ಏರೋ ಇಂಡಿಯಾ ಶೋಗೆ ಅದ್ಧೂರಿ ತೆರೆ
Team Udayavani, Feb 18, 2023, 11:35 AM IST
ಬೆಂಗಳೂರು: ಅತ್ತ ಗೋಧೂಳಿಯ ಸಮಯದಲ್ಲಿ ನಿಧಾನವಾಗಿ ಸೂರ್ಯ ಪಶ್ಚಿಮದ ಕಡೆಗೆ ಜಾರುತ್ತಿದ್ದ. ಇತ್ತ ಲೋಹದ ಹಕ್ಕಿಗಳು ನೆರೆದ ಸಾವಿರಾರು ಜನರನ್ನು ರಂಜಿಸಿ ಅದೇ ದಿಕ್ಕಿನಲ್ಲಿ ಮರೆಯಾದವು. ಕರತಾಡನ, ಸಿಳ್ಳೆ-ಕೇಕೆಯೊಂದಿಗೆ ಪ್ರೇಕ್ಷಕರು ಅವುಗಳನ್ನು ಒಲ್ಲದ ಮನಸ್ಸಿನಿಂದಲೇ ಬೀಳ್ಕೊಟ್ಟರು.
ಯಲಹಂಕ ವಾಯುನೆಲೆಯಲ್ಲಿ 5 ದಿನಗಳ ಕಾಲ ಠಿಕಾಣಿ ಹೂಡಿದ್ದ ದೇಶ-ವಿದೇಶದಿಂದ ಬಂದ ತರಹೇವಾರಿ ಲೋಹದಹಕ್ಕಿಗಳು ತಮ್ಮ ಚಿನ್ನಾಟ ಮುಗಿಸಿ ಶುಕ್ರವಾರ ಸಂಜೆ ಗೂಡುಗಳತ್ತ ಪ್ರಯಾಣ ಬೆಳೆಸಿದವು. ಇದರೊಂದಿಗೆ ಏಷ್ಯಾದ ಅತಿದೊಡ್ಡ ವೈಮಾನಿಕ ಪ್ರದರ್ಶನ ಏರೋ ಇಂಡಿಯಾ ಶೋ 14ನೇ ಆವೃತ್ತಿಗೆ ಅದ್ಧೂರಿ ತೆರೆಬಿದ್ದಿತು.
ವೈಮಾನಿಕ ಪ್ರದರ್ಶನದ ಮೊದಲ 3 ದಿನ ವಹಿವಾಟಿಗೆ ಸೀಮಿತವಾಗಿದ್ದ ಏರೋ ಇಂಡಿಯಾ, ಕೊನೆಯ 2 ದಿನ ಸಾರ್ವಜನಿಕರ ವೀಕ್ಷಣೆಗೆ ಅವಕಾಶ ನೀಡಲಾಗಿತ್ತು. ಈ 5 ದಿನಗಳಲ್ಲಿ ಅಂದಾಜು 6.5 ಲಕ್ಷ ಜನ ಸಾಕ್ಷಿಯಾದರು. ಈ ಪೈಕಿ ಮೊದಲ 3 ದಿನ ದೇಶ ವಿದೇಶ ಸೇರಿದಂತೆ 2 ಲಕ್ಷಕ್ಕೂ ಅಧಿಕ ಉದ್ಯಮಿಗಳು, ವ್ಯಾಪಾರಿಗಳು, ವಾಯು, ನೌಕ ಹಾಗೂ ಭೂಸೇನೆಯ ಅಧಿಕಾರಿ ಸಿಬ್ಬಂದಿಗಳು ಭೇಟಿ ನೀಡಿದರೆ, ಕೊನೆಯ 2 ದಿನ ನಾಲ್ಕು ಲಕ್ಷಕ್ಕೂ ಅಧಿಕ ಸಾರ್ವಜನಿಕರು ಭೇಟಿ ನೀಡಿದ್ದಾರೆ.
ಇನ್ನು 14ನೇ ಆವೃತ್ತಿಯಲ್ಲಿ 201 ಒಪ್ಪಂದಗಳು ಸೇರಿದಂತೆ 266 ಸಹಭಾಗಿತ್ವದೊಂದಿಗೆ 80 ಸಾವಿರ ಕೋಟಿ ರೂ. ಬಂಡವಾಳ ಹರಿದು ಬರಲಿದೆ. 53 ಪ್ರಮುಖ ಘೋಷಣೆಗಳಾಗಿದ್ದು, 9 ಉತ್ಪನ್ನ ಬಿಡುಗಡೆ ಮಾಡಲಾಯಿತು. ಈ ಪೈಕಿ ಕರ್ನಾಟಕದೊಂದಿಗೆ 2,900 ಕೋಟಿ ರೂ. ಮೊತ್ತದ 32 ಒಪ್ಪಂದಗಳಾಗಿವೆ. ಏರೋ ಇಂಡಿಯಾದಲ್ಲಿ ಒಟ್ಟು 811 ಪ್ರದರ್ಶಕರು ಭಾಗವಹಿಸಿದ್ದು, ಈ ಪೈಕಿ 110 ವಿದೇಶಿ ಕಂಪನಿ ಹಾಗೂ ರಕ್ಷಣಾ ಇಲಾಖೆಗಳಿವೆ.
ಉಳಿದಂತೆ 701 ಸ್ವದೇಶಿ ಉದ್ಯಮಿಗಳು ಭಾಗವಹಿಸಿದ್ದವು. 5 ದಿನಗಳು ನಡೆಯುವ ಏರೋ ಶೋನಲ್ಲಿ ಮೊದಲ 3 ದಿನಗಳು (ಫೆ.13-15) ಬ್ಯುಸಿನೆಸ್‌ಗೆ ಮೀಸಲಿಡಲಾಗಿತ್ತು. ಈ ವೇಳೆ ಸಿಇಒ ಕಾನ್‌ಕ್ಲೇವ್, ರಕ್ಷಣಾ ಸಚಿವರ ಕಾನ್‌ಕ್ಲೇವ್, ಮಂಥನ್, ಬಂಧನ್ ಸೇರಿದಂತೆ ಮೊದಲಾದ ಸಭೆ- ಸಮಾರಂಭಗಳು ನಡೆದವು.
ಈ ಕಾರ್ಯಕ್ರಮಗಳಿಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅಧ್ಯಕ್ಷತೆ ವಹಿಸಿದ್ದರು. ಈ ಕಾರ್ಯಕ್ರಮಗಳಲ್ಲಿ 32 ವಿದೇಶಿ ರಕ್ಷಣಾ ಸಚಿವರು, 29 ಏರ್‌ಚೀಫ್, ಪ್ರಮುಖ ಸಂಶೋಧನೆ ಮತ್ತು ಅಭಿವೃದ್ಧಿ, ಜೆವಿ, ತರಬೇತಿ, ಸ್ಪೇಸ್, ಎಐ, ಸೈಬರ್ ಸೆಕ್ಯೂರಿಟಿ ಸಂಸ್ಥೆಗಳ ಮುಖ್ಯಸ್ಥರು ಭಾಗಹಿಸಿದ್ದರು.
ಕೊನೆಯ 2 ದಿನ ಯಾವುದೇ ಸಭೆ ಸಮಾರಂಭ ಇರಲಿಲ್ಲ. ಪ್ರತಿ ಏರೋ ಶೋದಲ್ಲಿ ಬೆಳಗ್ಗೆ ಮತ್ತು ಮಧ್ಯಾಹ್ನ ಹೀಗೆ ದಿನಕ್ಕೆ 2 ಬಾರಿ ವೈಮಾನಿಕ ಪ್ರದರ್ಶನ ನಡೆಸಲಾಗುತ್ತಿತ್ತು. ಆದರೆ, ಈ ಬಾರಿ ದಿನಕ್ಕೆ ಕೇವಲ ಒಂದು ಬಾರಿ ವೈಮಾನಿಕ ಪ್ರದರ್ಶನ ನಡೆಸಲಾಯಿತು. ಕೊನೆಯ 2 ದಿನ ಮಾತ್ರ ಬೆಳಗ್ಗೆ ಮತ್ತು ಮಧ್ಯಾಹ್ನ ವೈಮಾನಿಕ ಪ್ರದರ್ಶನ ಏರ್ಪಡಿಸಲಾಗಿತ್ತು.
67 ವಿಮಾನಗಳ ಪ್ರದರ್ಶನ : ಏರೋ ಇಂಡಿಯಾದಲ್ಲಿ ಅಮೆರಿಕಾದ ಎಫ್-16, ಎಫ್-35, ರಫೇಲ್, ತೇಜಸ್, ಸೂರ್ಯಕಿರಣ, ಸಾರಂಗ್ ಹೆಲಿಕಾಪ್ಟರ್ ಸೇರಿದಂತೆ 67 ಏರ್‌ಕಾಪ್ಟ್ರ್‌ಗಳು ಪ್ರದರ್ಶನ ನೀಡಿವೆ. ಸ್ಟಾಟಿಕ್ ಡಿಸ್‌ಪ್ಲೇ 36 ಏರ್ ಕ್ರಾಪ್ಟ್ ಪ್ರದರ್ಶನಕ್ಕೆ ಇಡಲಾಗಿತ್ತು. ಏರೋ ಇಂಡಿಯಾದಲ್ಲಿ ಮೊದಲ ಬಾರಿಗೆ ಅಮೆರಿಕಾದ ಎಫ್-16, ಎಫ್-35 ಹಾಗೂ ಎಫ್ -18 ಹಾರಾಟ ನಡೆಸಿದರೆ, ಎಚ್‌ಎಎಲ್ ನಿರ್ಮಿತ ಯುದ್ಧ ವಿಮಾನ ಪ್ರಚಂಡ ಶಕ್ತಿ ಪ್ರದರ್ಶನ ಮಾಡಿತ್ತು. ಇನ್ನು ಡಿಆರ್‌ಡಿಓ ಅಭಿವೃದ್ಧಿ ಪಡಿಸಿದ ತಪಸ್ ಚಾಲಕರಹಿತ ವಾಹನವು ಆಗಸದಲ್ಲಿಂದ ವೈಮಾನಿಕ ಪ್ರದರ್ಶನ ನೇರ ಪ್ರಸಾರವನ್ನು ನೀಡಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Smart Bus Stan: ಕೋರಮಂಗಲದಲ್ಲಿ ಸ್ಮಾರ್ಟ್ ಬಸ್ ನಿಲ್ದಾಣ!
Bengaluru: ಇವಿ ಬೈಕ್ ಶೋರೂಮ್‌ನಲ್ಲಿ ಬೆಂಕಿ ಅವಘಡ; ಮಾಲೀಕ, ಮ್ಯಾನೇಜರ್ ಬಂಧನ, ಬಿಡುಗಡೆ
Bengaluru: ನಗರದಲ್ಲಿ ನಿಷೇಧಿತ ಕಲರ್ ಕಾಟನ್ ಕ್ಯಾಂಡಿ ತಯಾರಿಕಾ ಘಟಕ ಬಂದ್
Shobha Karandlaje: ಶೋಭಾ ಲೋಕಸಭಾ ಸದಸ್ಯತ್ವ ರದ್ದು ಕೋರಿ ಅರ್ಜಿ: ಡಿ.6ಕ್ಕೆ ವಿಚಾರಣೆ
Arrested: ನಕಲಿ ದಾಖಲೆ ನೀಡಿ ಟಿಡಿಎಸ್ ಪಡೆಯುತ್ತಿದ್ದ ಆರೋಪಿಯ ಬಂಧಿಸಿದ ಜಾರಿ ನಿರ್ದೇಶನಾಲಯ
MUST WATCH
ಹೊಸ ಸೇರ್ಪಡೆ
Anandapura: ಬೈಕ್ ನಲ್ಲಿ ಶಾಲೆಗೆ ತೆರಳುತ್ತಿರುವಾಗಲೇ ಶಿಕ್ಷಕನಿಗೆ ಹೃದಯಾಘಾತ
Chikkamagaluru: ಅಪರಿಚಿತ ವಾಹನ ಡಿಕ್ಕಿಯಾಗಿ ಕಂಡಕ್ಟರ್ ಸಾವು
Naxal Encounter Case: ಜಯಂತ್ ಗೌಡ ವಿಚಾರಣೆ, ಠಾಣೆಗೆ ಮುತ್ತಿಗೆ ಹಾಕಿದ ಗ್ರಾಮಸ್ಥರು
ನವೆಂಬರ್ 26-30: ಧರ್ಮಸ್ಥಳ ಲಕ್ಷದೀಪೋತ್ಸವ ಸಂಭ್ರಮ
Waqf Protest: ರಾಜ್ಯ ಸರ್ಕಾರವನ್ನು ಜನರೇ ಕಿತ್ತೊಗೆಯಲಿದ್ದಾರೆ: ದಾವಣಗೆರೆಯಲ್ಲಿ ಪ್ರತಿಭಟನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.