Crime: ಪ್ರೇಯಸಿ ಜತೆ ಸುತ್ತಾಡಿದ್ದಕ್ಕೆ ಹತ್ಯೆಗೈದ ಪ್ರಿಯಕರ!
ಒಂದೇ ಯುವತಿ ಜತೆ ಸ್ನೇಹಿತರಿಬ್ಬರ ಡೇಟಿಂಗ್: ಒಬ್ಬನ ಕೊಲೆ
Team Udayavani, Sep 22, 2024, 11:03 AM IST
ಬೆಂಗಳೂರು: ಯುವತಿ ವಿಚಾರಕ್ಕೆ ಇಬ್ಬರು ಸ್ನೇಹಿತರ ನಡುವೆ ಉಂಟಾದ ಜಗಳ ಒಬ್ಬನ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಸಂಜಯನಗರ ಠಾಣೆ ವ್ಯಾಪ್ತಿಯಲ್ಲಿ ಶನಿವಾರ ಬೆಳಗ್ಗೆ ನಡೆದಿದೆ.
ಉಡುಪಿ ಮೂಲದ ವರುಣ್ ಕೋಟ್ಯಾನ್ (24) ಕೊಲೆಯಾದವ. ಕೃತ್ಯ ಎಸಗಿದ ಆತನ ಸ್ನೇಹಿತ ದಿವೇಶ್ (25) ಎಂಬಾತನನ್ನು ಬಂಧಿಸಲಾಗಿದೆ.
ಶನಿವಾರ ಬೆಳಗ್ಗೆ 9 ಗಂಟೆ ಸುಮಾರಿಗೆ ಸಂಜಯನಗರದ ಗೆದ್ದಲಹಳ್ಳಿಯಲ್ಲಿ ನಡೆದಿದೆ. ಉಡುಪಿ ಮೂಲದ ವರುಣ್ ಮತ್ತು ದಿವೇಶ್ ಹಾಗೂ ಯುವತಿ ಶಾಲಾ ಸ್ನೇಹಿತರಾಗಿದ್ದು, ಬೆಂಗಳೂರಿಗೆ ಬಂದು ಗೆದ್ದಲಹಳ್ಳಿಯಲ್ಲಿರುವ ಬಾಡಿಗೆ ಮನೆಯಲ್ಲಿ ಮೂವರು ಒಂದು ವರ್ಷದಿಂದ ವಾಸವಾಗಿದ್ದರು. ಯುವತಿ ಹೋಟೆಲ್ ವೊಂದರಲ್ಲಿ ಸ್ವಾಗತಕಾರಿಣಿಯಾಗಿದ್ದು, ದಿವೇಶ್, ಝೋಮೋಟೋ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ. ವರುಣ್, ಬಾಗಲೂರಿನಲ್ಲಿರುವ ಸಂಸ್ಥೆಯೊಂದರಲ್ಲಿ ಸೇಫ್ಟಿ ಆಫೀಸರ್ ಆಗಿ ಕೆಲಸ ಮಾಡಿಕೊಂಡಿದ್ದ. ಈ ಮಧ್ಯೆ ದಿವೇಶ್ ಮತ್ತು ಯುವತಿ ಪರಸ್ಪರ ಪ್ರೀತಿಸುತ್ತಿದ್ದು, ಡೇಟಿಂಗ್‌ಲ್ಲಿದ್ದರು. ಮತ್ತೂಂದೆಡೆ ಇದೇ ಯುವತಿ, ವರುಣ್ ಜತೆಯೂ ಡೇಟಿಂಗ್ ಮಾಡುತ್ತಿದ್ದಳು ಎಂಬುದು ಗೊತ್ತಾಗಿದೆ ಎಂದು ಪೊಲೀಸರು ಹೇಳಿದರು.
ಕಲ್ಲು ಎತ್ತಿಹಾಕಿ ಹತ್ಯೆ: ಈ ವಿಚಾರ ತಿಳಿದ ದಿವೇಶ್, ವರುಣ್‌ಗೆ ಈ ಹಿಂದೆ 2-3 ಬಾರಿ ಎಚ್ಚರಿಕೆ ನೀಡಿದ್ದ. ಆದರೂ ವರುಣ್, ಯುವತಿ ಜತೆ ಓಡಾಡುತ್ತಿದ್ದ. ಶುಕ್ರವಾರ ರಾತ್ರಿ ಮದ್ಯದ ಅಮಲಿನಲ್ಲಿ ಇಬ್ಬರ ನಡುವೆ ಯುವತಿ ವಿಚಾರಕ್ಕೆ ಜಗಳವಾಗಿದೆ. ಶನಿವಾರ ಬೆಳಗ್ಗೆ 9 ಗಂಟೆ ಸುಮಾರಿಗೆ ಮತ್ತೂಮ್ಮೆ ಇಬ್ಬರ ನಡುವೆ ಜಗಳವಾಗಿದ್ದು, ಮನೆಯಿಂದ ಹೊರಗಡೆ ಬಂದಿದ್ದಾರೆ. ಆಗ ಕೋಪಗೊಂಡ ದಿವೇಶ್, ವರುಣ್ ಮೇಲೆ ಹಲ್ಲೆ ನಡೆಸಿ ಕೆಳಗೆ ಬೀಳಿಸಿದ್ದಾನೆ. ಬಳಿಕ ಅಲ್ಲೇ ಇದ್ದ ಹಾಲೋಬ್ರಿಕ್ಸ್ ಅನ್ನು ತಲೆ ಮೇಲೆ ಎತ್ತಿ ಹಾಕಿ ಹತ್ಯೆಗೈದಿದ್ದಾನೆ. ಅದನ್ನು ಕಂಡ ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ನನ್ನ ಗೆಳತಿಗೆ ವಾಮಾಚಾರ ಮಾಡಿದ್ದ ವರುಣ್: ಆರೋಪಿ: ಇನ್ನು ಆರೋಪಿ ದಿವೇಶ್, ಪೊಲೀಸರ ವಿಚಾರಣೆಯಲ್ಲಿ ಅಚ್ಚರಿಯ ಹೇಳಿಕೆ ನೀಡಿದ್ದಾನೆ. ತಾನೂ ಪ್ರೀತಿಸುತ್ತಿದ್ದ ಯುವತಿಗೆ ವರುಣ್ ವಾಮಾಚಾರ ಮಾಡಿ ಆತನ ಬಳಿ ಸೆಳೆದು ಕೊಂಡಿದ್ದಾನೆ. ಅಲ್ಲದೆ, ಆಕೆಯನ್ನು ಪಾರ್ಕ್, ಸಿನಿಮಾ ಅಂತೆಲ್ಲ ಸುತ್ತಾಡಿಸಿದ್ದಾನೆ. ಈ ವಿಚಾರ ನನಗೆ ಗೊತ್ತಾಗಿ ಕೇಳಿದಾಗ ವರುಣ್ ಗಲಾಟೆ ಮಾಡಿದ್ದ. ವಾಮಾಚಾರ ಮಾಡಿ ನನ್ನ ಹುಡುಗಿ ಯನ್ನೇ ಸೆಳೆದುಕೊಳ್ಳುತ್ತಿಯಾ ಎಂದು ಪ್ರಶ್ನಿಸಿದ್ದೆ. ಇದೇ ವಿಚಾರಕ್ಕೆ ಗಲಾಟೆ ಆಯಿತು. ಎಷ್ಟೇ ಹೇಳಿದರೂ ನನ್ನ ಮಾತನ್ನು ವರುಣ್ ಕೇಳಲಿಲ್ಲ. ಅದರಿಂದ ಆಗಾಗ ಗಲಾಟೆ ಆಗುತ್ತಿತ್ತು. ಶನಿವಾರ ಬೆಳಗ್ಗೆಯೂ ಗಲಾಟೆಯಾ ಗಿತ್ತು. ಈ ವೇಳೆ ವರುಣ್ ಮೇಲೆ ಇಟ್ಟಿಗೆ ಎತ್ತಿ ಹಾಕಿ ಕೊಲೆ ಮಾಡಿದ್ದೇನೆ ಎಂದು ಆರೋಪಿ ದಿವೇಶ್ ಹೇಳಿಕೆ ನೀಡಿದ್ದಾನೆ ಎಂದು ಮೂಲಗಳು ತಿಳಿಸಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Waqf: ರೈತರಿಗೆ ನೀಡಿರುವ ನೋಟಿಸ್ ತಕ್ಷಣ ವಾಪಸ್: ಅಧಿಕಾರಿಗಳಿಗೆ ಸಿಎಂ ಖಡಕ್ ಸೂಚನೆ
Kannada Rajyotsava: ಪಾಲಿಕೆ ಆಡಳಿತದಲ್ಲಿ ಸಂಪೂರ್ಣ ಕನ್ನಡ: ತುಷಾರ್
Bengaluru: ಅಕ್ರಮವಾಗಿ ಪಟಾಕಿ ಮಾರಾಟ; 2 ದಿನಗಳಲ್ಲಿ 56 ಕೇಸು ದಾಖಲು
Deepavali: ಐಟಿ ಸಿಟಿಯಲ್ಲಿ ಬೆಳಕಿನ ಹಬ್ಬದ ರಂಗು
Bengaluru: ಬ್ಯಾಗ್ ಪರಿಶೀಲನೆ ವೇಳೆ ವಿಮಾನ ನಿಲ್ದಾಣ ಸಿಬ್ಬಂದಿಗೆ ಬೆದರಿಕೆ: ಕೇಸ್
MUST WATCH
ಹೊಸ ಸೇರ್ಪಡೆ
Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ
Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ
Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ
J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.