ಅಂಗನವಾಡಿ ಉಳಿವಿಗೆ ಹೊಸ ಮಾರ್ಗ ಅಗತ್ಯ
Team Udayavani, Jan 1, 2020, 3:06 AM IST
ಬೆಂಗಳೂರು: ಅಂಗನವಾಡಿ ಹಾಗೂ ಪೂರ್ವ ಪ್ರಾಥಮಿಕ ಶಾಲೆಗಳಿಗೆ ಶೇ.80 ಸಾಮ್ಯತೆ ಇದ್ದು, ಸರ್ಕಾರವು ಶಿಕ್ಷಣ ಇಲಾಖೆಯ 2019ರ ಸುತ್ತೋಲೆ ಹಿಂಪಡೆದು ಪೂರ್ವ ಪ್ರಾಥಮಿಕ ಶಾಲೆಗಳ ಜತೆಗೆ ಅಂಗನವಾಡಿಯನ್ನು ಉಳಿಸಿಕೊಳ್ಳುವ ಹೊಸ ಮಾರ್ಗವೊಂದನ್ನು ಹುಡುಕಬೇಕು ಎಂದು ಹಿರಿಯ ಸಾಹಿತಿ ಪ್ರೊ.ಬರಗೂರು ರಾಮಚಂದ್ರಪ್ಪ ಹೇಳಿದರು.
ನಗರದ ಶಾಸಕರ ಭವನದಲ್ಲಿ ಮಂಗಳವಾರ ಸಿಐಟಿಯು ವತಿಯಿಂದ ಆಯೋಜಿಸಿದ್ದ ಅಂಗನವಾಡಿ ಕೇಂದ್ರಗಳಲ್ಲಿ ಪೂರ್ವ ಪ್ರಾಥಮಿಕ ಶಿಕ್ಷಣ ಸಾಧಕ-ಬಾಧಕಗಳ ಕುರಿತ ಸಮಲೋಚನಾ ಸಭೆಯಲ್ಲಿ ಮಾತನಾಡಿದರು.
ಚರ್ಚೆಗಳು ನಡೆಯಲಿ: ಹೀಗಾಗಲೇ ರಾಜ್ಯದಲ್ಲಿ ಅಂಗನವಾಡಿ ಕೇಂದ್ರಗಳು ಅತಂತ್ರ ಸ್ಥಿತಿಯಲ್ಲಿವೆ. ಇಂತಹ ಸಂದರ್ಭದಲ್ಲಿ ಏಕಾಏಕಿ ಸರ್ಕಾರ ಪೂರ್ವ ಪ್ರಾಥಮಿಕ ಶಾಲೆಗಳನ್ನು ಆರಂಭಿಸಲು ಮುಂದಾಗಿದೆ. ಇದರಿಂದ ಅಂಗನವಾಡಿಗಳಲ್ಲಿ ಕೆಲಸ ಮಾಡುವ ಲಕ್ಷಾಂತರ ಜನರ ಬದುಕು ಬೀದಿಪಾಲಾ ಗಲಿದ್ದಾರೆ. ಇದಕ್ಕಾಗಿ ಸರ್ಕಾರದ ಶಿಕ್ಷಣ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಜಂಟಿಯಾಗಿ ಚರ್ಚೆ ನಡೆಸಬೇಕಿದೆ ಎಂದು ತಿಳಿಸಿದರು.
ಈ ಹಿಂದೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿದ್ದ ವೇಳೆ ಪೂರ್ವ ಪ್ರಾಥಮಿಕ ಶಾಲೆಗಳ ಅಗತ್ಯತೆ ಬಗ್ಗೆ ಅಂದಿನ ಸರ್ಕಾರಕ್ಕೆ ವರದಿ ಸಲ್ಲಿಸಿದ್ದೆ. ಆರಂಭದಲ್ಲಿ ವಿರೋಧ ವ್ಯಕ್ತಪಡಿಸಿದವರು ಸಮಿತಿ ರಚಿಸಿ, ಚರ್ಚೆ ಮಾಡಿದ ಬಳಿಕ ತಾತ್ವಿಕವಾಗಿ ಒಪ್ಪಿದ್ದರು. ಆದರೆ, ನಂತರದ ದಿನಗಳಲ್ಲಿ ಅದು ಮೂಲೆಗುಂಪಾಯಿತು ಎಂದು ವಿಷಾದ ವ್ಯಕ್ತಪಡಿಸಿದರು.
ಜನಪರ ಚಳವಳಿ ಜನತೆಗೆ ಅರ್ಥ ಮಾಡಿಸಿ: ರಂಗಕರ್ಮಿ ಪ್ರಸನ್ನ ಹೆಗ್ಗೊಡು ಮಾತನಾಡಿ, ಅಂಗನವಾಡಿಗಳನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಕೈಗೆತ್ತಿಕೊಂಡಿರುವ ಹೋರಾಟ ಕಾರ್ಮಿಕರಿಗೆ ಅಷ್ಟೇ ಸೀಮಿತವಾಗಬಾರದು. ಕನ್ನಡ ಪರ, ದಲಿತ, ಹಿಂದುಳಿದ ವರ್ಗದವರನ್ನು ಜತೆಗೂಡಿಸಿಕೊಳ್ಳಬೇಕು. ಇದು ಜನಪರ ಚಳವಳಿ ಎಂದು ಎಲ್ಲರಿಗೂ ಅರ್ಥ ಮಾಡಿಸಬೇಕು ಎಂದರು.
ಮಾಜಿ ಶಾಸಕ ಜಿ.ವಿ.ಶ್ರೀರಾಮರೆಡ್ಡಿ, ಸಿಬಿಪಿಎಸ್ ನಿರ್ದೇಶಕಿ ಡಾ.ಜೋತ್ಸಝಾ, ಪ್ರಾಧ್ಯಾಪಕ ಡಾ.ವಿಠuಲ ಭಂಡಾರಿ, ಸಿಐಟಿಯು ಅಧ್ಯಕ್ಷೆ ಎಸ್.ವರಲಕ್ಷ್ಮೀ, ಮಕ್ಕಳ ಹಕ್ಕುಗಳ ಹೋರಾಟಗಾರ್ತಿ ಎಂ.ವಿ.ಪ್ರತಿಭಾ, ಅಂಗನವಾಡಿ ನೌಕರರ ಸಂಘದ ಎಚ್.ಎಸ್.ಸುನಂದ ಇತರರಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.