ಅರೆಬರೆ ಅನುಷ್ಠಾನ ಆರು ವರ್ಷದ ಕತೆ


Team Udayavani, Feb 26, 2018, 12:03 PM IST

bbmp.jpg

ಬೆಂಗಳೂರು: ಬಿಬಿಎಂಪಿಯಲ್ಲಿ ಪ್ರತಿ ವರ್ಷ ಸಾವಿರಾರು ಕೋಟಿ ರೂ. ಮೊತ್ತದ ಬಜೆಟ್‌ ಮಂಡನೆಯಾಗುತ್ತದೆ. ಆದರೆ, ಬಜೆಟ್‌ನ ಅರ್ಧದಷ್ಟು ಕಾರ್ಯಕ್ರಮಗಳೂ ಅನುಷ್ಠಾನವಾಗದಿರುವುದು ಕಳೆದ ಆರು ವರ್ಷಗಳ ಅಂಕಿ-ಅಂಶಗಳಿಂದ ಸಾಬೀತಾಗಿದೆ. 

ಪಾಲಿಕೆಯ ಬಜೆಟ್‌ ಗಾತ್ರ ಹಿಗ್ಗುತ್ತಿದ್ದರೂ ಅನುಷ್ಠಾನ ಮಾತ್ರ ಇಳಿಮುಖವಾಗುತ್ತಿರುವ, ಇಲ್ಲವೇ ಸ್ಥಿರವಾಗಿರುವುದು ಸ್ಪಷ್ಟವಾಗಿದೆ. 2011-12ನೇ ಸಾಲಿನಲ್ಲಿ ಶೇ. 37ರಷ್ಟಿದ್ದ ಬಜೆಟ್‌ ಅನುಷ್ಠಾನ ಪ್ರಮಾಣ, ಪ್ರಸಕ್ತ ಸಾಲಿನಲ್ಲಿ (ಮಾರ್ಚ್‌ 31ಕ್ಕೆ 2017-18ನೇ ಸಾಲಿನ ಹಣಕಾಸು ವರ್ಷದ ಅವಧಿ ಮುಗಿಯಲಿದೆ) ಶೇ. 60ಕ್ಕೆ ಏರಿಕೆಯಾಗಿದೆ ಎಂದು ಪಾಲಿಕೆಯ ಅಧಿಕಾರಿಗಳು ಸಮರ್ಥಿಸಿಕೊಳ್ಳುತ್ತಾರೆ. 

ಆದರೆ ಆಡಳಿತಾಧಿಕಾರಿಗಳ ಅವಧಿ ಇದ್ದ ಆರು ತಿಂಗಳಲ್ಲ ಅವಧಿಯಲ್ಲಿ ಮಾತ್ರ ಬಜೆಟ್‌ ಅಂಶಗಳ ಅನುಷ್ಠಾನ ಪ್ರಮಾಣ ಶೇ.87.36ರಷ್ಟಿದೆ. ನಂತರದ ಅನುಷ್ಠಾನ ಪ್ರಮಾಣ ಶೇ.60ಕ್ಕೆ ಕಳೆಗೆ ಕುಸಿದಿದೆ. ಪ್ರತಿ ವರ್ಷದಂತೆ ಈ ವರ್ಷವೂ ಬಿಬಿಎಂಪಿ ಅಧಿಕಾರಿಗಳು ಜಾಹೀರಾತು, ಮಾರುಕಟ್ಟೆ, ಆಪ್ಟಿಕಲ್‌ ಫೈಬರ್‌ ಕೇಬಲ್‌,

ವಾಣಿಜ್ಯ ಪರವಾನಗಿ ಹೀಗೆ ಹತ್ತಾರು ಪಾಲಿಕೆಯ ಆದಾಯದ ಮೂಲಗಳಿಂದ ಸಮಪರ್ಕವಾಗಿ ಆದಾಯ ತರುವಲ್ಲಿ ವಿಫ‌ಲವಾಗಿದ್ದಾರೆ. 
ಆದರೆ, ಆಸ್ತಿ ತೆರಿಗೆ ಸಂಗ್ರಹ, ರಹಸ್ಯ ಖಾತೆಗಳನ್ನ ರದ್ದುಪಡಿಸಿ ಹಣ ಹಿಂಪಡೆದಿದ್ದು, ಪಾಲಿಕೆಯ ಬ್ಯಾಂಕ್‌ ಖಾತೆಗಳನ್ನು ಚಾಲ್ತಿಯಿಂದ ಉಳಿತಾಯ ಖಾತೆಗಳಾಗಿ ಪರಿವರ್ತಿಸುವಂತಹ ಕ್ರಮಗಳ ಮೂಲಕ ಪಾಲಿಕೆಯ ಆದಾಯ ಹೆಚ್ಚಳಕ್ಕೆ ಕ್ರಮ ಕೈಗೊಂಡಿದ್ದಾರೆ.

ಸುಧಾರಿಸಿದ ಆರ್ಥಿಕ ಪರಿಸ್ಥಿತಿ: ಕಳೆದ ಆರು ವರ್ಷಗಳಿಗೆ ಹೋಲಿಕೆ ಮಾಡಿಕೊಂಡರೆ ಪ್ರಸಕ್ತ ಸಾಲಿನಲ್ಲಿ ಪಾಲಿಕೆಯ ಆರ್ಥಿಕ ಪರಿಸ್ಥಿತಿ ಗಣನೀಯವಾಗಿ ಸುಧಾರಿಸಿದೆ. ಅದರಂತೆ ಪ್ರಸಕ್ತ ಸಾಲಿನಲ್ಲಿ ದಾಖಲೆಯ 3,300 ಕೋಟಿ ರೂ. ಬಿಬಿಎಂಪಿ ರಸೀದಿಗಳು ಹಾಗೂ ಸ್ವಂತ ಆದಾಯದಿಂದ ಸಂಗ್ರಹವಾಗಿದೆ.

ಜತೆಗೆ ಹುಡ್ಕೊà ಬ್ಯಾಂಕ್‌ನಿಂದ ಪಡೆದಿದ್ದ ಸಾಲದ ಪೈಕಿ 465 ಕೋಟಿ ರೂ. ಮರುಪಾವತಿಸಿದ್ದು, ಯಾವುದೇ ರೀತಿಯ ಹೊಸ ಸಾಲಕ್ಕೆ ಮುಂದಾಗಿಲ್ಲ. ಜತೆಗೆ ಬ್ಯಾಂಕ್‌ ಖಾತೆಗಳನ್ನು ಉಳಿತಾಯ ಖಾತೆಗಳಾಗಿ ಪರಿವರ್ತಿಸಿದರಿಂದ ಪಾಲಿಕೆಗೆ 104 ಕೋಟಿ ರೂ. ಬಡ್ಡಿ ರೂಪದಲ್ಲಿ ಸಂಗ್ರಹವಾಗಿದೆ. 

2017-18ರ ಬಜೆಟ್‌ನಲ್ಲಿ ಆದಾಯ ನಿರೀಕ್ಷೆ (ಕೋಟಿ ರೂ.)
-ಆಸ್ತಿ ತೆರಿಗೆ-ಇತರೆ    4199.82
-ಒಎಫ್ಸಿ ಕೇಬಲ್‌    350
-ನಗರ ಯೋಜನೆ    461.85
-ಜಾಹೀರಾತು    82.50
-ಘನತ್ಯಾಜ್ಯ ನಿರ್ವಹಣೆ ಕರ    50
-ಕೇಂದ್ರ, ರಾಜ್ಯ ಸರ್ಕಾರದ ಅನುದಾನ    3891.36

ಬಿಬಿಎಂಪಿ ಬಜೆಟ್‌ಗಳ ಅನುಷ್ಠಾನ ವಿವರ
ವರ್ಷ    ಬಜೆಟ್‌ ಗಾತ್ರ    ಅನುಷ್ಠಾನ    ಶೇಕಡಾವಾರು
-2011-12    9380    3546    37.80
-2012-13    9937    4198    37.65
-2013 -14    8520    4431    42.24
-2014- 15    6500    3402    52.33
-2015- 16    5729    5005    87.36
-2016- 17    9,353    5,611    58
-2017-18     9,816    –    60 (ಅಂದಾಜು)

ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿಯ ಆಡಳಿತ ಬಿಗಿಯಿಲ್ಲದ ಕಾರಣದಿಂದ ಪ್ರಸಕ್ತ ಸಾಲಿನ ಬಜೆಟ್‌ ಸಮಪರ್ಕವಾಗಿ ಅನುಷ್ಠಾನಗೊಂಡಿಲ್ಲ. ಬಜೆಟ್‌ನಲ್ಲಿ ಬಡವರು, ಹಿಂದುಳಿದವರು ಹಾಗೂ ಅಲ್ಪಸಂಖ್ಯಾತರ ಅಭಿವೃದ್ಧಿಗಾಗಿ ಹಲವಾರು ಕಲ್ಯಾಣ ಕಾರ್ಯಕ್ರಮಗಳನ್ನು ಘೋಷಿಸಲಾಗಿದೆ. ಆದರೆ, ಈವರೆಗೆ ಅವುಗಳನ್ನು ಅನುಷ್ಠಾನಗೊಳಿಸಲು ಮುಂದಾಗದಿರುವುದು ಅವರಿಗೆ ಮಾಡಿದ ವಂಚನೆಯಾಗಿದೆ. ಇದೀಗ ಸರ್ಕಾರದಿಂದ ಅನುದಾನ ನೀಡದಿದ್ದರೂ ಬಜೆಟ್‌ ಮಂಡಿಸಲು ಸಿದ್ಧರಾಗಿದ್ದಾರೆ. 
-ಪದ್ಮನಾಭರೆಡ್ಡಿ, ವಿಪಕ್ಷ ನಾಯಕ ಬಿಬಿಎಂಪಿ

* ವೆಂ.ಸುನೀಲ್‌ ಕುಮಾರ್‌

ಟಾಪ್ ನ್ಯೂಸ್

1-eshwar-bg

K.S.Eshwarappa;’ಕ್ರಾಂತಿವೀರ’ ಹೊಸ ಬ್ರಿಗೇಡ್ ಘೋಷಣೆ: ಫೆ.4ರಂದು ಉದ್ಘಾಟನೆ

School-Chikki

Davanagere: ಮೊಟ್ಟೆ ವಿತರಣೆಯಲ್ಲಿ ಲೋಪ; ಮುಖ್ಯ ಶಿಕ್ಷಕಿ, ದೈಹಿಕ ಶಿಕ್ಷಣ ಶಿಕ್ಷಕ ಅಮಾನತು

Sagara-Autrity

Sagara: ಹತ್ತು ಎಕರೆ ಜಾಗದಲ್ಲಿ ಆಶ್ರಯ ಲೇ ಔಟ್ ನಿರ್ಮಿಸಿ ಬಡವರಿಗೆ ಹಂಚಿಕೆ: ಶಾಸಕ ಬೇಳೂರು

1-ree

Karkala; ಕಸದಲ್ಲಿದ್ದ 25 ಗ್ರಾಂ ಚಿನ್ನದ ಸರ ಮರಳಿಸಿ ಪ್ರಾಮಾಣಿಕತೆ ಮೆರೆದ SLRM ಸಿಬಂದಿಗಳು

BBK11: ಬಿಗ್‌ ಬಾಸ್‌ ಮನೆಯಿಂದ ಹೊರಗಡೆ ಬರಲು ನಿರ್ಧರಿಸಿದ ಚೈತ್ರಾ ಕುಂದಾಪುರ

BBK11: ಬಿಗ್‌ ಬಾಸ್‌ ಮನೆಯಿಂದ ಹೊರಗಡೆ ಬರಲು ನಿರ್ಧರಿಸಿದ ಚೈತ್ರಾ ಕುಂದಾಪುರ

Keerthy Suresh: ಪೋಷಕರು ನಿಶ್ಚಯಿಸಿದ ಹುಡುಗನ ಜತೆ ನಡೆಯಲಿದೆ ಕೀರ್ತಿ ಸುರೇಶ್‌ ಮದುವೆ?

Keerthy Suresh: ಪೋಷಕರು ನಿಶ್ಚಯಿಸಿದ ಹುಡುಗನ ಜತೆ ನಡೆಯಲಿದೆ ಕೀರ್ತಿ ಸುರೇಶ್‌ ಮದುವೆ?

ಕಿರುತೆರೆ To ಹಿರಿತೆರೆ.. ಧಾರಾವಾಹಿಯಿಂದ ನೇಮ್‌ ಪಡೆದು ಸಿನಿಮಾದಲ್ಲಿ ಫೇಮ್‌ ಆದ ಕಲಾವಿದರು

ಕಿರುತೆರೆ To ಹಿರಿತೆರೆ.. ಧಾರಾವಾಹಿಯಿಂದ ನೇಮ್‌ ಪಡೆದು ಸಿನಿಮಾದಲ್ಲಿ ಫೇಮ್‌ ಆದ ಕಲಾವಿದರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

14-darshan

Actor Darshan ವಿರುದ್ದ ಸುಪ್ರೀಂನಲ್ಲಿ ಮೇಲ್ಮನವಿ: ಬೆಂಗ್ಳೂರು ಕಮೀಷನರ್‌

11-KEA-exam

Bengaluru: 54 ಎಂಜಿನಿಯರಿಂಗ್‌ ಸೀಟ್‌ ಬ್ಲಾಕ್‌: ಕೆಇಎ ಶಂಕೆ

6

Bengaluru: ಕಸವನ್ನು ಗೊಬ್ಬರವಾಗಿಸುವ “ಕಪ್ಪು ಸೈನಿಕ ನೊಣ’!

3-beehive

Bengaluru: ಇನ್ಮುಂದೆ ಜೇನುಗೂಡು ಕಟ್ಟಬೇಕಿಲ್ಲ; 3ಡಿ ಗೂಡು ಆವಿಷ್ಕಾರ!

4-cock

Bengaluru: ಮಾಂಸದ ನಾಟಿ ಕೋಳಿಗೆ ಭರ್ಜರಿ ಡಿಮ್ಯಾಂಡ್‌!

MUST WATCH

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

ಹೊಸ ಸೇರ್ಪಡೆ

Ranji Trophy: ಕರ್ನಾಟಕ ವಿರುದ್ಧ 218 ರನ್‌ ಹಿನ್ನಡೆಯಲ್ಲಿ ಚಂಡೀಗಢ

Ranji Trophy: ಕರ್ನಾಟಕ ವಿರುದ್ಧ 218 ರನ್‌ ಹಿನ್ನಡೆಯಲ್ಲಿ ಚಂಡೀಗಢ

Ranji Trophy: ಶಮಿ ಭರ್ಜರಿ ಪುನರಾಗಮನ; ಬಂಗಾಳಕ್ಕೆ ಜಯ

Ranji Trophy: ಶಮಿ ಭರ್ಜರಿ ಪುನರಾಗಮನ; ಬಂಗಾಳಕ್ಕೆ ಜಯ

Australia vs Pakistan T20: ಪಾಕ್‌ ವಿರುದ್ಧ ಆಸೀಸ್‌ಗೆ 2-0 ಸರಣಿ ಜಯ

Australia vs Pakistan T20: ಪಾಕ್‌ ವಿರುದ್ಧ ಆಸೀಸ್‌ಗೆ 2-0 ಸರಣಿ ಜಯ

5

Sullia: ಅಪಘಾತ; ಪರಾರಿಯಾಗಿದ್ದ ಲಾರಿ ವಶಕ್ಕೆ

1-eshwar-bg

K.S.Eshwarappa;’ಕ್ರಾಂತಿವೀರ’ ಹೊಸ ಬ್ರಿಗೇಡ್ ಘೋಷಣೆ: ಫೆ.4ರಂದು ಉದ್ಘಾಟನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.