BBMP: ಬೆಂಗಳೂರು ಪಾಲಿಕೆಯಿಂದ ವಿದ್ಯಾರ್ಥಿಗಳಿಗೆ ಪ್ರಾಣಿಗಳ ಬಗ್ಗೆ ಪಾಠ

Team Udayavani, Jan 29, 2025, 11:03 AM IST

BBMP: ಬೆಂಗಳೂರು ಪಾಲಿಕೆಯಿಂದ ವಿದ್ಯಾರ್ಥಿಗಳಿಗೆ ಪ್ರಾಣಿಗಳ ಬಗ್ಗೆ ಪಾಠ

ಬೆಂಗಳೂರು: ಬಿಬಿಎಂಪಿ ಪಶುಸಂಗೋಪನಾ ವಿಭಾಗ ಪ್ರಾಣಿಗಳ ಬಗ್ಗೆ ಸಹಾನುಭೂತಿ ಸಮಾಜವನ್ನು ರೂಪಿಸುವ ನಿಟ್ಟಿನಲ್ಲಿ ಪಾಲಿಕೆ ವ್ಯಾಪ್ತಿಯ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳಲ್ಲಿ ಮಾನವೀಯ ಪಾಠ ನೀಡಲು ಮುಂದಾಗಿದೆ.

ಪಾಲಿಕೆ ವ್ಯಾಪ್ತಿಯಲ್ಲಿ ಪ್ರತಿ ವಲಯದಲ್ಲಿ 500ಕ್ಕೂ ಅಧಿಕ ಶಾಲಾ- ಕಾಲೇಜುಗಳಿದ್ದು, ಪ್ರತಿ ತರಗತಿಯಲ್ಲಿ ಸಹಾನುಭೂತಿ ಶಿಕ್ಷಣ ಬೋಧನೆಗೆ ಹೆಜ್ಜೆಯಿರಿಸಿದೆ. ವಿದ್ಯಾರ್ಥಿಗಳಿಗೆ ಬೆಕ್ಕು , ನಾಯಿ ಇನ್ನಿತರ ಪ್ರಾಣಿಗಳ ನಡವಳಿಕೆ, ಪ್ರಾಣಿಗಳ ಬಗ್ಗೆ ಗೌರವ ಮತ್ತು ಅವುಗಳ ಸುತ್ತಲೂ ಹೇಗೆ ವರ್ತಿಸಬೇಕು ಎಂಬುದರ ಬಗ್ಗೆ ಶಿಕ್ಷಣ ನೀಡಲಿದೆ. ಪ್ರಾಣಿ ಹಕ್ಕು ಮತ್ತು ಸಮುದಾಯ ಪ್ರಾಣಿಗಳ ಬಗೆಗೆ ಮಕ್ಕಳ ಮನಸ್ಸಿನಲ್ಲಿರುವ ಭಯವನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ರೂಪಿಸಲಾಗಿದೆ. ಶಾಲಾ-ಕಾಲೇಜು ವಿದ್ಯಾರ್ಥಿಗಳು ಬೆಕ್ಕು, ನಾಯಿಗಳ ಜತೆಗಿನ ಸಹಾನುಭೂತಿ ಹೊಂದುವ ಗುರಿಯನ್ನು ಹೊಂದಲಾಗಿದೆ.

ಫೆಬ್ರವರಿಯಿಂದ ಆರಂಭ: ಈಗಾಗಲೇ ಮಾಲ್‌ ಗಳು, ಉದ್ಯಾನಗಳು, ಮಾರುಕಟ್ಟೆಗಳು, ವಸತಿ ಪ್ರದೇಶಗಳಲ್ಲಿ ಪ್ರಾಣಿ ಕಲ್ಯಾಣ ಮತ್ತು ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ. ಆದಾಗ್ಯೂ, ಶಾಲೆಗಳು ಮತ್ತು ಕಾಲೇಜುಗಳಲ್ಲಿ ಪ್ರಾಣಿ ಸಮುದಾಯದ ಬಗ್ಗೆ ಜಾಗೃತಿ ಕಾರ್ಯಕ್ರಮ ಆಯೋಜಿಸಲು ಸಾಧ್ಯವಾ ಗಿಲ್ಲ. ಹೀಗಾಗಿ ಫೆಬ್ರವರಿ ತಿಂಗಳಲ್ಲಿ ಬಿಬಿಎಂಪಿ ಎಂಟೂ ವಲಯಗಳ ಶಾಲೆಗಳಲ್ಲಿ ವಿದ್ಯಾರ್ಥಿಗಳಲ್ಲಿ ಅರಿವಿನ ಬೀಜ ಬಿತ್ತಲಾಗುವುದು ಪ್ರಾಣಿಗಳ ಬಗ್ಗೆ ಸಹಾನುಭೂತಿಯ ಸಮಾಜವನ್ನು ಬೆಳೆಸುವುದು ಇದರ ಉದ್ದೇಶವಾಗಿದೆ ಎಂದು ಬಿಬಿಎಂಪಿಯ ಪಶುಸಂಗೋಪನಾ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಬಿಬಿಎಂಪಿ ವ್ಯಾಪ್ತಿಯಲ್ಲಿ 500ಕ್ಕೂ ಹೆಚ್ಚು ಶಾಲಾ-ಕಾಲೇಜುಗಳು ಇವೆ. ಖಾಸಗಿ ಶಿಕ್ಷಣ ಸಂಸ್ಥೆಗಳು ಇವೆ. ಈ ಪ್ರಕ್ರಿಯೆಯಲ್ಲಿ ನಮಗೆ ಸಹಾಯ ಮಾಡಲು ಹಲವು ಪ್ರಾಣಿ ದಯಾ ಸಂಘ ಸಂಸ್ಥೆಗಳು ಮುಂದೆ ಬಂದಿವೆ. ಫೆಬ್ರವರಿಯಲ್ಲಿ ಮಾನವೀಯ ಶಿಕ್ಷಣ ನೀಡುವ ಗುರಿಯನ್ನು ಹೊಂದಿದ್ದೇವೆ. ಪ್ರತಿಯೊಂದು ವಲಯದಲ್ಲಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದಿದ್ದಾರೆ.

15-20 ನಿಮಿಷ ಮಾನವೀಯ ಪಾಠ: ಬಿಬಿಎಂಪಿ ವ್ಯಾಪ್ತಿಯಲ್ಲಿ ಎಂಟು ವಲಯಗಳಿವೆ. ಈ ಎಲ್ಲ ವಲಯಗಳ ಶಾಲಾ-ಕಾಲೇಜುಗಳಲ್ಲಿ ಕಾರ್ಯಕ್ರಮ ನಡೆಸಿಕೊಡಲಾಗುವುದು. ಒಂದೇ ಏಜೆನ್ಸಿ ಎಲ್ಲಾ ಎಂಟು ವಲಯಗಳಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ನಡೆಸಲು ಸಾಧ್ಯವಿಲ್ಲ. “ಪ್ರತಿ ವಲಯಕ್ಕೂ ಒಂದು ಏಜೆನ್ಸಿಯನ್ನು ಆಯ್ಕೆ ಮಾಡುತ್ತೇವೆ ಮತ್ತು ಮಕ್ಕಳಿಗೆ ಪ್ರಾಣಿಗಳ ಹಕ್ಕುಗಳು ಮತ್ತು ಕಲ್ಯಾಣದ ಬಗ್ಗೆ ಶಿಕ್ಷಣ ನೀಡಲು ಅವರೊಂದಿಗೆ ಕೆಲಸ ಮಾಡುತ್ತೇವೆ ಎಂದು ಬಿಬಿಎಂಪಿಯ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಈ ಏಜೆನ್ಸಿಗಳನ್ನು ಆಯ್ಕೆ ಮಾಡಿದ ನಂತರ ಪಶುಸಂಗೋಪನಾ ಇಲಾಖೆಯ ವಲಯ ಸಹಾಯಕ ನಿರ್ದೇಶಕರು ತಮ್ಮ ವಲಯಗಳಲ್ಲಿನ ಶಾಲೆಗಳು ಮತ್ತು ಕಾಲೇಜುಗಳನ್ನು ಸಂಪರ್ಕಿಸಿ ಮಕ್ಕಳಿಗೆ ಜಾಗೃತಿ ಅವಧಿಗಳನ್ನು ನಿಗದಿಪಡಿಸುತ್ತಾರೆ. ಪ್ರತಿ ತರಗತಿಯ ವಿದ್ಯಾರ್ಥಿಗಳಿಗೆ 15ರಿಂದ 20 ನಿಮಿಷ ಪ್ರಾಣಿಗಳ ‌ಬಗ್ಗೆ ಮಾನವೀಯ ಪಾಠ ಹೇಳಿಕೊಡಲಾಗುತ್ತದೆ ಎಂದು ಹೇಳಿದ್ದಾರೆ.

ಪ್ರಾಣಿಗಳ ಮೇಲಿನ ಕ್ರೌರ್ಯ ತಪ್ಪಿಸಲು ಸಹಕಾರಿ’: ಪ್ರಾಣಿಗಳು ಅಥವಾ ಪಕ್ಷಿಗಳ ಮೇಲಿನ ಕ್ರೌರ್ಯವನ್ನು ತಪ್ಪಿಸಲು ಇದು ಸಹಾಯವಾಗಲಿದೆ. ಜತೆಗೆ ಪ್ರಾಣಿಗಳ ಬಗ್ಗೆ ಮಕ್ಕಳಲ್ಲಿರುವ ಭಯವನ್ನು ಅವರ ಮನಸ್ಸಿನಿಂದ ತೆಗೆದು ಹಾಕಲು ನೆರವಾಗಲಿದೆ. ಜತೆಗೆ ಕೆಲವು ಸಲ ಅವುಗಳಿಂದ ಅಂತರವನ್ನು ಹೇಗೆ ಕಾಯ್ದುಕೊಳ್ಳಬೇಕೆಂಬುವುದರ ಬಗ್ಗೆ ಕೂಡ ಶಿಕ್ಷಣ ನೀಡಲಾಗುತ್ತದೆ. ಪ್ರಾಣಿಗಳಿರುವ ಜಾಗಕ್ಕೆ ಪ್ರವೇಶ ಮಾಡಿದಾಗ ಅವು ಕೆಲವು ಸಹ ಹಿಂಸಾತ್ಮಕವಾಗಿ ಪ್ರತಿಕ್ರಿಯಿಸುವ ಸಾಧ್ಯತೆ ಇರುತ್ತದೆ ಈ ಬಗ್ಗೆ ಎಚ್ಚರಿಕೆ ಶಿಕ್ಷಣ ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ.

ಟಾಪ್ ನ್ಯೂಸ್

Shows cancelled: ಸ್ತ್ರೀ ವಿರೋಧಿ ಹೇಳಿಕೆ… ಹಾಸ್ಯಗಾರ ಬಸ್ಸಿ ಕಾರ್ಯಕ್ರಮ ರದ್ದು

Shows cancelled: ಸ್ತ್ರೀ ವಿರೋಧಿ ಹೇಳಿಕೆ… ಹಾಸ್ಯಗಾರ ಬಸ್ಸಿ ಕಾರ್ಯಕ್ರಮ ರದ್ದು

Website blocked: ಮೋದಿ ವ್ಯಂಗ್ಯಚಿತ್ರ ಪ್ರಕಟಿಸಿದ್ದಕ್ಕೆ ನಿರ್ಬಂಧ: ವಿಕಟನ್‌ ಪತ್ರಿಕೆ

Website blocked: ಮೋದಿ ವ್ಯಂಗ್ಯಚಿತ್ರ ಪ್ರಕಟಿಸಿದ್ದಕ್ಕೆ ನಿರ್ಬಂಧ: ವಿಕಟನ್‌ ಪತ್ರಿಕೆ

ಚೀನಾ ಭಾರತದ ಶತ್ರುವಲ್ಲ: ಕಾಂಗ್ರೆಸ್‌ ಮುಖಂಡ ಪಿತ್ರೋಡಾ ಹೇಳಿಕೆಗೆ ಬಿಜೆಪಿ ಆಕ್ರೋಶ

ಚೀನಾ ಭಾರತದ ಶತ್ರುವಲ್ಲ: ಕಾಂಗ್ರೆಸ್‌ ಮುಖಂಡ ಪಿತ್ರೋಡಾ ಹೇಳಿಕೆಗೆ ಬಿಜೆಪಿ ಆಕ್ರೋಶ

Bollywood: ರೀ-ರಿಲೀಸ್‌ ಗಳಿಕೆಯಲ್ಲಿ ʼತುಂಬಾಡ್‌ʼ ಮೀರಿಸಿದ ʼಸನಮ್ ತೇರಿ ಕಸಮ್ʼ

Bollywood: ರೀ-ರಿಲೀಸ್‌ ಗಳಿಕೆಯಲ್ಲಿ ʼತುಂಬಾಡ್‌ʼ ಮೀರಿಸಿದ ʼಸನಮ್ ತೇರಿ ಕಸಮ್ʼ

11 ವರ್ಷದಿಂದ ವಿಶ್ವಗುರು ನೋಡಿದ್ದೇವೆ, ಅವರನ್ನು ಕೆಳಗಿಳಿಸಿ: ಬಿಜೆಪಿಗೆ ಸಂತೋಷ್ ಲಾಡ್ ಟಾಂಗ್

11 ವರ್ಷದಿಂದ ವಿಶ್ವಗುರು ನೋಡಿದ್ದೇವೆ, ಅವರನ್ನು ಕೆಳಗಿಳಿಸಿ: ಬಿಜೆಪಿಗೆ ಸಂತೋಷ್ ಲಾಡ್ ಟಾಂಗ್

Bengaluru: ಮೇ 30 ರೊಳಗೆ ಜಿ.ಪಂ-ತಾ.ಪಂ ಅಂತಿಮ ಮೀಸಲಾತಿ ಪಟ್ಟಿ ಆಯೋಗಕ್ಕೆ ಸಲ್ಲಿಕೆ

ಜಿಲ್ಲಾ ಪಂಚಾಯತ್‌, ತಾಲೂಕು ಪಂಚಾಯತ್‌ ಚುನಾವಣೆ: ಮೇ 30 ರೊಳಗೆ ಮೀಸಲಾತಿ ಪಟ್ಟಿ ಸಲ್ಲಿಕೆ

Kollywood: ಬರ್ತ್‌ ಡೇಗೆ ʼಮದರಾಸಿʼಯಾಗಿ ಮಾಸ್‌ ಅವತಾರದಲ್ಲಿ ಮಿಂಚಿದ ಶಿವಕಾರ್ತಿಕೇಯನ್

Kollywood: ಬರ್ತ್‌ ಡೇಗೆ ʼಮದರಾಸಿʼಯಾಗಿ ಮಾಸ್‌ ಅವತಾರದಲ್ಲಿ ಮಿಂಚಿದ ಶಿವಕಾರ್ತಿಕೇಯನ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bengaluru: ಮೇ 30 ರೊಳಗೆ ಜಿ.ಪಂ-ತಾ.ಪಂ ಅಂತಿಮ ಮೀಸಲಾತಿ ಪಟ್ಟಿ ಆಯೋಗಕ್ಕೆ ಸಲ್ಲಿಕೆ

ಜಿಲ್ಲಾ ಪಂಚಾಯತ್‌, ತಾಲೂಕು ಪಂಚಾಯತ್‌ ಚುನಾವಣೆ: ಮೇ 30 ರೊಳಗೆ ಮೀಸಲಾತಿ ಪಟ್ಟಿ ಸಲ್ಲಿಕೆ

Bengaluru: ನೀರಿನ ಸಮಸ್ಯೆಯಾಗದಂತೆ ಜಲಮಂಡಳಿ ಸಿದ್ಧತೆ

Bengaluru: ನೀರಿನ ಸಮಸ್ಯೆಯಾಗದಂತೆ ಜಲಮಂಡಳಿ ಸಿದ್ಧತೆ

Bengaluru: ಈ ವಾರವೇ ಕಾವೇರಿ ನೀರಿನ ದರ ಏರಿಕೆ ಬಿಸಿ?

Bengaluru: ಈ ವಾರವೇ ಕಾವೇರಿ ನೀರಿನ ದರ ಏರಿಕೆ ಬಿಸಿ?

Theft Case: ಕೆಲಸ ಮಾಡುತ್ತಿದ್ದ ಅಂಗಡಿಯಲ್ಲೇ 2 ಕೆ.ಜಿ. ಚಿನ್ನ ಕಳವು ಮಾಡಿದ್ದವರ ಸೆರೆ

Theft Case: ಕೆಲಸ ಮಾಡುತ್ತಿದ್ದ ಅಂಗಡಿಯಲ್ಲೇ 2 ಕೆ.ಜಿ. ಚಿನ್ನ ಕಳವು ಮಾಡಿದ್ದವರ ಸೆರೆ

Instagram provides clues to finding suspect who had been on the run for 9 years

Bengaluru: 9 ವರ್ಷದಿಂದ ತಪ್ಪಿಸಿಕೊಂಡಿದ್ದ ಆರೋಪಿ ಪತ್ತೆಗೆ ಸುಳಿವು ನೀಡಿದ ಇನ್ಸ್ಟಾಗ್ರಾಮ್

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

7

Katapadi: ಮುಕ್ಕಾಲು ಎಕರೆಯಲ್ಲಿ 8 ಟನ್‌ ಸೌತೆ, ಅಂಗಳದಿಂದಲೇ ಮಾರಾಟ!

Shows cancelled: ಸ್ತ್ರೀ ವಿರೋಧಿ ಹೇಳಿಕೆ… ಹಾಸ್ಯಗಾರ ಬಸ್ಸಿ ಕಾರ್ಯಕ್ರಮ ರದ್ದು

Shows cancelled: ಸ್ತ್ರೀ ವಿರೋಧಿ ಹೇಳಿಕೆ… ಹಾಸ್ಯಗಾರ ಬಸ್ಸಿ ಕಾರ್ಯಕ್ರಮ ರದ್ದು

Website blocked: ಮೋದಿ ವ್ಯಂಗ್ಯಚಿತ್ರ ಪ್ರಕಟಿಸಿದ್ದಕ್ಕೆ ನಿರ್ಬಂಧ: ವಿಕಟನ್‌ ಪತ್ರಿಕೆ

Website blocked: ಮೋದಿ ವ್ಯಂಗ್ಯಚಿತ್ರ ಪ್ರಕಟಿಸಿದ್ದಕ್ಕೆ ನಿರ್ಬಂಧ: ವಿಕಟನ್‌ ಪತ್ರಿಕೆ

3

Mangaluru: ನದಿ-ಕಡಲು ಸಂಗಮದ ಸನಿಹದಲ್ಲೇ ಪ್ರವಾಸಿ ಸೇತುವೆ!

ಚೀನಾ ಭಾರತದ ಶತ್ರುವಲ್ಲ: ಕಾಂಗ್ರೆಸ್‌ ಮುಖಂಡ ಪಿತ್ರೋಡಾ ಹೇಳಿಕೆಗೆ ಬಿಜೆಪಿ ಆಕ್ರೋಶ

ಚೀನಾ ಭಾರತದ ಶತ್ರುವಲ್ಲ: ಕಾಂಗ್ರೆಸ್‌ ಮುಖಂಡ ಪಿತ್ರೋಡಾ ಹೇಳಿಕೆಗೆ ಬಿಜೆಪಿ ಆಕ್ರೋಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.