ ಕಾರಣವಾಗಬಹುದು” ಎಂದರು.

ಈ ಪರಿಸ್ಥಿತಿಯಲ್ಲಿ ಹಲವಾರು ಬಗೆಯ ಭಾವನೆಗಳನ್ನು ಅನುಭವಿಸುವುದು ಸಾಮಾನ್ಯವಾಗಿದೆ, ಮತ್ತು ಈ ಭಾವನೆಗಳನ್ನು ನಿರ್ವಹಿಸುವುದು ನಿಮ್ಮ ಜೀವನ ಮತ್ತು ಆರೋಗ್ಯದ ಮೇಲೆ ಹೆಚ್ಚು ನಿಯಂತ್ರಣವನ್ನು ಪಡೆಯಲು ಸಹಾಯ ಮಾಡುತ್ತದೆ. ಡಾ.ಆದಿತ್ಯ ಕುಲಕರ್ಣಿ ಮಾತನಾಡಿ, “ಬುದ್ಧಿಮಾಂದ್ಯತೆಯ ಆರಂಭಿಕ ಹಂತಗಳಲ್ಲಿ, ಅನೇಕ ಜನರು ಬೇರೆಯವರ ಸಹಾಯವಿಲ್ಲದೆ ಬದುಕಬಹುದು, ಆದರೆ ಶುಚಿ ನಿರ್ವಹಣೆ, ಅಡುಗೆ ಮಾಡುವುದು ಮತ್ತು ಬಿಲ್‌ಗಳನ್ನು ಪಾವತಿಸುವಂತಹ ನಿತ್ಯದ ಕೆಲಸಗಳಲ್ಲಿ ಅವರಿಗೆ ಸಹಾಯ ಬೇಕಾಗಬಹುದು. ಸಮಯ ಕಳೆದಂತೆ ಪರಿಸ್ಥಿತಿಯು ಹದಗೆಡುವುದರಿಂದ ಭವಿಷ್ಯದ ಅಗತ್ಯಗಳಿಗಾಗಿ ಕುಟುಂಬದ ಸದಸ್ಯರು ಅಥವಾ ಸ್ನೇಹಿತರ ಸಹಾಯವನ್ನು ಪಡೆಯಬಹುದು” ಎಂದರು.

ಟಾಪ್ ನ್ಯೂಸ್

1-asasa

Viksit Bharat ‘ಯಂಗ್‌ ಲೀಡರ್ ಡೈಲಾಗ್‌’:ಉಡುಪಿಯ ಮನು ಶೆಟ್ಟಿ ಆಯ್ಕೆ

chowta-Rajnath

Request: ಮಂಗಳೂರಿನಲ್ಲಿ ಸೈನಿಕ ಶಾಲೆ, ಮಿಲಿಟರಿ ನೆಲೆ ಸ್ಥಾಪಿಸಿ: ಕ್ಯಾ.ಬ್ರಿಜೇಶ್‌ ಚೌಟ

1-us

Dating Apps; ಯುಎಸ್ ಮಾಡೆಲ್ ಎಂದು 700ಕ್ಕೂ ಹೆಚ್ಚು ಯುವತಿಯರಿಗೆ ವಂಚಿಸಿದವ ಕೊನೆಗೂ ಬಲೆಗೆ

1-car

Mangaluru: ಚಲಿಸುತ್ತಿದ್ದ ಕಾರಿಗೆ ಹೊತ್ತಿಕೊಂಡ ಬೆಂಕಿ

1-sdasad

Shivamogga: ಭದ್ರಾ ಜಲಾಶಯದ ಎಡದಂಡೆ ನಾಲೆಗೆ ಇಂದಿನಿಂದಲೇ ನೀರು

1-atul-subhash

Atul Subhash ಆತ್ಮಹ*ತ್ಯೆ ಪ್ರಕರಣ: ಪತ್ನಿ, ಕುಟುಂಬದವರಿಗೆ ಜಾಮೀನು ಮಂಜೂರು

arrested

Vijayapura; ವಿದ್ಯಾರ್ಥಿನಿಯರಿಗೆ ಲೈಂಗಿ*ಕ ಕಿರುಕುಳ: ಸರಕಾರಿ ಕಾಲೇಜು ಪ್ರಾಂಶುಪಾಲ ಸೆರೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

20-water-price

Water Price Hike: ಬಸ್‌ ದರ ಏರಿಕೆ ಬೆನ್ನಲ್ಲೇ ನೀರಿನ ಬೆಲೆ ಹೆಚ್ಚಳ ಬಿಸಿ?

19-bng

Cyber ಕೈಚಳಕ: 2.47 ಕೋಟಿ ರೂ. ವಂಚನೆ

18-bng

Bengaluru: ಪೊಲೀಸ್‌ ಮೇಲೆ ಹಲ್ಲೆ ನಡೆಸಿದ್ದ ವಿದೇಶಿ ಪ್ರಜೆ ಸೆರೆ

17-bng

Bengaluru: ಅನಧಿಕೃತ ಕಾಲ್‌ಸೆಂಟರ್‌ ಮೇಲೆ ಪೊಲೀಸರ ದಾಳಿ: ಇಬ್ಬರ ಬಂಧನ

16-bng

Bengaluru: ಪ್ರೀತಿಸಿದವಳು ದೂರಾಗಿದ್ದಕ್ಕೆ ಯುವಕ ಆತ್ಮಹತ್ಯೆ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Kaup: ಕಾಪು ಯೋಜನಾ ಪ್ರಾಧಿಕಾರದ ಅಧ್ಯಕ್ಷರಾಗಿ ವಿಕ್ರಂ ಕಾಪು ನೇಮಕ

Kaup: ಕಾಪು ಯೋಜನಾ ಪ್ರಾಧಿಕಾರದ ಅಧ್ಯಕ್ಷರಾಗಿ ವಿಕ್ರಂ ಕಾಪು ನೇಮಕ

1-asasa

Viksit Bharat ‘ಯಂಗ್‌ ಲೀಡರ್ ಡೈಲಾಗ್‌’:ಉಡುಪಿಯ ಮನು ಶೆಟ್ಟಿ ಆಯ್ಕೆ

chowta-Rajnath

Request: ಮಂಗಳೂರಿನಲ್ಲಿ ಸೈನಿಕ ಶಾಲೆ, ಮಿಲಿಟರಿ ನೆಲೆ ಸ್ಥಾಪಿಸಿ: ಕ್ಯಾ.ಬ್ರಿಜೇಶ್‌ ಚೌಟ

12

ಕಾಪು ಶ್ರೀಹೊಸ ಮಾರಿಗುಡಿ ದೇವಸ್ಥಾನ: ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಪೂರ್ವಭಾವಿ ಸಮಾಲೋಚನಾ ಸಭೆ

1-us

Dating Apps; ಯುಎಸ್ ಮಾಡೆಲ್ ಎಂದು 700ಕ್ಕೂ ಹೆಚ್ಚು ಯುವತಿಯರಿಗೆ ವಂಚಿಸಿದವ ಕೊನೆಗೂ ಬಲೆಗೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.